Latest Updates
-
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
₹25 ಸಾವಿರ ಇದ್ರೆ ಭಾರತದ ಈ 7 ಸಿಟಿಗಳ ಪ್ರವಾಸ ಮುಗಿಸಬಹುದು..!
ಮಳೆಗಾಲದ ಅಂತ್ಯದ ಸಮಯದಲ್ಲಿ ಪ್ರವಾಸ ಹೊರಡಲು ಬಹಳ ಉತ್ತಮ ಸಮಯ ಎಂದು ಪರಿಗಣಿಸಲಾಗುತ್ತದೆ. ಅದ್ರಲ್ಲೂ ಆಗಸ್ಟ್‌ನಿಂದ ಡಿಸೆಂಬರ್ ವರೆಗೂ ಪ್ರವಾಸಕ್ಕೆ ಅತ್ಯಂತ ಸೂಕ್ತ ಸಮಯ. ಏಕೆಂದರೆ ಈ ಸಮಯದಲ್ಲಿ ಹೆಚ್ಚು ಬಿಸಿಲು ಇರುವುದಿಲ್ಲ, ಹಾಗೆ ವಾತಾವರಣ ಕೂಡ ಪ್ರವಾಸಕ್ಕೆ ನೆರವಾಗುವ ರೀತಿ ಇರಲಿದೆ. ಹಾಗೆ ಈ ಸಮಯದಲ್ಲಿ ನೈಸರ್ಗಿಕ ಸೌಂದರ್ಯ ಸವಿಯಲು ಉತ್ತಮ ಸಮಯ ಆಗಿರಲಿದೆ.
ಇನ್ನು ಇದೇ ಸಮಯದಲ್ಲಿ ಪ್ರವಾಸ ಸ್ಥಳಗಳು ಕೂಡ ಪ್ರವಾಸಿಗರ ಕೈ ಬೀಸಿ ಕರೆಯಲು ಆರಂಭಿಸುತ್ತವೆ. ನಾವು ಕೂಡ ದೇಶದ 7 ಪ್ರಮುಖ ಪ್ರವಾಸಿ ಸ್ಥಳಗಳ ಕುರಿತು ತಿಳಿಯೋಣ. ಹಾಗೆ ಕೇವಲ 25 ಸಾವಿರ ರೂಪಾಯಿಯಲ್ಲಿ ಈ ಸಿಟಿಗಳನ್ನು ಓಡಾಡಿ ಬರಬಹುದು. ಹಾಗಾದ್ರೆ ಭಾರತದ ಯಾವೆಲ್ಲಾ ಸ್ಥಳವನ್ನು ನಾವು ಕೇವಲ 25 ಸಾವಿರ ರೂಪಾಯಿಯಲ್ಲಿ ಪ್ರವಾಸ ಮಾಡಿ ಮುಗಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಚೆನ್ನೈ, ತಮಿಳುನಾಡು
ತಮಿಳುನಾಡು ಪ್ರವಾಸಿಗರಿಗೆ ಸ್ವರ್ಗ ಎನ್ನಬಹುದು. ಅಲ್ಲಿನ ಹಲವು ಪ್ರದೇಶಗಳಿಗೆ ನಿತ್ಯವು ಸಾವಿರಾರು ಮಂದಿ ಆಗಮಿಸುತ್ತಾರೆ. ಅದ್ರಲ್ಲು ಚೆನ್ನೈನ ಮರೀನಾ ಬೀಚ್ ಅಂದ್ರೆ ಪ್ರವಾಸಿಗರಿಗೆ ಅಚ್ಚು ಮೆಚ್ಚು. ಇಲ್ಲಿಗೆ ನೀವು ಕೇವಲ 25 ಸಾವಿರ ರೂಪಾಯಿಯಲ್ಲಿ ಪ್ರವಾಸ ಮುಗಿಸಬಹುದು. ಹಾಗೆ ಇಲ್ಲಿನ ಊಟ ಹಾಗೆ ಕರಾವಳಿಯ ಸೌಂದರ್ಯ ನೀವು ಸವಿಯಲೇಬೇಕು.

ಹೈದರಾಬಾದ್
ಮುತ್ತಿನ ನಗರಿ ಹೈದರಾಬಾದ್ ಈ ಸಮಯದಲ್ಲಿ ಪ್ರವಾಸಕ್ಕೆ ಹೇಳಿ ಮಾಡಿಸಿದ ಜಾಗ. ಅಲ್ಲಿನ ಪಾರಂಪರಿಕ ತಾಣಗಳು, ಮ್ಯೂಸಿಯಂಗಳು, ರಾಜರ ಕಾಲದ ಕಟ್ಟಡಗಳು, ಸಫಾರಿಗಳು ಗಮನ ಸೆಳೆಯುತ್ತವೆ. ಹೈದರಾಬಾದ್‌ನಲ್ಲಿನ ದೇವಾಲಯ, ಮಾರುಕಟ್ಟೆಗಳು ವಿಶೇಷ ಎನಿಸುತ್ತವೆ. ಇಲ್ಲಿ ಒಂದು ದಿನವನ್ನು ಭಾರತದ ಬೇರೆ ಯಾವುದೇ ನಗರಕ್ಕಿಂತ ಕಡಿಮೆ ವೆಚ್ಚದಲ್ಲಿ ಕಳೆಯಬಹುದು. ಇಲ್ಲಿನ ಸಾರಿಗೆ ವ್ಯವಸ್ಥೆ ಬಹಳ ಕಡಿಮೆ ದರ ಹೊಂದಿದೆ.
ಗೋವಾ
ಯುವಕ ಹಾಗೂ ಯುವತಿಯರ ನೆಚ್ಚಿನ ಸ್ಥಳದಲ್ಲಿ ಗೋವಾ ಕೂಡ ಒಂದಾಗಿದೆ. ಗೋವಾದ ರಾತ್ರಿಗಳು ನೀವು ಭಾವಿಸಿರುವುದಕ್ಕಿಂತ ಅದ್ಭುತವಾಗಿರಲಿದೆ. ಒಬ್ಬರು 25 ಸಾವಿರ ರೂಪಾಯಿಯಲ್ಲಿ ಸುತ್ತಾಡಬಹುದು. ಗೋವಾದಲ್ಲಿ ಸ್ಕೂಟರ್ ಬಾಡಿಗೆ ಪಡೆದು ಇಡೀ ಗೋವಾ ಸುತ್ತಾಡಬಹುದು.
ದೆಹಲಿ
ನೀವು ರೈಲಿನ ಮೂಲಕ ಪ್ರವಾಸ ಹೊರಡಲು ಮುಂದಾಗುವುದಾದರೆ ದೆಹಲಿಯೂ ಕೂಡ ನಿಮಗೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಮಾಡಿ ಮುಗಿಸುವ ಸ್ಥಳವಾಗಿರಲಿದೆ. ದೆಹಲಿಯಲ್ಲಿ ನೀವು ಕೆಂಪು ಕೋಟೆ, ನೂತನ ಸಂಸತ್ ಭವನ ಸೇರಿದಂತೆ ಹಲವು ಪ್ರವಾಸಿ ಸ್ಥಳಗಳ ವೀಕ್ಷಣೆ ಮಾಡಬಹುದು.
ಜೈಪುರ್ ರಾಜಸ್ಥಾನ
ರಾಜಸ್ಥಾನ ಕೋಟೆಗಳು, ಮರಳುಗಾಡು, ಪಿಂಕ್ ಸಿಟಿಯ ಬೀದಿಗಳು, ಅಲ್ಲಿನ ಒಂಟೆ ಸವಾರಿ, ರಜಪೂತರ ಕೋಟೆಗಳು, ಜೈಪುರದ ಅರಮನೆ ಹೀಗೆ ಹತ್ತು ಹಲವು ಪ್ರವಾಸಿ ತಾಣಗಳನ್ನು ನೋಡಬಹುದು. ಅಲ್ಲಿಯೂ ಕಡಿಮೆ ಬೆಲೆಗೆ ನೀವು ಉಳಿದುಕೊಳ್ಳಲು ಹೋಟೆಲ್‌ಗಳು ಸಿಗಲಿವೆ. ಹಾಗೆ ಅಲ್ಲಿನ ಊಟ, ತಿಂಡಿ ಕೂಡ ದುಬಾರಿಯಲ್ಲ. ಈ ಆಗಸ್ಟ್ ನಿಂದ ಡಿಸೆಂಬರ್ ಒಳಗೆ ಪ್ರವಾಸ ಮಾಡಲು ಸೂಕ್ತ ಸ್ಥಳ.
ಪಂಜಾಬ್ ಗೋಲ್ಡನ್ ಟೆಂಪಲ್
ನೀವು ಒಮ್ಮೆಯಾದರು ಈ ಸಿಖ್‌ರ ಪವಿತ್ರ ಸ್ಥಳವಾದ ಈ ಗೋಲ್ಡನ್ ಟಂಪಲ್‌ಗೆ ತೆರಳಲೇಬೇಕು. ಅಲ್ಲಿನ ಮನೋಹರವಾದ ವಾಸ್ತುಶಿಲ್ಪ ನಿಮ್ಮನ್ನು ಮೂಖರನ್ನಾಗಿಸಲಿದೆ. ಹಾಗೆ ಅಲ್ಲಿನ ಸ್ಮಾರಕಗಳು, ದೇವಾಲಯಗಳು, ಕೋಟೆ, ವಾಸ್ತುಶಿಲ್ಪ ಗಮನ ಸೆಳೆಯುತ್ತದೆ.
ಮುಂಬೈ
ನೀವು ನೈಟ್ ಲೈಫ್ ಇಷ್ಟಪಡುವ ಮಂದಿಯಾಗಿದ್ದರೆ ಖಂಡಿತ ಮುಂಬೈಗೆ ಭೇಟಿ ನೀಡಬೇಕು. ಅಲ್ಲಿನ ಕಡಲ ತೀರದ ಅದ್ಭುತ ನೋಟ, ಹಾಗೆ ಹೋಟೆಲ್, ರೆಸ್ಟೋರೆಂಟ್‌ಗಳು ಸೇರಿದಂತೆ ಸಂಜೆ ಸಮಯದಲ್ಲಿ ಸವಿಯಲು ಸಿಗುವ ಸ್ನ್ಯಾಕ್ಸ್‌ಗಳ ರುಚಿಗೆ ನೀವು ಮನಸೋಲುತ್ತೀರಿ.



Click it and Unblock the Notifications

