Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮದುವೆಗೆ ಬಂದ ಅತಿಥಿಗಳಿಗೆ ದುಬಾರಿ ವಾಚ್ ಗಿಫ್ಟ್..! ಇದರ ಬೆಲೆ 2 ಕೋಟಿ ರೂಪಾಯಿ!
ಏಷ್ಯಾದ ಶ್ರೀಮಂತ ಉದ್ಯಮ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ವಿವಾಹ ಅದ್ದೂರಿಯಾಗಿ ನಡೆಯುತ್ತಿದೆ. ಸತತ ಮೂರು ದಿನಗಳಿಂದಲೂ ಸಮಾರಂಭಗಳು ವಿಜೃಂಭಣೆಯಿಂದ ನಡೆಯುತ್ತಿದ್ದು, ವಿಶ್ವದ ಗಣ್ಯರು ಈ ಅದ್ದೂರಿತನಕ್ಕೆ ಸಾಕ್ಷಿಯಾಗಿದ್ದಾರೆ.
ಈ ಮದುವೆಗೆ ಆಗಮಿಸಿದ್ದ ಎಲ್ಲಾ ಅತಿಥಿಗಳಿಗೂ ಗಿಫ್ಟ್‌ಗಳ ನೀಡಲಾಗಿದೆ ಎಂದು ತಿಳಿದುಬಂದಿದೆ. ಐಷಾರಾಮಿ ಗಿಫ್ಟ್ ಆಗಿ ವಾಚ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಇದು ಸುಮಾರು 2 ಕೋಟಿ ರೂಪಾಯಿಯ ವಾಚ್ ಎಂದು ವರದಿಯಾಗಿದೆ. ಅತಿಥಿಗಳಿಗೆ ನೀಡಲಾದ ಗಿಫ್ಟ್‌ಗಳ ಕುರಿತು ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಲ್ಲಿ ದುವಾರಿ ವಾಚ್ ಸಹ ನೋಡಬಹುದು.

ಅನಂತ್ ಅಂಬಾನಿ ನೀಡಿರುವ ಈ ಗಿಫ್ಟ್ ವಾಚ್ 41 ಎಂಎಂ 18 ಕೆ ಗುಲಾಬಿ ಚಿನ್ನದ ಕೇಸ್ ಅನ್ನು ಹೊಂದಿದೆ, ಇದು 9.5 ಎಂಎಂ ದಪ್ಪವಾಗಿದ್ದು, ನೀಲಮಣಿ ಸ್ಫಟಿಕ ಹಿಂಭಾಗ ಮತ್ತು ಸ್ಕ್ರೂ-ಲಾಕ್ ಕಿರೀಟವನ್ನು ಹೊಂದಿದೆ. ಇದರ ಗುಲಾಬಿ ಚಿನ್ನದ ಟೋನ್ ಡಯಲ್ ಬೆರಗುಗೊಳಿಸುವ ಗ್ರಾಂಡೆ ಟ್ಯಾಪಿಸೆರಿ ಮಾದರಿಯನ್ನು ಹೊಂದಿದೆ. ಜೊತೆಗೆ ನೀಲಿ ಬಣ್ಣದ ಕೌಂಟರ್, ಅಲ್ಲದೆ ಒಳಗಿನ ಸಂಖ್ಯೆಗಳು ಸಹ ಚಿನ್ನ ಲೇಪಿತವಾಗಿದೆ.
ಇನ್ನು ಈ ವಾಚ್ ಬರಿ ಸಮಯ ಮಾತ್ರವಲ್ಲ. ಬದಲಿಗೆ ದಿನ, ದಿನಾಂಕ, ತಿಂಗಳು, ಅಧಿಕ ವರ್ಷ, ನಿಮಿಷ, ಸೆಕೆಂಡ್ ತೋರಿಸುವ ಶಾಶ್ವತ ಕ್ಯಾಲೆಂಡರ್ ಸಹ ಹೊಂದಿದೆ. 40 ಗಂಟೆಗಳ ಕಾಲ ಇದು ಪವರ್ ಅನ್ನು ಮೀಸಲು ಇಡುತ್ತದೆ. ಅಲ್ಲದೆ ಇದರ ಬೆಲ್ಟ್ ಸಹ 18 ಕ್ಯಾರೆಟ್ ಚಿನ್ನದಿಂದಲೇ ಮಾಡಲಾಗಿದೆ. ಜೊತೆಗೆ 20 ಮೀಟರ್ ವರೆಗೆ ಇದು ವಾಟರ್ ರೆಸಿಸ್ಟೆಂಟ್ ಸಹ ಆಗಿದೆ.
ಜುಲೈ 12 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಐಷಾರಾಮಿ ವಿವಾಹವು ಅದ್ದೂರಿಯಾಗಿ ನೆರವೇರಿದೆ. ಈ ವೇಳೆ ಬಾಲಿವುಡ್ ಬಹುತೇಕ ಎಲ್ಲಾ ಸ್ಟಾರ್ ನಟರು ಅಲ್ಲಿ ನೆರೆದಿದ್ದರು. ಅಮಿತಾಬ್ ಬಚ್ಚನ್, ಶಾರುಖ್ ಖಾನ್, ರಣಬೀರ್ ಕಪೂರ್, ಆಲಿಯಾ ಭಟ್, ಕೃತಿ ಸನನ್, ಅನನ್ಯಾ ಪಾಂಡೆ, ಶನಯಾ ಕಪೂರ್, ಐಶ್ವರ್ಯ ರೈ ಮಗಳು ಆರಾಧ್ಯ, ವರುಣ್ ಧವನ್, ರಣವೀರ್ ಸಿಂಗ್, ರಜನಿಕಾಂತ್, ಅನಿಲ್ ಕಪೂರ್ ಮತ್ತು ಪ್ರಿಯಾಂಕಾ ಚೋಪ್ರಾ ಸೇರಿ ನೂರಾರು ಮಂದಿ ಭಾಗಿಯಾಗಿದ್ದರು.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ಒಂದರ ಪ್ರಕಾರ ದಿ ಇಂಡಿಯನ್ ಹೋರಾಲಜಿ, ವಾಚ್‌ನ ಮಾರುಕಟ್ಟೆ ಬೆಲೆ ಸರಿಸುಮಾರು $250,000 ಅಂದರೆ R2,08,79,000 ಆಗಿದೆ. ಈ ಹಿಂದೆ, ರಣವೀರ್ ಸಿಂಗ್ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆ ಕಾರ್ಯಕ್ರಮವೊಂದರಲ್ಲಿ ಅದೇ ವಾಚ್ ಧರಿಸಿದ್ದರು.
ಅನಂತ್ ಅಂಬಾನಿ ಐಷಾರಾಮಿ ವಾಚ್‌ಗಳ ಸಂಗ್ರಹವನ್ನೇ ಹೊಂದಿದ್ದಾರೆ. ಅವರ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಅವರು ತೊಟ್ಟಿದ್ದ ವಾಚ್‌ನ ಬೆಲೆ ಬರೋಬ್ಬರಿ 200 ಕೋಟಿ ರೂಪಾಯಿ ಎನ್ನಲಾಗಿತ್ತು. ಈ ಉಡುಗೊರೆಯನ್ನ ಅವರು ಹಲವು ಗಣ್ಯರಿಗೆ ನೀಡಿದ್ದಾರೆ. ಬಾಲಿವುಡ್ ನಟರಾದ ಶಾರುಖ್ ಖಾನ್, ರಣ್ವೀರ್ ಸಿಂಗ್, ಸಲ್ಮಾನ್ ಖಾನ್ ಸೇರಿ ಹಲವರಿಗೆ ಈ ವಾಚ್ ಗಿಫ್ಟ್ ಆಗಿ ನೀಡಲಾಗಿದೆ ಎಂದು ತಿಳಿದುಬಂದಿದೆ.



Click it and Unblock the Notifications
