Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮದುವೆ ಮಂಟಪಕ್ಕೆ ಬಂದು ಮಾಜಿ ಪ್ರಿಯಕರನ ಗಲಾಟೆ, ತನಗೆ ಏನೂ ಗೊತ್ತಿಲ್ಲದಂತೆ ಅಮಾಯಕಳಂತೆ ನಿಂತಿರುವ ಹುಡುಗಿ: ವೀಡಿಯೋ ವೈರಲ್
ಮದುವೆಗೆ ಸಕಲ ಸಿದ್ಧತೆ ನಡೆದಿರುತ್ತದೆ, ಮದುವೆ ಮಂಟಪಕ್ಕೆ ಹುಡುಗಿ-ಹುಡುಗ ಬಂದಿರುತ್ತಾರೆ, ಮನೆಯವರು ನವ ವಧು-ವರನಿಗೆ ಆಶೀರ್ವಾದ ಮಾಡಲು ಕಾಯುತ್ತಿರುತ್ತಾರೆ, ಇನ್ನೇನು ತಾಳಿ ಕಟ್ಟಬೇಕು ಅಷ್ಟರಲ್ಲಿ ಹುಡುಗಿ ನನಗೆ ಈ ಮದುವೆ ಬೇಡ ಅಂತಾಳೆ ಅಲ್ಲಿಗೆ ದೊಡ್ಡ ಗಲಾಟೆವಾಗುತ್ತೆ.
ಮದುವೆ ನಿಂತು ಹೋಗುತ್ತೆ. ಇನ್ನು ಕೆಲ ಮದುವೆಯಲ್ಲಿ ಸಿನಿಮೀಯ ಸ್ಟೈಲ್‌ನಲ್ಲಿ ಮಾಜಿ ಪ್ರಿಯಕರ ಬರುತ್ತನೆ ಅಥವಾ ಹುಡುಗನ ಮಾಜಿ ಗರ್ಲ್ ಫ್ರೆಂಡ್ ಬರುತ್ತಾಳೆ, ಅಲ್ಲಿಗೆ ಮದುವೆ ನಿಂತು ಹೋಗುತ್ತದೆ. ಇಂಥ ಘಟನೆಗಳು ಆಗಾಗ ಮರುಕಳಿಸುತ್ತಲೇ ಇದೆ. ಇದೀಗ ಅಂಥದ್ದೇ ಒಂದು ವೀಡಿಯೊ ವೈರಲ್ ಆಗುತ್ತಿದೆ.

ಮದುವೆ ಮಂಟಪಕ್ಕೆ ಬರುವ ಮಾಜಿ ಪ್ರಿಯಕರ ಅಲ್ಲಿ ವರನೊಂದಿಗೆ ವಾಗ್ವಾದ ಮಾಡುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ, ಅವನನ್ನು ನೋಡಿದರೆ ದೇವನಾಸನಂತೆ ಕಾಣುತ್ತಾನೆ, ತನ್ನ ಹುಡುಗಿ ಮದುವೆಯಾಗುತ್ತಿದ್ದಾಳೆ ಎಂದು ಟೆನ್ಷನ್ ಆಗಿರಬೇಕು. ಆದರೆ ಆ ಹುಡುಗಿ ಮಾತ್ರ ನನಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಆರಾಮವಾಗಿ ನಿಂತಿದ್ದಾಳೆ.
ಯಾವ ಆತಂಕವೂ ಕಾಣುತ್ತಿಲ್ಲ, ಸುಮ್ಮನೆ ತನ್ನ ಮಾಜಿಯನ್ನು ನೋಡುತ್ತಿದ್ದಾಳೆ, ಆ ಹುಡುಗ ಸ್ಟೇಜ್ ಮೇಲೆ ಹತ್ತಿ ಜಗಳವಾಡುತ್ತಿದ್ದಾನೆ, ಇನ್ನು ಈ ವಿಚಿತ್ರ ಪ್ರೇಮಕತೆಯಲ್ಲಿ ಮದುವೆ ನಡೆಯಿತೇ? ಇಲ್ಲವೇ? ಎಂಬುವುದು ಮಾತ್ರ ವೀಡಿಯೋದಲ್ಲಿ ಇಲ್ಲ. ಈ ವೀಡಿಯೋ 5 ಲಕ್ಷಕ್ಕೂ ಅಧಿಕ ವ್ಯೂವ್ಸ್ ಪಡೆದಿದ್ದು, ವೈರಲ್ ಆಗಿದೆ.
ಸಿನಿಮಾದಲ್ಲಿ ಮಾತ್ರ ಈ ರೀತಿ ಕಂಡರೆ ಖುಷಿಯಾಗುವುದು
ಸಿನಿಮಾದಲ್ಲಿ ನೋಡಬಹುದು, ಹೀರೋಯಿನ್ ಮದುವೆ ನಡೆಯುತ್ತಿರುತ್ತದೆ, ಅಷ್ಟರಲ್ಲಿ ಹೀರೋ ಬರುತ್ತಾನೆ, ಅಲ್ಲಿ ಒಂದಿಷ್ಟು ಡ್ರಾಮಗಳು ನಡೆಯುತ್ತದೆ,ನಂತರ ಹೀರೋ-ಹೀರೋಯಿನ್ ಒಂದಾಗುತ್ತಾರೆ, ಅಲ್ಲಿಗೆ ನಾವೆಲ್ಲಾ ಖುಷಿಯಿಂದ ಚಪ್ಪಳೆ ತಟ್ಟುತ್ತೇವೆ. ಅದರೆ ನಿಜ ಜೀವನದಲ್ಲಿ ಹೀಗಾದರೆ ಅದು ಸಿನಿಮಾ ಕತೆಯಂತೆ ಚಪ್ಪಳೆ ತಟ್ಟಲು ಸಾಧ್ಯವಿಲ್ಲ... ಒಂದು ಮದುವೆ ನಿಂತು ಹೋದರೆ ತಪ್ಪು ಮಾಡಿರುವ ಆ ಹುಡುಗ ಅಥವಾ ಹುಡುಗಿಗಿಂತ ಮನೆಯವರು ಮುಜುಗರ ಮತ್ತು ನಷ್ಟವನ್ನು ಅನುಭವಿಸುತ್ತಾರೆ.
ಮದುವೆಗೆ ಸಿದ್ಧತೆಗೆ ಖರ್ಚಾದ ಹಣದ ಜೊತೆಗೆ ಅಷ್ಟೊಂದು ಜನ ನೆರೆದಿರುವವರ ಮುಂದೆ ಮುಜುಗರ, ಇನ್ನು ತನ್ನ ಬಾಳ ಸಂಗಾತಿ ಆಗುವ ವ್ಯಕ್ತಿಯ ಬಗ್ಗೆ ನೂರೆಂಟು ಕನಸುಗಳಿರುತ್ತದೆ, ಅದೆಲ್ಲಾ ಕನ್ನಡಿ ಒಡೆದಂತೆ ಪುಡಿ ಪುಡಿಯಾಗುವುದು, ಅಲ್ಲಿ ಪ್ರೀತಿಸಿ ಮೋಸ ಮಾಡಿದ ಮದುಮಗ ಅಥವಾ ಮದು ಮಗಳಿಗೆ ಏನೂ ಆಗುವುದಿಲ್ಲ, ಪೊಲೀಸರು ಬಂದು ಪ್ರೀತಿಸಿದ ಜೋಡಿಯನ್ನು ಮದುವೆ ಮಾಡಿರುವ ಎಷ್ಟೋ ಘಟನೆಗಳಿವೆ. ಆದರೆ ಅಲ್ಲಿ ತಾನು ಮಾಡಿದ ತಪ್ಪಿನಿಂದಾಗಿ ನನ್ನ ಕುಟುಂಬಕ್ಕೆ ಹಾಗೂ ಮತ್ತೊಂದು ಕುಟುಂಬಕ್ಕೆ ಮೋಸ, ನೋವು ಉಂಟಾಗುತ್ತದೆ ಎಂದು ಯೋಚಿಸಿದರೆ ರೀತಿಯ ಮೆಲೋಡ್ರಾಮ ಕಾಣಲ್ಲ.
ಮದುವೆ ಇಷ್ಟವಿಲ್ಲದಿದ್ದರೆ ಮೊದಲೇ ಹೇಳಿ
ಕೆಲವರಿಗೆ ಮದುವೆ ಗೊತ್ತಾಗಿನಿಂದ ಹಿಡಿದು ಮದುವೆ ಮಂಟಪಕ್ಕೆ ಬರುವವರೆಗೆ ಮದುವೆ ಬೇಡ ಎಂಬ ಧೈರ್ಯವಿರಲ್ಲ, ಆದರೆ ಮಂಟಪಕ್ಕೆ ಬಂದಾಗ ಮದುವೆ ಬೇಡ ಎಂದು ಹೇಳುವ ಧೈರ್ಯ ಬಂದು ಬಿಡುತ್ತದೆ. ಈ ತಪ್ಪನ್ನು ಮಾಡಲೇಬಾರದು. ಇಷ್ಟವಿಲ್ಲ ಎಂದಾದರೆ ಮೊದಲೇ ಪೋಷಕರಿಗೆ ಹೇಳಿ, ಅವರು ನಿಮ್ಮನ್ನು ಬಯ್ಯಬಹುದು, ಕೋಪಗೊಳ್ಳಬಹುದು, ಆದರೆ ಮದುವೆ ಮಂಟಪಕ್ಕೆ ಬಂದು ಈ ರೀತಿ ಮಾಡಿದರೆ ಅವರಿಗೆ ನೀವು ಮಾಡುವ ದ್ರೋಹವಾಗುತ್ತೆ.
ಮಧ್ಯಮ ವರ್ಗದ ಕುಟುಂಬವಾದರೆ ಒಂದು ಮದುವೆ ಮಾಡಲು ತಮ್ಮ ಸೇವಿಂಗ್ಸ್ ಎಲ್ಲಾ ಬಳಸಿ, ಸಾಲ ಕೂಡ ಮಾಡುತ್ತಾರೆ, ನಮ್ಮ ಮಕ್ಕಳ ಮದುವೆಯಲ್ಲಿ ಯಾರೂ ಕೊಂಕು ನುಡಿಯಬಾರದು ಎಂದು ಕಷ್ಟಪಟ್ಟರೂ ಪರ್ವಾಗಿಲ್ಲ ಎಂದು ಮದುವೆಗೆ ಅರೇಂಜ್ ಮಾಡುತ್ತಾರೆ. ಆವಾಗ ಈ ರೀತಿಯಾದಾಗ ತುಂಬಾನೇ ಬೇಸರವಾಗುತ್ತೆ. ಆದ್ದರಿಂದ ಮಕ್ಕಳಾದವರು ಈ ತಪ್ಪು ಮಾಡಲೇಬೇಡಿ.



Click it and Unblock the Notifications
