Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಪ್ರೇಮಿಗಳ ಮಧ್ಯೆ ವಿಲನ್ ಆದ ತಂದೆ, 35 ವರ್ಷಗಳ ನಂತರ ಮತ್ತೆ ಒಂದಾದ ಜೋಡಿಗಳು! ವಿಡಿಯೋ ವೈರಲ್
ಪ್ರೀತಿಗೆ ಸಾವಿಲ್ಲ ಅಂತಾರೆ. ನಾವು ಒಬ್ಬರನ್ನು ಮನಸಾರೆ ಪ್ರೀತಿಸಿದ್ದರೆ ಆ ಪ್ರೀತಿ ನಮ್ಮ ಜೊತೆಗೆ ಕೊನೆವರೆಗೂ ಜೀವಂತವಾಗಿರುತ್ತಂತೆ. ಕೆಲವೊಂದು ಸಲ ನಾವು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದವರು ನಮ್ಮಿಂದ ದೂರವಾಗುತ್ತಾರೆ. ಮನೆಯವರು ಒಪ್ಪಿಲ್ಲ ಅನ್ನೋ ಕಾರಣಕ್ಕೆ ಹೆಚ್ಚಿನ ಪ್ರೇಮಿಗಳು ದೂರ ದೂರವಾಗ್ತಾರೆ. ಇದೀಗ ಅಂತಹದ್ದೇ ವಿಡಿಯೋವೊಂದು ಟ್ವಿಟರ್ ನಲ್ಲಿ ವೈರಲ್ ಆಗ್ತಿದ್ದು, 35 ವರ್ಷಗಳ ಹಿಂದೆ ದೂರವಾಗಿದ್ದ ಪ್ರೇಮಿಗಳು ಮತ್ತೆ ಒಂದಾಗಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮಿಡಿಯಾದಲ್ಲಿ ಸೌಂಡ್ ಮಾಡ್ತಿದೆ.
ಹೆಚ್ಚಿನ ಸಂದರ್ಭದಲ್ಲಿ ಪ್ರೇಮಿಗಳ ಮಧ್ಯೆ ಪೋಷಕರು ವಿಲನ್ ಗಳಾಗಿ ಬಿಡುತ್ತಾರೆ. ನಾವು ಮನಸ್ಸಾರೆ ಮೆಚ್ಚಿದವರ ಜೊತೆಗೆ ಮದುವೆಯಾಗೋದಕ್ಕೆ ಪೋಷಕರು ಅಡ್ಡಿ ಪಡಿಸುತ್ತಾರೆ. ಇಂತಹ ಸಂದರ್ಭದಲ್ಲಿ ವಿಧಿ ಇಲ್ಲದೇ ಮನೆಯವರು ನೋಡಿದ ಹುಡುಗ ಅಥವಾ ಹುಡುಗಿಯನ್ನು ಮದುವೆಯಾಗ್ತೀವಿ. ಆದರೆ ಕೆಲವೇ ಕೆಲವು ಜನ ಮಾತ್ರ ಮನೆಯವರು ಒಪ್ಪಿಲ್ಲ ಅನ್ನೋ ಕಾರಣಕ್ಕೆ ಕೊನೆವರೆಗೂ ಪ್ರೀತಿಸಿದವರ ನೆನಪಿನಲ್ಲೇ ಒಂಟಿಯಾಗಿ ಉಳಿದು ಬಿಡುತ್ತಾರೆ.

ಇಂತಹದ್ದೇ ವಿಡಿಯೋ ಒಂದು ಇದೀಗ ಟ್ವಿಟರ್ ನಲ್ಲಿ ವೈರಲ್ ಆಗ್ತಿದ್ದು, ಬರೋಬ್ಬರಿ 35 ವರ್ಷಗಳ ನಂತರ ಹಳೇ ಪ್ರೇಮಿಗಳು ಒಂದಾಗಿದ್ದಾರೆ. ಹಳೇ ಪ್ರೇಮಿಗಳು ಒಂದಾದಾಗ ಏನೆಲ್ಲಾ ಸಂಭಾಷಣೆ ಮಾಡಬಹುದು ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲೂ ಇರುತ್ತೆ. ಅದೇ ರೀತಿ ಈ ಜೋಡಿ ಏನೆಲ್ಲಾ ಮಾತನಾಡಿದ್ದಾರೆ ಅನ್ನೋದನ್ನು ನೋಡೋಣ.
ಮೊದಲಿಗೆ ಇಬ್ಬರೂ ಕೂಡ ತಮ್ಮ ಶಾಲಾ ದಿನದ ನೆನಪುಗಳನ್ನು ಹಂಚಿಕೊಂಡು ನಕ್ಕಿದ್ದಾರೆ. ಇದಾದ ಬಳಿಕ ಈ ವಿಡಿಯೋದಲ್ಲಿರುವ ಪುರುಷ ಯಶಸ್ವಿ ಉದ್ಯಮಿಯಾಗಿದ್ದು, ಆ ಮಹಿಳೆಯ ಹೆಸರಿನಲ್ಲೇ ಉದ್ಯಮವನ್ನು ಶುರು ಮಾಡಿರೋ ವಿಚಾರ ಕೇಳಿ ಆಕೆ ಖುಷಿ ಪಡುತ್ತಾಳೆ.
ಇನ್ನೂ ಪುರುಷನ ಮದುವೆ ಬಗ್ಗೆ ಕೇಳಿದಾಗ ನಾನಿನ್ನೂ ಮದುವೆಯಾಗಿಲ್ಲ. ನಿನ್ನ ನೆನಪಿನಲ್ಲೇ ಬದುಕುತ್ತಿರೋದಾಗಿ ಹೇಳುತ್ತಾನೆ. ಇದನ್ನು ಕೇಳಿ ಮಹಿಳೆಗೆ ಸಂತೋಷವಾಗುತ್ತದೆ. ಹಾಗೂ ಆಕೆ ಕಣ್ಣೀರು ಹಾಕುತ್ತಾಳೆ. ಇನ್ನೂ ಪುರುಷ ಆಕೆಯ ಬಳಿ ಮದುವೆಯ ಬಗ್ಗೆ ಕೇಳಿದಾಗ ಆಕೆ ಕೂಡ ಮದುವೆಯಾಗದೇ ಆತನ ನೆನಪಿನಲ್ಲೇ ಇರೋದಾಗಿ ಹೇಳುತ್ತಾಳೆ. ಇದನ್ನು ಕೇಳಿ ಪುರುಷನಿಗೆ ತುಂಬಾನೇ ಖುಷಿ ಆಗುತ್ತದೆ ಹಾಗೂ ಅವರಿಬ್ಬರೂ ಸಂತೋಷದಿಂದ ಕಣ್ಣೀರು ಹಾಕುತ್ತಾರೆ.
ಆ ನಂತರ ಪುರುಷ ಆಕೆಗೆ ನನ್ನನ್ನೂ ಮದುವೆಯಾಗುತ್ತೀಯಾ ಎಂದು ಕೇಳುತ್ತಾನೆ. ಹಾಗೂ ಅದಕ್ಕೆ ಆಕೆ ಖುಷಿಯಿಂದ ಒಪ್ಪಿಕೊಳ್ಳುತ್ತಾಳೆ. ಇದಲ್ವಾ ನಿಜವಾದ ಪ್ರೀತಿ ಅಂದ್ರೆ. ಪ್ರೀತಿಗೆ ರೂಪ, ಯೌವ್ವನ ಮುಖ್ಯವಾಗೋದಿಲ್ಲ. ಇಲ್ಲಿ ಮುಖ್ಯವಾಗೋದು ನಿಷ್ಕಲ್ಮಶ ಪ್ರೀತಿ ಮಾತ್ರ.
ಆತ ಬಡವ ಅನ್ನೋ ಕಾರಣಕ್ಕೆ ಹುಡುಗಿಯ ತಂದೆ 35 ವರ್ಷಗಳ ಹಿಂದೆ ಅವರಿಬ್ಬರನ್ನು ದೂರ ಮಾಡಿದ್ರು, ಹಾಗೂ ಮದುವೆಯಾಗೋದಕ್ಕೆ ಅವಕಾಶ ಕೊಟ್ಟಿರ್ಲಿಲ್ಲ. ಆದರೆ 35 ವರ್ಷಗಳ ಕಾಲ ಅವರಿಬ್ಬರೂ ಅದೇ ಪ್ರೀತಿಯಲ್ಲಿ ಜೀವಿಸಿದ್ದಾರೆ.
ಈ ವೈರಲ್ ವಿಡಿಯೋ ನಿಜವಾದ ವಿಡಿಯೋನ ಅಥವಾ ಮರುಸೃಷ್ಟಿಸಿದ ವಿಡಿಯೋನ ಅನ್ನೋದು ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ. 35 ವರ್ಷಗಳ ಕಾಲ ಒಬ್ಬರ ನೆನಪಿನಲ್ಲೇ ಕಳೆಯೋದು ಅಂದ್ರೆ ನಿಜವಾಗಿಯೂ ಗ್ರೇಟ್ ಅಲ್ವಾ?



Click it and Unblock the Notifications
