Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಮನಸ್ಸಿಗೆ ಇಷ್ಟಬಂದಂತೆ ಉದ್ಯೋಗಿಗಳನ್ನು ತೆಗೆದಿದ್ದ ಎಲಾನ್ ಮಸ್ಕ್: ಟ್ವಿಟರ್ ಮಾಜಿ ಉದ್ಯೋಗಿ ನೀಡಿದರು ಮಾಸ್ಟರ್ ಸ್ಟ್ರೋಕ್
ಟ್ವಿಟರ್ ಖರೀದಿಸಿದಾಗ ಎಲಾನ್ ಮಸ್ಕ್ ತನ್ನ ಮನಸ್ಸಿಗೆ ಇಷ್ಟಬಂದಂತೆ ಜನರನ್ನು ಕೆಲಸದಿಂದ ತೆಗೆದು ಹಾಕಿದ್ದರು. ಟ್ವಿಟರ್ ಉದ್ಯೋಗಿಗಳಿಗೆ ಯಾರು ಯಾವಾಗ ಕೆಲಸ ಕಳೆದುಕೊಳ್ಳುತ್ತಾರೆ ಎಂಬ ಭಯವನ್ನು ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ವಾರದೊಳಗೆ ಹುಟ್ಟು ಹಾಕಿದರು.
ತುಂಬಾ ಜನ ಕೆಲಸ ಕಳೆದುಕೊಂಡರು, ಆದರೆ ಇದೀಗ ಎಲನ್ ಮಸ್ಕ್ ಕಳೆದ ಕಳೆದುಕೊಂಡ ಉದ್ಯೋಗಿಯೊಬ್ಬರು ಸರಿಯಾಗಿ ಪಾಠ ಕಲಿಸಿದ್ದಾರೆ, ಅದೇನು ಸ್ಟೋರಿ ಎಂದು ನೋಡೋಣ ಬನ್ನಿ:

ಟ್ವಿಟರ್ ಖರೀದಿಸಿ ಅಲ್ಲಿ ಕೆಲಸದಲ್ಲಿದ್ದ ಉದ್ಯೋಗಿಗಳನ್ನು ತೆಗೆದು ಹಾಕಿದ ಎಲನ್‌ಮಸ್ಕ್
ತಮಗೆ ಹೊಸ ಬಾಸ್ ಬಂದಿದ್ದಾರೆ ಅವರ ಕೆಲಸದ ವೈಖರಿ ಹೇಗಿರಬಹುದು ಎಂದು ಕಾದ ಟ್ವಿಟರ್ ಉದ್ಯೋಗಿಗಳಿಗೆ ಎಲಾನ್ ಮಸ್ಕ್ ನೀಡಿದ್ದು ಮಾಸ್ಟರ್ ಸ್ಟ್ರೋಕ್. ಎಲಾನ್ ಮಸ್ಕ್ ಹಲವಾರು ಉದ್ಯೋಗಿಗಳಿಗೆ ಇಮೇಲ್ ಕಳುಹಿಸಿದ್ದರು. ಅದರಲ್ಲಿ ಟ್ವಿಟರ್‌ನಲ್ಲಿ ಕೆಲಸ ಮಾಡಬೇಕೆಂದರೆ ಇನ್ನೂ ಹೆಚ್ಚಿನ ಸಮಯ ಕೆಲಸ ಮಾಡಬೇಕು, ಇಲ್ಲದಿದ್ದರೆ 3 ತಿಂಗಳ ಸಂಬಳ ಪಡೆದು ಕೆಲಸ ಬಿಟ್ಟು ಹೋಗಿ ಎಂದು ಸೂಚಿಸಿದರು. ಇದಕ್ಕೆ ಒಪ್ಪಿಗೆ ಇಲ್ಲದವರು ಆ ಅವಧಿಯಲ್ಲಿ ಕೆಲಸ ಬಿಟ್ಟರು, ಇನ್ನು ಕೆಲವರನ್ನು ಕಂಪನಿಯೇ ತೆಗೆದು ಹಾಕಿತು. ಅವರಲ್ಲೊಬ್ಬರು ಗ್ಯಾರಿ ರೂನಿ.
2013ರಿಂದಲೂ ಟ್ವಿಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಗ್ಯಾರಿ ರೂನಿ
ಎಲಾನ್ ಮಸ್ಕ್ ಗ್ಯಾರಿ ರೂನಿ ಅವರನ್ನು 2022ರಲ್ಲಿ ಕೆಲಸದಿಂದ ತೆಗೆದು ಹಾಕಿತು, ಒತ್ತಾಯ ಪೂರ್ವವಾಗಿ ರಾಜೀನಾಮೆ ನೀಡಿಸಲಾಯ್ತು, ಕಂಪನಿಯಿಂದ ಅನಿವಾರ್ಯವಾಗಿ ಹೊರಬಂದ ಉದ್ಯೋಗಿ ಐರಿಷ್ ಕೋರ್ಟ್‌ನಲ್ಲಿ ಕೇಸ್ ಹಾಕಿದರು. ಅಲ್ಲಿಯ ನಿಯಮದ ಪ್ರಕಾರ ಉದ್ಯೋಗಿಗಳನ್ನು ಒತ್ತಾಯಪೂರ್ವವಾಗಿ ತೆಗೆದು ಹಾಕುವಂತಿಲ್ಲ. ಇದೀಗ ಕೋರ್ಟ್ ಎಲಾನ್ ಮಸ್ಕ್‌ಗೆ 5,50,000 ಯೂರೋ ಪರಿಹಾರವಾಗ ನೀಡಲು ಹೇಳಿದೆ. ಇದೀಗ ಎಲಾನ್ ಮಸ್ಕ್‌ಗೆ ಅಷ್ಟೊಂದು ಹಣವನ್ನು ನೀಡಲೇಬೇಕಾದ ಪರಿಸ್ಥಿತಿ ಬಂದಿದೆ.
ಎಲಾನ್ ಮಸ್ಕ್ ಕೆಲಸದಿಂದ ತೆಗೆದು ಹಾಕಿದ ಅಷ್ಟೂ ಉದ್ಯೋಗಿಗಳು ಕೇಸ್ ಹಾಕಿದರೆ ಎಲಾನ್ ಮಸ್ಕ್ ಟ್ವಿಟರ್ ಬಿಟ್ಟು ಓಡಬೇಕಾಗುತ್ತದೆ
ಇದೀಗ ಗ್ಯಾರಿ ರೂನಗೆ ಪರಿಹಾರ ಸಿಕ್ಕಿರುವುದಕ್ಕೆ ಉಳಿದ ಮಾಜಿ ಉದ್ಯೋಗಿಗಳು ಖಂಡಿತ ಕೇಸ್ ಹಾಕುತ್ತಾರೆ, ಎಲ್ಲಾ ರಾಷ್ಟ್ರಗಳು ತಮ್ಮ ಪ್ರಜೆಯ ರಕ್ಷಣೆಗೆ ನಿಂತರೆ ಎಲಾನ್ ಮಸ್ಕ್ ಕಂಗಲಾಗಬೇಕಾಗುವುದು, ಸದ್ಯಕ್ಕೆ ಈ ವಿಷಯ ದೊಡ್ಡ ತಲೆನೋವಾಗಿರುವುದು ನಿಜ.
ದೊಡ್ಡ-ದೊಡ್ಡ ಕಂಪನಿಗಳಲ್ಲಿ ಈ ರೀತಿ ಕೆಲಸದಿಂದ ವಜಾಗೊಳಿಸುವುದು ಸಾಮಾನ್ಯವಾಗುತ್ತಿದೆ
ಎಷ್ಟೋ ದೊಡ್ಡ ದೊಡ್ಡ ಕಂಪನಿಗಳಲ್ಲಿ 500-ಸಾವಿರ ಉದ್ಯೋಗಿಗಳನ್ನು ವಜಾ ಮಾಡಿದರೆ ಅವರಿಗೆ ಬೇರೆ ಕಡೆ ಕೆಲಸ ಸಿಗುವುದು ಕಷ್ಟವಾಗುವುದು, ಅಷ್ಟು ಜನ ಉದ್ಯೋಗಿಗಳ ಅವರನ್ನು ನಂಬಿರುವ ಸಾವಿರಾರು ಜನರ ಬದುಕು ಅತಂತ್ರವಾಗುವುದು, ಹಾಗಾಗಿ ಇಂಥ ವರ್ಕ್ ಕಲ್ಚರ್‌ಗೆ ಕಡಿವಾಣ ಬೀಳಬೇಕೆಂದರೆ ಕೆಲ ಕಠಿಣ ನಿಯಮಗಳು ಬರಬೇಕಾಗಿದೆ ಅಥವಾ ಈ ರೀತಿ ದಂಡ ಕಟ್ಟಬೇಕಾದ ಪರಿಸ್ಥಿತಿ ಬರಬೇಕಾಗಿದೆ.



Click it and Unblock the Notifications
