Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಟ್ರಂಪ್ ವಿರುದ್ಧ ಹೊಸ ಪಕ್ಷ ಘೋಷಿಸಿದ ಮಸ್ಕ್..! ಈ ನಿರ್ಧಾರಕ್ಕೆ ಕಾರಣವೇನು? ಮಸ್ಕ್ ಆಸ್ತಿ ಎಷ್ಟಿದೆ?
ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ತಾನು ಅಂದುಕೊಂಡಿದ್ದನ್ನು ಸಾಧಿಸುವಂತಹ ಛಲ ಹೊಂದಿರುವ ವ್ಯಕ್ತಿ ಅನ್ನೋದು ಈ ಹಿಂದೆ ಕೂಡ ಸಾಬೀತಾಗಿದೆ. ತನ್ನ ಸ್ಪೇಸ್ ಎಕ್ಸ್ ವಿಚಾರದಲ್ಲಿ ಇಂತಹ ಹಲವು ಉದಾಹರಣೆಗಳನ್ನು ಆವರು ನಿಜ ಮಾಡಿ ತೋರಿಸಿದ್ದಾರೆ. ಹಾಗೆ ಅಮೆರಿಕ ರಾಜಕೀಯದಲ್ಲೂ ಅವರು ಪ್ರಭಾವಿ ವ್ಯಕ್ತಿ. ಚುನಾವಣೆಯ ಸಂದರ್ಭದಲ್ಲಿ ಮಸ್ಕ್ ಡೊನಾಲ್ಡ್ ಟ್ರಂಪ್ ಪರ ಬ್ಯಾಟ್ ಬೀಸಿದ್ದರು.
ಹಾಗೆ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವಲ್ಲೂ ಕೂಡ ಎಲಾನ್ ಮಸ್ಕ್ ಪಾತ್ರ ಮಹತ್ವದ್ದಾಗಿತ್ತು. ಆದ್ರೆ ಟ್ರಂಪ್ ಆಡಳಿತದಲ್ಲಿ ಮಸ್ಕ್ ಹಾಗೂ ಅವರ ಸಂಬಂಧ ನಡುವೆ ಮನಸ್ತಾಪಗಳಿದ್ದವು. ಇದರಿಂದ ಮಸ್ಕ್ ಟ್ರಂಪ್ ಆಡಳಿತದಿಂದ ಹೊರಬಂದರು. ಹಾಗೆ ಹೊಸ ಪಕ್ಷ ಕಟ್ಟುವುದಾಗಿಯೂ ಅವರು ಹೇಳುತ್ತಿದ್ದರು.

ಅದ್ಯ ಅವರು ಸಮೀಕ್ಷೆಯ ಆಧಾರವಾಗಿಟ್ಟುಕೊಂಡು ಈಗ ಹೊಸ ಪಕ್ಷವನ್ನೇ ಘೋಷಿಸಿದ್ದು, 'ಅಮೇರಿಕಾ ಪಾರ್ಟಿ' ಎಂದು ಹೆಸರಿಟ್ಟಿದ್ದಾರೆ. ಟ್ರಂಪ್ ಇತ್ತೀಚಿಗೆ ಘೋಷಿಸಿದ್ದ ತೆರಿಗೆ ಮಸೂದೆಗಳಿಂದ ಮಸ್ಕ್ ಕೂಡ ಅಸಮಾಧಾನ ಹೊರಹಾಕಿದ್ದರು. ಹಿಂದಿನ ಸರ್ಕಾರವು ತೆರಿಗೆಯಿಂದ ಏನೆಲ್ಲಾ ನ್ಯೂನತೆಗಳ ತಂದಿದೆ ಎಂದು ವಿವರಿಸಿದ್ದ ಟ್ರಂಪ್ ಹೊಸ ಕಾನೂನು ತರಲು ಮುಂದಾದರು.
ಹಾಗೆ ಜುಲೈ 4ರಂದು ಶ್ವೇತಭವನದಲ್ಲಿ ಈ ಮಸೂದೆಗಳಿಗೆ ಸಹಿ ಹಾಕಿದಾಗ ಮಸ್ಕ್ ಅಸಮಾಧಾನ ಹೊರಹಾಕಿದ್ದರು. ಹಾಗೆ ಹೊಸ ಪಕ್ಷ ಘೋಷಣೆ ಕುರಿತಾಗಿ ಎಕ್ಸ್ ನಲ್ಲಿ ಸಮೀಕ್ಷೆ ನಡೆಸಿದ್ದರು.
ಒಂದು ಕಾಲದಲ್ಲಿ ರಿಪಬ್ಲಿಕನ್ ನಾಯಕನಿಗೆ 'ಮೊದಲ ಸ್ನೇಹಿತ' ಆಗಿದ್ದ ಮಸ್ಕ್, ದೇಶದ 'ಏಕಪಕ್ಷ ವ್ಯವಸ್ಥೆಯನ್ನು' ಸವಾಲು ಮಾಡುವ ಗುರಿಯನ್ನು ಹೊಂದಿದ್ದಾರೆ. 'ನಮ್ಮ ದೇಶವನ್ನು ವ್ಯರ್ಥ ಮತ್ತು ಭ್ರಷ್ಟಾಚಾರದಿಂದ ದಿವಾಳಿ ಮಾಡುವ ವಿಷಯಕ್ಕೆ ಬಂದಾಗ, ನಾವು ಪ್ರಜಾಪ್ರಭುತ್ವದಲ್ಲಿ ಅಲ್ಲ, ಏಕಪಕ್ಷ ವ್ಯವಸ್ಥೆಯಲ್ಲಿ ವಾಸಿಸುತ್ತಿದ್ದೇವೆ. ಇಂದು ಅಮೇರಿಕಾ ಪಕ್ಷವು ನಿಮ್ಮ ಸ್ವಾತಂತ್ರ್ಯವನ್ನು ಮರಳಿ ನೀಡಲು ರಚಿಸಲಾಗಿದೆ' ಎಂದು ಮಸ್ಕ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮಸ್ಕ್ ನಿರ್ಧಾರಕ್ಕೆ ಕಾರಣವೇನು?
ಕಳೆದ ವರ್ಷದ ಚುನಾವಣೆಯಲ್ಲಿ ಟ್ರಂಪ್ ಅವರು ಭರ್ಜರಿ ಗೆಲುವಿನ ನಂತರ ಪರಿಚಯಿಸಿದ ಸರ್ಕಾರಿ ದಕ್ಷತೆ ಇಲಾಖೆ (DOGE) ಮುಖ್ಯಸ್ಥರಾಗಿ ಖರ್ಚು ಮತ್ತು ಫೆಡರಲ್ ಉದ್ಯೋಗಗಳನ್ನು ಕಡಿತಗೊಳಿಸುವ ಪ್ರಕ್ರಿಯೆಯಲ್ಲಿ ಟ್ರಂಪ್‌ಗಿಂತಲೂ ಮಸ್ಕ್ ಮುಂದಾಳತ್ವ ವಹಿಸಿದ್ದರು. ಟ್ರಂಪ್ ಅವರ ಖರ್ಚು ಮಸೂದೆಯು ಮಸ್ಕ್ ಅವರನ್ನು ಈ ಮೈತ್ರಿಯನ್ನು ಮುಂದುವರಿಸದಂತೆ ತಡೆಯಿತು. ಈ ಮಸೂದೆಯು ಲಕ್ಷಾಂತರ ಉದ್ಯೋಗಗಳನ್ನು ನಾಶಪಡಿಸುತ್ತದೆ ಹಾಗೆ ಇದರಿಂದ ಹಾನಿಯಾಗಲಿದೆ ಎಂದು ಮಸ್ಕ್ ಅಸಮಾಧಾನ ಹೊರಹಾಕಿದರು.
ಮೇ ಅಂತ್ಯದಲ್ಲಿ ಮಸ್ಕ್ ಟ್ರಂಪ್ ಆಡಳಿತದಿಂದ ಹೊರಬಂದರು. ಇದಾದ ಬಳಿಕ ಟ್ರಂಪ್ ಅಮೆರಿಕದ ಬಹುದೊಡ್ಡ ತೆರಿಗೆ ಮಸೂದೆಯನ್ನು ಹೊರತಂದರು. ಹಾಗೆ ಈ ಮಸೂದೆ ಅಂಗೀಕಾರವಾದ ಮರುಕ್ಷಣವೇ ಹೊಸ ಪಕ್ಷ ಕಟ್ಟುತ್ತೇನೆ ಎಂದು ಮಸ್ಕ್ ಹೇಳಿದ್ದರು. ಅದರಂತೆ ಜುಲೈ 4ರಂದು ಈ ಮಸೂದೆಗೆ ಸಹಿ ಹಾಕಲಾಗಿದೆ ಹಾಗೆ ಮಸ್ಕ್ ಹೊಸ ಪಕ್ಷ ಕೂಡ ಕಟ್ಟಿದ್ದಾರೆ.
ಮಸ್ಕ್ ಹೊಸ ಪಕ್ಷ ಕಟ್ಟಿರುವುದು ಮುಂದೆ ರಿಪಬ್ಲಿಕನ್ ಹಾಗೆ ಡೆಮಾಕ್ರಟಿಕ್ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಹಾಗೆ ಮುಂಬರುವ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲೂ ಅವರು ಸ್ಪರ್ಧಿಸಬಹುದು ಎನ್ನಲಾಗಿದೆ.
ಮಸ್ಕ್ ಆಸ್ತಿ ಎಷ್ಟಿದೆ?
ಒಂದು ಪಕ್ಷ ಕಟ್ಟಿ ಬೆಳೆಸಬೇಕು ಅಂದ್ರೆ ಹಣವಿರಬೇಕು. ಹಾಗೆ ಹಣವಂತರಿಗೆ ಅಧಿಕಾರ ಎಂಬುದು ಯಾವಾಗಲು ಸಾಬೀತಾಗಿದೆ. ಈಗ ಟ್ರಂಪ್ ಕೂಡ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಲವು ಉದ್ಯಮಗಳ ಮುನ್ನಡೆಸುತ್ತಿರುವ ಅವರು ವಿಶ್ವದ ಶ್ರೀಮಂತ ಉದ್ಯಮಿಯಾಗಿದ್ದಾರೆ. 2025ರ ಪ್ರಕಾರ ಎಲಾನ್ ಮಸ್ಕ್ ಅವರ ಒಟ್ಟು ಆಸ್ತಿ ಮೌಲ್ಯ 381 ಬಿಲಿಯನ್ ಅಮೆರಿಕ್ ಡಾಲರ್ ಆಗಿದೆ. ಹಾಗೆ ಫೋರ್ಬ್ಸ್ ಪ್ರಕಾರ ಅವರು 424.7 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ.



Click it and Unblock the Notifications
