Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮಕ್ಕಳಿಂದ ಮೊಬೈಲ್ ದೂರವಿಡುವಂತೆ ಎಲಾನ್ ಮಸ್ಕ್ ಕಳಕಳಿ.! ಏಕೆ ಗೊತ್ತಾ?
ಇತ್ತೀಚಿನ ದಿನಗಳಲ್ಲಿ ಮಕ್ಕಳು ಸ್ಮಾರ್ಟ್ ಫೋನ್‌ಗಳಿಗೆ ದಾಸರಾಗಿದ್ದಾರೆ. ಚಿಕ್ಕ ಮಕ್ಕಳ ಕೈಯಲ್ಲೂ ಈಗ ಮೊಬೈಲ್ ಫೋನ್ ಬಂದುಬಟ್ಟಿದೆ. ಅದರಲ್ಲೂ ಕೊರೊನಾ ಸಮಯದಲ್ಲಿ ಲಾಕ್‌ಡೌನ್ ಹಿನ್ನೆಲೆ ಆನ್‌ಲೈನ್ ತರಗತಿಗಳು ಆರಂಭಗೊಂಡ ಬಳಿಕ ಈ ಸಂಖ್ಯೆ ಮಿತಿ ಮೀರಿದೆ.
ಆದರೆ ಅಗತ್ಯಕ್ಕಿಂತ ಹೆಚ್ಚಿನ ಸಮಯ ಫೋನ್‌ನಲ್ಲಿ ಅವರು ಕಳೆಯುತ್ತಿರುವು ಫೋಷಕರ ಆತಂಕ ಹೆಚ್ಚುವಂತೆ ಮಾಡಿದೆ. ಇದು ಅವರ ಬುದ್ಧಿಮಟ್ಟ ಹಾಗೂ ಓದಿನ ಕಡೆ ಗಮನ ಹರಿಸದಿರುವಂತೆ ಮಾಡಲು ಬೇಕಾಗುವ ಎಲ್ಲಾ ಕಾರ್ಯಗಳ ಮಾಡುತ್ತಿದೆ. ಇದು ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳ ಬಳಕೆಯ ಪ್ರಮಾಣ ಏರಿಕೆ ಹೊಸ ತಲೆ ನೋವಿಗೆ ಕಾರಣವಾಗಿದೆ.

ಅದರಲ್ಲೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಮೊಬೈಲ್ ಫೋನ್‌ಗಳು ಉಂಟು ಮಾಡುತ್ತಿರುವ ಅಪಾಯ ಅಷ್ಟಿಷ್ಟಲ್ಲ. ಹೀಗಾಗಿ ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಮಕ್ಕಳ ಮೊಬೈಲ್ ಬಳಕೆ ಸಂಬಂಧ ಕಳಕಳಿ ವ್ಯಕ್ತಪಡಿಸಿದ್ದಾರೆ.
ಟೆಸ್ಲಾ ಸಂಸ್ಥೆಯ ಸಿಇಒ ಎಲಾನ್ ಮಸ್ಕ್ ಮಕ್ಕಳ ಮೇಲೆ ಸುಧಾರಿತ ಕೃತಕ ಬುದ್ಧಿಮತ್ತೆ ಅಲ್ಗಾರಿದಮ್‌ಗಳ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ, ಸೊಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಬಳಕೆದಾರರನ್ನು ಹೆಚ್ಚು ಸಮಯ ಹಿಡಿದಿಟ್ಟುಕೊಳ್ಳುವ ಸಲುವಾಗಿ ಅವರು ಡೋಪಮೈನ್ ಮಟ್ಟವನ್ನು ಬಳಸಿಕೊಳ್ಳುತ್ತಿರಬಹುದು ಎಂದು ಎಚ್ಚರಿಸಿದ್ದಾರೆ.
ಡೋಪಮೈನ್ ಬಿಡುಗಡೆಯನ್ನು ಗರಿಷ್ಠ ಮಟ್ಟಕ್ಕೆ ಕೊಂಡೊಯ್ಯಲು ಅಲ್ಗಾರಿದಮ್‌ಗಳ ನಡುವೆ ತೀವ್ರ ಪೈಪೋಟಿ ಇರುವುದರಿಂದ ಅನೇಕ ಸಾಮಾಜಿಕ ಮಾಧ್ಯಮ ವೇದಿಕೆಗಳು ಮಕ್ಕಳಿಗೆ ಅಪಾಯವನ್ನುಂಟುಮಾಡುತ್ತವೆ ಎಂದು ಅವರು ಎಕ್ಸ್‌ನಲ್ಲಿ ಟೀಕಿಸಿದ್ದಾರೆ. ಸರಳವಾಗಿ ಹೇಳುವುದಾದರೆ ಮೊಬೈಲ್ ಬಳಕೆ ಮಕ್ಕಳಲ್ಲಿ ಒಂದು ಚಟವಾಗಿ ಪರಿಣಮಿಸುವಂತೆ ಸೊಶಿಯಲ್ ಮೀಡಿಯಾಗಳು ಅವರನ್ನು ಸೆಳೆಯುವ ಯತ್ನ ಮಾಡುತ್ತಿವೆ.
ನೀವು ಯಾವುದೇ ಸೋಶಿಯಲ್ ಮೀಡಿಯಾ ತೆಗೆದು ನೋಡಿ ಅಲ್ಲಿ ಎಂದಿಗೂ ನೀವು ಇಷ್ಟು ಸಮಯದಿಂದ ಸೋಶಿಯಲ್ ಮೀಡಿಯಾ ಬಳಸುತ್ತಿದ್ದೀರಿ, ನಿಮ್ಮ ಕಣ್ಣಿಗೆ, ಆರೋಗ್ಯಕ್ಕೆ ಇದು ಹಾನಿಕರವಾಗಬಹುದು ಎಂಬಂತಹ ಸೂಚನೆಗಳನ್ನು ನೀವೆಂದು ನೋಡಲು ಸಾಧ್ಯವೇ ಇಲ್ಲ. ಇದೊಂದು ವ್ಯವಸ್ಥಿತ ಜಾಲದಂತೆ ಕೆಲಸ ಮಾಡುತ್ತದೆ.
ಎಲಾನ್ ಮಸ್ಕ್ ಅವರ ಈ ಪೋಸ್ಟ್‌ಗೆ ಹಲವರು ಸಮ್ಮತಿ ಸೂಚಿಸಿದ್ದಾರೆ. ಮಸ್ಕ್ ಹೇಳುತ್ತಿರುವುದರಲ್ಲಿ ಶೇ.100ರಷ್ಟು ಸತ್ಯವಿದೆ ಎಂದಿದ್ಧಾರೆ. ಪೋಷಕರು ಮಕ್ಕಳ ಮೊಬೈಲ್ ಬಳಕೆ ಸಮಯವನ್ನು ಮಿತಿಗೊಳಿಸಬೇಕಾಗಿರುವ ಅನಿವಾರ್ಯತೆ ಇದ. ಮಕ್ಕಳು ಇನ್ನೂ ಹೊರಗೆ ಹೋಗಿ ಆಟವಾಡಬೇಕು. ಪುಸ್ತಕಗಳನ್ನು ಓದುವಂತೆ ಮಾಡಬೇಕು. ಸಾಮಾಜಿಕ ಮಾಧ್ಯಮವು ಮಕ್ಕಳ ಜೀವನದ ಮೇಲೆ ಎಷ್ಟು ಪ್ರಭಾವ ಬೀರಿದೆ ಎಂಬುದು ನಿಜಕ್ಕೂ ದುಃಖಕರವಾಗಿದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಎರಡನೇ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ, "ನನ್ನ ಮಕ್ಕಳು 18 ವರ್ಷ ವಯಸ್ಸಿನವರೆಗೆ ಸಾಮಾಜಿಕ ಮಾಧ್ಯಮದಿಂದ ನಿಷೇಧಿಸಲ್ಪಟ್ಟಿದ್ದಾರೆ. ಅವರು ಫ್ಲಿಪ್ ಫೋನ್‌ಗಳನ್ನು ಮಾತ್ರ ಹೊಂದಿದ್ದಾರೆ. ಅವರು ತಮ್ಮ ಸ್ನೇಹಿತರನ್ನು ನೋಡಲು ಬಯಸಿದರೆ ಅವರು 80-90 ರ ದಶಕದಲ್ಲಿ ನಾವು ಮಾಡಿದಂತೆ ಅವರ ಮನೆಗೆ ಹೋಗಬಹುದು ಎಂದಿದ್ದಾರೆ.
ಎಲಾನ್ ಮಸ್ಕ್ ಪ್ಯಾರಿಸ್‌ನಲ್ಲಿ ನಡೆದ ಟೆಕ್ ಈವೆಂಟ್‌ನಲ್ಲಿ ಕೃತಕ ಬುದ್ಧಿಮತ್ತೆ (AI) ಅಂತಿಮವಾಗಿ ಎಲ್ಲಾ ಉದ್ಯೋಗಗಳನ್ನು ಹಳತಾಗಿಸುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಭವಿಷ್ಯದಲ್ಲಿ ಉದ್ಯೋಗ ಎಂಬುದು ಒಬ್ಬ ವ್ಯಕ್ತಿಯ ಐಶ್ಚಿಕ ವಿಷಯವಾಗಬಹುದು. ಅಲ್ಲದೆ ನಮಗೆಲ್ಲ ಮುಂದೆ ಕೆಲಸವೂ ಇರುವುದಿಲ್ಲ ಎಂಬ ಆತಂಕ ಹೊರಹಾಕಿದ್ದಾರೆ. ನಮ್ಮ ದೊಡ್ಡ ಭಯ ಏನೆಂದರೆ ನೀವು ಹವ್ಯಾಸದಂತಹ ಕೆಲಸವನ್ನು ಮಾಡಲು ಬಯಸಿದರೆ, ನೀವು ಕೆಲಸವನ್ನು ಮಾಡಬಹುದು. ಆದರೆ ಇಲ್ಲದಿದ್ದರೆ, AI ಮತ್ತು ರೋಬೋಟ್‌ಗಳು ನಿಮಗೆ ಬೇಕಾದ ಯಾವುದೇ ಸರಕು ಮತ್ತು ಸೇವೆಗಳನ್ನು ಒದಗಿಸುತ್ತವೆ ಎಂದು ಆತಂಕ ಹೊರಹಾಕಿದ್ದಾರೆ.



Click it and Unblock the Notifications
