Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಒಂದೇ ದಿನ ಹರಿದು ಬಂತು 33.5 ಬಿಲಿಯನ್ ಡಾಲರ್ ಹಣ..! ಮಸ್ಕ್ ಮಾಡಿದ ಮ್ಯಾಜಿಕ್ ಏನು..?
ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ನಿಮಗೆಲ್ಲಾ ತಿಳಿದಿರಬಹುದು. ಆತ ಸ್ಪೇಸ್ ಎಕ್ಸ್, ಎಕ್ಸ್, ಟೆಸ್ಲಾ ಸೇರಿದಂತೆ ಹತ್ತು ಹಲವು ಕಂಪನಿಗಳ ಒಡೆಯನಾಗಿದ್ದಾರೆ. ಕರಗದಷ್ಟು ಸಂಪತ್ತು ಹೊಂದಿರುವ ಆತ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಹೊಂದಿದ್ದಾರೆ. ಟೆಸ್ಲಾ ಇನ್ನೂ ಹಲವು ದೇಶಗಳಿಗೆ ಕಾಲಿಡುವ ಮುನ್ನವೇ ಅವರ ಸಂಪತ್ತು ಅತ್ಯಧಿಕ ಮಟ್ಟ ತಲುಪಿತ್ತು. ಆದರೆ ಈಗ ಹೊಸ ಹೊಸ ದೇಶದಲ್ಲಿ ಟೆಸ್ಲಾ ಪ್ಲಾಂಟ್‌ಗಳು ನಿರ್ಮಾಣ ಹಂತದಲ್ಲಿವೆ.
ಇತ್ತೀಚಿಗೆ ಅವರ ಸೈಬರ್ ಟ್ರಕ್ ವೈರಲ್ ಆಗಿತ್ತು. ಟೆಸ್ಲಾದ ಅತ್ಯುನ್ನತ ಮಾಡೆಲ್ ಕಾರು ಇದಾಗಿತ್ತು. ಇನ್ನು ವರ್ಷ ವರ್ಷ ಅವರ ಸಂಪತ್ತಿನಲ್ಲಿ ಏರಿಕೆಯಾಗುತ್ತಿರುವುದು ಸಹ ನಾವು ನೋಡುತ್ತಿರಬಹುದು. ಹಲವು ಕಡೆ ಅವರು ಹಣ ಹೂಡಿಕೆ ಮಾಡುತ್ತಿದ್ದರೂ ಕೂಡ ಆಸ್ತಿ ಮೌಲ್ಯ ಏರಿಕೆಯಾಗುತ್ತಿದೆ. ಈಗ ಒಂದೇ ದಿನ ಅವರು ತಮ್ಮ ಆಸ್ತಿಗೆ ಬರೋಬ್ಬರಿ 33.5 ಬಿಲಿಯನ್ ಡಾಲರ್ ಹೆಚ್ಚಿಸಿಕೊಂಡಿದ್ದಾರೆ.

ಒಂದೇ ದಿನದಲ್ಲಿ ಇಷ್ಟೊಂದು ಪ್ರಮಾಣದ ಆಸ್ತಿ ಹೆಚ್ಚಳ ಎಲ್ಲರ ಗಮನ ಸೆಳೆದಿದೆ. ಹಾಗೆ ಇಷ್ಟೊಂದು ಹಣ ಒಂದೇ ದಿನ ಹರಿದು ಬಂದಿದ್ದು ಹೇಗೆ ಎಂಬ ಕುತೂಹಲಕ್ಕೂ ಕಾರಣವಾಗಿದೆ.
ಟೆಸ್ಲಾ ಷೇರು ಗಗನಕ್ಕೆ
ಟೆಸ್ಲಾ ಇಂಕ್, ಮೂರನೇ ತ್ರೈಮಾಸಿಕ ಗಳಿಕೆಯ ವರದಿಯನ್ನು ಬಿಡುಗಡೆ ಮಾಡಿದ ನಂತರ ಅದರ ಷೇರು ಬೆಲೆಯಲ್ಲಿ ಶೇ. 22ರಷ್ಟು ಏರಿಕೆ ಕಂಡಿದೆ. ಬ್ಲೂಮ್‌ಬರ್ಗ್ ವರದಿಯ ಪ್ರಕಾರ, 2023ರ ಬೇಸಿಗೆಯ ನಂತರ ಕಂಪನಿಯು ತನ್ನ ಅತೀ ದೊಡ್ಡ ಲಾಭವನ್ನು ಪ್ರಕಟಿಸಿದೆ. ಈ ಲಾಭಾಂಶ ಪ್ರಕಟಗೊಂಡ ಬಳಿಕ ಟೆಸ್ಲಾ ಕಂಪನಿಯ ಷೇರು ಮೌಲ್ಯ ದಿಢೀರ್ ಏರಿಕೆಯಾಗಿದೆ.
ಮುಂದಿನ ವರ್ಷ ಟೆಸ್ಲಾ ವಾಹನ ಮಾರಾಟವು ಬರೋಬ್ಬರಿ ಶೇ.20ರಿಂದ 30ರಷ್ಟು ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಇದು ಕಂಪನಿಯ ಲಾಭದಾಯಕ ಅಂಶ ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಎಲಾನ್ ಮಸ್ಕ್ ಸೈಬರ್ ಟ್ರಕ್ ಬಿಡುಗಡೆ ಮಾಡಿದ ಬಳಿಕ ಹೂಡಿಕೆದಾರರ ಗಮನ ಸೆಳೆದಿದ್ದು ಹೂಹೆಗೂ ಮೀರಿ ಸಂಪತ್ತು ಹರಿದು ಬಂದಿತ್ತು. ಈಗ ಷೇರು ಮೌಲ್ಯ ಏರಿಕೆ ಕೂಡ ಹೂಡಿಕೆದಾರರ ಒಲವು ತೋರಿಸುತ್ತಿದೆ.
ಇದಿಷ್ಟೇ ಅಲ್ಲ ಇತ್ತೀಚಿಗೆ ರೋಬೋಟ್ಯಾಕ್ಸಿ ಕಾನ್ಸೆಪ್ಟ್ ಅನ್ನು ಜಗತ್ತಿಗೆ ತೋರಿಸಿರುವ ಅವರು 2026ರ ವೇಳೆ ಜಗತ್ತಿಗೆ ಪರಿಚಯಿಸಲಿದ್ದಾರೆ. ಇದೊಂದು ಬಹುದೊಡ್ಡ ಕ್ರಾಂತಿಯಾಗಿ ಬದಲಾಗಲಿದೆ ಎಂದು ಅವರೇ ಹೇಳಿದ್ದಾರೆ. ಮಸ್ಕ್ ಸಂಪತ್ತಿನ ಕ್ರೂಢೀಕರಣದಲ್ಲಿ ಟೆಸ್ಲಾ ಸುಮಾರು ಶೇ.70ಕ್ಕಿಂತ ಅಧಿಕ ಪಾಲು ಹೊಂದಿದೆ. ಅದರ ನಂತರ ಸ್ಪೇಸ್ ಎಕ್ಸ್, ಎಕ್ಸ್ (ಟ್ವಿಟರ್) ಹಾಗೂ ಕೃತಕ ಬುದ್ಧಿಮತ್ತೆಯಾಗಿರುವ ಕಂಪನಿ xAI ಪಾಲು ಹೊಂದಿದೆ.
xAI ಕಂಪನಿಯನ್ನು ChatGPTಗೆ ಪರ್ಯಾಯ ಸಂಸ್ಥೆಯಾಗಿ ಬೆಳೆಸುವುದಾಗಿ ಮಸ್ಕ್ ಹೇಳಿದ್ದಾರೆ. ಹಾಗೆ ರೊಬೋಟಿಕ್ ಟ್ಯಾಕ್ಸಿಯ ಅಭಿವೃದ್ಧಿ ಅಂದುಕೊಂಡ ಸಮಯಕ್ಕಿಂತ ಬಹುಬೇಗ ರಸ್ತೆಗೆ ಬರಲಿದೆ ಎಂದಿದ್ದಾರೆ.
ಇತ್ತೀಚಿಗೆ ಎಲಾನ್ ಮಸ್ಕ್ ಅಮೆರಿಕ ಚುನಾವಣೆಯ ಕಣಕ್ಕೆ ಧುಮುಕಿದ್ದಾರೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪರವಾಗಿ ಪ್ರಚಾರದಲ್ಲೂ ಕಾಣಿಸಿಕೊಂಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ವಿರುದ್ಧವಾಗಿ ಅವರು ಎಲ್ಲೆಡೆ ಪ್ರಚಾರದಲ್ಕಿ ಭಾಗಿಯಾಗುತ್ತಿದ್ದು, ಈ ಬಾರಿಯ ಚುನಾವಣೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಮುಂದಿನ ತಿಂಗಳಿನಿಂದ ಅಮೆರಿಕದಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಳ್ಳುತ್ತಿದೆ.



Click it and Unblock the Notifications
