Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ತಲೆಬುರುಡೆ ನೋಡಿ ಕಣ್ಣೀರಿಟ್ಟ ಆನೆ: ಕುಟುಂಬ ಸದಸ್ಯನ ಗುರುತು ಹಿಡಿಯೋದು ಹೇಗೆ?
ಆನೆಗಳು ಸಾಮಾನ್ಯವಾಗಿ ಸಂಘಜೀವಿಗಳು, ಅವು ಗುಂಪು, ಸಮುದಾಯದ ಪ್ರತೀಕವಾಗಿ ಬದುಕುತ್ತವೆ. ಯಾವಾಗಲು ಗುಂಪುಗಳಲ್ಲಿ ವಾಸವಿರುವ ಜೀವಿಗಳಲ್ಲಿ ಹಾಗೆ ದೊಡ್ಡ ಮೆದುಳು ಹೊಂದಿರುವ ಕಾರಣ ಬುದ್ದಿ ಶಕ್ತಿಯೂ ಅವುಗಳಿಗೆ ಹೆಚ್ಚಾಗಿಯೇ ಇರಲಿದೆ. ಇನ್ನು ಮಾನವರೊಂದಿಗೆ ಸಂಘರ್ಷ ಒಂದು ಕಡೆಯಾದರೆ ಮಾನವರೊಂದಿಗೆ ಅವುಗಳು ಕೂಡ ನಾಡಿನಲ್ಲಿ ಬದುಕುವುದು ನೋಡಬಹುದು.
ಆನೆ ದೈತ್ಯ ಪ್ರಾಣಿಯಾದರೂ ಅದನ್ನು ಮಾವುತರು ಒಳಗಿಸುತ್ತಾರೆ. ಬಹಳ ಬುದ್ದಿವಂತ ಹಾಗೆ ಭಾವನಾತ್ಮಕ ಜೀವಿಗಳು ಎಂಬುದನ್ನು ನಾವೆಲ್ಲಾ ತಿಳಿದಿದ್ದೇವೆ. ಇನ್ನು ಆನೆಗಳ ಜೀವನದಲ್ಲಿ ಅವು ತಮ್ಮ ಮರಿಗಳನ್ನು ಹಾಗೆ ಕುಟುಂಬ ಸದಸ್ಯರನ್ನು ಕಾಪಾಡುವ ಕೆಲಸ ಮಾಡುತ್ತವೆ. ಹಾಗೆ ಆ ಕುಟುಂಬದ ಸದಸ್ಯ ಆನೆಗಳು ಮೃತಪಟ್ಟರೆ ಉಳಿದ ಆನೆಗಳು ಭಾವನಾತ್ಮಕವಾಗಿ ಸ್ಪಂದಿಸುವುದು ನೋಡಬಹುದು.

ಈಗ ಇಲ್ಲೊಂದು ವಿಡಿಯೋದಲ್ಲಿ ಸೆರೆಯಾಗಿರುವಂತೆ ಆನೆಯೊಂದು ಇನ್ನೊಂದು ಆನೆಯ ಅಸ್ಥಿಪಂಜರ ನೋಡಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಒಂದು ಹೃದಯಸ್ಪರ್ಶಿ ಮತ್ತು ಭಾವನಾತ್ಮಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಆನೆಯು ಇದಕ್ಕೂ ಮೊದಲು ಮೃತಪಟ್ಟ ಆನೆಯ ತಲೆ ಬುರುಡೆ ನೋಡಿ ಕಣ್ಣೀರಿಟ್ಟಿದೆ. ಆನೆ ತಲೆಬುರುಡೆಯನ್ನು ಗಮನಿಸಿದ ತಕ್ಷಣ, ಅದನ್ನು ದೀರ್ಘಕಾಲದವರೆಗೆ ಪರಿಶೀಲಿಸಿದ ನಂತರ ತೀವ್ರ ದುಃಖವನ್ನು ಹೊರಹಾಕಿದೆ. ಈ ವೀಡಿಯೊವನ್ನು ಮೂಲತಃ @readysetsafari ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದು ಆಫ್ರಿಕಾದ ಪ್ರದೇಶದಲ್ಲಿ ಸೆರೆ ಹಿಡಿಯಲಾದ ದೃಶ್ಯ ಎಂದು ಹೇಳಲಾಗಿದೆ.
ಅದೇ ಆನೆಯ ಗುಂಪಿನಿಂದ ಬೇರ್ಪಟ್ಟು ಬಳಿಕ ಮೃತಪಟ್ಟ ಆನೆಗಳನ್ನು ಅವು ಗುರುತು ಹಿಡಿಯಲಿವೆ ಎಂದು ಹೇಳಲಾಗುತ್ತದೆ. ಹಾಗೆ ಈ ಆನೆ ಕಡ ತನ್ನ ಪೂರ್ವಜ ಆನೆಯ ತಲೆಯನ್ನು ಗುರುತು ಹಿಡಿದಿದೆ. ಹಾಗೆ ಅದನ್ನು ಪರಿಶೀಲಿಸಿ ಬಳಿಕ ಭಾವುಕವಾಗುವುದು ವಿಡಿಯೋದಲ್ಲಿ ನೋಡಬಹುದು.
ವೀಡಿಯೊದಲ್ಲಿ ಆನೆಯು ತಲೆಬುರುಡೆಯನ್ನು ದಾಟಿ ತನ್ನ ಸೊಂಡಿಲಿನಿಂದ ಅದನ್ನು ಪರಿಶೀಲಿಸುವುದನ್ನು ಕಾಣಬಹುದು. ಅದು ಮತ್ತೊಂದು ಆನೆಗೆ ಸೇರಿದೆ ಎಂದು ಅರಿತುಕೊಂಡ ನಂತರ ದುಃಖದಲ್ಲಿ ಘೀಳಿಡುವುದು ನೋಡಬಹುದು.
ಆನೆಯ ಈ ಭಾವುಕ ಕ್ಷಣದ ವಿಡಿಯೋವೊಂದು ವೈರಲ್ ಆಗುತ್ತಿದೆ. ಬುದ್ದಿವಂತಿಕೆಗೆ ಹೆಸರಾಗುವ ಆನೆಗಳು ತಮ್ಮ ಸ್ವಂತದವರ ಕಳೆದುಕೊಂಡಾಗ ಯಾವ ರೀತಿ ಭಾವುಕಾಗುತ್ತವೆ. ಈ ವಿಡಿಯೋ ನೋಡಿದ ಮಂದಿ ಕೂಡ ಆನೆಯ ವರ್ತನೆಯ ಕಂಡು ಅಚ್ಚರಿ ಹೊರಹಾಕಿದ್ದಾರೆ. ಆನೆಗಳಿಗೂ ತಮ್ಮವರ ಕಳೆದುಕೊಂಡಾಗ ನೋವಾಗುತ್ತದೆ, ಅವುಗಳು ಕೂಡ ದುಃಖಪಡುತ್ತವೆ.
ಆನೆಗಳ ಕುರಿತ ಅಚ್ಚರಿ ಮಾಹಿತಿಗಳಿವು
ಆನೆಗಳು ಭೂಮಿ ಮಲಿನ ಅತೀ ದೊಡ್ಡ ಪ್ರಾಣಿಗಳು
ಭೂಮಿ ಮೇಲಿನ ಅತೀ ದೊಡ್ಡ ಪ್ರಾಣಿ ಅಂದರೆ ಅದು ಆನೆ. ಸರಾಸರಿ ಗಂಡು ಆನೆಯು ಮೂರು ಮೀಟರ್ (13 ಅಡಿ) ಎತ್ತರ ಇರಲಿದೆ. ಮತ್ತು ಬರೋಬ್ಬರಿ 6 ಟನ್ ವರೆಗೂ ತೂಕ ಇರಲಿದೆ. ಆನೆಗಳು ಮೆದುಳು ಸಹ 6 ಕೆ.ಜಿ ವರೆಗೂ ತೂಗಬಹುದು. ಕಾಡಾನೆಗಳು ಸುಮಾರು 70 ವರ್ಷಗಳ ಕಾಲ ಬದುಕಬಹುದು
ಆಫ್ರಿಕನ್ ಆನೆಗಳು ಮತ್ತು ಏಷ್ಯನ್ ಆನೆಗಳು ಎರಡು ಪ್ರಭೇದಗಳಾಗಿವೆ
ಆನೆಗಳಲ್ಲಿ ಆಫ್ರಿಕನ್ ಆನೆ ಹಾಗೂ ಏಷ್ಯನ್ ಆನೆ ಎಂಬ 2 ಪ್ರಕಾರ ನೋಡಬಹುದು. ಅದ್ರಲ್ಲೂ ಆಫ್ರಿಕನ್ ಆನೆಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಆದ್ರೆ ಆಫ್ರಿಕನ್ ಆನೆಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಇತ್ತೀಚಿನ ವರದಿಯ ಪ್ರಕಾರ 415,428 ಆಫ್ರಿಕನ್ ಆನೆಗಳು ಉಳಿದಿವೆ, ಅವುಗಳಲ್ಲಿ ಅರ್ಧದಷ್ಟು ದಕ್ಷಿಣ ಆಫ್ರಿಕಾದ ಬೋಟ್ಸ್ವಾನಾ ಮತ್ತು ನಮೀಬಿಯಾದಲ್ಲಿವೆ. ಹಾಗೆ ಏಷ್ಯನ್ ಆನೆಗಳು ಅಳಿವಿನಂಚಿಗೆ ತಳುಪಿದೆ. ಸುಮಾರು 20ರಿಂದ 30 ಸಾವಿರ ಏಷ್ಯನ್ ಆನೆಗಳು ಮಾತ್ರ ಉಳಿದಿವೆ ಎಂದು ಹೇಳಲಾಗಿದೆ.



Click it and Unblock the Notifications
