Latest Updates
-
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ!
ಸರ್ಕಸ್‌ನಿಂದ ತಪ್ಪಿಸಿಕೊಂಡು ಓಡಿದ ಆನೆ..! ಆಮೇಲೆ ಆಗಿದ್ದೇನು..?
ಪ್ರಾಣಿಗಳ ಜಗತ್ತಿನಲ್ಲಿ ಅತ್ಯಂತ ಬುದ್ದಿವಂತೆ ಪ್ರಾಣಿಗಳ ಸಾಲಿನಲ್ಲಿ ಆನೆಗಳು ಸಹ ನಿಲ್ಲುತ್ತವೆ. ಸದ್ಯ ಭೂಮಿ ಮೇಲೆ ವಾಸವಿರುವ ದೊಡ್ಡ ಗಾತ್ರದ ಪ್ರಾಣಿಗಳು ಅಂದ್ರೆ ಅವು ಆನೆಗಳೆ. ಆನೆಗಳಿಗೂ ಮಾನವರಿಗೆ ಹಿಂದಿನಿಂದಲೂ ನಂಟಿದೆ. ಒಂದು ಲೆಕ್ಕದಲ್ಲಿ ಆನೆಗಳು ಕಾಡಿನಲ್ಲಿರುವ ಜೊತೆಗೆ ನಾಡಿನಲ್ಲೂ ತಮ್ಮ ಸಾಮ್ರಾಜ್ಯ ಕಟ್ಟಿಕೊಂಡಿವೆ.
ಕಾಡಿನಲ್ಲಿ ಆಹಾರ ಇಲ್ಲದಿದ್ದಾಗ ಹೇಗೆ ನಾಡಿಗೆ ಬರುತ್ತವೋ ಹಾಗೆ ನಾಡಿನಲ್ಲೇ ಅವು ನೆಲೆಸುವ ಪ್ರಕಾರವು ಇದೆ. ದೇವಾಲಯಗಳು, ಶಿಬಿರಗಳು, ಬಿಡಾರಗಳಲ್ಲಿ ಆನೆಗಳು ನೆಲೆಸಿವೆ. ಇದನ್ನು ಹೊರತುಪಡಿಸಿ ಆನೆಗಳು ಸರ್ಕಸ್‌ಗಳಲ್ಲೂ ನಾವು ನೋಡಬಹುದು. ಆದರೆ ಭಾರತದಲ್ಲಿ ಆನೆಗಳು ಸರ್ಕಸ್‌ಗಳಲ್ಲಿ ಕಾಣಸಿಗುವುದಿಲ್ಲ.

ಆದರೆ ಇಲ್ಲೊಂದು ಕಡೆ ಸರ್ಕಸ್ ಆನೆಯೊಂದು ತಪ್ಪಿಸಿಕೊಂಡು ಈಡೀ ನಗರದಲ್ಲಿ ಅಲೆದಾಡಿ ಆತಂಕ ಹುಟ್ಟಿಸಿದೆ. ಹೌದು ಇಟಲಿಯ ಮೊಂಟಾನೋ ನಗರದಲ್ಲಿ ಆನೆಯೊಂದು ಸರ್ಕಸ್‌ನಿಂದ ತಪ್ಪಿಸಿಕೊಂಡು ಅಡ್ಡಾದಿಡ್ಡಿ ಅಲೆದಾಡಿರುವ ವಿಡಿಯೋಗಳು ವೈರಲ್ ಆಗುತ್ತಿವೆ.
ಸರ್ಕಸ್ ತಂಡದಲ್ಲಿದ ಆನೆಯೊಂದು ನಗರದಲ್ಲಿ ಓಡುತ್ತಿದ್ದು ಅದರ ಹಿಂದೆ ಸರ್ಕಸ್ ತಂಡದ ಸದಸ್ಯನೊಬ್ಬ ಓಡುತ್ತಿದ್ದಾನೆ. ಇದು ಅಲ್ಲಿ ನಿವಾಸಿಗಳಲ್ಲಿ ಭಯಕ್ಕೆ ಕಾರಣವಾಗಿತ್ತು. ಸರ್ಕಸ್‌ನ 58 ವರ್ಷ ವಯಸ್ಸಿನ ಆನೆ ವಯೋಲಾ ಆಕಸ್ಮಿಕವಾಗಿ ತಪ್ಪಿಸಿಕೊಂಡಿತ್ತು, ನಗರದ 35,000 ನಿವಾಸಿಗಳನ್ನು ಅದು ಭಯಕ್ಕೆ ತಳ್ಳಿತ್ತು.
ಇದರ ಜೊತೆಗೆ ಇಡೀ ನಗರದಲ್ಲಿ ಟ್ರಾಫಿಕ್ ಜಾಮ್‌ಗೆ ಕಾರಣವಾಗಿತ್ತು, ಕೆಲವು ಕಡೆಗಳಲ್ಲಿ ಸಾರ್ವಜನಿಕ ಆಸ್ತಿ ಮೇಲೆ ದಾಳಿ ನಡೆಸಿದ ಆನೆ ಪಾರ್ಕ್, ಫುಟ್‌ಪಾತ್‌ನಲ್ಲಿ ದಾಳಿ ಮಾಡಿದೆ. ಆದರೆ ಗಂಟೆಗಳ ಬಳಿಕ ರಕ್ಷಣಾ ಸಿಬ್ಬಂದಿ ಆನೆಯನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಸರ್ಕಸ್ ಕಾರ್ಯಕ್ರಮದಲ್ಲಿ ತರಬೇತಿ ನೀಡುತ್ತಿರುವಾಗ ಈ ನಡುವೆ ವಿಶ್ರಾಂತಿ ನೀಡಲಾಗಿತ್ತು. ಆದರೆ ಆನೆ ಇಡಲಾಗಿದ್ದ ದೊಡ್ಡ ಕೇಜ್‌ಗೆ ಹೊರಗಿನಿಂದ ಬಾಗಿಲು ಲಾಕ್ ಮಾಡಲು ಮರೆಯಲಾಗಿತ್ತಂತೆ. ಇದೇ ಸರಿಯಾದ ಸಮಯ ಎಂದು ತಿಳಿದ ಆನೆ ಅಲ್ಲಿಂದ ಪರಾರಿಯಾಗಿದೆ. ಅದೃಷ್ಟದಂತೆ ಅದರ ಎದುರು ಯಾರು ಬಾರದ ಕಾರಣ ಯಾರ ಜೀವಕ್ಕೂ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಆನೆಗಳ ಬಗೆಗಿನ ಅಚ್ಚರಿ ವಿಚಾರಗಳು
ಆಫ್ರಿಕಾದ ಸವನ್ನಹುಲ್ಲುಗಾವಲಿನಲ್ಲಿರುವ ಆನೆಗಳು ತುಂಬಾ ದೊಡ್ಡ ಗಾತ್ರದಲ್ಲಿರುತ್ತವೆ. ಇಲ್ಲಿ ಆನೆಗಳು ಸುಮಾರು 6000ಕೆಜಿ ತೂಕ ಹೊಂದಿರುತ್ತದೆ, ಗಂಡಾನೆ ದೊಡ್ಡ ಗಾತ್ರ ತಲುಪಲು 35-40 ವರ್ಷ ವಯಸ್ಸಾಗಬೇಕು. ಇನ್ನು ಇಲ್ಲಿ ಆನೆಮರಿಗಳು ಹುಟ್ಟುವಾಗಲೇ 120 ಕೆಜಿ ತೂಕ ಹೊಂದಿರುತ್ತದೆ.
ಆಫ್ರಿಕನ್ ಹುಲ್ಲುಗಾವಲಿನ ಆನೆ (ಬುಷ್ ಆನೆ), ಆಫ್ರಿಕನ್ ಕಾಡಾನೆ ಹಾಗೂ ಏಷ್ಯಾನ್ ಆನೆ. ಏಷ್ಯಾನ್ ಆನೆಗಳು ಭಾರತದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ, ಆಫ್ರಿಕನ್ ಆನೆಗಳಿಗೆ ಅದರ ಸೊಂಡಲಿನಲ್ಲಿ ಎರಡು ಬೆರಳುಗಳಿದ್ದರೆ, ಏಷ್ಯಾನ್ ಆನೆಗೆ ಒಂದು ಬೆರಳು ಇರುತ್ತದೆ.
ಅದರ ಸೊಂಡಿಲಿನಲ್ಲಿ ಸುಮಾರು 150,000 ಸ್ನಾಯುಗಳಿರುತ್ತೆ, ಅಲ್ಲದೆ ಇದು ಆನೆಯ ತುಂಬಾ ಸೆನ್ಸೆಟಿವ್ ಆದ ಜಾಗ ಆಗಿದೆ. ಆನೆ ಸೊಂಡಿಲಿನಲ್ಲಿ ನೆಲಗಡಲೆ ಕಿತ್ತು ಅದರ ಸಿಪ್ಪೆ ಸುಲಿದು ಬರೀ ನೆಲಗಡಲೆಯಷ್ಟೇ ತಿನ್ನುವ ಚಾಕಚಕ್ಯತೆ ಹೊಂದಿದೆ. ಆನೆಗಳ ಸೊಂಡಿಲಿನಲ್ಲಿ 8 ಲೀಟರ್ ನೀರು ಹಿಡಿಯುತ್ತದೆ, ಇನ್ನು ಈಜುವಾಗಲೂ ಈ ಸೊಂಡಿಲು ಸಹಾಯ ಮಾಡುತ್ತೆ.
ಆನೆಗಳು ಎರಡು ವರ್ಷ ಇರುವಾಗ ಅದರ ದಂತಗಳು ಬೆಳೆಯಲಾರಂಭಿಸುತ್ತದೆ, ದಂತಗಳು ಆನೆಯ ಪ್ರಮುಖ ಹಲ್ಲು ಆಗಿದೆ, ಈ ದಮತ ಬಳಸಿ ಮರಗಳನ್ನು ಸೀಳಿ ತಿನ್ನುತ್ತೆ, ಇನ್ನು ಹೋರಾಟ ಮಡುವಾಗಲೂ ಆನೆ ದಂತವನ್ನು ಬಳಸುತ್ತದೆ. ಇನ್ನು ಈ ದಂತದಿಂದಲೇ ಇವುಗಳಿಗೆ ಪ್ರಾಣಾಪಯ ಕೂಡ ಅಧಿಕ. ಕಾಡುಗಳ್ಳಲು ಆನೆಯ ದಂತಕ್ಕಾಗಿ ಇವುಗಳನ್ನು ಭೇಟೆಯಾಡುತ್ತಾರೆ.
ಆನೆಗಳಿಗೆ ಸನ್‌ಬರ್ನ್ ಆಗಲ್ಲ, 2.5 ಸೆ. ಮೀ ದಪ್ಪವಿದೆ ಅದರ ಚರ್ಮ, ಅಲ್ಲದೆ ಅವುಗಳು ಮಣ್ಣಿನಲ್ಲಿ ಹೊರಳಾಡಿ ಮಣ್ಣು ಮತ್ತಿಕೊಂಡಿರುವುದರಿಂದ ಬಿಸಿಲು ಎಷ್ಟೇ ಇದ್ದರು ಅದಕ್ಕೆ ಏನೂ ಆಗಲ್ಲ.



Click it and Unblock the Notifications
