Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಮಕರ ಸಂಕ್ರಾಂತಿ, ಏಕಾದಶಿ; ಜನವರಿ 2024ರಲ್ಲಿನ ಪ್ರಮುಖ ಹಬ್ಬ, ಮುಹೂರ್ತಗಳು..!
ಹೊಸ ವರ್ಷದ ಮೊದಲ ತಿಂಗಳ ಜನವರಿಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಜನವರಿಯಲ್ಲಿ ಅನೇಕ ಪ್ರಮುಖ ಉಪವಾಸಗಳು ಮತ್ತು ಹಬ್ಬಗಳನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ, ಈ ವರ್ಷವೂ ಜನವರಿಯಲ್ಲಿ ಏಕಾದಶಿ, ಮಕರ ಸಂಕ್ರಾಂತಿಯಂತಹ ಅನೇಕ ಉಪವಾಸಗಳು ಮತ್ತು ಹಬ್ಬಗಳನ್ನು ಆಚರಿಸಲಾಗುತ್ತದೆ. ಅಲ್ಲದೆ ಈ ತಿಂಗಳು ಹಲವು ಗ್ರಹಗಳ ಸಂಚಾರವೂ ಬದಲಾಗಲಿದೆ. ಹೀಗಿರುವಾಗ ಹೊಸ ವರ್ಷದ ಮೊದಲ ತಿಂಗಳಲ್ಲಿ ಅಂದರೆ ಜನವರಿಯಲ್ಲಿ ಯಾವಾಗ ಉಪವಾಸ, ಹಬ್ಬಗಳು ಬರುತ್ತವೆ ಎಂಬುದನ್ನು ನೋಡೋಣ.

4 ಜನವರಿ, ಗುರುವಾರ - ಕಲಷ್ಟಮಿ
7 ಜನವರಿ, ಭಾನುವಾರ - ಸಫಲ ಏಕಾದಶಿ
9 ಜನವರಿ, ಮಂಗಳವಾರ- ಮಾಸಿಕ ಶಿವರಾತ್ರಿ, ಪ್ರದೋಷ ವ್ರತ
11 ಜನವರಿ, ಗುರುವಾರ - ಪೌಷ ಅಮಾವಾಸ್ಯೆ
ಜನವರಿ 14, ಭಾನುವಾರ - ಲೋಹ್ರಿ
15 ಜನವರಿ, ಸೋಮವಾರ- ಪೊಂಗಲ್, ಉತ್ತರಾಯಣ, ಮಕರ ಸಂಕ್ರಾಂತಿ
16 ಜನವರಿ, ಮಂಗಳವಾರ- ಮಾಗ್ ಬಿಹು
17 ಜನವರಿ, ಬುಧವಾರ - ಗುರು ಗೋವಿಂದ್ ಸಿಂಗ್ ಜಯಂತಿ
18 ಜನವರಿ, ಗುರುವಾರ - ಮಾಸಿಕ ದುರ್ಗಾಷ್ಟಮಿ
21 ಜನವರಿ, ಭಾನುವಾರ - ಪೌಷ ಪುತ್ರಾದ ಏಕಾದಶಿ
23 ಜನವರಿ, ಮಂಗಳವಾರ- ಪ್ರದೋಷ ವ್ರತ
25 ಜನವರಿ, ಗುರುವಾರ- ಪೌಷ ಪೂರ್ಣಿಮಾ ವ್ರತ
26 ಜನವರಿ, ಶುಕ್ರವಾರ - ಗಣರಾಜ್ಯೋತ್ಸವ
ಹಿಂದೂ ಕ್ಯಾಲೆಂಡರ್ ಪ್ರಕಾರ ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿ ದಿನಾಂಕದಂದು ಮಾಸಿಕ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಶಿವನ ಆಶೀರ್ವಾದ ಪಡೆಯಲು ಈ ದಿನ ಶುಭದಿನ. ಈ ದಿನ ಭಕ್ತರು ಪರಮೇಶ್ವರನನ್ನು ಪೂಜಿಸಿ ಸಂಪನ್ನರಾಗುತ್ತಾರೆ.
ಗ್ರಹಗಳ ರಾಜ ಎಂದೇ ಕರೆಯಲ್ಪಡುವ ಬುಧ ಜನವರಿ 2, 2024 ರಂದು ವೃಶ್ಚಿಕ ರಾಶಿಯನ್ನು ಪ್ರವೇಶಿಸಿದ್ದಾನೆ. ಇದಾದ ನಂತರ ಜನವರಿ 15ರಂದು ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ದಿನ ಮಕರ ಸಂಕ್ರಾಂತಿಯನ್ನು ಆಚರಿಸಲಾಗುವುದು. ಅದೇ ಸಮಯದಲ್ಲಿ ಶುಕ್ರನು ಕೂಡ ವೃಶ್ಚಿಕ ರಾಶಿಯನ್ನು ಬಿಟ್ಟು ಜನವರಿ 18 ರಂದು ಧನು ರಾಶಿಗೆ ಪ್ರವೇಶ ಪಡೆಯಲಿದ್ದಾನೆ.
ಜನವರಿಯಲ್ಲಿ ಪ್ರಮುಖ ಆಚರಣೆ ಎಂದರೆ ಮಕರ ಸಂಕ್ರಾಂತಿಯಾಗಿದೆ. ಇದನ್ನು ಪೊಂಗಲ್, ಉತ್ತರಾಯಣ, ಲೊಹ್ರಿ ಅಂತಲೂ ಹಲವು ಕಡೆ ಆಚರಿಸುತ್ತಾರೆ. ಮಕರ ಸಂಕ್ರಾಂತಿಯನ್ನು ಸುಗ್ಗಿ ಹಬ್ಬ ಎಂದು ಕರೆಯಲಾಗುತ್ತದೆ. ಆದರೆ ಈ ಹಬ್ಬದ ಆಚರಣೆ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿದೆ.
ಈ ದಿನದಂದು ಸಮೃದ್ಧ ಫಸಲು ನೀಡಿದ ದೇವರಿಗೆ ಕೃತಜ್ಞತೆ ಅರ್ಪಿಸುವ ಮೂಲಕ ಆಚರಿಸಲಾಗುತ್ತದೆ. ಈ ಹಬ್ಬದಂದು ಎಳ್ಳು-ಬೆಲ್ಲ ಹಂಚಿ ಶುಭಾಶಯ ಕೋರಲಾಗುತ್ತದೆ. ಮಹಿಳೆಯರು ಬಾಗಿನ ನೀಡುವ ಮೂಲಕ ಹಬ್ಬ ಆಚರಿಸುತ್ತಾರೆ. ಹಸುಗಳನ್ನು ಅಲಂಕರಿಸಿದ ಮೆರವಣಿಗೆ ಮಾಡುವುದು ಈ ಹಬ್ಬದ ವಿಶೇಷ. ಹಾಗೆ ಗ್ರಾಮೀಣ ಭಾಗದಲ್ಲಿ ಎತ್ತುಗಳನ್ನು ಬೆಂಕಿಯ ಮೇಲೆ ಹಾರಿಸಿ ಈ ಹಬ್ಬ ಆಚರಿಸಲಾಗುತ್ತದೆ. ಈ ಹಬ್ಬದಿಂದ ಸೂರ್ಯ ತನ್ನ ದಿಕ್ಕನ್ನು ಬದಲಿಸುತ್ತಾನೆ ಎನ್ನಲಾಗಿದೆ. ಅಲ್ಲದೆ ಈ ಹಬ್ಬವೇ ಚಳಿಗಾಲದ ಅಂತ್ಯವೆನ್ನಲಾಗುತ್ತದೆ. ಅಲ್ಲದೆ ಈ ದಿನದಿಂದ ಕತ್ತಲು ಕಡಿಮೆಯಾಗಿ ಬೆಳಕು ಹೆಚ್ಚಾಗುತ್ತದೆ.
ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸಿದಾಗ ಈ ಸಂಕ್ರಮಣವನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಮಕರ ಸಂಕ್ರಾಂತಿಯ ದಿನದಿಂದ ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತಾನೆ. ಮಕರ ಸಂಕ್ರಾಂತಿಯ ದಿನದಂದು ಸೂರ್ಯದೇವನಿಗೆ ದಾನ, ಪೂಜೆ ಮಾಡಿದರೆ ಶುಭ ಫಲಿತಾಂಶವನ್ನು ಪಡೆಯುತ್ತಾನೆ ಎನ್ನಲಾಗುತ್ತದೆ. ಅಲ್ಲದೆ ಸಂಕ್ರಾತಿಯಂದು ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ ಸೂರ್ಯ ದೇವರು ಮತ್ತು ಶನಿದೇವರ ಆಶೀರ್ವಾದವನ್ನು ಪಡೆಯಬಹುದು. ಹೀಗೆ ಮಾಡುವುದರಿಂದ ಜೀವನವು ಯಾವಾಗಲೂ ಸಂತೋಷ ಮತ್ತು ಅದೃಷ್ಟದಿಂದ ತುಂಬಿರುತ್ತದೆ.



Click it and Unblock the Notifications
