Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗ್ರಹಣ 2025: ಮುಂದಿನ ವರ್ಷ ಗ್ರಹಣ ಯಾವಾಗ..? ಭಾರತದಲ್ಲಿ ಎಷ್ಟು ಗೋಚರ..?
2024 ವರ್ಷ ಮುಗಿದು ಇನ್ನೇನು 2025ಕ್ಕೆ ಕಾಲಿಡುತ್ತಿದ್ದೇವೆ. ಪ್ರತಿ ವರ್ಷದಂತೆ 2025ರಲ್ಲು ಸಹ ನಾವು ನೆನಪಿಡಬೇಕಾದ ಕೆಲವು ದಿನಾಂಕಗಳಿವೆ. ಅದರಲ್ಲೂ ಗ್ರಹಣಗಳು, ಹುಣ್ಣಿಮೆ, ಅಮಾವಾಸ್ಯೆ ಹೀಗೆ ಒಂದಲ್ಲಾ ಒಂದು ದಿನಾಂಕಗಳು ನಮಗೆ ಬಹಳ ಮುಖ್ಯವಾಗಿರುತ್ತದೆ. ನಾವಿಂದು 2025ರಲ್ಲಿ ಎಷ್ಟು ಗ್ರಹಗಳಿವೆ ಯಾವಾಗ ಬಂದಿವೆ ಎಂಬ ಕುರಿತು ತಿಳಿದುಕೊಳ್ಳೋಣ.
2024ರಲ್ಲಿ ನಾವು ಒಟ್ಟು 4 ಗ್ರಹಗಳನ್ನು ನೋಡಿದ್ದೇವೆ. ಎರಡು ಚಂದ್ರ ಗ್ರಹಣ ಹಾಗೆ ಎರಡು ಸೂರ್ಯ ಗ್ರಹಣ ನಮ್ಮ ಮುಂದೆ ಇತ್ತು. ಇನ್ನು 2025ರಲ್ಲಿಯೂ ಕೂಡ 4 ಗ್ರಹಗಳು ಸಂಭವಿಸುತ್ತಿದೆ. ಎರಡು ಚಂದ್ರ ಗ್ರಹಣ ಹಾಗೂ 2 ಸೂರ್ಯಗ್ರಹಣ ಸಂಭವಿಸುತ್ತಿದೆ. ಹಾಗಾದ್ರೆ ಈ ಗ್ರಹಣದ ದಿನಾಂಕಗಳೇನು?

ಗ್ರಹಣಗಳು ಖಗೋಳ ವಿದ್ಯಮಾನದ ಅತ್ಯಂತ ಪ್ರಮುಖ ಘಟನೆಗಳಲ್ಲಿ ಒಂದಾಗಿದೆ. ಆಕಾಶಕಾಯಗಳು, ಗ್ರಹಗಳ ಕುರಿತು ವಿಶೇಷ ಆಸಕ್ತಿ ಹೊಂದಿರುವವರು ಗ್ರಹಣಗಳ ಕುರಿತಂತೆಯೂ ವಿಶೇಷ ಆಸಕ್ತಿ ಹೊಂದಿರುತ್ತಾರೆ. ಹಿಂದೂ ಧರ್ಮದಲ್ಲಿ ಈ ಗ್ರಹಣಗಳಿಗೆ ಪ್ರಮುಖ ಸ್ಥಾನಮಾನ ನೀಡಲಾಗಿದೆ. ಹೀಗಾಗಿ ಹಿಂದೂಗಳ ಪಾಲಿಗೆ ಗ್ರಹಣಗಳು ಹಲವು ರೀತಿಯಲ್ಲಿ ಪ್ರಮುಖ ಘಟನಾವಳಿಗಾಗುತ್ತವೆ.
ಸೌರ ಮತ್ತು ಚಂದ್ರ ಗ್ರಹಣಗಳು ಆರೋಗ್ಯದ ಮೇಲೆ ಗಾಢವಾದ ಪರಿಣಾಮ ಬೀರುತ್ತವೆ ಎಂದು ನಂಬಲಾಗಿದೆ ಮತ್ತು ಹಲವಾರು ಪೌರಾಣಿಕ ಕಥೆಗಳು ಅವುಗಳೊಂದಿಗೆ ಸಂಬಂಧ ಹೊಂದಿವೆ. ಇನ್ನು ಈ ಗ್ರಹಣದ ಸಮಯದಲ್ಲಿ ಯಾವೆಲ್ಲಾ ಕೆಲಸ ಮಾಡಬಾರದು ಏನು ಮಾಡಬೇಕು ಎಂಬ ನಿಯಮಗಳು ಕೂಡ ಇರುವುದು ಇದರ ಪ್ರಾಮುಖ್ಯತೆ ಸೂಚಿಸುತ್ತದೆ.
ಮೊದಲ ಗ್ರಹಣ ಯಾವಾಗ?
2025ರ ಮೊದಲ ಗ್ರಹಣವಾಗಿ ಸೂರ್ಯಗ್ರಹಣ ಸಂಭವಿಸುತ್ತಿದೆ. ಮಾರ್ಚ್ 29 ರಂದು ಮೊದಲ ಸೂರ್ಯಗ್ರಹಣ ನಡೆಯಲಿದೆ. ಬರ್ಮುಡಾ, ಬಾರ್ಬಡೋಸ್, ಆಸ್ಟ್ರಿಯಾ, ಬೆಲ್ಜಿಯಂ, ಡೆನ್ಮಾರ್ಕ್, ಫಿನ್ಲ್ಯಾಂಡ್, ನಾರ್ವೆ, ಜರ್ಮನಿ, ಫ್ರಾನ್ಸ್, ಹಂಗೇರಿ, ಐರ್ಲೆಂಡ್, ಮೊರಾಕೊ, ಗ್ರೀನ್ಲ್ಯಾಂಡ್, ಪೂರ್ವ ಕೆನಡಾ, ಉತ್ತರ ಬ್ರೆಜಿಲ್, ಹಾಲೆಂಡ್, ಪೋರ್ಚುಗಲ್, ಉತ್ತರ ರಷ್ಯಾ, ಸ್ಪೇನ್, ಸ್ವೀಡನ್, ಪೋಲೆಂಡ್, ಉಕ್ರೇನ್, ಸ್ವಿಟ್ಜರ್ಲೆಂಡ್, ಇಂಗ್ಲೆಂಡ್ ಮತ್ತು ಪೂರ್ವ ಅಮೆರಿಕ ಸೇರಿ ಹಲವು ದೇಶದಲ್ಲಿ ಕಾಣಿಸಲಿದೆ. ಆದರೆ ಭಾರತದಲ್ಲಿ ಈ ಸೂರ್ಯಗ್ರಹಣ ಗೋಚರವಾಗುವುದಿಲ್ಲ.
ಎರಡನೇ ಸೂರ್ಯಗ್ರಹಣ
ಸೆಪ್ಟೆಂಬರ್ 21ರಂದು ವರ್ಷದ 2ನೇ ಸೂರ್ಯಗ್ರಹಣ ಸಂಭವಿಸುತ್ತಿದೆ. ಇದು ನ್ಯೂಜಿಲೆಂಡ್, ಫಿಜಿ, ಅಂಟಾರ್ಟಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ಮಾತ್ರ ಗೋಚರಿಸುತ್ತದೆ. ಇದು ಕೂಡ ಭಾರತದಲ್ಲಿ ಗೋಚರವಾಗುವುದಿಲ್ಲ. ಹೀಗಾಗಿ ಯಾವುದೇ ಪ್ರಭಾವ ಉಂಟು ಮಾಡುತ್ತಿಲ್ಲ.
ಮೊದಲ ಚಂದ್ರ ಗ್ರಹಣ
2025ರ ಮೊದಲ ಚಂದ್ರಗ್ರಹಣವು ಮಾರ್ಚ್ 14 ರಂದು ಸಂಭವಿಸುತ್ತಿದೆ. ಈ ಗ್ರಹಣ ಕೂಡ ಭಾರತದಲ್ಲಿ ಗೋಚರವಾಗುತ್ತಿಲ್ಲ. ಹೀಗಾಗಿ ಯಾವುದೇ ಪ್ರಭಾವ ಭಾರತದ ಮೇಲೆ ಉಂಟಾಗುತ್ತಿಲ್ಲ.
ಎರಡನೇ ಚಂದ್ರಗ್ರಹಣ
2025ರ ಎರಡನೇ ಮತ್ತು ಅಂತಿಮ ಚಂದ್ರಗ್ರಹಣವು ಸೆಪ್ಟೆಂಬರ್ 7 ರಂದು ಸಂಭವಿಸುತ್ತದೆ. ಅಚ್ಚರಿಯಾಗಿ ಇದೊಂದೇ ಚಂದ್ರಗ್ರಹಣ ಭಾರತದಲ್ಲಿ ಗೋಚರವಾಗುತ್ತಿದೆ. ಗ್ರಹಣವು ರಾತ್ರಿ 9:55 ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 8 ರಂದು ಮುಂಜಾನೆ 1:30ಕ್ಕೆ ಅಂತ್ಯವಾಗಲಿದೆ. ಹೀಗಾಗಿ ಈ ಸಮಯದಲ್ಲಿ ಮಾತ್ರ ಕೆಲವು ನಿಯಮಗಳ ಪಾಲನೆ ಮಾಡಲಾಗುತ್ತದೆ.
ಮುಂದಿನ ವರ್ಷ ಈ 4 ಗ್ರಹಣಗಳು ಸಂಭವಿಸುತ್ತಿದ್ದರೂ ಒಂದು ಚಂದ್ರಗ್ರಹಣ ಮಾತ್ರವೇ ಭಾರತದಲ್ಲಿ ಗೋಚರವಾಗುತ್ತಿದೆ.



Click it and Unblock the Notifications











