Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಿಧಾನವಾಗುತ್ತಿದೆ ಭೂಮಿಯ ಒಳ ತಿರುವಿನ ವೇಗ: ಇದರ ಪರಿಣಾಮವೇನು ಗೊತ್ತಾ?
ನಮ್ಮ ಸೌರಮಂಡಲ ರಚನೆಯಾಗಿ ಲಕ್ಷ ಕೋಟಿ ವರ್ಷಗಳು ಉರುಳಿವೆ. ನಮ್ಮ ಭೂಮಿ ರಚನೆಯಾಗಲು ಸಹ ಅಷ್ಟೇ ಸಮಯ ತೆಗೆದುಕೊಂಡಿದೆ. ಬೆಂಕಿ ಉಂಡೆಯಾಗಿದ್ದ ಭೂಮಿ ಕಾಲಾನುಕ್ರಮದಲ್ಲಿ ಜೀವಿಗಳು ವಾಸಿಸುವ ಗ್ರಹವಾಗಿ ಪರಿವರ್ತನೆಗೊಂಡಿದೆ ಎಂಬುದನ್ನು ನಾವು ತಿಳಿದಿದ್ದೇವೆ. ಜೊತೆಗೆ ಹಗಲು-ಇರುಳು, ದಿನ, ತಿಂಗಳು ಹೀಗೆ ಎಲ್ಲದಕ್ಕೂ ಒಂದಕ್ಕೊಂದು ಸಂಪರ್ಕವಿದೆ.
ಆದ್ರೆ ಈಗೊಂದು ಅಧ್ಯಯನ ಎಲ್ಲರಲ್ಲೂ ಅಚ್ಚರಿ ಜೊತೆಗೆ ಆತಂಕಕ್ಕೆ ಕಾರಣವಾಗಿದೆ. ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ (USC) ವಿಜ್ಞಾನಿಗಳು ಭೂಮಿಯ ಒಳಭಾಗವು ಗ್ರಹದ ಮೇಲ್ಮೈಗಿಂತ ಹೆಚ್ಚು ನಿಧಾನವಾಗಿ ತಿರುಗುತ್ತಿದೆ ಎಂದು ದೃಢಪಡಿಸಿದ್ದಾರೆ.

'ನೇಚರ್'ನಲ್ಲಿ ಪ್ರಕಟವಾದ ಅಧ್ಯಯನವು 2010ರ ಸುಮಾರಿಗೆ ಭೂಮಿ ಒಳಗಿರುವ ಕೋರ್ ತನ್ನ ವೇಗವನ್ನು ಕಡಿಮೆ ಮಾಡಲು ಪ್ರಾರಂಭಿಸಿತು ಎಂಬುದಕ್ಕೆ ಪುರಾವೆಗಳನ್ನು ಒದಗಿಸುತ್ತದೆ. ಇದು ಸುಮಾರು 40 ವರ್ಷಗಳಲ್ಲಿ ಮೊದಲ ಬಾರಿಗೆ ಭೂಮಿಯ ನಿಲುವಂಗಿಗಿಂತ ನಿಧಾನವಾಗಿ ಚಲಿಸುತ್ತಿದೆ ಎಂದು ಗುರುತಿಸುತ್ತದೆ.
ಈ ಒಳ ಪದರವು ಭೂಮಿ ಮೇಲಿನ ಪದರಕ್ಕಿಂತ ಅತ್ಯಂತ ಕಡಿಮೆ ವ್ಯಾಸ ಹೊಂದಿರುವ ಪ್ರದೇಶವಾಗಿದೆ. ಒಳಗಿನ ತಿರುಳು - ಕಬ್ಬಿಣ ಮತ್ತು ನಿಕಲ್‌ನ ಅತಿ-ಬಿಸಿಯಾದ ಅತಿ-ದಟ್ಟವಾದ ಗೋಳವಾಗಿದ್ದು ಸುಮಾರು 4,800 ಕಿ.ಮೀ.ಗಿಂತ ಹೆಚ್ಚು ವ್ಯಾಪಿಸಿದೆ ಎಂದು ತಿಳಿದುಬಂದಿದೆ.
ಅಧ್ಯಯನಕ್ಕಾಗಿ, ಜಾನ್ ವಿಡೇಲ್ ಮತ್ತು ಅವರ ಸಹೋದ್ಯೋಗಿಗಳು ದಕ್ಷಿಣ ಅಟ್ಲಾಂಟಿಕ್‌ನ ದಕ್ಷಿಣ ಸ್ಯಾಂಡ್‌ವಿಚ್ ದ್ವೀಪಗಳ ಸುತ್ತಲೂ 1991 ಮತ್ತು 2023 ರ ನಡುವೆ ದಾಖಲಾದ 121 ಪುನರಾವರ್ತಿತ ಭೂಕಂಪಗಳ ಸಮಯ ಹಾಗೂ ಆ ತೀವ್ರತೆಯನ್ನು ವಿಶ್ಲೇಷಿಸಿದ್ದಾರೆ. ಇದರ ಸಾಮಾನ್ಯ ಅರ್ಥದಲ್ಲಿ ಹೇಳುವುದಾದರೆ ಭೂಮಿಯ ಒಳ ಪದರ ಹಾಗೂ ಕಟ್ಟ ಕಡೆಯ ಪದರವು ಭೂಮಿ ಮೇಲ್ಮೈಗಿಂತ ಕಡಿಮೆ ವೇಗದಲ್ಲಿ ಸುತ್ತುತ್ತಿದೆ. ಈ ನಿಧಾನಗತಿ 2010ರಿಂದ ಆರಂಭಗೊಂಡಿದೆ ಎಂಬುದು ತಜ್ಞರ ವಿವರಣೆಯಾಗಿದೆ.
ಇದು ಸಾಧ್ಯವಾಗಿದ್ದು ಹೇಗೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಮಗೆ ಭೂಮಿಯ ವಿವಿಧ ತಿರುಳುಗಳ ಕುರಿತು ತಿಳಿದುಕೊಳ್ಳಬೇಕಾಗುತ್ತದೆ. ಭೂಮಿಯು ನಾಲ್ಕು ಮುಖ್ಯ ಪದರಗಳನ್ನು ಹೊಂದಿರುತ್ತದೆ. ಇನ್ನರ್ ಕೋರ್, ಔಟರ್ ಕೋರ್, ನಾಂಟಲ್, ಕ್ರಸ್ಟ್ ಎಂಬುದಾಗಿ ವರ್ಗೀಕರಿಸಲಾಗಿದೆ. ಇವು ಮೃದು ಪದರದಿಂದ ಆರಂಭಗೊಂಡು ತೀರ ಕಠಿಣವಾದ ಅಂಶಗಳಿಂದ ಗಟ್ಟಿಯಾದ ತಿರುಳು ಉಂಟಾಗಿರುತ್ತದೆ.
ಒಳಪದರ ನಿಧಾನವಾಗಿ ತಿರುಗಲು ಕಾರಣವೇನು?
ವಿಡೇಲ್ ಪ್ರಕಾರ, ಒಳಗಿನ ತಿರುಳಿನ ಕುಸಿತವು ಭೂಮಿಯ ಕಾಂತೀಯ ಕ್ಷೇತ್ರವನ್ನು ಉತ್ಪಾದಿಸುವ ದ್ರವದ ಹೊರಭಾಗದ ಕೋರ್‌ನ ಮಂಥನದಿಂದ ಉಂಟಾಗುತ್ತದೆ ಮತ್ತು ಮೇಲಿನ ಕಲ್ಲಿನ ನಿಲುವಂಗಿಯ ದಟ್ಟವಾದ ಪ್ರದೇಶಗಳಿಂದ ಗುರುತ್ವಾಕರ್ಷಣೆಯ ಎಳೆತಗಳು ಉಂಟಾಗುತ್ತದೆ.
ಆದರೆ ಇದರಿಂದ ಭೂಮಿಗೆ ಯಾವ ರೀತಿ ಹಾನಿಯಾಗಲಿದೆ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಆದರೆ ಭೂಮಿಯ ವೇಗದಲ್ಲಿ ಹಾಗೂ ಹಗಲು ರಾತ್ರಿಯ ನಡುವೆ ಒಂದು ಸೆಕೆಂಡ್‌ನBUmi addಷ್ಟು ಬದಲಾವಣೆ ಕಂಡುಬರಲಿದೆ ಎಂದು ಅಂದಾಜಿಸಲಾಗಿದೆ. ಈ ಒಂದು ಸೆಕೆಂಡ್‌ನ ಬದಲಾವಣೆ ಸಹ ಹಲವು ರೀತಿಯ ಆಯಾಮಗಳಿಗೆ ಕಾರಣವಾಗಲಿದೆಯಂತೆ.
ಇದೇ ರೀತಿ ಒಳಗಿನ ತಿರುಳು ತನ್ನ ಬೇಗ ಕಡಿಮೆ ಮಾಡುತ್ತಾ ಬಂದರೆ ಭೂಮಿಯ ತಿರುಗುವಿಕೆಯ ವೇಗ ಸಹ ಕಡಿಮೆ ಆಗಬಹುದು. ಇದರಿಂದ ಹತ್ತಾರು ರೀತಿಯ ಸಮಸ್ಯೆ ಎದುರಿಸಬೇಕಾಗುತ್ತದೆ. ಅದರಲ್ಲೂ ಭೂಮಿ ಮೇಲೆ ವಾಸಿಸುವ ಜೀವರಾಶಿಗಳ ಮೇಲೆ ಅದರ ಪರಿಣಾಮ ಉಂಟಾಗಲಿದೆ.



Click it and Unblock the Notifications
