Latest Updates
-
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ
ಇಂದಿನಿಂದ ಭೂಮಿಯ ಮಿನಿ ಚಂದ್ರನ ವೀಕ್ಷಿಸಬಹುದು..! ಬರಿಗಣ್ಣಿಗೆ ಕಾಣುತ್ತಾ? ಏನಿದು ಮಿನಿ ಮೂನ್?
ಆಗಸದಲ್ಲಿ ಎಷ್ಟೆಲ್ಲಾ ವಿಸ್ಮಯಗಳು ಜರುಗುತ್ತವೆ ಅಂದ್ರೆ ಕೆಲವೊಮ್ಮೆ ನಾವು ಅಚ್ಚರಿಗೆ ಒಳಗಾಗುತ್ತೇವೆ. ಹಾಗೆ ವಿಚಿತ್ರ ಘಟನೆಗಳು ನಡೆಯುವುದನ್ನು ನಮ್ಮನ್ನು ಮೂಖ ವಿಸ್ಮಿತರನ್ನಾಗಿಸುತ್ತವೆ. ಇನ್ನು ನಮ್ಮ ಸೌರಮಂಡಲದ ಕುರಿತು ಎಷ್ಟು ವಿಚಾರಗಳು ಹೊರಬಂದರು ನಮಗದು ಅಚ್ಚರಿ ಹುಟ್ಟಿಸುತ್ತವೆ.
ನಮ್ಮ ಭೂಮಿಗೆ ಒಂದೇ ಚಂದ್ರ ಹಾಗೂ ಒಂದೇ ಸೂರ್ಯ ಇರುವುದು ಎಂಬುದು ನಮಗೆ ತಿಳಿದಿದೆ. ಅಲ್ಲದೆ ಆಗಾಗ ಆಕಾಶದಲ್ಲಿ ಭೂಮಿಯ ಸಮೀಪಕ್ಕೆ ಆಕಾಐ ಕಾಯಗಳಿ, ಉಲ್ಕೆಗಳು ಸಂಚರಿಸುವುದನ್ನು ಸಹ ನಾವು ನೋಡಿದ್ದೇವೆ. ಈ ನಡುವೆ ನಮಗೀಗ ಭೂಮಿ ಇನ್ನೊಂದು ಮಿನಿ ಚಂದ್ರ ಇದ್ದಾನೆ ಎಂಬ ವಿಚಾರ ಸಹ ತಿಳಿದಿದಿದೆ.

ಖಗೋಳಶಾಸ್ತ್ರಜ್ಞರಿಂದ ಅಧಿಕೃತವಾಗಿ 2024 PT5 ಎಂದು ಕರೆಯಲ್ಪಡುವ "ಮಿನಿ ಮೂನ್" ಎಂಬ ಸಣ್ಣದಾಗಿ ಹೊಳೆಯುವ ಗ್ರಹವನ್ನು ಪತ್ತೆ ಮಾಡಿದ್ದಾರೆ. ಸರಿಸುಮಾರು 10 ಮೀಟರ್ (ಸುಮಾರು 33 ಅಡಿ) ವ್ಯಾಸವನ್ನು ಹೊಂದಿರುವ ಕ್ಷುದ್ರಗ್ರಹವು ಸೆಪ್ಟೆಂಬರ್ 29 ರಿಂದ ನವೆಂಬರ್ 25 ರವರೆಗೆ ಭೂಮಿಯ ಸಮೀಪದಲ್ಲಿಯೇ ಸುತ್ತುಬರಲಿದೆ.
ಇದು ಭೂಮಿಗೆ ಮತ್ತೊಂದು ಚಂದ್ರನಂತೆ ಕಾಣಿಸಲಿದೆ. ಆದ್ರೆ ಗಾತ್ರದಲ್ಲಿ ಅತ್ಯಂತ ಚಿಕ್ಕದಾಗಿದೆ. ಅಂದರೆ ನಮ್ಮ ಭೂಮಿಯಿಂದ ನಾವು ಬರಿಗಣ್ಣಿನಿಂದ ನೋಡಿದರೆ ಇದು ಗೋಚರ ಆಗುವುದಿಲ್ಲ. ಆದ್ರೆ ಟೆಲಿಸ್ಕೋಪ್‌ಗಳ ಸಹಾಯ ಪಡೆದರೆ ನಾವು ಸಹ ನೋಡಬಹುದು. ನಾಸಾದ ಕ್ಷುದ್ರಗ್ರಹ ಟೆರೆಸ್ಟ್ರಿಯಲ್ ಇಂಪ್ಯಾಕ್ಟ್ ಲಾಸ್ಟ್ ಅಲರ್ಟ್ ಸಿಸ್ಟಮ್ (ಅಟ್ಲಾಸ್) ಆಗಸ್ಟ್ 7 ರಂದು 2024 ಪಿಟಿ 5 ಅನ್ನು ಕಂಡುಹಿಡಿದಿದೆ.
2024 ಪಿಟಿ 5 ಭೂಮಿಯಿಂದ 2.6 ಮಿಲಿಯನ್ ಮೈಲಿ ದೂರದಲ್ಲಿ ಸುರಕ್ಷಿತ ಕಕ್ಷೆಯಲ್ಲಿ ಸುತ್ತಲಿದೆ. ಇದರಿಂದ ಭೂಮಿಗೆ ಯಾವುದೇ ಹಾನಿಯಿಲ್ಲ. ಇದು 10 ಮೀ ಉದ್ದವಿರುವ ಕ್ಷುದ್ರಗ್ರಹವಾಗಿದೆ, ಇದು 3,474 ಕಿಮೀ ವ್ಯಾಸದ ನಿಜವಾದ ಚಂದ್ರನಿಗಿಂತ ಚಿಕ್ಕದಾಗಿದೆ. ಸಂಶೋಧಕರ ಪ್ರಕಾರ, ಈ ರೀತಿಯ ಕ್ಷುದ್ರಗ್ರಹವು ಸುಮಾರು 3,500 ಕಿಮೀ ಪ್ಚತಿ ಗಂಟೆಯ ವೇಗದಲ್ಲಿ ಚಲಿಸುತ್ತದೆ. ಇದನ್ನು ಭೂಮಿ ತನ್ನತ್ತ ಸೆಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಭೂಮಿಯ ಗುರುತ್ವಾಕರ್ಷಣೆಯ ಬಲದಿಂದ ಈ ಕ್ಷುದ್ರಗ್ರಹವನ್ನು ತನ್ನತ್ತ ಸೆಳೆಯಬಹುದು ಎನ್ನಲಾಗಿದೆ. ಈ ಕ್ಷುದ್ರಗ್ರಹವು ಭೂಮಿಯ ಕಕ್ಷೆಯಲ್ಲಿದೆ. ಆದರೆ ನವೆಂಬರ್‌ನಲ್ಲಿ ಭೂಮಿಯ ಕಕ್ಷೆಯಿಂದ ಇದು ದೂರಾಗಲಿದೆ. ಆದರೆ 2055 ರಲ್ಲಿ ಇದೇ ರೀತಿ ಮತ್ತೊಂದು ಕ್ಷುದ್ರಗ್ರಹ ಭೂಮಿಯ ಸುತ್ತಲೂ ಸುತ್ತುವರೆಯಲಿದೆ ಎಂದು ತಿಳಿದುಬಂದಿದೆ.
ಇದು ಭೂಮಿಯ ಕ್ಷಕೆಯಲ್ಲಿ 56 ದಿನಗಳ ಕಾಲ ಕಾಣಿಸಿಕೊಳ್ಳಲಿದೆ. ಬಲಿಕ ಸೌರಮಂಡಲದಲ್ಲಿ ಇದು ಮಾರೆಯಾಗಲಿದೆ. ಆದರೆ ನಮ್ಮ ಸೌರಮಂಡದಲ್ಲಿಯೇ ಚಲಿಸುತ್ತಲಿರುತ್ತದೆ. ಇದು ಭೂಮಿಯ ಸುತ್ತ ಕೇವಲ 1 ಸುತ್ತು ಬರಲಿದೆ ಎಂದು ತಿಳಿಬಂದಿದೆ. ಸೌರಮಂಡಲದಲ್ಲಿ ಸುತ್ತುತ್ತಿರುವ ಕೋಟಿ ಕೋಟಿ ಕ್ಷುದ್ರಗ್ರಹಗಳಲ್ಲಿ ಇದೂ ಸಹ ಒಂದಾಗಿದೆ.
56 ದಿನಗಳ ಕಾಲ ಭೂಮಿಯ ಸಮೀಪದಲ್ಲಿ ಇದು ಕಂಡುವರುತ್ತದೆ, ಆದರೆ ಈ ವೇಳೆ ಅದು ಭೂಮಿಯ ಗುರುತ್ವಾಕರ್ಷಣೆಯ ಬಲಕ್ಕೆ ಇಳಗಾಗಿರುತ್ತದೆ. ಆದ್ರೆ ಭೂಮಿ ಸ್ವಲ್ಪ ಸ್ವಲ್ಪವೇ ದೂರ ಸರಿದಂತೆ ಈ ಮಿನಿ ಚಂದ್ರ ಭೂಮಿಯಿಂದ ದೂರವಾಗುತ್ತಾ ಸಾಗಿ 56 ದಿನಗಳ ಬಳಿಕ ತನ್ನದೇ ಪಥದಲ್ಲಿ ಚಲಿಸಲು ಆರಂಭಿಸುತ್ತದೆ.
ಅರ್ಜುನ ಗುಂಪಿನ ಕ್ಷುದ್ರಗ್ರಹ
ಈ ಕ್ಷುದ್ರಗ್ರಹಗಳ ಗುಂಪಿಗೆ ನಾಸಾದ ವಿಜ್ಞಾನಿಗಳು ಮಹಾಭಾರತದ ಅರ್ಜುನನ ಹೆಸರು ಇಡಲಾಗಿದೆ. 1991ರಲ್ಲಿ ಈ ಕ್ಷುದ್ರಗ್ರಹಗಳ ಗುಂಪನ್ನು ಪತ್ತೆ ಮಾಡಲಾಗಿತ್ತು. ಈ ವಿಜ್ಞಾನಿಗಳ ತಂಡದಲ್ಲಿ ರಾಬರ್ಟ್ ಮೆಕ್ಲಾನ್ ಎಂಬಾತ ಈ ಕ್ಷುದ್ರಗ್ರಹಗಳ ಗುಂಪಿಗೆ ಅರ್ಜುನನ ಹೆಸರು ಸೂಚಿಸಿದ್ದ ಎಂದು ತಿಳಿದುಬಂದಿದೆ.
ಇದೇ ಗುಂಪಿನ ಕ್ಷುದ್ರಗ್ರಗಳ ಪೈಕಿ ಕೆಲವೊಂದು ಭೂಮಿಯ ಹತ್ತಿರಕ್ಕೆ ಬರುತ್ತವೆ. ಈಗ ಬಂದಿರುವ ಈ ಮಿನಿ ಚಂದ್ರ ಕೂಡ ಒಂದಾಗಿದೆ. ನೀವು ಸಹ ಆಕಾಶಕಾಯಗಳ ವೀಕ್ಷಣಾಲಯದಲ್ಲಿ ಇದನ್ನು ವೀಕ್ಷಿಸಬಹುದು.



Click it and Unblock the Notifications











