Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಹೆಲಿಕಾಪ್ಟರ್‌ನಿಂದ ಇಳಿಯುವಾಗ ಕಂತೆ ಕಂತೆ ಹಣದಿಂದಲೇ ಮೆಟ್ಟಿಲುಗಳನ್ನು ಮಾಡಿ ಗೆಳತಿಯ ಸ್ವಾಗತಿಸಿದ ಉದ್ಯಮಿ: ವೀಡಿಯೋ
ಕೆಲವರು ಒಂದು ಹೊತ್ತಿನ ಊಟಕ್ಕಾಗಿ ದಿನಕ್ಕಾಗಿ ಕಷ್ಟಪಡುತ್ತಿದ್ದಾರೆ, ಇನ್ನು ಕೆಲವರಿಗೆ ತಮ್ಮಲ್ಲಿರು ದುಡ್ಡಿನಲ್ಲಿ ಏನು ಮಾಡಬೇಕು ಎಂದು ಗೊತ್ತಾಗದಷ್ಟು ದುಡ್ಡು ಇರುತ್ತಾರೆ, ನಾವು ಲಕ್ಷ್ಮಿ ಅಂತ ಕಣ್ಣಿಗೆ ಒತ್ತಿದರೆ ಅವರು ಆ ಲಕ್ಷ್ಮಿಯನ್ನು ತಿಳಿದುಕೊಂಡು ಹೋಗಿ ಶ್ರೀಮಂತಿಕೆ ತೋರಿಸುತ್ತಾರೆ, ಆದರೂ ದುಡ್ಡು ಅವರ ಬಳಿ ಮೂಟೆ ಮೂಟೆ ಬಿದ್ದಿರುತ್ತದೆ..
ಇಲ್ಲೊಬ್ಬ ಹಾಗೆ ತನ್ನ ಗೆಳತಿಯನ್ನು ಬೇರೆ ಯಾರೂ ಸ್ವಾಗತಿಸಬರದು ಆ ರೀತಿ ಸ್ವಾಗತಿಸಬೇಕು ಎಂದು ಯೋಚಿಸಿ ನೋಟಿನ ಮೆಟ್ಟಿಲು ಮಾಡಿ ವೆಲ್‌ಕಂ ಮಾಡಿದ್ದಾನೆ, ಆ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದ ಸದ್ಯದ ಸೆನ್ಸೇಷನ್.

ತುಂಬಾ ವಿಭಿನ್ನ ಲವ್ ಪ್ರಪೋಸ್ ನೋಡಿದ್ದೇವೆ, ಆದರೆ ಈತನ ಯೋಚನೆ ಒಂದು ಸ್ಟೆಪ್ ಹೆಚ್ಚು, ಈತ ತನ್ನ ಗರ್ಲ್‌ಫ್ರೆಂಡ್ ಅನ್ನು ಹೆಲಿಕಾಪ್ಟರ್ ಮೂಲಕ ಕರೆಸಿಕೊಂಡು ಅವಳು ಹೆಲಿಕಾಪ್ಟರ್‌ನಿಂದ ಇಳಿಯುವಾಗ ಹೂವು ಚೆಲ್ಲುವಂತೆ ಹಣವನ್ನು ಚೆಲ್ಲಿದ್ದಾನೆ, ಆಕೆ ಹೆಲಿಕಾಪ್ಟರ್‌ನಿಂದ ಇಳಿಯಲು ನೋಟಿನ ಕಂತೆಗಳಿಂದಲೇ ಮೆಟ್ಟಿಲು ಮಾಡಿದ್ದಾನೆ, ಆಕೆ ಬಿಳು ಶೂ ಧರಿಸಿ ಕೋಟಿಗಟ್ಟಲೆ ಹಣದ ಮೇಲೆ ನಡೆದು ಬಂದಿದ್ದಾಳೆ. ಈ ಉದ್ಯಮಿ ತನ್ನ ಗರ್ಲ್‌ಫ್ರೆಂಡ್ ಅನ್ನು ಸ್ವಾಗತಿಸಿದ ಪರಿ ನೋಡಿ ನ ದಂಗಾಗಿದ್ದಾರೆ.
ಯಾರೀತ?
ಈ ರೀತಿ ವಿಭಿನ್ನ ಪ್ರುಯತ್ನ ಮಾಡಿರುವುದು ದುಬೈ ಉದ್ಯಮಿ ಸರ್ಗಿ ಕೊಸೆಂಕೋ, ದೊಡ್ಡ ಕುಳ, ತನ್ನ ಗರ್ಲ್‌ಫ್ರೆಂಡ್‌ಗಾಗಿ ಸಾವಿರಾರು ಕೋಟಿಯನ್ನು ಅವಳು ನಡೆದು ಬರುವ ದಾರಿಯಲ್ಲಿ ಇಟ್ಟಿದ್ದಾನೆ. ಇದನ್ನು ನೋಡಿದವರು ಆತನಿಗೆ ಅವಳೆಂದರೆ ಅದೆಂಥ ಹುಚ್ಚು ಪ್ರೀತಿ ಇರಬಹುದು ಎಂದು ಕಮೆಂಟ್ ಮಾಡಿದ್ದಾರೆ, ಇನ್ನು ಕೆಲವರು ಇದು ಸ್ವಲ್ಪ ಜಾಸ್ತಿ ಆಯ್ತು ಎಂದು ಹೇಳುತ್ತಿದ್ದಾರೆ.
ತಾನು ಹುಲ್ಲುಹಾಸಿನ ಮೇಲೆ ನಡೆದು ಆಕೆಯನ್ನು ಹಣದ ಮೇಲೆ ನಡೆಸಿಕೊಂಡು ಬರುತ್ತಿದ್ದಾನೆ
ಆಕೆಯನ್ನು ಹೆಲಿಕಾಪ್ಟರ್‌ನಲ್ಲಿ ಕರೆಸಿಕೊಂಡು ಆಕೆಯ ಬಳಿ ಹೋಗಿ ಕೈ ಹಿಡಿದು ಇಳಿಸಿದ್ದಾನೆ , ನಂತರ ಕೈ ಹಿಡಿದು ಅವಳನ್ನು ಕಂತೆ-ಕಂತೆ ನೋಟಿನ ಮೇಲೆ ನಡೆಸಿಕೊಂಡು ಬಂದಿದ್ದಾನೆ. ಈತ ಹೆಲಿಪ್ಯಾಡ್‌ನಿಂದ ಮನೆಯವರೆಗೂ ಕಂತೆ ಕಂತೆ ನೋಟುಗಳನ್ನಿಟ್ಟು ಗೆಳತಿಯನ್ನು ಬರಮಾಡಿಕೊಂಡಿದ್ದಾನೆ, ಆಕೆ ಇಂಥ ಬಾಯ್‌ಫ್ರೆಂಡ್‌ನ ಪಡೆದ ಖುಷಿಯಲ್ಲಿ ನಡೆದು ಬರುತ್ತಿದ್ದಾಳೆ.
ಆತ ಬರಿಗಾಲಿನಲ್ಲಿ ನಡೆದರೆ ಆಕೆ ಶೂ ಧರಿಸಿ ಹಣದ ಮೇಲೆ ನಡೆಯುತ್ತಿದ್ದಾಳೆ
ಆ ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು ಆತನ ಕಾಲಿನಲ್ಲಿ ಶೂ ಇಲ್ಲ, ಚಪ್ಪಲಿ ಇಲ್ಲ , ಆತ ಬರಿಗಾಲಿನಲ್ಲಿ ನಡೆದಿದ್ದಾನೆ, ತಾನು ಹಣ ಶೂ ಹಾಕಿ ಮೆಟ್ಟಬಾರದು ಎಂದು ಯೋಚಿಸಿರಬಹುದಾ ಗೊತ್ತಿಲ್ಲ, ಆದರೆ ಆತ ಬರಿಗಾಲಿನಲ್ಲಿ ನಡೆದು ತನ್ನ ಗೆಳತಿ ಶೂ ಧರಿಸಿ ಹಣದ ಮೇಲೆ ನಡೆಸಿಕೊಂಡು ಬಂದಿದ್ದಾನೆ.
ಹಣದಿಂದ ಪ್ರೀತಿಯನ್ನು ಗೆಲ್ಲಲು ಸಾಧ್ಯವೇ?
ಇದನ್ನು ನೋಡಿದಾಗ ಆಕೆ ಎಂಥ ಅದೃಷ್ಟವಂತೆ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದಾರೆ, ಆದರೆ ಹಣ ನೋಡಿ ಯಾರನ್ನೂ ಅದೃಷ್ಟವಂತರು ಎಂದು ಹೇಳಲು ಸಾಧ್ಯವಿಲಲ ಎಂಬುವುದಕ್ಕೆ ಹಲವಾರು ಉದಾಹರಣೆಗಳಿವೆ, ಹಣದಿಂದ ಪ್ರೀತಿ ಗೆಲ್ಲಲು ಸಾಧ್ಯವಾಗಿದ್ದರೆ ಈ ಜಗತ್ತಿನಲ್ಲಿ ಶ್ರೀಮಂತರಿಗೆ ವಿಚ್ಛೇದನ ಆಗುತ್ತಿರಲಿಲ್ಲವೇನೋ.... ಪ್ರೀತಿ ಎಂಬುವುದು ಒಂದು ಅದ್ಭುತ ಭಾವನೆ, ಅದನ್ನು ಹಣವನ್ನು ತೋರಿಸಿ ಪಡೆಯಲು ಸಾಧ್ಯವಿಲ್ಲ, ಈತನಿಗೆ ಆಕೆಯ ಮೇಲೆ ಹುಚ್ಚು ಪ್ರೀತಿಯಾದರೆ ಸರಿ, ಇಲ್ಲಾ ತನ್ನ ಹಣದ ದರ್ಪ ತೋರಿಸಲು ಹೀಗೆ ಮಾಡಿದ್ದರೆ ಆತನೊಬ್ಬ ಮೂರ್ಖ.
ಇವರು ಚೆಲ್ಲಿರುವ ಹಣ ಸಾಕು ಬದುಕು ಕಟ್ಟಿಕೊಳ್ಳಲು ಎಂದು ಕೆಲವರು ಕಮೆಂಟ್ ಮಾಡಿದರೆ , ಇನ್ನು ಕೆಲವರು ಕಾಗದದ ಕಟ್ಟಿನ ಮೇಲೆ ಹಣವಿಟ್ಟಿರಬಹುದು ಎಂದು ಕಮೆಂಟ್ ಮಾಡುತ್ತಿದ್ದಾರೆ, ಏನೇ ಆಗಲಿ ಈತ ಬಿಲಿನಿಯರ್ ಎಂಬುವುದು ಮಾತ್ರ ಸತ್ಯ, ಹಾಗಾಗಿ ಆ ಹಣ ನಿಜವೇ ಆಗಿರುತ್ತದೆ. ಆಕೆಯನ್ನು ಹಣದ ಮೇಲೆ ನಡೆಸಿಕೊಂಡು ಬಂದ ಸರಿ, ನಂತರ ಆ ಹಣವನ್ನು ಹಾಗೇ ಬಿಟ್ಟು ಇನ್ನೂ ಗ್ರೇಟ್ ಅಲ್ವಾ? ಜಸ್ಟ್ ಫನ್...



Click it and Unblock the Notifications
