Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಹಾರಾಡಿದ ಹನುಮಂತ: ಹನುಮಾನ್ ಡ್ರೋನ್ ವೈರಲ್ ವೀಡಿಯೋ
ಹನುಮಾನ್ ಡ್ರೋನ್ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಭಜರಂಗಿ ಭಾನದತ್ತ ಹಾರುವ ವೀಡಿಯೋ ನೋಡುಗರಲ್ಲಿ ಭಕ್ತಿ ಭಾವ ಮೂಡಿಸಿದೆ, ಸಾಕ್ಷಾತ್ ಹನುಮಂತನೇ ಹಾರುತ್ತಿದ್ದಾನೆ ಎಂಬ ಭಾವನೆ ಮೂಡಿಸುವಂತಿದೆ ಆ ವೀಡಿಯೋ, ಆ ವೀಡಿಯೋ ಇದೀಗ ಅಂತರ್ಜಾಲದಲ್ಲಿ ಆ ವೀಡಿಯೋ ತುಂಬಾನೇ ಸದ್ದು ಮಾಡುತ್ತಿದೆ. ಛತ್ತೀಸ್‌ಗಢದಲ್ಲಿ ಈ ಹನುಮಾನ್ ಡ್ರೋನ್ ವೀಡಿಯೋ ಹಾರಾಟ ಮಾಡಲಾಯಿತು.

ಈ ವೀಡಿಯೋವನ್ನು ವಿನಲ್ ಗುಪ್ತಾ ಎಂಬ ಪ್ರೊಟೋಗ್ರಾಫರ್ ತೆಗೆದು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದೇ ತಡ ಲಕ್ಷಾಂತರ ಶೇರ್‌ಗಳ ಮೂಲಕ ಈ ವೀಡಿಯೋ ಭಾರತದ ಬಹುತೇಕರ ಸಾಮಾಜಿಕ ತಾಣದಲ್ಲಿ ಕಂಡು ಬರುತ್ತಿದೆ. ಅಕ್ಟೋಬರ್‌ನಲ್ಲಿ ನಡೆದ ದಸರಾ ಸಂಭ್ರಮದಲ್ಲಿ ಈ ಹನುಮಾನ್ ಡ್ರೋನ್ ವೀಡಿಯೋ ಸೆರೆಹಿಡಿಯಲಾಗಿದೆ.
ನಂಬಿಕೆಯನ್ನು ಟೆಕ್ನಾಲಾಜಿ ಜೊತೆ ಸೇರಿಸುವುದು ಇದೇ ಮೊದಲೇನು ಅಲ್ಲ.... 9 ವರ್ಷಗಳ ಹಿಂದೆ ಲೂದಿಯಾನದಲ್ಲಿ ಇದೇ ರೀತಿ ಹನುಮಾನ್ ಡ್ರೋನ್ ಹಾರಿಸಿದ್ದನ್ನು ಅಲ್ಲಿಯ ಜನ ಸಂಭ್ರಮದಿಂದ ನೋಡಿದ್ದರು.
ಇದೀಗ ಈ ವೀಡಿಯೋ ವೈರಲ್ ಆಗಿದ್ದು ವೀಡಿಯೋ ನೋಡಿದವರು ವಿಜ್ಞಾನ ಚಮತ್ಕಾರ,ಟೆಕ್ನಾಲಾಜಿಯಿಂದ ಈಗ ಏನು ಬೇಕಾದರೂ ಮಾಡಲು ಸಾಧ್ಯ, ಹನುಮಾನ್ ಹಾರುತ್ತಾನೆ ಎಂದು ಪುರಾಣದಲ್ಲಿ ಹೇಳಿರುವ ಕತೆಗಳನ್ನು ಕೇಳಿದ್ದೇವೆ, ಆದರೆ ಈಗ ನೋಡುವ ಭಾಗ್ಯ ಸಿಕ್ಕಿದೆ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ.
ಹನುಮಾನ್ ಡ್ರೋನ್ ಹಾರುತ್ತಿರುವುದನ್ನು ನೋಡುವುದೇ ಆಕರ್ಷಕವಾಗಿದೆ, ಹನುಮಂತನೇ ಹಾರುತ್ತಿದ್ದಾನೆ ಎಂದನಿಸುವುದು. ಹಬ್ಬಗಳಲ್ಲಿ ಪುರಾಣದ ಕತೆಗಳನ್ನು ಹೇಳಲಾಗುವುದು, ನಮ್ಮ ಸಂಪ್ರದಾಯನ್ನು ತಿಳಿಸಲಾಗುವುದು. ಪೀಳಿಗೆಯಿಂದ ಪೀಳಿಗೆಗೆ ಈ ಆಚರಣೆಗಳು ಮುಂದುವರೆಯುವುದು. ಟೆಕ್ನಾಲಾಜಿ ಮುಂದುವರೆದಿರುವುದರಿಂದ ಹಬ್ಬದ ಸಮಯದಲ್ಲಿ ಟೆಕ್ನಾಲಾಜಿ ಬಳಸಿ ಹಬ್ಬದ ಸಂಭ್ರಮ ಹೆಚ್ಚಿಸಲು ನೋಡುತ್ತಾರೆ, ಇದು ಕೂಡ ಅಂಥದ್ದೇ ಒಂದು ಪ್ರಯತ್ನವಾಗಿತ್ತು, ಆದರೆ ಈ ಹನುಮಾನ್ ಡ್ರೋನ್ ಪ್ರತಿಯೊಬ್ಬ ವೀಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
Darshan - Humare Pawan Putra Hanuman Ji #Drones
— Ravi Karkara (@ravikarkara) October 26, 2023
Hanuman is often referred to as "Pawan Putra" because it translates to "the son of the wind" in Sanskrit.
According to the Ramayana, Hanuman's mother, Anjana, was a celestial nymph who was cursed to be born as a monkey. She… pic.twitter.com/IrxAsMWQAU



Click it and Unblock the Notifications
