Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಟ್ರಕ್ ಓಡಿಸುತ್ತಾ ಅಡುಗೆ ವಿಡಿಯೋ ಹಾಕಿ ತಿಂಗಳಿಗೆ ₹10 ಲಕ್ಷ ಗಳಿಸುವ ಡ್ರೈವರ್..!
ನೀವೇನಾದ್ರು ಯೂಟ್ಯೂಬ್‌ನಲ್ಲಿ ವಿಡಿಯೋ ನೋಡುವ ಅಭ್ಯಾಸವಿದ್ದರೆ ಖಂಡಿತ ಅಲ್ಲಿ ನೂರಾರು ಮಂದಿ ಕಂಟೆಂಟ್ ಕ್ರಿಯೇಟರ್ಸ್‌ನ ನೀವು ನೋಡಿರುತ್ತೀರಿ. ಮತ್ತೆ ಕೆಲವರು ಹವ್ಯಾಸವಾಗಿ ಯೂಟ್ಯೂಬ್ ವಿಡಿಯೋ ಮಾಡಲು ಆರಂಭಿಸಿ ಬಳಿಕ ಈಗ ಅದನ್ನೇ ವೃತ್ತಿಯಾಗಿಸಿಕೊಂಡಿರುವ ಉದಾಹರಣೆಯೂ ನಮ್ಮ ನಡುವೆ ಇದೆ.
ಅಂತಹ ಸಾವಿರಾರು ಮಂದಿ ಯೂಟ್ಯೂಬರ್‌ಗಳ ಪೈಕಿ ಕೆಲವೇ ಕೆಲವು ಮಂದಿ ಮಾತ್ರವೇ ಅದರಲ್ಲಿ ಯಶಸ್ಸು ಗಳಿಸಿರುತ್ತಾರೆ. ಕೆಲವು ತಿಂಗಳೆಲ್ಲ ಕಷ್ಟ ಪಟ್ಟು ಒಂದೇ ವಿಡಿಯೋ ಹಾಕಿ ಹಣ ಗಳಿಸಿದರೆ ಮತ್ತೆ ಕೆಲವರು ದಿನಾಲು ವಿಡಿಯೋಗಳ ಹಂಚಿಕೊಳ್ಳುತ್ತಾರೆ. ಕನ್ನದಲ್ಲಿ ಒಂದಿಷ್ಟು ಮಂದಿ ಫೇಮಸ್ ಯೂಟ್ಯೂಬರ್‌ಗಳ ಪಟ್ಟಿಯೂ ಈಗ ಬೆಳೆಯುತ್ತಿದೆ.

ಆದ್ರೆ ಹಿಂದಿಯಲ್ಲಿ ಒಬ್ಬ ವ್ಯಕ್ತಿ ಟ್ರಕ್ ಓಡಿಸಿಕೊಂಡು ಅಡುಗೆ ಮಾಡುತ್ತಾ ಲಕ್ಷಾಂತರ ಮಂದಿ ಫಾಲೋವರ್ಸ್ ಹೊಂದಿರುವುದಲ್ಲದೆ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾನೆ. ರಾಜೇಶ್ ಎಂಬ ಟ್ರಕ್ ಡ್ರೈವರ್ ತನ್ನ ಲಾರಿಯಲ್ಲೇ ಅಡುಗೆ ಮಾಡುವ ವಿಡಿಯೋ ಹಾಕುವ ಮೂಲಕ ಎಲ್ಲರ ಮನ ಗೆದ್ದಿರುವುದು ಮಾತ್ರವಲ್ಲ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾನೆ.
ರಾಜೇಶ್ ರಾವಾನಿ ಅನಿರೀಕ್ಷಿತವಾಗಿ ಯೂಟ್ಯೂಬ್‌ಗೆ ಎಂಟ್ರಿ ಕೊಟ್ಟಿದ್ದರು. ಈಗ ಅವರ ಚಾನಲ್‌ಗೆ 1.86 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ರಾಜೇಶ್ ಅವರು ತಮ್ಮ ಹಣಕಾಸಿನ ಬಗ್ಗೆ ಚರ್ಚಿಸಿದರು ಮತ್ತು ಅವರು ಪ್ರಸ್ತುತ ತಮ್ಮ ಮೊದಲ ಮನೆಯನ್ನು ನಿರ್ಮಿಸುತ್ತಿದ್ದಾರೆ ಎಂದು ಹಂಚಿಕೊಂಡರು. ಅವರು ಡ್ರೈವಿಂಗ್‌ನಿಂದ ತಿಂಗಳಿಗೆ ಸುಮಾರು 25ರಿಂದ 30 ಸಾವಿರ ರೂಪಾಯಿ ಗಳಿಸುತ್ತಾರೆ.
ಆದರೆ ಯೂಟ್ಯೂಬ್‌ನಿಂದ ಅವರು ಬರೋಬ್ಬರಿ 10 ಲಕ್ಷ ರೂಪಾಯಿ ಗಳಿಸುತ್ತಿದ್ದಾರಂತೆ. ಇದನ್ನ ಅವರೇ ತಮ್ಮ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ನಾನು ವಾಯ್ಸ್‌ಓವರ್‌ನೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡುತ್ತಿದ್ದೆ ಜನ ಅದನ್ನು ಮೆಚ್ಚಿಕೊಂಡಿದ್ದರು. ಬಳಿಕ ಮುಖ ತೋರಿಸುವಂತೆ ಕಮೆಂಟ್ ಮಾಡುತ್ತಿದ್ದರು. ಹೀಗಾಗಿ ಮುಖ ತೋರಿಸುತ್ತಾ ನಾನು ವಿಡಿಯೋ ಹಾಕಲು ಮುಂದಾಗಿದ್ದೆ.
ತನ್ನ ಟ್ರಕ್ಕಿಂಗ್ ಕೆಲಸ ಮತ್ತು ಯೂಟ್ಯೂಬ್ ಚಾನೆಲ್ ಎರಡನ್ನೂ ಏಕಕಾಲದಲ್ಲಿ ನಿರ್ವಹಿಸುತ್ತಿರುವ ರಾಜೇಶ್, ಇದನ್ನು ಸಾಧ್ಯವಾಗಿಸಲು ತನ್ನ ಕುಟುಂಬದ ಬೆಂಬಲವನ್ನು ಸಲ್ಲಿಸುತ್ತಾನೆ. ನಿತ್ಯ ಡ್ರೈವಿಂಗ್ ಮಾಡುತ್ತಾ ನೂರಾರು ಕಿ.ಮೀ ದೂರ ಟ್ರಕ್ ಚಲಾಯಿಸಬೇಕಿತ್ತು, ಊಟಕ್ಕೆ ಹಣವಿರುತ್ತಿರಲಿಲ್ಲ. ನಿತ್ಯ ಹೋಟೆಲ್ ಊಟ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ ತಾನೆ ಲಾರಿಯಲ್ಲಿ ಅಡುಗೆ ಮಾಡಲು ಮುಂದಾಗಿದ್ದರು.
ಆದರೆ ಒಂದು ದಿನ ಚಿಕನ್ ಫ್ರೈ ಮಾಡುವುದನ್ನು ವಿಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದೆ. ಅದು ತುಂಬಾನೆ ವೀಕ್ಷಣೆ ಕಂಡಿತ್ತು. ಬಳಿಕ ಒಂದೊಂದೆ ವಿಡಿಯೋ ಹಾಕಲು ಮುಂದಾದೆ. ನಿಧಾನವಾಗಿ ಫಾಲೋವರ್ಸ್ ಹೆಚ್ಚಾದರು. ನಂತರ ಮುಖ ತೋರಿಸಿಕೊಂಡು ವಿಡಿಯೋ ಮಾಡಲು ಮುಂದಾದಾಗ ಎಲ್ಲಾ ವಿಡಿಯೋಗಳಿಗೂ ಲಕ್ಷ ಲಕ್ಷ ವೀಕ್ಷಣೆ ಬರಲು ಆರಂಭಿಸಿತು. ಸಾಮಾನ್ಯವಾಗಿ 5ರಿಂದ 6 ಲಕ್ಷ ರೂಪಾಯಿ ಹಣ ಬರಲು ಆರಂಭವಾದಾಗ ಇದನ್ನೇ ಹೆಚ್ಚು ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಸದ್ಯ ಅವರ ಯೂಟ್ಯೂಬ್ ಚಾನಲ್‌ನಲ್ಲಿ ಈಗ ಬರೋಬ್ಬರಿ 911 ವಿಡಿಯೋಗಳಿವೆ ಅಲ್ಲದೆ 1.87 ಮಿಲಿಯನ್ ಚಂದಾದಾರರು ಸಹ ಇದ್ದಾರೆ. ಇತ್ತೀಚಿಗೆ ದೊಡ್ಡ ಮನೆ ಕಟ್ಟಿಸಿದ್ದು, ಅದರ ವಿಡಿಯೋ ಸಹ ಅಪ್‌ಲೋಡ್ ಮಾಡಿದ್ದಾರೆ. ಈಗ ಅವರು ಹಲವು ಖ್ಯಾತ ಯೂಟ್ಯೂಬರ್‌ಗಳ ಜೊತೆ ಸೇರಿಯೂ ವಿಡಿಯೋ ಮಾಡುತ್ತಿದ್ದಾರೆ. ಅವರ ಚಾನಲ್‌ನಲ್ಲಿ ಎಲ್ಲಾ ರೀತಿಯ ಅಡುಗೆಯ ವಿಡಿಯೋಗಳನ್ನ ಸಹ ನೋಡಬಹುದು, ವೆಜ್ ಹಾಗೂ ನಾನ್‌ವೆಜ್ ಅಡುಗೆಗಳನ್ನ ನಾವು ನೋಡಬಹುದು.



Click it and Unblock the Notifications
