Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಡಾಲಿ ಧನಂಜಯ್ ಮನದರಿಸಿ ಇವರೇ ನೋಡಿ: ಕ್ಯೂಟ್ ಪೋಸ್ ಕೊಟ್ಟ ನವ ಜೋಡಿ
ಸ್ಯಾಂಡ್‌ವುಡ್ ನಟ ಡಾಲಿ ಧನಂಜಯ್ ವೈವಾಹಿಕ ಬದುಕಿಗೆ ಕಾಲಿಡುತ್ತಿದ್ದಾರೆ, ಈ ಸಿಹಿ ಸುದ್ದಿಯನ್ನು ಸ್ವತಃ ಡಾಲಿಯೇ ದೀಪಾವಳಿಯಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಧನಂಜಯ್ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಅವರಿಗೆ ಮದುವೆ ಯಾವಾಗ ಎಂಬ ಪ್ರಶ್ನೆ ಎದುರಾಗುತ್ತಿತ್ತು, ಈಗ 2025 ಫೆಬ್ರವರಿ 16ಕ್ಕೆ ಮದುವೆಯಾಗುತ್ತಿರುವುದಾಗಿ ತಿಳಿಸಿದ್ದಾರೆ.

ವೈದ್ಯೆಯ ಕೈ ಹಿಡಿಯಲಿದ್ದಾರೆ ನಟ ಧನಂಜಯ್
ಡಾಲಿ ಚಿತ್ರರಂಗದಲ್ಲಿ ಇರುವವರನ್ನು ಮದುವೆಯಾಗಬಹುದು ಎಂದು ಬಹುತೇಕರು ಅಂದುಕೊಂಡಿದ್ದರು, ಆದರೆ ಅವರನ್ನು ಮದುವೆಯಾಗುತ್ತಿರುವ ಹುಡುಗಿ ಡಾಕ್ಟರ್, ಹೆಸರು ಧನ್ಯತಾ. ಇವರಿಬ್ಬರು ಬಹುವರ್ಷದಿಂದ ಪರಿಚಿತರು ಎನ್ನಲಾಗುತ್ತಿದೆ. ಈಗ ಹಿರಿಯರ ಆಶೀರ್ವಾದದೊಂದಿಗೆ ಸಪ್ತಪದಿ ತುಳಿಯಲಿದ್ದಾರೆ. ತರುಣ್ ಸುಧೀರ್ ಮದುವೆ ತುಂಬಾನೇ ಸದ್ದು ಮಾಡಿತು, ಈಗ ಎಲ್ಲರ ಚಿತ್ತ ಡಾಲಿ ಧನಂಜಯ್ ಹೋಗಿದೆ, ಸ್ಯಾಂಡಲ್‌ವುಡ್‌ನಲ್ಲಿ ಈ ಮದುವೆ ಸುದ್ದಿ ಸಂತಸ ತಂದಿದೆ.
ಚಿತ್ರದುರ್ಗದ ಹುಡುಗಿ ಧನ್ಯತಾ
ಇವರಿಬ್ಬರದ್ದು ಹಲವು ವರ್ಷಗಳ ಪರಿಚಯ, ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಅರಳಿತು, ಇವರಿಬ್ಬರ ಪ್ರೀತಿಗೆ ಮನೆಯವರು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಧನ್ಯತಾ ಮೈಸೂರಿನಲ್ಲಿ ಓದಿದವರು, ಸ್ತ್ರೀರೋಗ ತಜ್ಞೆಯಾಗಿ ಕೆಲಸ ಮಾಡುತ್ತಿದ್ದಾರೆ, ಇವರಿಬ್ಬರ ಜೋಡಿ ಸಕತ್ ಕ್ಯೂಟ್ ಆಗಿದೆ.
ಕ್ರೀಮ್ ಕಲರ್ ಸೀರೆಯಲ್ಲಿ ಮಿಂಚಿದ ಜೋಡಿ
ಡಾಲಿ ಧನಂಜಯ್ ಅವರು ಕ್ಯೂಟ್ ಆದ ಫೋಟೋಗಳನ್ನು ಶೇರ್ ಮಾಡಿದ್ದು ಮುದ್ದಾದ ಜೋಡಿಯ ಫೋಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಕ್ಯೂಟ್ ಭಂಗಿಯ ಫೋಟೋಗಳು ಈ ಜೋಡಿ ನೂರ್ಕಾಲ ಹೀಗೆ ಇರಲಿ ಎಂದು ಹರಿಸುವಂತಿದೆ
ಇಬ್ಬರ ಫೋಟೋಗಳು ಅಷ್ಟು ಚೆನ್ನಾಗಿದೆ, ಕ್ರೀಮ್ ಪಂಚೆ, ಜುಬ್ಬಾದಲ್ಲಿ ಡಾಲಿಗೆ ಮದುಮಗನ ಕಳೆ ಬಂದಿದೆ, ಧನ್ಯತಾ ಕೂಡ ಮುದ್ದಾಗಿ ಆಕರ್ಷಕವಾಗಿ ಕಾಣುತ್ತಿದ್ದಾರೆ.

ಮೈಸೂರಿನ ಎಕ್ಸಿಬಿನ್ ಗ್ರೌಂಡ್‌ನಲ್ಲಿ ನಡೆಯಲಿದೆ ಮದುವೆ
ಫೆಬ್ರವರಿ 16ಕ್ಕೆ ಮೈಸೂರಿನಲ್ಲಿ ಮದುವೆ ನಡೆಯಲಿದೆ. ಇಬ್ಬರಿಗೂ ಮೈಸೂರು ತುಂಬಾನೇ ಸ್ಪೆಷಲ್ ಆಗಿರುವ ಕಾರಣ ಇದೇ ಜಾಗದಲ್ಲಿ ಮದುವೆಯಾಗಲು ನಿರ್ಧಾರಸಿದ್ದಾರೆ ಎಂದು ಅವರ ಆಪ್ತ ವಲಯ ಹೇಳಿದೆ. ಅದ್ದೂರಿ ಮದುವೆಗೆ ದಿನಗಳ ಎಣಿಕೆ ಶುರುವಾಗಿದೆ.... ಹೊಸ ಬಾಳಿಗೆ ಕಾಲಿಡುತ್ತಿರುವ ಈ ಜೋಡಿ ಆದರ್ಶ ದಂಪತಿಯಾಗಿ ಬಾಳಲಿ ಎಂಬುವುದೇ ಅವರ ಅಭಿಮಾನಿಗಳ ಆರೈಕೆ...



Click it and Unblock the Notifications

