Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಂಗಳೂರಿಗೆ ಬರಲಿದ್ದಾರೆ ಡಾಲಿ ಚಾಯ್‌ವಾಲಾ: ಬೀದಿ ಬದಿಯ ವ್ಯಾಪಾರಿ ಕೋಟಿಕುಳನಾಗಿ ಬೆಳೆದ ಕತೆ
ಡಾಲಿ ಚಾಯ್‌ವಾಲಾ ಯಾರಿಗೆ ತಾನೆ ಗೊತ್ತಿಲ್ಲ? ಸೋಷಿಯಲ್ ಮೀಡಿಯಾ ಬಳಕೆದಾರರು ಈತನನ್ನು ಗೊತ್ತಿಲ್ಲ ಎಂದು ಹೇಳಿದರೆ ನೀವು ಸೋಷಿಯಲ್ ಮೀಡಿಯಾ ಬಳಸುವ ವ್ಯಕ್ತಿ ಅಲ್ವೇ ಅಲ್ಲ ಎಂದು ಹೇಳಬಹುದು,ಅಷ್ಟರ ಮಟ್ಟಿಗಿನ ಕ್ರೇಝ್ ಹುಟ್ಟು ಹಾಕಿದ್ದಾರೆ ಈ ಚಾಯ್‌ವಾಲಾ. ಬೀದಿ ಬದಿಯ ಚಾಯ್‌ವಾಲಾ ಈಗ ಕೋಟಿಗಳ ಒಡೆಯ. ಈ ಸೋಷಿಯಲ್ ಮೀಡಿಯಾ ಒಬ್ಬ ಸಾಧಾರಣ ವ್ಯಕ್ತಿಯನ್ನು ಕೂಡ ದೊಡ್ಡ ಸೆಲೆಬ್ರಿಟಿಯಾಗಿಸುವ ಶಕ್ತಿ ಹೊಂದಿದೆ ಎಂಬುವುದಕ್ಕೆ ಈತನೇ ದೊಡ್ಡ ಎಕ್ಸಾಂಪಲ್.

ಈಗ ಈತ ಮಾಡುವ ಚಾಯ್ ಕುಡಿಯಲು ದೊಡ್ಡ-ದೊಡ್ಡ ಸೆಲೆಬ್ರಿಟಿಗಳು ಕೂಡ ಬರ್ತಾರೆ, ಅಷ್ಟೇ ಅಲ್ಲ ಈತ ದುಬೈಗೆ ಕಾರ್ಯಕ್ರಮಗಳಿಗೆ ಹೋಗಿ ಬರುತ್ತಾರೆ, ಅಲ್ಲಿ ಆಸ್ತಿ ಕೂಡ ಖರೀದಿಸಿದ್ದಾರೆ, ಇವರ ಬಳಿ ಕೋಟಿ ಬೆಲೆ ಬಾಳುವ ಕಾರುಗಳಿವೆ, ಈಗ ದೊಡ್ಡ ಸೆಲೆಬ್ರಿಟಿ, ಈಗ ಇವರ ಟೀ ಸ್ಟಾಲ್ ಎಷ್ಟೊಂದು ಪ್ರಸಿದ್ಧಿಯಾಗಿದೆಯೆಂದರೆ ಈತ ಮಾಡುವ ಚಾಯ್ ಕುಡಿಯಲೆಂದೇ ಬರ್ತಾ ಇದ್ದಾರೆ, ಈತನನ್ನು ಕೆಲ ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಕರೆಸುತ್ತಿದ್ದಾರೆ. ಇಷ್ಟೆಲ್ಲಾ ಪೀಠಿಕೆಗೆ ಕಾರಣ ಏನಪ್ಪಾ ಅಂದರೆ ಡಾಲಿ ಚಾಯ್‌ವಾಲಾ ಮಂಗಳೂರಿಗೆ ಬರ್ತಾ ಇದ್ದಾರೆ, ಹೀಗೊಂದು ಸುದ್ದಿ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.
ಡಾಲಿ ಚಾಯ್‌ವಾಲಾ ಕೂಡ ಮಂಗಳೂರಿಗೆ ಬರುವುದರ ಬಗ್ಗೆ ಪೋಸ್ಟ್ ಹಾಕಿದ್ದಾರೆ
ಜನವರಿ 18ಕ್ಕೆ ಮಂಗಳೂರಿನಲ್ಲಿ ಸಿಗುತ್ತೇನೆ ಮಜಾ ಕರೇಂಗೆ, ಚಾಯ್ ಪೀಯೆಂಗೆ ಎಂದು ಪೋಸ್ಟ್ ಮಾಡಿದ್ದಾರೆ. ಜನವರಿ 18ಕ್ಕೆ ಮಂಗಳೂರು ಸ್ಟ್ರೀಟ್ ಫುಡ್ ಫೆಸ್ಟ್ ನಡೆಯುತ್ತಿದೆ. ಇದು ತುಂಬಾ ಫೇಮಸ್, ಈಗ ಡಾಲಿ ಚಾಯ್‌ವಾಲಾ ಕೂಡ ಬರ್ತಾ ಇರುವುದರಿಂದ ಆ ದಿನ ಇವರನ್ನು ನೋಡಲೆಂದೇ ಸಾಕಷ್ಟು ಜನ ಸೇರಬಹುದು.
ಬಿಲ್ ಗೇಟ್ಸ್‌ನಿಂದಾಗಿ ಡಾಲಿ ಚಾಯ್‌ವಾಲಾ ಮತ್ತಷ್ಟು ಫೇಮಸ್ ಆದರು
ಇಂದು ಚಾಯ್ ವಾಲಾ ಇಷ್ಟರ ಮಟ್ಟಿಗೆ ಬೆಳೆಯಲು ಬಿಲ್‌ಗೇಟ್ಸ್ ಬಂದು ಟೀ ಕುಡಿದಿದ್ದು ಕೂಡ ಒಂದು ಕಾರಣವಾಗಿದೆ. ಯಾವಾಗ ಬಿಲ್‌ಗೇಟ್ಸ್ ಚಾಯ್ ವಾಲಾ ಅಮಗಡಿಗೆ ಬಂದು ಟೀ ಕುಡಿದರೋ ಅಲ್ಲಿಂದ ಚಾಯ್‌ವಾಲಾನ ಡಿಮ್ಯಾಂಡ್ ಸಿಕ್ಕಾಪಟ್ಟೆ ಹೆಚ್ಚಾಯ್ತು. ಈಗ ಕೋಟಿ ಕೋಟಿ ಸಂಪಾದನೆ ಮಾಡುತ್ತಾರೆ.
ವಿಚಿತ್ರ ವೇಷ ಭೂಷಣ, ಟೀ ನೀಡುವುದರಲ್ಲೊಂದು ಸ್ಟೈಲ್ ಇವೆಲ್ಲಾ ಈ ಚಾಯ್‌ವಾಲಾನ ಕಡೆಗೆ ಜನರನ್ನು ಆಕರ್ಷಿಸಿದೆ, ಈಗಂತೂ ಕೋಟಿಗಳನ್ನು ದುಡಿಯುತ್ತಿದ್ದಾರೆ. ಇವರು ಬಿಗ್‌ಬಾಸ್‌ಗೆ ಬರ್ತಾರೆ ಎಂಬ ಸುದ್ದಿ ಕೂಡ ಇತ್ತು, ಆದರೆ ಬಿಗ್‌ಬಾಸ್‌ಗೆ ಬರಲಿಲ್ಲ, ಆದರೆ ಬೊಗ್‌ಬಾಸ್ ವೀಕೆಂಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ, ಸ್ಪರ್ಧಿಗಳಿಗೆ ಚಾಯ್ ನೀಡಿದ್ದಾರೆ.
ಶ್ರಮದ ಜೊತೆಗೆ ತಮ್ಮನ್ನು ತಾವು ಮಾರ್ಕೆಟಿಂಗ್ ಮಾಡುವುದು ಗೊತ್ತಿದ್ದರೆ ಬೆಳೆಯುವುದು ಸುಲಭ ಎಂದು ಇವರನ್ನು ನೋಡಿ ಕಲಿಯಬೇಕು. ಈ ಚಾಯ್‌ವಾಲಾನ ಹೆಸರು ಸುನೀಲ್ ಪಾಟೀಲ್. ಈಗ ಇವರು ಎಲ್ಲಿ ಹೋದರೂ ಜನರ ಗುಂಪೇ ಸೇರುತ್ತದೆ, ಬಾಡಿಗಾರ್ಡ್ ಇಟ್ಟು ಸುತ್ತಾಡುವಷ್ಟು ದೊಡ್ಡ ಸೆಲೆಬ್ರಿಟಿಯಾಗಿ ಬೆಳೆದಿದ್ದಾರೆ.
ಈ ಚಾಯ್‌ವಾಲಾ ಅನೇಕ ಬೀದಿ ಬದಿಯ ವ್ಯಾಪಾರಿಗಳಿಗೆ ನಾವು ಕೂಡ ದೊಡ್ಡ ಮಟ್ಟಕ್ಕೆ ಬೆಳೆಯಬಹುದು ಎಂಬುವುದಕ್ಕೆ ಸ್ಪೂರ್ತಿಯಾಗಿದ್ದಾರೆ.



Click it and Unblock the Notifications
