Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಕಣ್ಣು ಮಿಟುಕಿಸಿ ಮಾತಾಡುತ್ತಿದೆ ಗೊಂಬೆ..! ವಿಡಿಯೋ ನೋಡಿ ಶಾಕ್ ಆದ ಮಂದಿ
ಇಡೀ ಜಗತ್ತಿನಲ್ಲಿ ಇಂದಿಗೂ ಬಗೆಹರಿಯದ ಪ್ರಶ್ನೆ ಅಂದ್ರೆ ದೆವ್ವ, ಭೂತ ನಿಜವಾಗಲೂ ಇದಾವೆಯೇ ಎಂಬುದು. ಆದ್ರೆ ಇದಕ್ಕೆ ಪುಷ್ಟಿ ನೀಡುವಂತಹ ಹಲವು ಘಟನೆಗಳು ನಡೆದಿರುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಇಲ್ಲಿಯೂ ಸಹ ಒಂದು ವಿಡಿಯೋದಲ್ಲಿ ಇಂತಹದ್ದೆ ವಿಚಾರವೊಂದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ನಾವು ಅದೆಷ್ಟೋ ಸಿನಿಮಾದಲ್ಲಿ ಗೊಂಬೆಗಳಿಗೆ ಜೀವ ಬರುವುದನ್ನು ನೋಡಿದ್ದೇವೆ. ಆದ್ರೆ ಈ ರೀತಿ ನಿಜ ಜೀವನದಲ್ಲೂ ಆದರೆ ಹೇಗೆ? ಹೌದು ಇಂತಹದೊಂದು ಘಟನೆ ನಡೆದಿದ್ದು, ಅದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಶ್ವ ಯುದ್ಧ 2ರ ಸಮಯದಲ್ಲಿ ಮ್ಯೂಸಿಯಂನಲ್ಲಿಡಲಾದ ಗೊಂಬೆಯೊಂದು ಕಣ್ಣು ಮಿಟುಕಿಸಿ, ಮಾತನಾಡಿದ ವಿಡಿಯೋ ಇದಾಗಿದೆ.

ವಿಶ್ವ ಯುದ್ಧ 2ರ ಶಿಬಿರದಲ್ಲಿದ್ದ ಜರ್ಮನ್ ಖೈದಿಯೊಬ್ಬರು ಈ ಗೊಂಬೆಯ ರಚಿಸಿದ್ದರು. ಈಗ ಗಾಜಿನ ಪಂಜರದಲ್ಲಿ ಆ ಗೊಂಬೆಯನ್ನು ಇಡಲಾಗಿದೆ. ಸರಿಸುಮಾರು ನಾಲ್ಕು ವರ್ಷಗಳ ಹಿಂದೆ ಯೂಟ್ಯೂಬ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ, ವಿಡಿಯೋದಲ್ಲಿ ಗಾಜಿನ ಬಾಗಿಲು ತಾನಾಗಿಯೇ ತೆರೆದುಕೊಳ್ಳುತ್ತಿದೆ. ಜೊತೆಗೆ ಗೊಂಬೆಯ ಕಣ್ಣು ಮಿಟುಕಿಸುತ್ತಿರುವುದು ಕಾಣಬಹುದು.
ಗೊಂಬೆಯ ತಲೆಯು ಮಿಟುಕಿಸುವಂತೆ ಮತ್ತು ಅದರ ಬಾಯಿಯು ಚಲಿಸುವಂತೆ ಆದರೆ ಯಾವ ಭಾಷೆ? ಯಾವ ಪದ ಗೊಂಬೆ ಉಚ್ಛರಿಸುತ್ತಿದೆ ಎಂಬುದು ತಿಳಿದುಬಂದಿಲ್ಲ. ಆದರೆ ಈ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ನೋಡುಗರು ಸಹ ಈ ವಿಡಿಯೋ ನೋಡಿ ಭಯ ಭೀತರಾಗದ್ದಾರೆ.
ಈ ಗೊಂಬೆಯನ್ನು ವೆಂಟ್ರಿಲೋಕ್ವಿಸ್ಟ್ ಎಂದು ಕರೆಯಲಾಗಿದೆ. ಇದು ಕೈದಿ ರಚಿಸಿರುವ ಗೊಂಬೆಯ ತಲೆಯ ಭಾಗ ಮಾತ್ರ ಉಳಿದಿದೆ. ಆತನ ಸಾವಿನ ಬಳಿಕ ಈ ಗೊಂಬೆಯನ್ನು ಲಿವರ್‌ಪೂಲ್ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ. ಈ ಗೊಂಬೆ ಹಲವು ವರ್ಷದಿಂದಲೂ ಚರ್ಚೆಯಲ್ಲಿದೆ. ಈಗ ಅದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?
ವಿಡಿಯೋ ಆರಂಭದಲ್ಲಿ ಗಾಜಿನ ಬಾಗಿಲು ಏಕಾಏಕಿ ತೆರೆದುಕೊಳ್ಳುತ್ತದೆ. ಬಳಿಕ ಗೊಂಬೆ ಕಣ್ಣು ಮಿಟುಕಿಸಿದರೆ ಬಾಯಿ ಅಲುಗಾಡುತ್ತಿರುವುದು ಕಾಣಿಸುತ್ತಿದೆ. ಈ ವಿಡಿಯೋ ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ. ಆದರೆ ಈ ವಿದ್ಯಮಾನಕ್ಕೆ ನಿಖರ ಕಾರಣ ಮಾತ್ರ ಈವರೆಗೂ ಪತ್ತೆ ಮಾಡಲು ಸಾಧ್ಯವಾಗಿಲ್ಲ.
ಆದರೆ ಈ ವಿಡಿಯೋ ನೋಡಿದ ಮಂದಿ ಶಾಕ್ ಆಗಿದ್ದಾರೆ. ಇದು ಹೇಗೆ ಸಾಧ್ಯ ಎಂದು ಬಾಯಿ ಮೇಲೆ ಬೆರಳಿಟ್ಟಿದ್ದಾರೆ. ಮತ್ತೆ ಕೆಲವರು ಇದಕ್ಕಿಂತ ಭಯ ಹುಟ್ಟಿಸುವ ಮತ್ತೊಂದು ವಿಡಿಯೋ ನಾನಂತೂ ನೋಡಿಯೇ ಇಲ್ಲ ಎಂದು ಹೇಳಿದ್ದಾರೆ.
ಜೊತೆಗೆ ಹಲವರು ಈ ವಿಡಿಯೋ ನಕಲಿ ಎಂದೂ ಸಹ ವಾದಿಸುತ್ತಿದ್ದಾರೆ. ಈಗ ತಂತ್ರಜ್ಞಾನದ ಮೂಲಕ ಎಂತಹ ವಿಡಿಯೋ ಬೇಕಾದರು ಸೃಷ್ಟಿ ಮಾಡಬಹುದು. ಇದೂ ಸಹ ತಂತ್ರಜ್ಞಾನದ ಕೊಡುಗೆ, ಇಲ್ಲಿ ಜೀವವಿಲ್ಲದ ತಲೆ ಬುರುಡೆಯ ಗೊಂಬೆ ಮಾತನಾಡಲು ಕಣ್ಣು ಮಿಟುಕಿಸಲು ಸಾಧ್ಯವೇ ಇಲ್ಲ ಎಂದು ಅವರು ಹೇಳುತ್ತಿದ್ದಾರೆ. ಆದರೆ ಇದು ನಕಲಿ ಎಂಬುದು ದೃಢವಾಗಿಲ್ಲ. ಈ ವಿಡಿಯೋವನ್ನ ತಜ್ಞರು ಕೂಡ ತಮ್ಮ ಪರೀಕ್ಷೆಗೊಳಪಡಿಸಿದ್ದಾರೆ. ಆದರೆ ಈ ವಿದ್ಯಮಾನ ನಡೆದಿರುವುದು ಏಕೆ ಎಂಬುದು ಅವರಿಂದಲೂ ಪತ್ತೆ ಮಾಡಲು ಸಾಧ್ಯವಾಗಿಲ್ಲ.
ಇನ್ನು ಹಲವರು ವಿಡಿಯೋ ನೋಡಿ ಅಚ್ಚರಿ ಜೊತೆಗೆ ಆಘಾತಕ್ಕೆ ಒಳಗಾಗಿದ್ದಾರೆ. 'ನನ್ನ ಎದುರು ಈ ರೀತಿ ನಡೆದಿದ್ದರೆ ಆ ಊರನ್ನೇ ಬಿಟ್ಟು ತೆರಳುತ್ತಿದ್ದೆ' ಎಂದು ಹೇಳಿದ್ದಾರೆ. ಇನ್ನು ಈ ವಿಡಿಯೋದಲ್ಲಿರುವ ಗೊಂಬೆ ಯಾವುದಾದರು ಹಾಲಿವುಡ್ ಹಾರರ್ ಸಿನಿಮಾದಲ್ಲಿ ನಟಿಸಬೇಕು ಅಂತ ಮತ್ತೊಬ್ಬರು ತಮಾಷೆ ಮಾಡಿದ್ದಾರೆ.



Click it and Unblock the Notifications
