Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಈ ಪ್ರದೇಶದಲ್ಲಿವೆ ನೀಲಿ ಬಣ್ಣದ ನಾಯಿಗಳು!! ನಾಯಿಗಳ ಬಣ್ಣ ಬದಲಾಗಿದ್ದೇಕೆ ಗೊತ್ತಾ?
ನಾಯಿಗಳ ಬಣ್ಣ ಯಾವುದು ಅಂತ ಕೇಳಿದ್ರೆ ಎಲ್ಲರು ಒಂದಿಷ್ಟು ಉತ್ತರ ಹೇಳ್ತಾರೆ. ಕಪ್ಪು, ಬಿಳಿ, ಕಂದು, ಬೂದು ಬಣ್ಣ ಹೀಗೆ ಒಂದಿಷ್ಟು ಬಣ್ಣಗಳಿಂದ ತುಂಬಿರುವ ನಾಯಿಯಗಳ ಪಟ್ಟಿ ಮಾಡಬಹುದು. ಆದ್ರೆ ಕೆಲವೊಮ್ಮೆ ವಿಶೇಷ ಬಣ್ಣ ಹೊಂದಿರುವ ನಾಯಿಗಳು ಜನಿಸುವುದು ಸಹ ಇದೆ. ಆದ್ರೆ ನೀವೆಂದಾದರು ನೀಲಿ ಬಣ್ಣದ ನಾಯಿಗಳ ಕುರಿತು ಕೇಳಿದ್ದೀರಾ?
ಹೌದು ಇಲ್ಲೊಂದು ಭಾಗದಲ್ಲಿ ಈಗ ನಾಯಿಗಳ ಬಣ್ಣ ನೀಲಿಯಾಗುತ್ತಿದೆ. ಪ್ರತಿಯೊಂದು ನಾಯಿಗಳು ನಿಧಾನವಾಗಿ ನೀಲಿ ಬಣ್ಣಕ್ಕೆ ತಿರುಗುತ್ತಿದೆ, ಇದನ್ನು ಕಂಡ ವಿಜ್ಞಾನಿಗಳ ತಂಡವೇ ಅಚ್ಚರಿ ಹೊರಹಾಕಿದೆ. ಆಗೆ ಇದಕ್ಕೆ ಕಾರಣವೇನು ಎಂಬುದನ್ನು ಕೂಡ ಕಂಡುಕೊಳ್ಳುವ ಪ್ರಯತ್ನ ಮಾಡಿದೆ.

ಈ ರೀತಿ ನೀಲಿ ನಾಯಿಗಳು ಕಾಣಿಸಿಕೊಳ್ಳುತ್ತಿರುವುದು ಜಗತ್ತಿನ ಅತ್ಯಂತ ಅಪಾಯಕಾರಿ ಜಾಗ ಎನಿಸಿರುವ ಚೆರ್ನೋಬಿಲ್ ಪ್ರದೇಶದಲ್ಲಿ. ಚೆರ್ನೋಬಿಲ್ ಹೆಸರು ಕೇಳಿದ್ರೆ ನಿಮಗೆ ಪರಮಾಣು ಸ್ಥಾವರದ ದುರಂತ ನೆನಪಾಗುತ್ತದೆ. ಇಂದಿಗೂ ಈ ಪ್ರದೇಶ ವಾಸಯೋಗ್ಯವಾಗಿಲ್ಲ. 1986ರ ದುರಂತದ ಬಳಿಕ ಅಲ್ಲಿ ಇಂದಿಗೂ ಯಾರು ವಾಸವಿಲ್ಲ. ವಿಕಿರಣ ಹೊರಸೂಸುವಿಕೆಯ ಪರಿಣಾಮವಾಗಿ ಚೆರ್ನೋಬಿಲ್ ಈಗ ಖಾಲಿಯಾದ ಪ್ರದೇಶ.
ಆದ್ರೆ ಇಂತಹ ವಿಷಮ ಪರಿಸ್ಥಿತಿಯಲ್ಲಿಯೂ ಕೂಡ ಕೆಲವು ಪ್ರಾಣಿಗಳು, ಪಕ್ಷಿಗಳು, ಕೀಟಗಳು ಬದುಕುಳಿದಿವೆ. ಅಚ್ಚರಿ ಅಂದರೆ ಈ ಪ್ರದೇಶದಲ್ಲಿ ಜಿರಳೆಗಳ ಪ್ರಮಾಣ ಹೆಚ್ಚಾಗಿದ್ದು, ಅವುಗಳು ಈ ವಿಕಿರಣ ತಡೆಯುವ ಶಕ್ತಿ ಪಡೆದುಕೊಂಡಿವೆ ಎಂದು ಹಿಂದೆ ವಿಜ್ಞಾನಿಗಳ ತಂಡ ಹೇಳಿಕೊಂಡಿತ್ತು. ಆದ್ರೆ ಈ ಪ್ರದೇಶದಲ್ಲಿ ಈಗ ನೀಲಿ ಬಣ್ಣದ ನಾಯಿಗಳು ಕಾಣಿಸಿರುವ ಕುರಿತು ವಿಜ್ಞಾನಿಗಳು ತಿಳಿಸಿದ್ದಾರೆ.
ಡಾಗ್ಸ್ ಆಫ್ ಚೆರ್ನೋಬಿಲ್ ಎಂಬ ಸಂಸ್ಥೆಯು ಇತ್ತೀಚೆಗೆ ಆ ಪ್ರದೇಶದಲ್ಲಿ ಕ್ರಿಮಿನಾಶಕ ಕಾರ್ಯವನ್ನು ಮಾಡುತ್ತಿರುವಾಗ ನೀಲಿ ಬಣ್ಣದ ನಾಯಿಗಳು ಕಾಣಿಸಿಕೊಂಡವು. ಅವರು ಈ ನಾಯಿಗಳು ಫೋಟೋಗಳ, ವಿಡಿಯೋಗಳ ಮಾಡಿಕೊಂಡಿದ್ದರು. ಬಳಿಕ ಅವುಗಳನ್ನು ಸೆರೆಹಿಡಿದು ಅಧ್ಯಯನಕ್ಕೆ ಮುಂದಾದರು.
ಆದರೆ ಆರಂಭದಲ್ಲಿ ಈ ರೀತಿ ಬಣ್ಣ ಬದಲಾವಣೆಗೆ ಕಾರಣ ಏನು ಎಂಬುದು ಯಾರಿಗೂ ತಿಳಿಯಲಿಲ್ಲ. ಹಾಗೆ ಇದು ಕೆಲವು ರಾಸಾಯನಿಕಗಳಿಗೆ ಒಗ್ಗಿಕೊಂಡಿದ್ದರ ಪರಿಣಾಮ ಎಂದು ಅಲ್ಲಿನ ಸ್ಥಳೀಯರು ಕೂಡ ಅಭಿಪ್ರಾಯಪಟ್ಟಿದ್ದರು.
ಚೆರ್ನೋಬಿಲ್‌ನಲ್ಲಿ ನೀಲಿ ನಾಯಿಗಳು ಕಂಡುಬಂದಿವೆ. ನಾವು ಚರ್ಚಿಸಬೇಕಾದ ಅತ್ಯಂತ ವಿಶಿಷ್ಟ ಅನುಭವ. ಚೆರ್ನೋಬಿಲ್ ನೀಲಿ ನಾಯಿಗಳು. ಸಂಪೂರ್ಣವಾಗಿ ನೀಲಿ ಬಣ್ಣದಲ್ಲಿರುವ ಮೂರು ನಾಯಿಗಳನ್ನು ನಾವು ನೋಡಿದ್ದೇವೆ. ನಿಖರವಾಗಿ ಏನು ನಡೆಯುತ್ತಿದೆ ಎಂದು ನಮಗೆ ಖಚಿತವಿಲ್ಲ. ನಮಗೆ ಕಾರಣ ತಿಳಿದಿಲ್ಲ ಮತ್ತು ಏನಾಗುತ್ತಿದೆ ಎಂದು ಕಂಡುಹಿಡಿಯಲು ನಾವು ಅವುಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ.
1986 ರಲ್ಲಿ ಚೆರ್ನೋಬಿಲ್ ದುರಂತವು ಉಕ್ರೇನ್‌ನ ಯೂನಿಟ್ 4 ರಿಯಾಕ್ಟರ್‌ನಲ್ಲಿ ಭಾರಿ ಸ್ಫೋಟಕ್ಕೆ ಕಾರಣವಾಯಿತು, ಅಪಾಯಕಾರಿ ವಿಕಿರಣಶೀಲ ವಸ್ತುಗಳನ್ನು ಗಾಳಿಯಲ್ಲಿ ಬಿಡುಗಡೆ ಮಾಡಿತು. ಸ್ಫೋಟದ ನಂತರ ಸ್ಥಾವರದ ಸುಮಾರು 30 ಕಿ.ಮೀ ಪ್ರದೇಶವನ್ನು ತೆರವು ಗೊಳಿಸಲಾಗಿತ್ತು. ಆದ್ರೆ ನಾಗಕರಿಕರು ತಮ್ಮ ಸಾಕುಪ್ರಾಣಿಗಳನ್ನು ಇಲ್ಲಿಯೇ ಬಿಟ್ಟು ಹೊರನಡೆಯಬೇಕಾಯಿತು.
ಹೀಗಾಗಿ ಇಂದು ನೂರಾರು ಬೀದಿ ನಾಯಿಗಳು ಇನ್ನೂ ಪರಮಾಣು ಸ್ಥಾವರದ ಸುತ್ತಲೂ ಚೆರ್ನೋಬಿಲ್ ನಗರದಲ್ಲಿ ವಾಸಿಸುತ್ತವೆ. ಆರಂಭದಲ್ಲಿ ಈ ಪ್ರಾಣಿಗಳನ್ನು ಕೊಲ್ಲಲು ಆದೇಶಿಸಲಾಗಿತ್ತು. ಆದ್ರೆ ಅಲ್ಲಿನ ನೌಕರನೊಬ್ಬ ಅವುಗಳ ಸಾಕಲು ಮುಂದಾಗಿದ್ದ. ಅವುಗಳಿಗೆ ರಾಸಾಯನಿಕದಿಂದ ಹಾನಿಯಾಗದಂತೆ ತಡೆಯಲು ಸಂತಾನಹರಣ ಸೇರಿದಂತೆ ಔಷಧಿಗಳ ನೀಡಿ ಪೋಷಿಸಲಾಗಿತ್ತು. ಅದರ ಪರಿಣಾಮವಾಗಿ ಇಂದಿಗೂ ಅವು ವಿಕಿರಣದೊಂದಿಗೆ ವಾಸಿಸುತ್ತಿವೆ.



Click it and Unblock the Notifications
