Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಭೂಕಂಪ ಮೊದಲೇ ಗ್ರಹಿಸಿದ ನಾಯಿ..! ಅಚ್ಚರಿಯ ವಿಡಿಯೋ ವೈರಲ್
ಭೂಮಿಯ ಮೇಲೆ ಹಲವು ಬಾರಿ ನೈಸರ್ಗಿಕ ವಿಕೋಪಗಳು ನಡೆದಿವೆ, ನಡೆಯುತ್ತಲೆ ಇದೆ. ಅದು ಭೂಕಂಪ, ಸುನಾಮಿ, ಜ್ವಾಲಾಮುಖಿ ಸ್ಫೋಟ, ಚಂಡಮಾರುತ, ಸುಂಟರಗಾಳಿ ಪ್ರವಾಹ ಹೀಗೆ ಒಂದಿಲ್ಲೊಂದು ಪ್ರಾಕೃತಿಕ ವಿಕೋಪಗಳು ನಡೆಯುತ್ತವೆ. ಈ ವಿಕೋಪಗಳು ನಡೆದಾಗಲೆಲ್ಲ ಒಂದಿಷ್ಟು ಮಂದಿ ಮನೆ ಆಸ್ತಿ, ಕಳೆದುಕೊಳ್ಳುವುದು ಸಹ ನಾವು ನೋಡಿದ್ದೇವೆ.
ಆದರೆ ನಾವು ಈ ನೈಸರ್ಗಿಕ ವಿಕೋಪ ಸಂಭವಿಸುವುದು ಪ್ರಾಣಿಗಳಿಗೆ ಮೊದಲೇ ತಿಳಿಯುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಅನಾಹುತಗಳನ್ನು ಪ್ರಾಣಿ, ಪಕ್ಷಿಗಳು ಮೊದಲೇ ತಿಳಿದಿರುತ್ತೆ ಎನ್ನಲಾಗುತ್ತದೆ. ಅವು ಈ ನೈಸರ್ಗಿಕ ವಿಕೋಪಗಳು ನಡೆಯುವ ಕೆಲ ನಿಮಿಷಗಳು, ಸೆಕೆಂಡ್‌ಗಳ ಮೊದಲೇ ತಿಳಿಯುತ್ತದೆ.

ಈ ರೀತಿ ಪ್ರಾಣಿಗಳು ಭೂಕಂಪನ, ಸುನಾಮಿಗಳ ಮೊದಲೇ ತಿಳಿಯುತ್ತವೆ. ಮಾನವನಿಗೂ ತಿಳಿಯುವ ಮುನ್ನ ಅವುಗಳಿಗೆ ಈ ನೈಸರ್ಗಿಕ ವಿಕೋಪಗಳ ಬಗ್ಗೆ ತಿಳಿಯುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಇಲ್ಲೊಂದು ಘಟನೆ ನಡೆದಿದೆ. ತೈವಾನ್‌ನಲ್ಲಿ ಇತ್ತೀಚಿಗೆ ನಡೆದ ಭೂಕಂಪನಕ್ಕೂ ಮುನ್ನ ಮನೆಯೊಳಗಿದ್ದ ನಾಯಿ ಮಾಲೀಕರ ಎಚ್ಚರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಎಲ್ಲಾ ಪ್ರಾಣಿಗಳು ಆರನೇ ಇಂದ್ರಿಯವನ್ನು ಹೊಂದಿವೆ ಎಂದು ತಜ್ಞರು ಹೇಳುತ್ತಾರೆ, ಅದು ಮಾನವನಿಗೆ ಸಾಧ್ಯವಾಗದ ವಿಷಯಗಳನ್ನು ನೋಡಲು ಅಥವಾ ಕೇಳಲು ಸಹಾಯ ಮಾಡುತ್ತದೆ. ಏಪ್ರಿಲ್ 3 ರಂದು ತೈವಾನ್‌ನಲ್ಲಿ ಸಂಭವಿಸಿದ 7.2-ತೀವ್ರತೆಯ ಭೂಕಂಪವನ್ನು ನಾಯಿಯೊಂದು ಮೊದಲೇ ಗ್ರಹಿಸಿ ಮನೆಯಲ್ಲಿ ಅತ್ತಿಂದಿತ್ತ ಒಡಾಡುತ್ತಿರುವುದು ಕಾಣಬಹುದು.
X ಬಳಕೆದಾರ Yoda4ever ಅವರು ಪೋಸ್ಟ್ ಮಾಡಿದ ವೀಡಿಯೊದಲ್ಲಿ, ನಾಯಿಯೊಂದು ಮಂಚದ ಮೇಲೆ ವಿಶ್ರಾಂತಿ ಪಡೆಯುತ್ತಿರುವುದನ್ನು ಕಾಣಬಹುದು, ಅದು ಇದ್ದಕ್ಕಿದ್ದಂತೆ ಎದ್ದು ತನ್ನ ತಲೆಯನ್ನು ಹೊರಹಾಕುತ್ತದೆ, ನೆಲದ ಮೇಲೆ ಹಾರಿ ಮತ್ತು ಮನೆಯ ಇನ್ನೊಂದು ಬದಿಯಲ್ಲಿರುವ ಕೋಣೆಯತ್ತ ಓಡುತ್ತದೆ.
ನಾಯಿ ಓಡಿದ ಕೆಲವೇ ಸೆಕೆಂಡ್‌ಗಳ ನಂತರ ಭೀಕರ ಭೂಕಂಪನ ಸಂಭವಿಸುತ್ತದೆ. ಈ ವೇಳೆ ಮನೆಯಲ್ಲಿದ್ದ ನಾಲ್ಕು ಮಂದಿ ಓಡಿ ಬಂದು ಟೇಬಲ್ ಕೆಳಗೆ ಅಡಗಿ ಕುಳಿತುಕೊಳ್ಳುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ನಾಯಿಯ ನಡೆಯನ್ನ ಮನೆಯವರು ಮೊದಲೇ ತಿಳಿದಿದ್ದರೆ ಭೂಕಂಪನವನ್ನು ಆರಂಭದಲ್ಲೇ ತಿಳಿಯಬಹುದಿತ್ತು. ಈ ನಾಯಿಗಳು ನಂಬಲಾಗದ ಸಂವೇದನಾ ಸಾಮರ್ಥ್ಯಗಳನ್ನು ಹೊಂದಿವೆ. ಭೂಕಂಪಗಳಂತಹ ಪರಿಸರದಲ್ಲಿನ ಬದಲಾವಣೆಗಳನ್ನು ಮಾನವರು ಗ್ರಹಿಸುವ ಮೊದಲೇ ಕಂಡುಹಿಡಿಯುವುದು ಸೇರಿದಂತೆ. ಅವರ ತೀಕ್ಷ್ಣವಾದ ಶ್ರವಣ ಮತ್ತು ಕಂಪನಗಳಿಗೆ ಸೂಕ್ಷ್ಮತೆಯು ಭೂಕಂಪನ ಚಟುವಟಿಕೆಗೆ ಮುಂಚಿನ ಸೂಕ್ಷ್ಮ ಸೂಚನೆಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.
ಇದಕ್ಕೂ ಮೊದಲು ಸಹ ಇಂತಹ ಘಟನೆಗಳು ನಡೆದಿರುವುದನ್ನು ನಾವು ಗಮನಿಸಬಹುದು. ಜಪಾನ್‌ನಲ್ಲಿ ನಾಯಿಯೊಂದು ಭೂಕಂಪನಕ್ಕೂ ಮುನ್ನ ಇಡೀ ಕುಟುಂಬಕ್ಕೆ ಎಚ್ಚರಿಕೆ ನೀಡಿತ್ತು. ಹೀಗಾಗಿ ಅವರೆಲ್ಲ ಮನೆಯಿಂದ ಓಡಿ ಬಂದ ಕ್ಷಣದಲ್ಲಿ ಭೂಕಂಪನ ಸಂಭವಿಸಿ ಇಡೀ ಮನೆ ಧರೆಗುರುಳಿತ್ತು, ನಾಯಿಯ ಎಚ್ಚರಿಕೆಯಿಂದ ಇಡೀ ಕುಟುಂಬ ಭೂಕಂಪನದಿಂದ ಪಾರಾಗಿತ್ತು. ಹೀಗಾಗಿ ಪ್ರಾಣಿಗಳಿಗೆ ಈ ರೀತಿಯ ನೈಸರ್ಗಿಕ ವಿಕೋಪಗಳ ಮೊದಲೇ ಗ್ರಹಿಸುವ ಶಕ್ತಿ ಇರುತ್ತದೆ ಎಂದು ತಿಳಿಯುತ್ತದೆ. ಜೊತೆಗೆ ಅವು ತಮ್ಮ ಮಾಲೀಕರಿಗೂ ಈ ಬಗ್ಗೆ ಎಚ್ಚರಿಸುತ್ತವೆ ಎಂಬುದು ತಿಳಿದುಬರುತ್ತದೆ.
ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಜನರು ನಾಯಿಯ ಜಾಣ್ಮೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಯಿ ಮಾಲೀಕರ ಎಚ್ಚಿಸಿ ಅವರ ಪ್ರಾಣ ಕಾಪಾಡಿದೆ ಎಂದು ಹೋಗಳಿದ್ದಾರೆ. ಈ ವಿಡಿಯೋದಲ್ಲಿ ನಾಯಿ ಸಹ ಭೂಕಂಪನಕ್ಕೆ ಭಯಗೊಂಡಂತೆ ಕಂಡು ಬಳಿಕ ತನ್ನ ಸ್ಥಾನದಲ್ಲಿ ಕುಳಿತು ಎಲ್ಲವನ್ನು ಅದು ವೀಕ್ಷಿಸುತ್ತಿರುವುದನ್ನು ನಾವು ನೋಡಬಹುದು.



Click it and Unblock the Notifications
