Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬಿಲ್‌ಗೇಟ್ಸ್ ಟೀ ಕೇಳಿದ್ದಕ್ಕೆ ಟೀ ಮಾಡುತ್ತಿರುವ ನಾಯಿ: ಕ್ಯೂಟ್ ವೀಡಿಯೋ ವೈರಲ್
ನಾಯಿ ಟೀ ಮಾಡುತ್ತಿರುವ ವೀಡಿಯೋ ಇನ್‌ಸ್ಟಾದಲ್ಲಿ ವೈರಲ್ ಆಗುತ್ತಿದೆ. ಆ ಮುದ್ದಾದ ನಾಯಿಗೆ ತುಂಬಾ ಚೆನ್ನಾಗಿ ಅಲಂಕಾರ ಮಾಡಲಾಗಿದ್ದು ಒಂದು ಚಿಕ್ಕ ಅಂಗಡಿ ಸೆಟಪ್ ಅದರಲ್ಲಿ Goli ki Chawpri ಎಂಬ ಬೋರ್ಡ್, ಅದರ ಮುಂದೆ ಕೂಲಿಂಗ್ ಗ್ಲಾಸ್ ಹಾಕಿತ್ ಸ್ಟೈಲಾಗಿ ಕುಳಿತಿರುವ ನಾಯಿ, ಆ ನಾಯಿ ಬಳಿ ಬಿಲ್ ಗೇಟ್ಸ್ ಒಂದು ಟೀ ಕೇಳುತ್ತಾರೆ, ನಾಯಿ ಟೀ ಮಾಡಿಕೊಡುವ ವೀಡಿಯೋ ಇದಾಗಿದ್ದು ತುಂಬಾನೇ ವೈರಲ್ ಆಗಿದೆ.
ಇಲ್ಲಿ ಮೆಚ್ಚಬೇಕಾಗಿರುವುದು ಆ ನಾಯಿಯ ನಟನೆ ಕೌಶಲ್ಯ, ಹಾಲಿಗೆ ಸ್ವಲ್ಪ ನೀರು ಹಾಕಿ ಟೀ ಪುಡಿ ಕೂಡ ಹಾಕುತ್ತೆ, ಅಲ್ಲಿಗೆ ಟೀ ರೆಡಿ. ನಾಯಿ ಟೀ ಮಾಡುವುದು ಎಂದರೆ ಸುಮ್ಮನೆಯೇ ಅದು ನೀರು, ಹಾಲು ಹಾಕುವುದು, ಟೀ ಪುಡಿ ಹಾಕುವುದು ಎಲ್ಲವೂ ತಮಾಷೆಯಾಗಿದೆ.
ಈ ವೀಡಿಯೋ ತಮಾಷೆಯಾಗಿರುವುದರಿಂದ ನೆಟ್ಟಿಗರ ಗಮನ ಸೆಳೆದಿದೆ. oscarnkarma ಎಂಬ ಅಕೌಂಟ್‌ನಲ್ಲಿ ಈ ವೀಡಿಯೋ ಪೋಸ್ಟ್ ಆಗಿದೆ. ಈ ವೀಡಿಯೋ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಮತ್ತೊಂದು ನಾಯಿ ಕೂಡ ಚೀಸ್ ಪಾವ್, ತಂದೂರಿ ಪಾವ್, ಬಟರ್ ಪಾವ್ ಅಂತ ಮಾರುತ್ತಿರುವ ವೀಡಿಯೋ ಕೂಡ ಅಷ್ಟೇ ಕ್ಯೂಟ್ ಆಗಿದೆ. ಆ ನಾಯಿಗಳನ್ನು ನಿಜವಾಗಲು ಮೆಚ್ಚಬೇಕು, ತಿನ್ನುವ ವಸ್ತುಗಳು ಕಣ್ಣೆದುರೇ ಇದ್ದರೂ ಅವುಗಳನ್ನು ತಿನ್ನಲು ಯತ್ನಿಸದೆ ಅಂಗಡಿ ಮಾಲಿಕರಂತೆಯೇ ಪೋಸ್ ನೀಡಿರುವ ಸಕತ್ ಕ್ಯೂಟ್ ಅಲ್ವಾ?
ಈ ನಾಯಿಗಳಿಗೆ ಅಷ್ಟೇ ಫಾಲೋವರ್ಸ್ ಇದೆ, ಅವುಗಳ ಒಂದೊಂದು ವೀಡಿಯೋ ಕೂಡ ಅಷ್ಟೊಂದು ಚೆನ್ನಾಗಿರಲಿದೆ.. ರಾಮ ನವಮಿಗೆ ಪೆಂಡಲ್‌ಗಳನ್ನು ಹಾಕಿರುತ್ತಾರೆ, ಸಾಮಾನ್ಯವಾಗಿ ಪೆಂಡಲ್‌ಗೆ ನಾಯಿಗಳಿಗೆ ಅನುಮತಿ ನೀಡಲ್ಲ, ಆದರೆ ಒಂದು ಪೆಂಡಲ್‌ನವರು ಈ ನಾಯಿಗಳಿಗೆ ಅನುಮತಿ ನೀಡಿತು. ಅವರು ಆ ನಾಯಿಗಳಿಗೆ ಬೊಟ್ಟು ಹಾಕಿ ತಿನ್ನಲು ನೀಡುತ್ತಾರೆ, ಆವಾಗ ಆ ನಾಯಿಗಳು ತಿರುಗಿ ಮುತ್ತಿಕ್ಕುತ್ತಿರುವುದನ್ನು ಕಾಣಬಹುದು.
ಮದುವೆ ವೇಷದಲ್ಲಿಯೂ ಪೋಸ್
ಅದನ್ನು ಸಾಕುತ್ತಿರುವವರು ಆ ನಾಯಿಗೆ ಮಾಡುತ್ತಿರುವ ವೇಷಗಳು ಒಂದಾ ಎರಡಾ.... ತರಾವರಿ ವೇಷ ಕಟ್ಟಿಸುತ್ತಾರೆ, ಅವುಗಳು ಕೂಡ ಅಷ್ಟೇ ಮುದ್ದಾಗಿ ಅವರು ಕುಣಿಸಿದಂತೆ ಕುಣಿಯುತ್ತವೆ. ಅವುಗಳ ಆಟ ನೋಡುವುದೇ ಚೆಂದ.
ಆ ಪೇಜ್‌ನಲ್ಲಿ ಎರಡು ನಾಯಿಗಳ ಕತೆಯೇ ಇದೆ. ಈ ನಾಯಿಗಳು ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರು ಸಾಕುತ್ತಿರುವ ವೀಡಿಯೋ ಆಗಿದೆ. ಅವುಗಳ ಅನೇಕ ಕ್ಯೂಟ್ ವೀಡಿಯೋಗಳಿವೆ, ಒಂದೊಂದೂ ವೀಡಿಯೋ ಕೂಡ ತುಂಬಾನೇ ಆಕರ್ಷಕವಾಗಿದೆ. ಕೆಲವರು ನಾಯಿ ಸಾಕಲು ಇಷ್ಟಪಡಲ್ಲ, ಇವುಗಳ ಕ್ಯೂಟ್ ವೀಡಿಯೋ ನೋಡಿದರೆ ತಾವೂ ಒಂದು ನಾಯಿ ಸಾಕಲು ಮುಂದಾಗುತ್ತಾರೆ.
ನಾಯಿಗಳು ಕೊಡುವ ಪ್ರೀತಿಗೆ ಅವುಗಳೇ ಸಾಟಿ
ಮನುಷ್ಯನಾದರೂ ಒಂದು ಕ್ಷಣ ಕೆಟ್ಟದಾಗಿ ಯೋಚಿಸಬಹುದು, ಆದರೆ ನಾಯಿಗಳು ತಮ್ಮ ಮಾಲಿಕನನ್ನು ಎಂದಿಗೂ ಬಿಟ್ಟು ಕೊಡುವುದಿಲ್ಲ, ಎಂಥದ್ದೇ ಪರಿಸ್ಥಿತಿಯಾಗಿರಲಿ ತನ್ನ ಮಾಲೀಕನ ಸಹಾಯಕ್ಕೆ ನಿಲ್ಲುತ್ತದೆ, ಅವುಗಳ ಕೊಡುವ ಪ್ರೀತಿ ಇದ್ದ ಟೆನ್ಷನ್ ಎಲ್ಲಾ ಮರೆಸುವಂತೆ ಮಾಡುತ್ತದೆ. ಅವುಗಳು ಮನುಷ್ಯರ ಭಾವನೆಯನ್ನು ಅರ್ಥ ಮಾಡಿಕೊಳ್ಳುತ್ತವೆ, ನಾವು ಖುಷಿಯಲ್ಲಿದ್ದೇವೆ, ದುಃಖದಲ್ಲಿ ಇದ್ದೀವಿ ಎಲ್ಲವೂ ತಿಳಿಯುತ್ತದೆ, ನಮ್ಮ ಭಾವನೆಗಳಿಗೆ ಸ್ಪಂದಿಸುತ್ತಾರೆ, ಹಾಗಾಗಿ ನಾಯಿ ಪ್ರಿಯರಿಗೆ ತಾವು ಸಾಕಿದ ನಾಯಿಯೆಂದರೆ ಮನೆಯ ಸದಸ್ಯ ಆಗಿರುತ್ತದೆ.
ನಾಯಿ ಮನೆಯಲ್ಲಿದ್ದರೆ ಮನೆಯವರನ್ನು ಪ್ರೀತಿಸುತ್ತೆ, ಮನೆಯನ್ನೂ ಕಾಯುತ್ತೆ, ಈ ಗುಣಗಳು ಇತರ ಪ್ರಾಣಿಯಲ್ಲಿ ಕಾಣ ಸಿಗುವುದು ಕಡಿಮೆ, ಹಾಗಾಗಿ ನಾಯಿ ನಿಯತ್ತಿನ ಪ್ರಾಣಿ ಎಂದು ಹೇಳುವುದು.



Click it and Unblock the Notifications
