Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಮಲಗುವಾಗ ರೀಲ್ಸ್ ನೋಡುತ್ತೀರಾ? ಹಾಗಾದ್ರೆ ಈ ವಿಚಾರ ತಿಳಿದಿರಲೇಬೇಕು..!!
ರಾತ್ರಿ ಮಲಗುವ ಮುನ್ನ ಅಂದ್ರೆ ನಿದ್ರೆ ಬರುವವರೆಗೂ ಮೊಬೈಲ್ ಬಳಸುವುದು ಈಗ ಕಾಮನ್. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಮಲಗುವ ಮುನ್ನ ಒಂದಿಷ್ಟು ಕಾಲ ರೀಲ್ಸ್ ನೋಡಿ ಮಲಗುತ್ತಾರೆ. ಕೆಲವರಿಗೆ ಮೊಬೈಲ್ ಹಿಡಿದರೆ ಮಾತ್ರವೇ ನಿದ್ರೆ ಬರುತ್ತೆ. ಮತ್ತೆ ಕೆಲವರು ಮೊಬೈಲ್ ಬೆಳಗ್ಗೆವರೆಗೂ ಆನ್ ಆಗಿತೇ ಇರುತ್ತೆ ಅವರಿಗೆ ನಿದ್ರೆ ಬಂದಿರುವ ಸಮಯವೇ ತಿಳಿದಿರುವುದಿಲ್ಲ.
ಆದ್ರೆ ನೀವು ಕೂಡ ಇದೇ ರೀತಿ ಮಲಗುವ ಮುನ್ನ ರೀಲ್ಸ್ ನೋಡುವ ಅಭ್ಯಾಸ ಇಟ್ಟುಕೊಂಡಿದ್ದರೆ ಈ ಸುದ್ದಿ ಓದಲೇಬೇಕಿದೆ. ಏಕೆಂದರೆ ಮಲಗುವ ಮುನ್ನ ರೀಲ್ಸ್ ನೋಡುವುದು ನಿಮಗೆ ಯಾವ ರೀತಿ ಹಾನಿ ಉಂಟು ಮಾಡುತ್ತಿದೆ ಎಂಬುದನ್ನು ತಜ್ಞರ ತಂಡವೊಂದು ವಿವರಿಸಿದ್ದು ಆಘಾತ ಹುಟ್ಟಿಸುವಂತಿದೆ. BMC ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು ಮಲಗುವ ಮುನ್ನ ರೀಲ್ಸ್ ನೋಡುವುದು ಯುವ ಮತ್ತು ವಯಸ್ಕರಲ್ಲಿ ಹೈಪರ್ ಟೆನ್ಷನ್‌ಗೆ ಕಾರಣವಾಗುತ್ತಿದೆ ಎಂದು ತಿಳಿದುಬಂದಿದೆ.

ಚೀನಾದ ಹೆಬೈ ವೈದ್ಯಕೀಯ ವಿಶ್ವವಿದ್ಯಾಲಯದ ಸಂಶೋಧನಾ ತಂಡವು ನಡೆಸಿರುವ ಈ ಅಧ್ಯಯನದಲ್ಲಿ ಇಂತಹದೊಂದು ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ತಂಡವು 2023ರ ಜನವರಿಯಿಂದ ಸೆಪ್ಟೆಂಬರ್ ವರೆಗೆ 4,318 ಜನರನ್ನು ಈ ಅಧ್ಯಯನಕ್ಕಾಗಿ ಬಳಸಿಕೊಂಡಿದೆ. ಇದರಲ್ಲಿ ಅವರು ಮಲಗುವ ಮುನ್ನ ಮೊಬೈಲ್ ಬಳಕೆಯ ಕುರಿತು ಗಮನವಿಡಲಾಗಿತ್ತು.
ಸಾಮಾನ್ಯವಾಗಿ ಅವರು ದಿನವಿಡಿ ಕಂಪ್ಯೂಟರ್ ಮುಂದೆ, ಟಿವಿ ಎದುರು ಅಥವಾ ವಿಡಿಯೋ ಗೇಮ್ ಆಡುವುದಕ್ಕಿಂತ ರಾತ್ರಿ ಮಲಗುವ ಮುನ್ನ ರೀಲ್ಸ್ ನೋಡುವಾಗ ಅವರ ರಕ್ತದೊತ್ತಡ ಅಧಿಕವಾಗಿರುವುದನ್ನು ಅಧ್ಯಯನದ ವೇಳೆ ಗಮನಿಸಲಾಗಿದೆ. ಮಲಗುವ ಸಮಯದಲ್ಲಿ ರೀಲ್ಸ್ ನೋಡುವುದು ಯುವ ಮತ್ತು ಮಧ್ಯವಯಸ್ಕರಲ್ಲಿ ಅಧಿಕ ರಕ್ತದೊತ್ತಡದೊಂದಿಗೆ ಗಮನಾರ್ಹವಾಗಿ ಸಂಬಂಧ ಹೊಂದಿದೆ ಎಂದು ಸಂಶೋಧಕರು ವಿವರಿಸಿದ್ದಾರೆ.
ರಾತ್ರಿ ಸಮಯದಲ್ಲಿ ಈ ರೀಲ್ಸ್ ನೋಡುವುದು ನಮ್ಮ ಮೆದುಳು ಸಿಂಪಥೆಟಿಕ್ ಅರೌಸಲ್‌ಗೆ ಕಾರಣವಾಗುತ್ತಿದೆ ಎಂದಿದ್ದಾರೆ. ಅಂದರೆ ಇದು ನಾವು ಚಟುವಟಿಕೆ ನಡೆಸಲು ದೇಹವನ್ನು ಸಿದ್ಧ ಮಾಡುವ ಒಂದು ಅಂಶವಾಗಿದೆ. ಆದ್ರೆ ರಾತ್ರಿ ಸಮಯದಲ್ಲಿ ಮಲಗಲು ಈ ಅಂಶದ ಅಗತ್ಯ ಇರುವುದಿಲ್ಲ ಎಂಬುದು ಅವರ ವಾದವಾಗಿದೆ.
ಹಾಗೆ ರಾತ್ರಿ ಸಮಯದಲ್ಲಿ ಹೆಚ್ಚು ಬ್ಲೂ ಲೈಟ್‌ಗಳ ಕಣ್ಣಿನ ಮೇಲೆ ಬೀಳುವುದು ನಿದ್ರೆಯ ಕೊರತೆಗೆ ಕಾರಣವಾಗುತ್ತಿದೆಯಂತೆ. ಇದು ನೀವು ಸದಾ ಎಚ್ಚರಿಕೆಯಿಂದ ಇರುವಂತೆ ಸ್ಟಿಮ್ಯೂಲೇಟ್ ಮಾಡುವ ಅಂಶಗಳ ಮೇಲೆ ಪ್ರಭಾವ ಬೀರುತ್ತಿದೆ. ಹಾಗೆ ದೇಹದ ತೂಕ ಹೆಚ್ಚಳ, ಜಡತ್ವ, ಲಿಪಿಡ್‌ಗಳು. ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಏರಿಕೆ, ಯೂರಿಕ್ ಆಮ್ಲದ ಹೆಚ್ಚಳದಂತಹ ಸಮಸ್ಯೆಗಳು ಇದರಿಂದ ಉಂಟಾಗುತ್ತಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಕೂಡ ವೈದ್ಯರು ಈ ಕುರಿತಂತೆ ವಿವರಿಸಿದ್ದು ಭಾರೀ ವೈರಲ್ ಆಗಿತ್ತು, ರಾತ್ರಿ ಸಮಯದಲ್ಲಿ ರೀಲ್ಸ್ ವೀಕ್ಷಣೆ ಅಧಿಕ ರಕ್ತದೊತ್ತಡ, ಹೈಪರ್ ಟೆನ್ಷನ್ ಸಮಸ್ಯೆಗೆ ಕಾರಣವಾಗಬಹುದು ಎಂದು ಬೆಂಗಳೂರಿನ ವೈದ್ಯರೊಬ್ಬರು ವಿವರಿಸಿದ್ದರು. ಅವರ ಪೋಸ್ಟ್ ಈ ಹಿಂದೆ ಭಾರೀ ವೈರಲ್ ಕೂಡ ಆಗಿತ್ತು. ಇದು ಯುವ ಸಮುದಾಯದಲ್ಲಿ ಮಾಡಿರುವ ಅಧ್ಯಯನವಾಗಿದೆ. ಆದ್ರೆ ಈಗ ಚಿಕ್ಕ ಮಕ್ಕಳು ಕೂಡ ಮಲಗುವಾಗ ಮೊಬೈಲ್ ಹಿಡಿದು ಮಲಗುತ್ತಾರೆ. ಅವರಲ್ಲೂ ಈ ಪ್ರಮಾಣ ಅಧಿಕವಾಗಿರಬಹುದು.



Click it and Unblock the Notifications