Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾತ್ರಿ 3:07ರಿಂದ 3:15ರ ನಡುವೆ ಎಚ್ಚರ ಆಗುತ್ತಾ? ನೀವು ಬಹಳ ಎಚ್ಚರದಿಂದಿರಬೇಕು?
ನಿಮಗೆ ನಿದ್ರೆ ಮಾಡುವುದು ಕಷ್ಟದ ಕೆಲಸ ಎನಿಸುತ್ತಿದ್ಯಾ?, ಅದ್ರಲ್ಲೂ ರಾತ್ರಿ ಆಗಾಗ ಎಚ್ಚರವಾಗುವುದು, ನಿದ್ರೆ ಬಾರದೆ ಇರುವುದು, ಹಾಗೆ ಬೆಳಗ್ಗೆ ಬೇಗ ಎಚ್ಚರ ಆಗುವುದು ಇಂತಹ ಹಲವು ರೀತಿಯ ಸಮಸ್ಯೆಗಳ ನೀವು ಎದುರಿಸಿರಬಹುದು. ಹಾಗೆ ಹಲವು ಸಮಯ ನೀವು ಎಚ್ಚರಗೊಂಡ ಬಳಿಕ ಮಲಗಲು ಕಷ್ಟಪಟ್ಟು ಎದ್ದು ಟಿವಿ ನೋಡುವುದು, ಮೊಬೈಲ್ ಬಳಸುವುದು ಮಾಡಿರಬಹುದು.
ಆದ್ರೆ ನಿಮಗೆ ರಾತ್ರಿ 3:07ರಿಂದ 3:15ರ ನಡುವೆ ಆಗಾಗ ಎಚ್ಚರವಾಗುತ್ತಿದ್ದರೆ ಅದಕ್ಕೆ ಹಲವು ಕಾರಣಗಳ ಪಟ್ಟಿ ಮಾಡಬಹುದು. ಹಾಗೆ ಇದು ಎಚ್ಚರಿಕೆಯಾಗಿಯೂ ನೀವು ಪರಿಗಣಿಸುವುದು ಉತ್ತಮ. ಹಾಗಾದ್ರೆ ಈ ಸಮಯದಲ್ಲಿ ಎಚ್ಚರ ಆಗುವುದರ ಹಿಂದಿರುವ ಕಾರಣವೇನು? ಈ ರೀತಿ 3 ಗಂಟೆಯ ಸಮಯದಲ್ಲಿ ಎಚ್ಚರವಾದರೆ ಅದರ ಅರ್ಥವೇನು ಎಂಬುದು ನೀವು ಕೂಡ ತಿಳಿದುಕೊಳ್ಳಿ.

ಮಧ್ಯರಾತ್ರಿ ಎಚ್ಚರಗೊಳ್ಳುವುದು ಸಾಮಾನ್ಯ ವಿಚಾರ ಈ ಸಮಯದಲ್ಲಿ ನಾವು ಮತ್ತೆ ಮಲಗಿ ನಿದ್ರಿಸುತ್ತೇವೆ. ಆದ್ರೆ 3 ಗಂಟೆಯ ನಂತರ ಹಾಗೆ 3:15ರ ನಡುವೆ ಎಚ್ಚರಗೊಳ್ಳುವುದು ಆಧ್ಯಾತ್ಮಿಕ ವಿಚಾರವಾಗಿ ಹಾಗೆ ವೈಜ್ಞಾನಿಕ ವಿಚಾರವಾಗಿಯೂ ಹಲವು ರೀತಿಯ ಕಾರಣಗಳನ್ನು ಹೊಂದಿದೆ. ಜ್ಯೋತಿಷ್ಯ ಹಾಗೂ ಆಧ್ಯಾತ್ಮಿಕ ವಿಚಾರಗಳಿಂದ ಇದನ್ನು ನೋಡುವುದಾರೆ 3 ಗಂಟೆ ಸಮಯದಲ್ಲಿ ಎಚ್ಚರವಾಗುವುದಕ್ಕೆ ಗ್ರಹಗತಿಗಳಲ್ಲಿನ ಬದಲಾವಣೆಯ ಸಮಯವಂತೆ. ಹಾಗೆ ಆಧ್ಯಾತ್ಮಿಕವಾಗಿ ನೀವು ಹೆಚ್ಚು ಪ್ರಬಲರಾಗಿದ್ದೀರಿ ಎಂದರ್ಥವಂತೆ.
ಭೌತಿಕ ಪ್ರಪಂಚ ಮತ್ತು ಆಧ್ಯಾತ್ಮಿಕ ಪ್ರಪಂಚದ ನಡುವಿನ ಅತ್ಯಂತ ಸಣ್ಣ ಸಮಯ ಇದು ಎನ್ನಲಾಗುತ್ತದೆ. ಈ ಸಮಯದಲ್ಲಿ ಎಚ್ಚರವಾಗುವುದು ನಿಮಗೆ ಅತೀಂದ್ರಿಯ ಸಂದೇಶ ಅಥವಾ ವಿಶೇಷ ಅನುಭವ ಪಡೆಯುವ ಸಮಯ ಎಂದು ಹೇಳಲಾಗುತ್ತದೆ. ಈ ಸಮಯವು ಆಧ್ಯಾತ್ಮಿಕ ಮಾರ್ಗದರ್ಶನ ಪಡೆಯಲು ಬಹಳ ಉತ್ತಮ ಸಮಯ ಎನ್ನಲಾಗುತ್ತದೆ.
ಈ ಸಮಯದಲ್ಲೇ ಆತ್ಮಗಳ ಸಂಚಾರ ಮಾಡುತ್ತವೇ ಅಂತಲೂ ಹೇಳಲಾಗುತ್ತದೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ಮಾತ್ರ ತಿಳಿದುಬಂದಿಲ್ಲ. ಇನ್ನು ಈ ಸಮಯದಲ್ಲಿ ಮನಸ್ಸಿನ ತಳಮಳಗಳು ಕಳೆದುಕೊಳ್ಳಬಹುದಂತೆ ಹಾಗೆ ಯಾವುದಾದರು ಸಮಸ್ಯೆಗೆ ನಿಮಗೆ ಉತ್ತಮ ಪರಿಹಾರ ಯೋಚಿಸಲು ಉತ್ತಮ ಸಮಯವಂತೆ. ಅಂತಿಮವಾಗಿ ನೀವು ಈ ಸಮಯದಲ್ಲಿ ಎಚ್ಚರವಾಗುತ್ತಿದ್ದರೆ ನೀವು ಯಾವುದಾದರು ಸಮಸ್ಯೆಯಲ್ಲಿ ಸಿಲುಕಿದ್ದೀರಿ ಎಂದರ್ಥ ಹೀಗಾಗಿ ಈ ಸಮಸ್ಯೆಗೆ ಪರಿಹಾರ ಪಡೆಯಲು ನಿಮ್ಮ ಮನಸ್ಸು ಹಾತೊರೆಯುತ್ತಿದೆ ಎಂದರ್ಥವಂತೆ. ಹೀಗಾಗಿ ಈ ಸಮಯದಲ್ಲಿ ಸಮಸ್ಯೆಗೆ ಪರಿಹಾರ ಹುಡುಕುವುದು ಸಹ ಸುಲಭವಾಗಬಹುದಂತೆ.
ಇನ್ನು ರಾತ್ರಿ 3 ಗಂಟೆ ಸುಮಾರಿ ಎಚ್ಚರವಾಗಲು ವೈಜ್ಞಾನಿಕ ಹಾಗೂ ವೈದ್ಯಕೀಯ ಕಾರಣಗಳೇನು ಅನ್ನೋದನ್ನು ನೋಡೋದಾದ್ರೆ, ಈ ಸಮಯದಲ್ಲಿ ನಿಮ್ಮ ದೇಹದ ಉಷ್ಣತೆ ದಿನದ ಕನಿಷ್ಟ ಮಟ್ಟದಲ್ಲಿರಲಿದೆ. ಯಕೃತ್ತು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಹಾಗೆ ಕಾರ್ಟಿಸೋಲ್‌ನಂತಹ ಹಾರ್ಮೋನ್, ಒತ್ತಡದ ಹಾರ್ಮೋನ್ ಈ ಸಮಯದಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿರುತ್ತವೆ. ಹೀಗಾಗಿ ಈ ಸಮಯದಲ್ಲಿ ಎಚ್ಚರಗೊಂಡರೆ ಬಹುತೇಕರಿಗೆ ನಿದ್ರೆ ಬರುವುದಿಲ್ಲ ಅವರು ಎದ್ದು ವಾಷ್ ರೂಮ್ ಬಳಸುವುದು, ನಿದ್ರೆ ಇಲ್ಲದೆ ಕಳೆಯುವುದು, ಯೋಚನೆಯಲ್ಲಿ ಮುಳುಗುವುದು ನೋಡಬಹುದು.

ಚೀನಾ ಸಂಪ್ರದಾಯದಲ್ಲಿ 3 ಗಂಟೆಯ ನಂತರ ಎಚ್ಚರವಾಗುವುದು ಶ್ವಾಸಕೋಶ ಚಿಕಿತ್ಸೆಗೆ ಸಂಬಂಧಿಸಿದೆ. ಹಾಗೆ ದೇಹವು ಯಾರೊಂದಿಗೂ ಹೇಳಿಕೊಳ್ಳದ ನೋವು, ದುಖಃವನ್ನು ಹೊರಹಾಕುವ ಸಮಯ ಎಂದು ಉಲ್ಲೇಖಗಳಿವೆ.
ಹಾಗೆ ರಾತ್ರಿ 3 ಗಂಟೆ ಆಸುಪಾಸಿನಲ್ಲಿ ಎಚ್ಚರವಾಗುವುದು ಆಧ್ಯಾತ್ಮಿಕ ಅಥವಾ ವೈದ್ಯಕೀಯ ವಿಚಾರ ಎನ್ನುವ ಮೊದಲು ಬದಲು ಇದನ್ನು ಕಾಕತಾಳಿಯ ಅಂತಲೂ ಕರೆಯಬಹುದು. ಕೆಲವರಿಗೆ ಇದೊಂದು ಅಭ್ಯಾಸವೂ ಆಗಿರಬಹುದು. ಇನ್ನು ಈ ರೀತಿ ಎಚ್ಚರ ಆಗೋದಕ್ಕೆ ಹಲವು ಬಾಹ್ಯ ಕಾರಣಗಳು ಕೂಡ ಇರಬಹುದು.



Click it and Unblock the Notifications











