Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನಿಮ್ಮ ಮನೆ ಹತ್ತಿರವೂ ಈ ಹುಳು ಕಾಣಿಸುತ್ತಾ? ಸಹಸ್ರಪದಿ ಹುಳು ಬಗ್ಗೆ ನಿಮಗೆಷ್ಟು ಗೊತ್ತು?
ಮಳೆಗಾಲ ಆರಂಭವಾಗುತ್ತಿದೆ. ಮಳೆಗಾಳ ಅಂದ್ರೆ ಎಲ್ಲಾ ಜೀವ ಸಂಕುಲಗಳಿಗೆ ಹೊಸತನ ಮೂಡುವುದು, ಹೊಸ ಜೀವಕಳೆ ಬರುವುದು. ಜೊತೆಗೆ ಒಂದಿಷ್ಟು ಜೀವಿಗಳು ಮಳೆಗಾಲದಲ್ಲಿ ಮಾತ್ರವೇ ಜೀವ ಪಡೆಯುವುದು. ಹೀಗಾಗಿ ಮಳೆಗಾಲ ಜೀವ ಸಂಕುಲಗಳ ಪಾಲಿಗೆ ಅಕ್ಷರಶಃ ಸ್ವರ್ಗ.
ಮಳೆಗಾಲದಲ್ಲಿ ಪ್ರತಿಯೊಂದು ಜೀವಿಗೂ ಬದುಕಲು ಅತ್ಯುತ್ತಮ ಸಮಯ. ನೀರಿನಿಂದ ಇಡೀ ಭೂಮಿ ಹಸಿರಾಗುತ್ತದೆ. ಎಲ್ಲೆಲ್ಲೂ ನೀರು, ಹೀಗಾಗಿ ಜೀವಿಗಳು ಬದುಕಲು ಬೇಕಾದ ಅಗತ್ಯತೆಗಳಲ್ಲಿ ನೀರು ಹಾಗೂ ಆಹಾರ ಸುಲಭವಾಗಿ ಸಿಗುವುದರಿಂದ ಎಂತಹ ದುರ್ಬಲ ಪ್ರಾಣಿಯೂ ಬದುಕುಳಿಯುತ್ತವೆ.

ಇನ್ನು ಮಳೆಗಾಲದ ಪ್ರಾಣಿಗಳಲ್ಲಿ ನಾವು ನೀವು ನೋಡುವ ಈ ಚಾಟಿ ಹುಳು, ಚರಟೆ ಹುಳು, ಸಹಸ್ರಪದಿ, ಎಂದು ಕರೆಯುವ ಹುಳು ಸಹ ಒಂದಾಗಿದೆ. ನೀವು ಮಳೆಗಾಲದ ಆರಂಭದ ದಿನಗಳಲ್ಲಿ ಮಾತ್ರ ಈ ಹುಳುಗಳನ್ನು ನೋಡಬಹುದು. ನೋಡಲು ಕೆಲವೊಮ್ಮೆ ಭಯ ಎನಿಸಿದರು ಅತ್ಯಂತ ಸಾಧು ಸ್ವಭಾವದ ಹುಳುಗಳಾಗಿವೆ, ಮಕ್ಕಳಿವೆ ಇವು ಚಕ್ಕುಲಿ ಹುಳುಗಳಾಗಿ ಇಂದಿಗೂ ನಿಗೂಢತೆ ತುಂಬಿಕೊಂಡಿವೆ.
ಏಕೆಂದರೆ ಇವುಗಳಿಗೆ ಸಾವಿರಾರು ಕಾಲುಗಳಿರುತ್ತವೆ, ಜೊತೆಗೆ ಇದಕ್ಕೆ ಅಪಾಯ ಎದುರಾದಾಗ ತಕ್ಷಣವೇ ಚಕ್ಕುಲಿಯ ಆಕಾರ ಪಡೆದು ತಟಸ್ಥವಾಗುತ್ತವೆ. ಹೀಗಾಗಿ ಇವುಗಳು ಮಕ್ಕಳಿಗೆ ಅಚ್ಚರಿ ಮೂಡಿಸುತ್ತವೆ. ಹಾಗಾದ್ರೆ ಈ ಹುಳುಗಳ ವಿಶೇಷ ಗುಣಗಳೇನು? ಅವುಗಳ ಕುರಿತು ಮತ್ತಷ್ಟು ಅಚ್ಚರಿ ಮಾಹಿತಿ ನಾವಿಂದು ತಿಳಿಯೋಣ.
ಮಳೆಗಾಲದ ಆರಂಭದಲ್ಲಿ ಇವು ನಿಮ್ಮ ಮನೆಯ ಸುತ್ತ ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಮನೆಯ ಒಳಗೂ ಇವು ಬರುವುದುಂಟು. ಆದರೆ ಇವುಗಳಿಂದ ಯಾವ ಹಾನಿಯೂ ಆಗಿರುವ ಉದಾಹರಣೆಗಳಿಲ್ಲ. ಈ ಸಹಸ್ರಪದಿಗಳ ವೈಜ್ಞಾನಿಕ ಹೆಸರು ಮಿಲಿಪೀಡ್ ಎಂದು ಕರೆಯಲಾಗಿದೆ. ಇವುಗಳು ಮನುಷ್ಯರಿಗೆ ಕಚ್ಚುವುದಿಲ್ಲ, ಇವು ಕೊಳೆಯುತ್ತಿರುವ ಸಸ್ಯಗಳು, ಕೀಟಗಳು, ಸಣ್ಣ ಹುಳುಗಳನ್ನು ತಿಂದು ಜೀವಿಸುತ್ತವೆ. ಆದರೆ ಇದರಲ್ಲಿ ಕೆಲವೊಂದು ಜಾತಿಯ ಮಿಲಿಪೀಡ್‌ಗಳು ವಿಷಕಾರಿಯಂತೆ.
ವಿಶ್ವದಾದ್ಯಂತ ಲಕ್ಷಕ್ಕೂ ಹೆಚ್ಚು ಹುಳುಗಳು ಜೀವಿಸಿವೆ ಎಂದು ಅಂದಾಜಿಸಲಾಗಿದೆ. ಅವುಗಳ ದೇಹವನ್ನು ರಕ್ಷಿಸುವ ಗಟ್ಟಿಯಾದ ಎಕ್ಸೋಸ್ಕೆಲಿಟನ್ ಇದ್ದರೂ ಅವುಗಳನ್ನು ಕೀಟಗಳೆಂದು ಪರಿಗಣಿಸಲಾಗುವುದಿಲ್ಲ.
ಕೆಲವು ಜಾತಿಯ ಮಿಲಿಪೀಡ್ ವಿಷಕಾರಿಯಾಗಿದ್ದರೂ, ಅವು ನೈಸರ್ಗಿಕ ಪರಭಕ್ಷಕಗಳ ವಿರುದ್ಧ ರಕ್ಷಣೆ ನೀಡುವುದಿಲ್ಲವಂತೆ. ಅಥವಾ ಈ ಚಾಟಿ ಹುಳುಗಳನ್ನು ತಿನ್ನಲು ಬರುವ ಪರಭಕ್ಷಕಗಳಿಂದ ಅವು ರಕ್ಷಣೆ ಪಡೆಯಲು ಸಾಧ್ಯವಿಲ್ಲವಂತೆ. ಇವು ಉಗುರು, ಹಲ್ಲು, ರಕ್ಷಾ ಕವಚ ಏನನ್ನೂ ಹೊಂದಿಲ್ಲದೆ ಬದುಕುತ್ತವೆ. ಆದರೆ ಇವುಗಳ ಮಲದಿಂದ ಒಂದು ರಾಸಾಯನಿಕ ಬಿಡುಗಡೆ ಮಾಡುತ್ತವೆ ಎಂದು ಹೇಳಲಾಗುತ್ತದೆ. ಇದು ಮೈಗೆ ತಾಕಿದರೆ ಅಲರ್ಜಿ ಉಂಟಾಗುವ ಸಂಭವವಿದೆಯಂತೆ.
ಇವು ನೋಡಲು ಶತಪದಿಗಳೆಂದು ಕರೆಯುವ ಚೇಳುಗಳ ಜಾತಿಗೆ ಸೇರಿದ್ದರೂ ಅವು ಕಚ್ಚಿದರೆ ವಿಷಕಾರಿಯಂತೆ. ಆದರೆ ಈ ಸಹಸ್ರಪದಿಗಳು ವಿಷಕಾರಿಯಲ್ಲ. ಈ ಸಹಸ್ರಪದಿ ಸಂಧಿಪದಿಗಳಾಗಿದ್ದು ಡಿಪ್ಲೋಪೊಡ ವರ್ಗಕ್ಕೆ ಸೇರಿದೆ. ಇವು ಭೂಮಿ ಒಳಗೆ ಸಣ್ಣದಾಗಿ ಗೂಡುಗಳಲ್ಲಿ ವಾಸಿಸುತ್ತವೆ. ಅಲ್ಲಿಂದ ಹೊರಬಂದ ಬಳಿಕ ಆಹಾರ ಹುಡುಕುವುದು ಮಾತ್ರ ಇವುಗಳ ಕೆಲಸ ಆದರೆ ಮತ್ತೆಂದು ಅದೇ ಗೂಡಿಗೆ ಅವು ತೆರಳುವುದಿಲ್ಲ. ಬದಲಾಗಿ ಹೊಸದೊಂದು ಗೂಡು ಹುಡುಕುತ್ತವೆ.
ಈ ಸಹಸ್ರಪದಿಗಳು ಹೆಸರೇ ಹೇಳುವಂತೆ ಸರಾಸರಿ 100ಕ್ಕಿಂತ ಹೆಚ್ಚು ಕಾಲು ಹೊಂದಿರುತ್ತವೆ. ಗರಿಷ್ಠ 750 ಕಾಲುಗಳನ್ನು ಇವು ಹೊಂದಿರಬಹುದು. ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳು ಮಿಲಿಪೀಡ್ ಭೂಮಿಯಲ್ಲಿ ನಡೆದ ಮೊದಲ ಪ್ರಾಣಿ ಎಂದು ಸೂಚಿಸುತ್ತವೆ, ಈ ಪ್ರಭೇದವು 400 ಮಿಲಿಯನ್ ವರ್ಷಗಳಷ್ಟು ಹಿಂದಿನದು. ಮಿಲಿಪೀಡ್ಸ್‌ನ ಹಿಂದಿನ ವಂಶಜರು ಸುಮಾರು 7 ಅಡಿ ಉದ್ದವಾಗಿದ್ದವು ಎಂದು ಅಂದಾಜಿಸಲಾಗಿದೆ.



Click it and Unblock the Notifications

