Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಹಳೆಯ ಫೋಟೋದಲ್ಲಿ ಯಾರು ನಗುತ್ತಿರಲಿಲ್ಲ ಯಾಕೆ.? ಇದರ ಹಿಂದಿರುವ ರಹಸ್ಯವೇನು.?
ನಾವೀಗ ಸ್ಮಾರ್ಟ್ ಯುಗದಲ್ಲಿದ್ದೇವೆ. ಇಲ್ಲಿ ಪ್ರತಿಯೊಂದಕ್ಕೂ ಒಂದೊಂದು ಗ್ಯಾಜೆಟ್, ಅದರಲ್ಲೂ ಮೊಬೈಲ್ ಈಗ ನಮ್ಮನ್ನು ಆವರಿಸಿಕೊಂಡುಬಿಟ್ಟಿದೆ. ನಾವು ಸೆಲ್ಫಿ ಫೋಟೋ ತೆಗೆದುಕೊಳ್ಳದೆ ಕಳೆದ ದಿನಗಳೇ ಇಲ್ಲವೇನೋ ಎನ್ನುವಷ್ಟು ಇವು ನಮ್ಮ ನಡುವೆ ನೆಲೆ ನಿಂತಿದೆ. ಪ್ರತಿ ಫೋಟೋಗಳೂ ಒಂದೊಂದು ರೀತಿ ಇರುತ್ತವೆ.
ಆದ್ರೆ ನೀವೆಂದಾದರು ಯೋಚಿಸಿದ್ದೀರಾ? ಹಳೆಯ ಕಾಲದ ಫೋಟೋಗಳಲ್ಲಿರುವ ಮಂದಿ ಆ ಫೋಟೋಗಳಲ್ಲಿ ನಗುವುದನ್ನು ನಾವು ಕಾಣುವುದೇ ಇಲ್ಲ. ಹೌದು ನಿಮಗೂ ಅಚ್ಚರಿ ಎನಿಸಬಹುದು. ಹಳೆಯ ಕಾಲದ ಫೋಟೋಗಳಲ್ಲಿ ಜನರು ನಗುವುದನ್ನು ನಾವು ಅಪರೂಪಕ್ಕೆ ಕಾಣುತ್ತೇವೆ. ಅವರು ಫೋಟೋಗಳಲ್ಲಿ ಗಂಭೀತ ಮುಖ ಭಾವನೆ ತೋರಿಸಿರುವುದೇ ಹೆಚ್ಚು.

ಹಾಗಾದರೆ ಈ ಅಚ್ಚರಿಯ ವಿವಾರದ ಹಿಂದಿರುವ ಕಾರಣವೇನು.? ಅವರು ಫೋಟೋಗಳಲ್ಲಿ ಏಕೆ ನಗುವುದಿಲ್ಲ. ಇದಕ್ಕೆ ಉತ್ತರ ಹುಡುಕುವ ಪ್ರಯತ್ನ ಈ ಲೇಖನ ಮಾಡಲಿದೆ.
ಕ್ಯಾಮರಾ ಆವಿಷ್ಕಾರದ ಆರಂಭದ ದಿನಗಳಲ್ಲಿ ಛಾಯಾಗ್ರಹಣ ಇಂದಿನಷ್ಟು ಸುಲಭವಾಗಿರಲಿಲ್ಲ. ಮುಂಚಿನ ಛಾಯಾಚಿತ್ರಗಳು, ಡಾಗ್ಯುರೋಟೈಪ್ಸ್ ಎಂದು ಕರೆಯಲ್ಪಡುತ್ತವೆ, ಪ್ರತಿ ಛಾಯಾಚಿತ್ರಕ್ಕೆ ಹಲವಾರು ನಿಮಿಷಗಳನ್ನು ತೆಗೆದುಕೊಳ್ಳುತ್ತಿತ್ತು. ಅಂದರೆ ನೀವು ಒಮ್ಮೆ ಪೋಸ್ ಕೊಟ್ಟರೆ ಅದೇ ಪೋಸ್‌ನಲ್ಲಿ ನಿಮಿಷಗಳ ಕಾಲ ಹಾಗೆ ಅಲ್ಲಾಡದೆ ನಿಲ್ಲಬೇಕಿತ್ತು.
ಏಕೆಂದರೆ ಈ ಫೋಟೋ ದಾಖಲಾಗಲು ನಿಮಿಷಗಳು ಬೇಕಾಗುತ್ತಿತ್ತು. ನೀವೇನಾದರು ಅಲ್ಲಾಡಿದರೆ ಈ ಫೋಟೋ ಬ್ಲಾರ್ ಆಗಿ ಬರುತ್ತಿತ್ತು. ಫೋಟೋದಲ್ಲಿರುವ ಜನರು ಮಸುಕಾಗದಂತೆ ತಪ್ಪಿಸುವ ಸಲುವಾಗಿ ಅವರು ಮೌನವಾಗಿ ಇಲ್ಲವೆ ನಿಶ್ಚಲವಾಗಿ ನಿಲ್ಲುವಂತೆ ಹೇಳಲಾಗುತ್ತಿತ್ತು. ಇದರಿಂದ ಫೋಟೋದಲ್ಲಿ ಅವರು ನಗುತ್ತಿರಲಿಲ್ಲ. ಏಕೆಂದರೆ ಒಮ್ಮೆ ನಗು ಮುಖ ತೋರಿಸಲು ನಿರ್ಧರಿಸಿದರೆ ನಿಮಿಷಕ್ಕೂ ಹೆಚ್ಚು ಕಾಲ ಅದೇ ರೀತಿ ನಗುತ್ತಲೇ ಇರಬೇಕಿತ್ತು.
ಚಿತ್ರಕಲೆ ಪ್ರಭಾವ
ಇನ್ನು ಕ್ಯಾಮರಾ ಕಂಡು ಹಿಡಿಯುವ ಮೊದಲು ಕಲಾವಿದರು ಚಿತ್ರಕಲೆಯ ಮೂಲಕ ವ್ಯಕ್ತಿಯನ್ನು ಬಿಡಿಸುತ್ತಿದ್ದರು. ಅವರನ್ನು ನೋಡಿಕೊಂಡು ಬಿಡಿಸಬೇಕಿದ್ದ ಕಾರಣ ಹತ್ತಾರು ನಿಮಿಷಗಳು, ಗಂಟೆಗಳು ತಗುಲುತ್ತಿದ್ದವು. ಈ ವೇಳೆ ವ್ಯಕ್ತಿ ಒಂದೇ ರೀತಿ ನಿಶ್ಚಲವಾಗಿ ಕುಳಿತಿರುತ್ತಿದ್ದ. ಹೀಗಾಗಿ ಹಿಂದಿನ ಕಾಲದ ರಾಜರು ಇರಬಹುದು ಇಲ್ಲವೆ ಯಾರಾದ್ದಾದರು ಚಿತ್ರಕಲೆ ಇದ್ದರೆ ಅವರು ಅದರಲ್ಲಿ ನಗುವುದಿಲ್ಲ.
ಈ ಚಿತ್ರಕಲೆಗಳ ನೋಡುತ್ತಾ ಬಂದಿದ್ದ ಜನ ಫೋಟೋದಲ್ಲೂ ಅದೇ ರೀತಿ ಗಂಭೀರವಾಗಿ ನಿಲ್ಲಲು ಮುಂದಾದರು. ಅವರಿಗೆ ಫೋಟೋಗಳಿಗೆ ನಗಬೇಕು ಎಂಬ ಕಲ್ಪನೆಯೂ ಇಲ್ಲದಾಗಿತ್ತು. ಚಿತ್ರಕಲೆಯಲ್ಲಿ ನೋಡಿದಂತೆ ಗಂಭೀರ ಭಾವನೆ ಅವರನ್ನು ಆವರಿಸಿತ್ತು.
ನಗುವುದು ಅಸಂಬದ್ಧ ಎಂದು ತಿಳಿದ ಪೂರ್ವಜರು
ಇನ್ನು ಫೋಟೋ ತೆಗೆಯುವಾಗ ನಗುವುದೇ ಒಂದು ಅಸಂಬದ್ಧ ಎಂದು ನಂಬಲಾಗಿತ್ತು. ಯಾವ ಕಾರಣವೂ ಇಲ್ಲದೆ ನಗುವುದು ವಿಚಿತ್ರ ಕಲ್ಪನೆಯಾಗಿ ಅವರಲ್ಲಿ ಉಳಿದುಬಿಟ್ಟಿತ್ತು. ನಗುವುದು ಒಂದು ಸಾಮಾಜಿಕ ಪ್ರಕ್ರಿಯೆಯಲ್ಲಿ ಉಳಿದುಬಿಟ್ಟಿತ್ತು. ಓರ್ವ ಸಾಮಾಜಿಕವಾಗಿ ನಗಬೇಕು ಅಂದರೆ ಅಲ್ಲಿ ಯಾವುದಾದರು ಕ್ರಿಯೆ ನಡೆದಿರಬೇಕು, ಸುಮ್ಮನೆ ನಗಬಾರದು, ಇದೊಂದು ಅಸಂಬದ್ಧ ಹಾಗೂ ಅಪ್ರಭುತ್ವತೆ ಸಾರುತ್ತದೆ ಎಂದು ನಂಬಲಾಗಿತ್ತು. ಹೀಗಾಗಿ ಫೋಟೋ ತೆಗೆಯುವಾಗ ಆತನ ಮುಂದೆ ನಡೆಯದ ಯಾವ ಕ್ರಿಯೆಯನ್ನೂ ಊಹಿಸಿಕೊಂಡು ನಗಲು ಮುಂದಾಗುತ್ತಿರಲಿಲ್ಲ. ಮುಂದೆ ಇದು ಹೀಗೆಯೆ ನಡೆದುಕೊಂಡು ಬಂದಿತು ಎಂಬ ಉಲ್ಲೇಖಗಳಿವೆ.
ತಾಂತ್ರಿಕ ತೊಂದರೆಗಳು
ಆರಂಭಿಕ ಛಾಯಾಗ್ರಹಣದ ತಾಂತ್ರಿಕ ನಿರ್ಬಂಧಗಳು ಸಹ ಇದಕ್ಕೆ ಕಾರಣವಾಗಿವೆ. ಮೊದಲೇ ಹೇಳಿದಂತೆ ನಿಮಿಷಗಳ ಕಾಲ ಒಂದು ಫೋಟೋ ತೆಗೆಯಲು ಕಾಯಬೇಕಿದ್ದ ಕಾರಣ ಯಾರು ನಗು ಮುಖದಿಂದ ಕ್ಯಾಮರಾ ಮುಂದೆ ಬರುತ್ತಿರಲಿಲ್ಲ. ಇದೊಂದು ದೀರ್ಘಕಾಲದ ಪ್ರಕ್ರಿಯೆ ಆಗಿದ್ದರಿಂದ ಕ್ಯಾಮರಾ ಮುಂದೆ ಯಾರು ಸಹ ನಗುತ್ತಿರಲಿಲ್ಲ.



Click it and Unblock the Notifications
