Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಮೊಬೈಲ್ ಚಾರ್ಜರ್ ಸ್ವಿಚ್ ಆಫ್ ಮಾಡದೆ ಹಾಗೆ ಬಿಡುತ್ತೀರಾ? ಇನ್ನೆಂದು ಈ ತಪ್ಪು ಮಾಡ್ಬೇಡಿ!!
ನಿಮ್ಮಲ್ಲಿ ಬಹುತೇಕರು ರಾತ್ರಿ ಸಮಯದಲ್ಲಿ ಮೊಬೈಲ್ ಚಾರ್ಜ್ ಇಟ್ಟು ಮಲಗುವ ಅಭ್ಯಾಸ ಇಟ್ಟುಕೊಂಡಿರುತ್ತೀರಿ. ಬೆಳಗ್ಗೆ ಎದ್ದ ತಕ್ಷಣ ನಿಮಗೆ ಮೊಬೈಲ್ ಬ್ಯಾಟರಿ ಫುಲ್ ಆಗಿರಬೇಕು ಎಂಬ ಬಯಕೆ ಇರಲಿದೆ. ಹಾಗೆ ಮೊಬೈಲ್ ಚಾರ್ಜ್ ಹಾಕಿದ ಬಳಿಕ ನೀವು ಜಾರ್ಜರ್ ಅನ್ನು ಅಲ್ಲಿಯೇ ಬಿಟ್ಟು ಸ್ವಿಚ್ ಕೂಡ ಆಫ್ ಮಾಡದೆ ಇರುವುದು ನೋಡಬಹುದು.
ಸ್ವಿಚ್ ಆಫ್ ಮಾಡಿಲ್ಲ ಎಂದಾದರೆ ಯಾವುದೇ ಸಮಸ್ಯೆಗಳು ಕಾಡುವುದಿಲ್ಲ ಎಂದು ನೀವು ಭಾವಿಸಿರುತ್ತೀರಿ. ಆದ್ರೆ ಇದರಿಂದ ಎಷ್ಟೆಲ್ಲಾ ಹಾನಿ ಇದೆ ಎಂಬುದು ಇಲ್ಲೊಂದು ವಿಡಿಯೋದಲ್ಲಿ ಸೆರೆಯಾಗಿದೆ. ಮೊಬೈಲ್ ಚಾರ್ಜರ್ ಹಾಕಿದ್ದ ಸ್ವಿಚ್ ಆಫ್ ಮಾಡ್ರ ರಾತ್ರಿಯಲ್ಲ ಹಾಗೆ ಬಿಟ್ಟಾಗ ಅಲ್ಲಿ ಬೆಂಕಿ ಹೊತ್ತಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸುವ ಹಲವು ಪ್ರಕರಣಗಳ ನೀವು ಕೇಳಿರಬಹುದು. ಈ ಪ್ರಕರಣಗಳಲ್ಲಿ ನಿಮಗೆ ಹಲವು ಮೊಬೈಲ್ ಬ್ಲಾಸ್ಟ್ ಆಗುವುದು, ಚಾರ್ಜ್‌ರ್‌ನಿಂದ ಬೆಂಕಿ ಹೊತ್ತಿಕೊಳ್ಳುವುದು ಸಹ ನೋಡಿರಬಹುದು. ನೀವು ಸಹ ಮನೆಯಲ್ಲಿ ಮೊಬೈಲ್ ಚಾರ್ಜ್‌ಗೆ ಹಾಕಿ ಬಳಿಕ ಮೊಬೈಲ್ ತೆಗೆದುಕೊಂಡು ಚಾರ್ಜರ್ ಅನ್ನು ಸ್ವಿಚ್ ಆನ್ ಮಾಡಿ ಹಾಗೆ ಬಿಡುವ ಅಭ್ಯಾಸ ಇಟ್ಟುಕೊಂಡಿರಬಹುದು.
ಆದ್ರೆ ಈ ರೀತಿ ಮಾಡಿದ್ರೆ ಚಾರ್ಜರ್ ಹೀಟ್ ಆಗಿ ಬೆಂಕಿ ಹೊತ್ತಿಕೊಳ್ಳುವ ಅಪಾಯ ಹೆಚ್ಚಾಗಿರಲಿದೆ. ಇಲ್ಲೊಂದು ವಿಡಿಯೋದಲ್ಲು ಕೂಡ ಚಾರ್ಜರ್‌ಗೆ ಕಿಡಿ ಹೊತ್ತಿಕೊಳ್ಳುತ್ತಿರುವುದು ನೋಡಬಹುದು. ಮಲಗಿರುವ ಮಗುವಿನ ಮಕ್ಕದಲ್ಲಿಯೇ ಇಂದು ಸಾಕೆಟ್ ಇದ್ದು ಅದರಲ್ಲಿ ಮೊಬೈಲ್ ಚಾರ್ಜರ್ ಅನ್ನು ಇಡಲಾಗಿದೆ. ಇದರ ಸ್ವಿಚ್ ಆಫ್ ಮಾಡದ ಕಾರಣ ಅದರಲ್ಲಿ ಬೆಂಕಿ ಕಾಣಿಸುತ್ತಿದೆ.
ಒಂದು ವೇಳೆ ಚಾರ್ಜರ್ ಈ ಶಾರ್ಟ್ ಸರ್ಕ್ಯೂಟ್ ತಡೆಯಲು ವಿಫಲವಾದರೆ ಬೆಂಕಿ ಹೊತ್ತಿ ಉರಿಯುವ ಅಪಾಯ ಇರಲಿದೆ. ಅದ್ರಲ್ಲೂ ರಾತ್ರಿ ವೇಳೆ ಎಲ್ಲರು ಮಲಗಿದ್ದ ಸಮಯದಲ್ಲಿ ಅದರ ಕಡೆಗೆ ಯಾರು ಗಮನ ಇಡುವುದಿಲ್ಲ. ಈ ವೇಳೆ ಬೆಂಕಿ ಹೊತ್ತಿಕೊಂಡರೆ ಅದನ್ನು ಗಮನಿಸುವಷ್ಟರಲ್ಲಿ ಮತ್ತಷ್ಟು ವಸ್ತುಗಳಿಗೆ ಬೆಂಕಿ ತಗುಲಬಹುದು.
ಇದರಿಂದ ಇಡೀ ಮನೆ ಬೆಂಕಿಗಾಹುತಿಯಾಗುವ ಅಪಾಯವನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ರಾತ್ರಿ ಮಲಗುವ ಸಮಯದಲ್ಲಿ ಹಾಗೆ ಉಳಿದ ಸಮಯದಲ್ಲಿ ಮೊಬೈಲ್ ಚಾರ್ಜರ್‌ಗಳು, ಬಳಸದೆ ಇರುವ ಎಲೆಕ್ಟ್ರಾನಿಕ್ ವಸ್ತುಗಳ ಸ್ವಿಚ್ ಅನ್ನು ಬಂದ್ ಮಾಡಿ ಇಡುವುದು ಸುರಕ್ಷತೆಯ ದೃಷ್ಟಿಯಿಂದ ಬಹಳ ಉತ್ತಮವಾಗಿದೆ.
ಈ ವಿಡಿಯೋ ಕ್ಲಿಪ್‌ನಲ್ಲಿ ಹಾಸಿಗೆಯ ಮೇಲೆ ಮಗು ಮಲಗಿರುವುದು ನೋಡಬಹುದು. ಹಾಸಿಗೆಯ ಪಕ್ಕದಲ್ಲೇ ಇರುವ ಸ್ವಿಚ್ ಬೋರ್ಡ್‌ನಲ್ಲಿ ಇರುವ ಬಿಳಿ ಬಣ್ಣದ ಚಾರ್ಜರ್‌ಗೆ ಬೆಂಕಿ ತಗುಲುತ್ತಿದೆ. ವಿದ್ಯುತ್‌ನ ವೋಲ್ಟೇಜ್ ಬದಲಾವಣೆಯಿಂದ ಹಾಗೆ ಚಾರ್ಜರ್ ಹೀಟ್ ಆಗುವ ಕಾರಣವೂ ಸೇರಿ ಹಲವು ಕಾರಣಕ್ಕೆ ಈ ರೀತಿ ಸಂಭವಿಸಬಹುದು. ಇದು ಬೆಂಕಿ ತಗುಲಿದರೆ ತಡೆಯುವುದು ಬಹಳ ಕಷ್ಟವಾಗುತ್ತದೆ. ಹಾಗೆ ಅಲ್ಲೊಂದು ಕಡೆ ಮಾತ್ರವಲ್ಲ ಮನೆಯ ಹಲವು ಕಡೆಯಲ್ಲಿ ಈ ಬೆಂಕಿ ಆವರಿಸಬಹುದು. ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯ ಎಲ್ಲಾ ಭಾಗದಲ್ಲು ದಿಢೀರ್ ಬೆಂಕಿ ಹೊತ್ತಿಕೊಳ್ಳುವ ಅಪಾಯವೂ ಇರಲಿದೆ.
ಹೀಗಾಗಿ ಈ ವಿಡಿಯೋ ನೋಡಿದ ಮಂಡಿ ಅಕ್ಷರಶಃ ಶಾಕ್ ಆಗಿದ್ದಾರೆ. ಈ ತಪ್ಪನ್ನು ಎಂದಿಗೂ ಮಾಡಬೇಡಿ ಎಂಬ ಸಲಹೆ ನೀಡಿದ್ದಾರೆ. ಹಲವರು ಇಂತಹ ಅಭ್ಯಾಸವನ್ನು ಇಂದಿನಿಂದಲೇ ನಿಲ್ಲಿಸುವುದಾಗಿ ಹೇಳುತ್ತಿದ್ದಾರೆ, ಹಾಗೆ ಸುಮ್ಮನೆ ಸ್ವಿಚ್ ಆನ್ ಮಾಡಿಟ್ಟರೆ ಯಾವ ಅಪಾಯ ಆಗುವುದಿಲ್ಲ ಎಂಬುದು ಸುಳ್ಳು ಇದರಲ್ಲಿ ದೊಡ್ಡ ಹಾನಿ ಸಂಭವಿಸಲಿದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.



Click it and Unblock the Notifications