Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಹೋಟೆಲ್‌ನಲ್ಲಿ 13ನೇ ನಂಬರ್ ಕೊಠಡಿ ಇರುವುದೇ ಇಲ್ಲ ಏಕೆ ಗೊತ್ತಾ? ಇದರ ರಹಸ್ಯವೇನು?
ನಮ್ಮ ನಡುವೆ ನೂರಾರು ವಿಚಿತ್ರ, ನಿಗೂಢ ಎನಿಸುವ ಅದೆಷ್ಟೋ ವಿಚಾರಗಳು ನಡೆಯುತ್ತಿದ್ದರೂ ಕೂಡ ನಾವು ಅದರ ಬಗ್ಗೆ ತಿಳಿದುಕೊಂಡಿರುವುದಿಲ್ಲ. ಕೆಲವೊಮ್ಮೆ ಈ ಘಟನೆಗಳು, ವಿಚಾರಗಳು ನಮಗೆ ತಿಳಿದಾಗ ಮಾತ್ರ ಅಚ್ಚರಿ ಪಡುತ್ತೇವೆ. ಇನ್ನು ನಾವು ಪ್ರವಾಸ ಹೋದಾಗ ಇಲ್ಲವೆ ಬೇರೆ ಊರುಗಳಿಗೆ ಹೋದಾಗ ನಾವು ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತೇವೆ. ಆದ್ರೆ ಈಗ್ಯಾಕೆ ಈ ಹೋಟೆಲ್ ಬಗ್ಗೆ ಮಾತನಾಡುತ್ತಿದ್ದೇವೆ ಗೊತ್ತಾ?
ನೀವು ಎಂದಾದ್ರು ಆಲೋಚಿಸಿದ್ದೀರಾ? ನೀವು ಉಳಿದುಕೊಂಡಿರುವ ಹೋಟೆಲ್‌ನಲ್ಲಿ 13ನೇ ನಂಬರ್ ರೂಮ್ ಇರುವುದೇ ಇಲ್ಲ. ಹೌದು ಯಾವುದೇ ಐಷಾರಾಮಿ ಹೋಟೆಲ್‌ನಿಂದ ಹಿಡಿದು ಸಣ್ಣ ಪುಟ್ಟ ಹೋಟೆಲ್‌ನಲ್ಲೂ ಗಮನಿಸಿದರೆ ಅಲ್ಲಿ ರೂಮ್ ನಂಬರ್ 13 ಇರುವುದೇ ಇಲ್ಲ. ಕೆಲವೇ ಕೆಲವು ಹೋಟೆಲ್‌ನಲ್ಲಿ 13ನೇ ನಂಬರ್ ರೂಮ್ ಇರುವುದು ನೋಡಬಹುದು.

ಹಾಗಾದ್ರೆ ಯಾವುದೇ ಹೋಟೆಲ್‌ನಲ್ಲಿ 13ನೇ ನಂಬರ್ ರೂಮ್ ಏಕಿರುವುದಿಲ್ಲ. ಇದಕ್ಕೆ ಕಾರಣ ಏನಿರಬಹುದು? ಇದರ ಹಿಂದಿರುವ ಕಥೆ ಏನು? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.
13 ನೇ ಸಂಖ್ಯೆಯನ್ನು ಸಾಮಾನ್ಯವಾಗಿ ದುರದೃಷ್ಟಕ್ಕೆ ಸರಿಸಮನಾದ ಸಂಖ್ಯೆ ಎಂದು ವಾಸ್ತು ಶಾಸ್ತ್ರ ಸೇರಿದಂತೆ ಕೆಲವು ಗ್ರಂಥಗಳ ಉಲ್ಲೇಖದಲ್ಲಿದೆ. ಇದು ಪ್ರಪಂಚದಾದ್ಯಂತ ಪಾಲನೆಯಲ್ಲಿದೆ. ಎಲ್ಲಾ ಹೋಟೆಲ್‌ಗಳು ಹೆಚ್ಚಾಗಿ ವಾಸ್ತು ಹಾಗೂ ಸಂಪ್ರದಾಯಗಳ ಆಚರಿಸುವ ಮಂದಿ ಆಗಿದ್ದು, ಇವರು ಸಹ ಈ 13ರ ಹಿಂದಿರುವ ಕಥೆಗಳ ನಂಬುತ್ತಾರೆ.
ಇದಿಷ್ಟೇ ಅಲ್ಲ ಕೆಲವು ಹೋಟೆಲ್‌ಗಳು 13ನೇ ಕೊಠಡಿ ಮಾತ್ರವಲ್ಲ 13ನೇ ಮಹಡಿವರೆಗೂ ಕಟ್ಟುವುದಿಲ್ಲ. ಐಷಾರಾಮಿ ಹೋಟೆಲ್‌ನ 13ನೇ ಮಹಡಿ ಖಾಲಿ ಬಿಡಲಾಗುತ್ತದೆ. ಇಲ್ಲವೆ 13ನೇ ಮಹಡಿಯೇ ಕೊನೆಯಾಗಿರುತ್ತದೆ. ಈ 13ನೇ ಸಂಖ್ಯೆಗೆ ಭಯಪಡುವ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ ಟ್ರಿಸ್ಕೈಡೆಕಾಫೋಬಿಯಾ ಎಂದು ಕರೆಯಲಾಗುತ್ತದೆ.
ಈ ಸಂಪ್ರದಾಯ ಪ್ರಾಚೀನ ಬ್ಯಾಬಿಲೋನಿಯನ್ ಆಚರಣೆಯಿಂದ ನಡೆದುಕೊಂಡು ಬಂದಿದೆ ಎಂದು ನಂಬಲಾಗಿದೆ. ಬ್ಯಾಬಿಲೋನಿಯನ್ ಸಂಸ್ಕೃತಿಯಲ್ಲಿ 13 ಎಂಬ ಸಂಖ್ಯೆ ಬಹಳ ಕೆಟ್ಟದಂತೆ, ಇದು ಸಾವು ಹಾಗೂ ಪುನರ್ಜನ್ಮಕ್ಕೆ ಸಂಬಂಧಿಸಿದ ಸಂಖ್ಯೆಯಂತೆ ಹೀಗಾಗಿ ಬ್ಯಾಬಿಲೋನಿಯನ್ನರು ಈ ಸಂಖ್ಯೆಯನ್ನು ಬಳಸುತ್ತಲೇ ಇರುತ್ತಿರಲಿಲ್ಲವಂತೆ.
ಅದ್ರಲ್ಲೂ ಈ ಬ್ಯಾಬಿಲೋನಿಯನ್ನರು ಅತ್ಯಂತ ಬುದ್ಧಿವಂತರಾಗಿದ್ದರು, ಅವರದ್ದೆ ಆದ ಸಂಖ್ಯಾ ಶಾಸ್ತ್ರ, ಕ್ಯಾಲೆಂಡರ್ ಸೇರಿ ಹಲವು ವಿಧಾನಗಳ ಪರಿಚಯಿಸಿದ್ದರು, ಪಾಲಿಸಿದ್ದರು. ಹೀಗಾಗಿ ಅವರ ಸಂಸ್ಕೃತಿಯಲ್ಲಿ 13 ನಂಬರ್ ಬಳಕೆ ಇರಲಿಲ್ಲವಂತೆ. ನಾರ್ಸ್ ಪುರಾಣ ಗ್ರಂಥಗಳ ಪ್ರಕಾರ 13ನೇ ಸಂಖ್ಯೆ ಲೋಕಿ ದೇವರ ರೂಪವಂತೆ. ಇದಕ್ಕೊಂದು ಕಥೆಯೂ ಇದೆ. ದೇವರೆಲ್ಲ ಸೇರಿ ಔತಣಕೂಟ ಏರ್ಪಡಿಸಿದಾಗ 13ನೇ ಅತಿಥಿಯಾಗಿ ಬಂದ ಲೋಕಿ ಎಂಬ ದೇವರು ಈ ಔತಣಕೂಟವನ್ನೇ ಹಾಳು ಗೆಡುವಿದನಂತೆ, ಹೀಗಾಗಿ ಬ್ಯಾಬಿಲೋನಿಯನ್ನರು 13ನೇ ಸಂಖ್ಯೆಯನ್ನು ದರಿದ್ರ ಎಂದು ಕರೆದರು.
ಇದರ ಜೊತೆ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಯೇಸುವಿಗೆ ಮೋಸ ಮಾಡಿದ್ದ ಅತಿಥಿಯ ಸಂಖ್ಯೆಯೂ ಸಹ 13ರಂತೆ. ಶಿಲುಬೆಗೆ ಏರಿದ 12 ಯೇಸು ಶಿಷ್ಯರು ಮೊದಲು ಭೋಜನ ಕೂಟದಲ್ಲಿ ಸೇರಿದ್ದರಂತೆ. ಯೇಸುವಿಗೆ ದ್ರೋಹ ಮಾಡಿದ ಜುದಾಸ್ ಇಸ್ಕರಿಯೊಟ್ 13ನೇ ಅತಿಥಿಯಾಗಿದ್ದ ಹೀಗಾಗಿ ರೂಮ್ ನಂಬರ್ 13 ದ್ರೋಹ ಹಾಗೂ ದುರದೃಷ್ಟಕರ ಸಂಖ್ಯೆ ಎಂದು ನಂಬಲಾಗಿತ್ತು.
ಸಾಲಕ್ಕೆ ಸಿಲುಕಿದ ಫ್ರಾನ್ಸ್ ಕಿಂಗ್
ಇನ್ನೊಂದು ಕಥೆಯಲ್ಲಿ ನೈಟ್ಸ್ ಟೆಂಪ್ಲರ್ ಎಂಬ ಕ್ಯಾಥೋಲಿಕ್ ಗುಂಪೊಂದು 1119 ಆಧುನಿಕ ಬ್ಯಾಂಕಿಂಗ್ ಕಂಡುಹಿಡಿದರಂತೆ. ಇವರಿಂದ ನೂರಾರು ಮಂದಿ ಸಾಲ ಪಡೆಯಲು ಮುಂದಾದರಂತೆ. ಇವರಿಂದ ಫ್ರಾನ್ಸ್‌ನ ಕಿಂಗ್ ಫಿಲಿಪ್ IV ಸಹ ಸಾಲ ಪಡೆದುಕೊಂಡಿದ್ದನಂತೆ. ಆದರೆ ಅವರಿಂದ ಸಾಲ ಪಡೆದ ಬಳಿಕ ಆತನ ರಾಜ್ಯ ಬರಿದಾಗಿತ್ತು. ಆತ ಹಣಕ್ಕಾಗಿ ಪರದಾಡಿದ್ದ. ಬಳಿಕ ಆತನನ್ನು ಅಕ್ಟೋಬರ್ 13, 1307 ಶುಕ್ರವಾರದಂದು ಬಂಧಿಸಲಾಗಿತ್ತು. ಅಂದಿನಿಂದ ಫ್ರಾನ್ಸ್‌ನಲ್ಲಿ ನಂಬರ್ 13 ದುರಾದೃಷ್ಟಕರ ಸಂಖ್ಯೆ ಎಂದು ಬಿಂಬಿತವಾಗಿತ್ತು.



Click it and Unblock the Notifications
