Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ನೋಟುಗಳ ತುದಿ ಗೆರೆಗಳು ಏಕಿವೆ ಗೊತ್ತಾ? ಇಲ್ಲಿದೆ ಅಚ್ಚರಿಯ ಅಂಶ..!
ನೀವು ಭಾರತದ ಕರೆನ್ಸಿ ನೋಟನ್ನು ನೋಡಿರುತ್ತೀರ, ಆದ್ರೆ ಗಮನವಿಟ್ಟು ಅದರ ಮೇಲಿರುವ ಚಿಹ್ನೆಗಳ ಕುರಿತು ಎಂದಾದರು ಯೋಚಿಸಿದ್ದೀರಾ? ನಾವು ಸಾಮಾನ್ಯವಾಗಿ ಅದರ ಬಣ್ಣ ಮತ್ತು ಗಾತ್ರದ ಆಧಾರದ ಮೇಲೆ ದೂರದಿಂದಲೇ ಅದು ಎಷ್ಟು ರೂಪಾಯಿಯ ನೋಟು ಎಂಬುದನ್ನು ಪತ್ತೆ ಮಾಡುತ್ತೇವೆ. ಅಷ್ಟೇ ಏಕೆ ಅದರ ಮೇಲೆ ದೊಡ್ಡದಾಗಿ ನೋಟಿನ ಮೌಲ್ಯ ಬರೆದಿರುತ್ತಾರೆ.
ಇದಿಷ್ಟೆ ಅಲ್ಲ ನೋಟಿನ ಕೆಲವು ಸಣ್ಣ ಪುಟ್ಟ ಚಿಹ್ನೆಗಳ ಮೇಲೆ ನಮ್ಮ ಗಮನ ಹರಿಯುತ್ತದೆ. ಒಂದು ವೇಳೆ ಅದು 500 ಅಥವಾ 2000 ಸಾವಿರ ರೂಪಾಯಿಯ ನೋಟಾಗಿದ್ದರೆ ಅದರು ಅಸಲಿಯೋ ನಕಲಿಯೋ ಎಂದು ನಾವೇ ಪರೀಕ್ಷೆಗೊಳಪಡಿಸುತ್ತೇವೆ. ಅದರಲ್ಲಿ ಹಸಿರು ಬಣ್ಣದ ಟೇಪ್ ರಚನೆ ಇದೆಯೇ? ಎಲ್ಲಾದರೂ ಅನುಮಾಸ್ಪದವಾಗಿ ಕಂಡುಬರುವ ಅಂಶ ಇದ್ಯಾ ಎಂದೆಲ್ಲಾ ಪರೀಕ್ಷಿಸುತ್ತೇವೆ.
ಅಬ್ಬಬ್ಬಾ ಅಂದರೆ ನಾವು ನೋಟಿನಲ್ಲಿ ಅಡಗಿರುವ ಕೆಲವು ಗೌಪ್ಯ ಚಿಹ್ನೆಗಳ ಕುರಿತಂತೆಯೂ ತಿಳಿದುಕೊಂಡಿರುತ್ತೇವೆ. ನೋಟಿನ ಸೀರಿಯಲ್ ನಂಬರ್, ಆರ್‌ಬಿಐನ ಮುದ್ರೆ, ಗವರ್ನರ್ ಸಹಿ, ಬರಹಗಳ ಕುರಿತು ಗಮನ ಹರಿಸಿರುತ್ತೇವೆ. ಆದ್ರೆ ನೀವು ಎಂದಾದರು ನೋಟಿನ ಅಂಚಿನಲ್ಲಿರುವ ಗೆರೆಗಳ ಕುರಿತು ಯೋಚಿಸಿದ್ದೀರಾ? ನೋಟಿನ ತುದಿಯಲ್ಲಿ ಏಕೆ ಉಬ್ಬಿದ ಗೆರೆಗಳನ್ನು ಮುದ್ರಿಸಲಾಗುತ್ತದೆ? ಒಂದೊಂದು ನೋಟಿನಲ್ಲಿ ಒಂದು ರೀತಿಯ ಗೆರೆಗಳಿರುವುದನ್ನು ನೀವು ಗಮನಿಸಿದ್ದೀರಾ? ಇಲ್ಲ ಎಂದಾದರೆ ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಭಾರತೀಯ ರೂಪಾಯಿ ನೋಟಿನಲ್ಲಿ ಭದ್ರತೆಯ ದೃಷ್ಟಿಯಿಂದ ಹಲವು ವೈಶಿಷ್ಟ್ಯಗಳಿವೆ. 100, 200, 500 ಮತ್ತು 2000 ರೂಪಾಯಿ ನೋಟಿನಲ್ಲಿ ಕೆಲ ವಿಶೇಷಗಳಿವೆ.
ಈ ಸಾಲುಗಳ ಅರ್ಥವೇನು?
ನೋಟುಗಳ ಮೇಲೆ ರೂಪುಗೊಂಡ ಈ ಗೆರೆಗಳನ್ನು 'ಬ್ಲೀಡ್ ಮಾರ್ಕ್ಸ್' ಎಂದು ಕರೆಯಲಾಗುತ್ತದೆ. ಈ ಗುರುತುಗಳನ್ನು ವಿಶೇಷವಾಗಿ ಅಂಧರಿಗೆಂದು ವಿನ್ಯಾಸಗೊಳಿಸಲಾಗಿದೆ. ನೋಟುಗಳ ಮೇಲಿನ ಸಾಲುಗಳನ್ನು ಸ್ಪರ್ಶಿಸುವ ಮೂಲಕ, ಈ ನೋಟು ಎಷ್ಟು ರೂಪಾಯಿ ಮೌಲ್ಯದ್ದಾಗಿದೆ ಎಂದು ಅವರು ಹೇಳಬಹುದು. ಈ ಕಾರಣಕ್ಕಾಗಿ, 100, 200, 500 ಮತ್ತು 2000 ನೋಟುಗಳು ಈ ಸಾಲುಗಳ ವಿಭಿನ್ನ ಸಂಖ್ಯೆಗಳನ್ನು ಹೊಂದಿವೆ. ಈ ಸಾಲುಗಳು ಅಂಧರಿಗೆ ಕರೆನ್ಸಿಯನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ. ಆದರೆ ಈ ಬಗ್ಗೆ ಅವರು ತಿಳಿದುಕೊಂಡಿರಬೇಕಷ್ಟೆ.
ಯಾವ ಸಾಲಿನಲ್ಲಿ ಎಷ್ಟು ಸಾಲುಗಳು?
ಉದಾಹರಣೆಗೆ, 100 ರೂಪಾಯಿ ನೋಟು ಎರಡೂ ಬದಿಗಳಲ್ಲಿ ನಾಲ್ಕು ಸಾಲುಗಳನ್ನು ಹೊಂದಿರುತ್ತದೆ. ಅಂಧರು ಮುಟ್ಟಿದರೆ 100 ರೂ. ಎಂದು ತಿಳಿಯುತ್ತದೆ. ಅದೇ 200 ರೂಪಾಯಿ ನೋಟಿನ ಎರಡೂ ಮೂಲೆಗಳಲ್ಲಿ ತಲಾ ನಾಲ್ಕು ಸಾಲುಗಳು ಮತ್ತು ಎರಡು ಚುಕ್ಕಿಗಳಿರುತ್ತವೆ. ಅದೇ 500 ನೋಟಿನಲ್ಲಿ 5 ಮತ್ತು 2000 ನೋಟಿನ ಎರಡೂ ಬದಿಗಳಲ್ಲಿ 7-7 ಸಾಲುಗಳನ್ನು ಹೊಂದಿದೆ. ಈ ರೇಖೆಗಳ ಸಹಾಯದಿಂದ, ಅಂಧರು ಸುಲಭವಾಗಿ ನೋಟುಗಳನ್ನು ಮತ್ತು ಅವುಗಳ ಮೌಲ್ಯವನ್ನು ಗುರುತಿಸಬಹುದು.
ಗಾತ್ರದ ಮೇಲೂ ಗುರುತಿಸುವಿಕೆ!
ಅಂಧರು ಈ ರೀತಿಯ ಲಿಪಿಯ ಬಳಕೆ ಮಾಡಿದ್ದರೆ ಮಾತ್ರ ಅವರಿಗೆ ನೋಟಿನ ಸರಿಯಾದ ಮೌಲ್ಯ ಹೇಳಲು ಸಾಧ್ಯವಾಗುತ್ತದೆ. ಆದರೆ ನೀವು ಗಮನಿಸಿರಬಹುದು ಅಂಧರು ನೋಟಿನ ಗಾತ್ರದ ಆಧಾರದ ಮೇಲೂ ಅವುಗಳ ಮೌಲ್ಯವನ್ನು ಸರಿಯಾಗಿ ಹೇಳುತ್ತಾರೆ. ಅಲ್ಲದೆ ಈ ನೋಟುಗಳ ಗಾತ್ರವೂ ಸಹ ಮೌಲ್ಯದೊಂದಿಗೆ ಹೊಂದಾಣಿಕೆಯಾಗುತ್ತದೆ. 10 ರೂಪಾಯಿ ನೋಟಿನಿಂದ ಹಿಡಿದು 2000 ನೋಟಿನ ಗಾತ್ರದಲ್ಲಿ ನಾವು ಏರಿಕೆಯ ವಿಧಾನ ಕಾಣಬಹುದು. ಇದೂ ಸಹ ಅಂಧರ ಸಹಾಯಕ್ಕೆ ಬರಲಿದೆ.



Click it and Unblock the Notifications