Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶಾಲೆ ಬಸ್‌ಗಳಿಗೆ ಹಳದಿ ಬಣ್ಣ ಏಕೆ ಬಳಸುತ್ತಾರೆ ಗೊತ್ತಾ? ಇಲ್ಲಿದೆ ಅಚ್ಚರಿ ವಿಚಾರ!
ನೀವು ಶಾಲೆ ಹೋಗುವಾಗ ಅಥವಾ ರಸ್ತೆಯಲ್ಲಿ ನೋಡುವ ಯಾವುದೇ ಸ್ಕೂಲ್ ಹೊರಗೆ ಕಾಣುವ ಸ್ಕೂಲ್ ಬಸ್‌ಗಳು ಒಂದೇ ಬಣ್ಣದಲ್ಲಿರುತ್ತವೆ. ಬಹುತೇಕ ಎಲ್ಲಾ ಸ್ಕೂಲ್ ಬಸ್‌ಗಳು ಕೂಡ ಹಳದಿ ಬಣ್ಣದಿಂದ ಕೂಡಿರಲಿವೆ. ಸಣ್ಣ ಶಾಲೆಗಳಿಂದ ಹಿಡಿದು ದೊಡ್ಡ ದೊಡ್ಡ ಶಾಲೆಯ ಬಸ್‌ಗಳು ಸಹ ಹಳದಿ ಬಣ್ಣದಿಂದಲೇ ಇರಲಿವೆ.
ವಿಶ್ವದ ಬಹುತೇಕ ರಾಷ್ಟ್ರಗಳ ಶಾಲೆಯಲ್ಲಿಯೂ ಈ ಹಳದಿ ಬಣ್ಣದ ಬಸ್‌ಗಳನ್ನೇ ನೋಡುತ್ತೇವೆ. ಹಾಗಾದ್ರೆ ಸ್ಕೂಲ್ ಬಸ್‌ಗಳು ಹಳದಿ ಬಣ್ಣದಲ್ಲಿರಲು ಕಾರಣವೇನು? ಅದರ ಹಿಂದಿರುವ ಉದ್ದೇಶ ಆದ್ರು ಏನು ಎಂಬುದನ್ನು ಎಂದಾದ್ರು ಯೋಚಿಸಿದ್ದೀರಾ? ಶಿಕ್ಷಣದ ಪ್ರಕಾರಗಳಲ್ಲಿ ಬದಲಾವಣೆಗಳಿದ್ದರೂ ಈ ಬಸ್‌ನ ಬಣ್ಣದಲ್ಲಿ ಮಾತ್ರ ಯಾವುದೇ ದೇಶದಲ್ಲಿ ಬದಲಾವಣೆ ನೋಡಲಾಗದು. ಹಾಗಾದ್ರೆ ಸ್ಕೂಲ್ ಬಸ್ ಬಣ್ಣವು ಹಳದಿಯಾಗಿರಲು ಕಾರಣವೇನು?

ಶಾಲೆ ಬಸ್‌ಗಳು ಹಳದಿ ಬಣ್ಣದಲ್ಲಿರಬೇಕು ಎಂಬ ಕಟ್ಟು ನಿಟ್ಟಿನ ಕ್ರಮಗಳಿಲ್ಲದಿದ್ದರೂ, ಸುರಕ್ಷತೆ ಸೇರಿದಂತೆ ಹಲವು ದೃಷ್ಟಿಕೋನದ ಕಾರಣದಿಂದಾಗಿ ಶಾಲೆಯ ಬಸ್ ಹಳದಿಯಾಗಿದೆ. ಹಳದಿ ಬಣ್ಣವು ಹಲವು ಪ್ರಯೋಜನಗಳ ಹೊಂದಿರುವ ಕಾರಣದಿಂದಾಗಿಯೇ ಬಣ್ಣಕ್ಕೆ ಪ್ರಾಮುಖ್ಯತೆ ಬಂದಿದೆ.
ನೀವು ಏರ್‌ಪೋರ್ಟ್ ಟ್ಯಾಕ್ಸಿಗಳು ಅಥವಾ ಹಲವು ಬಗೆಯ ಟ್ಯಾಕ್ಸಿಗಳ ಮೇಲೆ ಹಳದಿ ಬಣ್ಣದಲ್ಲೇ ಟ್ಯಾಕ್ಸಿ ಎಂಬ ಬೋರ್ಡ್ ಇರುವುದು ನೋಡಿರಬಹುದು. ಇದಕ್ಕೂ ಕೂಡ ಕಾರಣವಿದೆ. ಹಳದಿ ಬಣ್ಣ ಬಹಳ ದೂರದ ವರೆಗೂ ಪ್ರತಿಫಲನ ಶಕ್ತಿ ಹೊಂದಿದೆ. ಹಾಗೆ ಮುಂಜಾನೆ ಮುಸ್ಸಂಜೆ, ಮಂಜು ಮತ್ತು ಮಳೆಯಂತಹ ವಿಭಿನ್ನ ಬೆಳಕಿನ ಪರಿಸ್ಥಿತಿಗಳಲ್ಲಿ ಹಳದಿ ಬಣ್ಣವು ವರ್ಣಪಟಲದಲ್ಲಿ ಹೆಚ್ಚು ಗೋಚರಿಸುವ ಬಣ್ಣಗಳಲ್ಲಿ ಒಂದಾಗಿದೆ. ವಿಶೇಷವಾಗಿ ಬಾಹ್ಯ ದೃಷ್ಟಿಯಲ್ಲಿ, ನಮ್ಮ ಕಣ್ಣುಗಳು ಹಳದಿ ಬಣ್ಣಕ್ಕೆ ಬಹಳ ಸೂಕ್ಷ್ಮವಾಗಿರುತ್ತವೆ, ಅಂದರೆ ಚಾಲಕರು ಮತ್ತು ಪಾದಚಾರಿಗಳು ದೂರದಿಂದ ಶಾಲಾ ಬಸ್‌ಗಳನ್ನು ಹೆಚ್ಚು ಸುಲಭವಾಗಿ ಗುರುತಿಸಬಹುದು.
ಹಳದಿ ಬೆಳಕು ಮಾನವ ಕಣ್ಣಿನ ಕೆಂಪು ಮತ್ತು ಹಸಿರು ಕೋನ್‌ಗಳನ್ನು ಉತ್ತೇಜಿಸುತ್ತದೆ, ಅವುಗಳನ್ನು ಇತರ ಬಣ್ಣಗಳಿಗಿಂತ ವೇಗವಾಗಿ ಸಂಸ್ಕರಿಸುತ್ತದೆ, ಆದ್ದರಿಂದ ಶಾಲಾ ಬಸ್‌ಗಳನ್ನು ತ್ವರಿತವಾಗಿ ಗುರುತಿಸಬಹುದು ಮತ್ತು ನೋಡುಗರು ಸುಲಭವಾಗಿ ಗುರುತಿಸಬಹುದು. ಇದೇ ಕಾರಣದಿಂದ ಶಾಲಾ ಬಸ್‌ಗಳು ಹಳದಿ ಬಣ್ಣವನ್ನು ಹೊಂದಿರಲಿವೆ.
ಹಾಗೆ ಹಳದಿ ಬಣ್ಣದ ಮೇಲೆ ಬೇರೆ ಯಾವುದೇ ಬಣ್ಣವನ್ನು ಬಳಸಿ ಬರೆಯುವ ಅಕ್ಷರಗಳು ಸುಲಭವಾಗಿ ಕಾಣಿಸುತ್ತವೆ. ಹಾಗೆ ಬಸ್ ಮೇಲೆ ಬರೆದಿರುವ ಅಕ್ಷರಗಳು, ಸಂಖ್ಯೆಗಳು ಚೆನ್ನಾಗಿ ಕಾಣಿಸಬೇಕು ಎಂದಾದರೆ ಹಳದಿ ಬಣ್ಣ ಇರಬೇಕಾಗುತ್ತದೆ. ಹಾಗೆ ಈ ಬಣ್ಣದ ಬಾಳಿಕೆ ಕೂಡ ಬಹಳ ಸಮಯದರೆಗೂ ಬರುವುದರಿಂದ ಇದೇ ಬಣ್ಣವನ್ನು ಸ್ಕೂಲ್ ಬಸ್‌ಗೆ ಬಳಸಲಾಗುತ್ತದೆ.
ಹಳದಿ ಬಣ್ಣದ ಬಳಕೆ ಆರಂಭಗೊಂಡಿದ್ದು ಯಾವಾಗ?
ಈ ರೀತಿ ಸ್ಕೂಲ್ ಬಸ್‌ಗಳಿಗೆ ಹಳದಿ ಬಣ್ಣ ಹಾಕಿಸುವುದಕ್ಕೆ ದೊಡ್ಡ ಇತಿಹಾಸವೇ ಇದೆ. 1939 ರಲ್ಲಿ ಫ್ರಾಂಕ್ ಡಬ್ಲ್ಯೂ. ಸಿರ್ ಕೊಲಂಬಿಯಾ ವಿಶ್ವವಿದ್ಯಾಲಯದ ಶಿಕ್ಷಕರ ಕಾಲೇಜಿನಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಈ ಸಮ್ಮೇಳನವು ದೇಶಾದ್ಯಂತ ಶಾಲಾ ಬಸ್‌ಗಳಿಗೆ ರಾಷ್ಟ್ರೀಯ ಮಾನದಂಡಗಳನ್ನು ಸ್ಥಾಪಿಸಿತು.
ಈ ಸಮಯದಲ್ಲಿ ಅವರು ನಿಂಬೆ ಹಣ್ಣಿನ ಬಣ್ಣದಿಂದ ಗಾಢ ಕಿತ್ತಳೆ, ಕೆಂಪು ಬಣ್ಣ ಹೊಂದಿರುವ 50 ವಿವಿಧ ಪಟ್ಟಿಗಳ ಮಾಡಿ ಒಂದು ಮಾದರಿ ತಯಾರಿಸಿ ಇಟ್ಟರು. ಹಲವರು ಹಳದಿ ಬಣ್ಣದ ಬೋರ್ಡ್ ಅನ್ನು ಆಯ್ಕೆ ಮಾಡಿದರು. ಅನಂತರ ನ್ಯಾಷನಲ್ ಸ್ಕೂಲ್ ಬಸ್ ಕ್ರೋಮ್ ಅಥವಾ ಸ್ಕೂಲ್ ಬಸ್ ಗ್ಲಾಸಿ ಹಳದಿ ಎಂಬ ಬಣ್ಣವನ್ನು ಎಲ್ಲರು ಆಯ್ಕೆ ಮಾಡಿಕೊಂಡು.
ಹಲವು ರಾಷ್ಟ್ರಗಳಲ್ಲಿ ಬಸ್‌ಗಳಿಗೆ ಹಳದಿ ಬಣ್ಣವನ್ನೇ ಆರಿಸಬೇಕು ಎಂಬ ನಿಯಮವೂ ಇದೆ. ಹಾಗೆ ಬಸ್ ಹಾಗೂ ಶಾಲೆಯ ಮೇಲೆ ಹಲವು ಕಠಿಣ ನಿಯಮಗಳನ್ನು ಹೇರಲಾಗಿರುತ್ತದೆ.



Click it and Unblock the Notifications











