Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
2024ರಲ್ಲಿ ಏನೆಲ್ಲಾ ದುರಂತ ಸಂಭವಿಸಲಿದೆ ಗೊತ್ತಾ? ನಾಸ್ಟ್ರಾಡಾಮಸ್ ಭಯಾನಕ ಭವಿಷ್ಯ
ನಾಸ್ಟ್ರಾಡಾಮಸ್ ಈತನ ಹೆಸರು ಕೇಳಿದ್ರೆ ಎಲ್ಲರಿಗೂ ಒಮ್ಮೆ ಥಟ್ ಅಂತ ಜ್ಯೋತಿಷ್ಯಶಾಸ್ತ್ರ ನೆನಪಾಗುತ್ತೆ. ಭವಿಷ್ಯದಲ್ಲಿ ಏನು ನಡೆಯಲಿದೆ ಎಂಬುದನ್ನು ನಿಖರವಾಗಿ ಹೇಳಿರುವುದಲ್ಲದೆ ಆ ಘಟನೆಗಳನ್ನು 16ನೇ ಶತಮಾನದಲ್ಲಿಯೇ ಆತ ತನ್ನ ಪುಸ್ತಕದಲ್ಲಿ ದಾಖಲು ಮಾಡಿದ್ದಾನೆ. ಆತ ಮುಂಬರುವ 2024ರಲ್ಲಿ ಜೀವರಾಶಿಯ ಏನಾಗಲಿದೆ ಎಂಬ ಕುರಿತು ಭವಿಷ್ಯ ಹೇಳಿದ್ದಾರೆ. ಹಾಗಾದರೆ ಆತ ಹೇಳಿರುವ ಭಯಾನಕ ಭವಿಷ್ಯದಲ್ಲಿ ಏನಿದೆ ಅನ್ನೋದನ್ನು ನೋಡಿ.
ನಾಸ್ಟ್ರಾಡಾಮಸ್, 16ನೇ ಶತಮಾನದ ಫ್ರೆಂಚ್ ಜ್ಯೋತಿಷಿ, ಈತನನ್ನು 'ವಿನಾಶದ ಪ್ರವಾದಿ' ಎಂದು ಕರೆಯಲಾಗಿದೆ. ಏಕೆಂದರೆ ಈತ ಹೇಳಿರುವ ದುರಂತ ಘಟನೆಗಳು ಈ ಹಿಂದೆ ಸಂಭವಿಸಿವೆ. ಹೀಗಾಗಿ ಆತ 2024ರ ಕುರಿತು ನುಡಿದಿರುವ ಭವಿಷ್ಯ ಭಯ ಭೀತರನ್ನಾಗಿಸಿದೆ. ತನ್ನ 'ಲೆಸ್ ಪ್ರೊಫೆಟೀಸ್ ("ದಿ ಪ್ರೊಫೆಸೀಸ್") ಪ್ರಕಾರ, ಈ ವರ್ಷ ಸಮುದ್ರಗಳ ಮೇಲಿನ ಯುದ್ಧ, ಮಾನವೀಯ ಕ್ರೌರ್ಯ ಹೆಚ್ಚಾಗಲಿದೆಯಂತೆ.

ಪ್ರಿನ್ಸ್ ಹ್ಯಾರಿ ರಾಜನಾಗಿ ಅಧಿಕಾರ ಸ್ವೀಕಾರ
ನಾಸ್ಟ್ರಾಡಾಮಸ್ ತನ್ನ ಪುಸ್ತಕದ ಒಂದು ಭಾಗದಲ್ಲಿ 'ದ್ವೀಪಗಳ ರಾಜ'ನನ್ನು ಬಲವಂತವಾಗಿ ಹೊರಹಾಕಲಾಗುತ್ತದೆ ಎಂದು ಉಲ್ಲೇಖಿಸಿದ್ದಾನೆ. ನಾಸ್ಟ್ರಾಡಾಮಸ್ ರಾಜ ಚಾರ್ಲ್ಸ್ III ಅನ್ನು ಉಲ್ಲೇಖಿಸುತ್ತಿದ್ದಾನೆ ಎಂದು ಊಹಿಸಲಾಗಿದೆ. ಅಲ್ಲದೆ ಶೀಘ್ರದಲ್ಲೇ ಅನಾಹುತಕಾರಿ ಯುದ್ಧ ಸಂಭವಿಸಿ ಹೊಸ ರಾಜನ ಉದಯವಾಗಲಿದೆ ಎಂದು ಅಂದಾಜಿಸಲಾಗಿದೆ.
ನಾಸ್ಟ್ರಾಡಾಮಸ್ ರಾಣಿ ಎಲಿಜಬೆತ್ II ರ ನಿಧನವನ್ನೂ ಊಹಿಸಿರಬಹುದು ಎಂದು ಹಿಂದೆ ಹೇಳಿದ್ದರು, "ತನ್ನ ಮತ್ತು ತನ್ನ ಎರಡನೇ ಹೆಂಡತಿಯ ಮೇಲೆ ನಿರಂತರ ದಾಳಿಯಿಂದ" ರಾಜ ಚಾರ್ಲ್ಸ್ III ಪದತ್ಯಾಗ ಮಾಡುತ್ತಾನೆ ಮತ್ತು ವಿಲಿಯಂ ಬದಲಿಗೆ ಹ್ಯಾರಿ ರಾಜನಾಗಿ ಅಧಿಕಾರ ವಹಿಸಿಕೊಳ್ಳುತ್ತಾನೆ. ಏಕೆಂದರೆ ವಿಲಿಯಂಗೆ ರಾಜನಾಗುವ ಯೋಗವಿಲ್ಲ ಎಂದಿದ್ದಾನೆ.
ಚೀನಾದಿಂದ ಮಹಾ ಯುದ್ಧ
ನಾಸ್ಟ್ರಾಡಾಮಸ್ 'ಯುದ್ಧ ಮತ್ತು ನೌಕಾ ಯುದ್ಧ' ಎಂದು ಭವಿಷ್ಯ ನುಡಿದಿದ್ದಾರೆ ಮತ್ತು 'ಕೆಂಪು ಎದುರಾಳಿಯು ಭಯದಿಂದ ಮೌನವಾಗುತ್ತಾನೆ, ಮಹಾಸಾಗರದಲ್ಲಿ ಭೀತಿ ಹುಟ್ಟಿಸುತ್ತಾನೆ ಎಂದಿದ್ದಾರೆ. ಮೇಲ್ನೋಟಕ್ಕೆ ಇದು ಚೀನಾ ಕುರಿತು ಹೇಳಿರುವ ಭವಿಷ್ಯವಾಗಿದೆ. ತೈವಾನ್ ಮಾತ್ರವಲ್ಲದೆ ಭಾರತಕ್ಕೂ ಎಚ್ಚರಿಕೆಯ ಗಂಟೆಯಾಗಿದೆ. ಚೀನಾ ಈಗಾಗಲೆ ಸಮುದ್ರಗಳಲ್ಲಿ ತನ್ನ ಯುದ್ಧಭ್ಯಾಸ ಆರಂಭಿಸಿರುವುದು ಹಾಗೂ ಪಾಕಿಸ್ತಾನದ ಜೊತೆ ಸೇರಿ ಹಲವು ಒಪ್ಪಂದಗಳ ಮಾಡಿಕೊಂಡಿರುವುದು ಇದರ ಜೊತೆ ಆರ್ಥಿಕ ಕಾರಿಡಾರ್‌ನಂತಹ ಕೆಲಸಕ್ಕೆ ಕೈಹಾಕಿರುವುದು ಆತಂಕ ಹೆಚ್ಚಲು ಕಾರಣವಾಗಿದೆ.
ಹವಾಮಾನ ದುರಂತ
ಹವಾಮಾನ ಬಿಕ್ಕಟ್ಟು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಪ್ರವಾಹ, ಬರ, ಕಾಡ್ಗಿಚ್ಚುಗಳು ಮತ್ತಷ್ಟು ಹೆಚ್ಚಾಗಲಿದೆ ಎಂದು ನಾಸ್ಟ್ರಾಡಾಮಸ್ ಎಚ್ಚರಿಸಿದ್ದಾರೆ. ಇದರ ಜೊತೆ ಜಗತ್ತಿನ ತಾಪಮಾನದಲ್ಲಿ ದಾಖಲೆಯ ಏರಿಕೆ ಕಂಡುಬರಲಿದೆ ಎಂದಿದ್ದಾರೆ. ಒಣ ಭೂಮಿ ಹೆಚ್ಚಾಗಲಿದೆ, ಬೆಳೆ ಒಣಗಲಿದೆ ಇದನ್ನು ನೋಡಿದಾಗ ಪ್ರವಾಹಗಳು ಸೃಷ್ಟಿಯಾಗುತ್ತದೆ ಎಂದು ಭವಿಷ್ಯದಲ್ಲಿ ಉಂಟಾಗುವ ಹವಾಮಾನ ವೈಪರಿತ್ಯಗಳ ಕುರಿತು ಭವಿಷ್ಯ ನುಡಿದಿದ್ದಾರೆ.
ಹೊಸ ಪೋಪ್ ಉದಯ
ಭವಿಷ್ಯವಾಣಿಯ ಪ್ರಕಾರ ಪೋಪ್ ಫ್ರಾನ್ಸಿಸ್ ಶೀಘ್ರದಲ್ಲೇ ಬದಲಾಗಲಿದ್ದಾರೆ. ಆತ ತನ್ನ ಪುಸ್ತಕದಲ್ಲಿ ದೀರ್ಘಕಾಲದ. ವಯಸ್ಸಾದ ಧರ್ಮಗುರುಗಳು ಮರಣದ ನಂತರ ಹೊಸ ಪೋಪ್ ಹುಟ್ಟುತ್ತಾರೆ. ಅವರು ದೀರ್ಘಕಾಲ ಜನರ ನಡುವೆ ಇರುತ್ತಾರೆ ಎಂದಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ತಮ್ಮ 87ನೇ ಹುಟ್ಟುಹಬ್ಬದ ನಡುವೆ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರ ಆರೋಗ್ಯ ಕುರಿತು ಹಲವು ರೀತಿಯ ಅನುಮಾನಗಳು ಸಹ ಹುಟ್ಟಿಕೊಂಡಿವೆ.
ಹೊಸ ವರ್ಷ ಆಚರಣೆಗೆ ಕೆಲವೇ ವಾರಗಳು ಬಾಕಿ ಉಳಿದಿರುವಾಗ ನಾಸ್ಟ್ರಾಡಾಮಸ್‌ನ ಕೆಲವು ಭವಿಷ್ಯಗಳು 2024ರ ಚಿಂತನೆಗೆ ಕಾರಣವಾಗಿವೆ. ಆತನ ಭಯಾನಕ ಭವಿಷ್ಯಗಳು ಜನರನ್ನು ಆತಂಕಕ್ಕೆ ದೂಡಿವೆ. ಆದ್ರೆ 2023ರಲ್ಲಿ ವಿಶ್ವಯುದ್ಧ 3ಕ್ಕೆ ನಾಂದಿಯಾಗಲಿದೆ ಎಂದು ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದರು. ಆದರೆ ಇದು ಸಾಧ್ಯವಾಗದಿರುವುದನ್ನು ನಾವಿಲ್ಲಿ ಸ್ಮರಿಸಬಹುದು.



Click it and Unblock the Notifications
