Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜನವರಿಯಲ್ಲಿ ಹುಟ್ಟಿದವರ ವಿಶೇಷ ಗುಣಗಳೇನು ಗೊತ್ತ?
ಹುಟ್ಟಿದ ತಿಂಗಳಿಗೆ ಅನುಗುಣವಾಗಿ ವ್ಯಕ್ತಿಯ ನಡವಳಿಕೆ, ಮನೋಭಾವ ಇತ್ಯಾದಿ ರೂಪುಗೊಂಡಿರುತ್ತೆ. ಜನವರಿ ತಿಂಗಳು ಅಂದರೆ ಹೊಸತನದ ಆಗಮನ. ಕೆಟ್ಟ ಅಭ್ಯಾಸಗಳಿಗೆ ಅಂತ್ಯ, ಹೊಸ ಹೊಸ ಅಲೋಚನೆ, ನೂತನ ಗುರಿ ಹೀಗೆ ಒಂಥರಾ ಹೊಸತುಗಳ ಆರಂಭದ ಖುಷಿಯಲ್ಲಿರುತ್ತಾರೆ. ಎಲ್ಲರಿಗೂ ವಿಶೇಷ ಎನಿಸುವ ಜನವರಿಯಲ್ಲಿ ಹುಟ್ಟಿದವರಿಗಂತೂ ಇನ್ನಷ್ಟು ಸಂಭ್ರಮ. ಹೊಸ ವರ್ಷದ ಜತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಂತಸದ ಮಾಸ.
ವರ್ಷದ ಮೊದಲ ತಿಂಗಳಲ್ಲಿ ಹುಟ್ಟಿರುವ ವ್ಯಕ್ತಿಗಳು ತುಂಬಾ ವಿಶೇಷವಾಗಿರುವರು ಮತ್ತು ಅವರಲ್ಲಿ ಕೆಲವೊಂದು ಅನನ್ಯ ಲಕ್ಷಣಗಳ ಹೊಂದಿರುತ್ತಾರೆ. ಅವರು ಗುಂಪಿನಲ್ಲಿ ವಿಶಿಷ್ಟವಾಗಿ ಕಾಣಿಸುತ್ತಾರೆ. ಜೊತೆಗೆ ಅವರಲ್ಲಿ ಈ ವಿಶೇಷ ಲಕ್ಷಣಗಳನ್ನು ನಾವು ಕಾಣಬಹುದು. ಹಾಗಾದ್ರೆ ಜನವರಿಯಲ್ಲಿ ಹುಟ್ಟಿದವರು ಯಾವ ರೀತಿ ಲಕ್ಷಣಗಳ ಹೊಂದಿರುತ್ತಾರೆ ನೋಡೋಣ.

ಹಾಸ್ಯ ಪ್ರವೃತ್ತಿ ಹೊಂದಿದವರು
ಜನವರಿಯಲ್ಲಿ ಹುಟ್ಟಿರುವ ವ್ಯಕ್ತಿಗಳಲ್ಲಿ ಅದ್ಭುತವಾಗಿರುವ ಹಾಸ್ಯ ಪ್ರವೃತ್ತಿ ಇರುವುದು. ಇವರ ಹಾಸ್ಯ ಪ್ರವೃತ್ತಿಯು ಸಹಜವಾಗಿರುವ ಕಾರಣದಿಂದಾಗಿ ಇವರ ಸುತ್ತಲು ತುಂಬಾ ಸ್ನೇಹಿತರು ಅಥವಾ ಒಂದು ಗುಂಪು ಯಾವಾಗಲು ಸೇರಿರುತ್ತದೆ. ಗೆಳೆಯರ ತಂಡದಲ್ಲಿ ಇವರು ಹೆಚ್ಚು ಪ್ರಮುಖರೂ ಆಗಿರುತ್ತಾರೆ.
ಮಹಾತ್ವಾಕಾಂಕ್ಷಿಗಳು
ಜನವರಿ ತಿಂಗಳಲ್ಲಿ ಹುಟ್ಟಿರುವಂತಹ ವ್ಯಕ್ತಿಗಳು ತುಂಬಾ ಕಠಿಣ ಪರಿಶ್ರಮ ಪಡುವಂತಹ ಸಾಮರ್ಥ್ಯವನ್ನು ಮೈಗೂಡಿಸಿಕೊಂಡಿರುವರು. ಇವರು ತುಂಬಾ ಸುಲಭವಾಗಿ ಬಿಟ್ಟುಕೊಡಲ್ಲ ಮತ್ತು ಗುರಿ ಮುಟ್ಟಲು ಇವರನ್ನು ಯಾವುದೇ ರೀತಿಯ ಸೋಲುಗಳು ತಡೆಯಲಾರದು.
ಶಾಂತ ಭಾವ ಬೆಳೆಸಿಕೊಂಡಿರುವವರು
ಜನವರಿ ತಿಂಗಳಲ್ಲಿ ಹುಟ್ಟಿರುವಂತಹ ವ್ಯಕ್ತಿಗಳು ಶಾಂತಿಯಿಂದ ಕೂಡಿರುತ್ತಾರೆ. ಅವರಲ್ಲಿ ಜಗಳ, ಗಲಾಟೆ ಇಂತಹ ವಿಚಾರಗಳಿಗೆ ಹೆಚ್ಚು ಒಳಗಾಗದೆ ಶಾಂತಿಯುತ ಮನಸ್ಥಿತಿ ಹೊಂದಿರುತ್ತಾರೆ. ಯಾವಾಗಲು ಪ್ರಶಾಂತತೆ ಬಯಸುತ್ತಾರೆ. ಅಲ್ಲದೆ ಬೇರೆಯವರ ಜೊತೆ ಮಾತಿಗಿಳಿದಾಗ ಹೆಚ್ಚು ಪ್ರೌಢರಂತೆ ಕಾಣುತ್ತಾರೆ.
ವಾಸ್ತವವಾದಿಗಳು
ಈ ವ್ಯಕ್ತಿಗಳು ತಮ್ಮ ಆಲೋಚನೆಗಳ ಮೇಲೆ ನಿರ್ಧಾರ ತೆಗೆದುಕೊಳ್ಳಲು ಬಯಸುವರು. ಇವರು ತುಂಬಾ ಸರಳವಾಗಿರುವರು ಮತ್ತು ಆಕಾಶದಲ್ಲಿ ತೇಲಾಡಲು ಇವರು ಬಯಸುವುದಿಲ್ಲ. ತಮ್ಮ ನಿರ್ಧಾರದಲ್ಲಿ ತಾರ್ಕಿಕವಾಗಿರುವರು ಮತ್ತು ಪ್ರತಿಯೊಂದನ್ನು ಒಳ್ಳೆಯ ರೀತಿ ಸಂಯೋಜನೆ ಮಾಡುವರು.
ಸಾಹಸಮಯ ಜೀವನಶೈಲಿ
ಇವರು ತುಂಬಾ ಚುರುಕು ಮತ್ತು ವಿಶ್ರಾಂತಿ ಇಲ್ಲದೆ ಇರುವ ವ್ಯಕ್ತಿಗಳಾಗಿರುವರು. ಇವರು ಏನಾದರೂ ಹೊಸತನ್ನು ಹುಡುಕಲು ಪ್ರಯತ್ನಿಸುತ್ತಾ ಇರುವರು. ಯಾಕೆಂದರೆ ತಮ್ಮ ಜೀವನದ ಅದ್ಭುತ ಕಥೆಯನ್ನು ಅವರು ಬೇರೆ ಜನರಿಗೆ ಹೇಳಲು ಬಯಸುವರು. ಈ ವ್ಯಕ್ತಿಗಳು ತಮ್ಮ ಜೀವನ ಅನುಭವದ ಮೇಲೆ ವಾಸಿಸುವರು ಮತ್ತು ಇದರಿಂದಲೇ ಅವರು ತುಂಬಾ ತೃಪ್ತಿಪಟ್ಟುಕೊಳ್ಳುವರು. ಬೇರೆಯವರಿಗೆ ಇವರು ಬಂಡಾಯವೆದ್ದಂತೆ ಕಾಣುವರು. ಆದರೆ ನಿಜವಾಗಿಯೂ ಇದು ಹಾಗೆ ಆಗಿರುವುದಿಲ್ಲ.
ಇವರು ತುಂಬಾ ನಂಬಿಕಸ್ಥರು
ನಂಬಿಕಸ್ಥರು
ಈ ವ್ಯಕ್ತಿಗಳಿಗೆ ದೊಡ್ಡ ಸಂಖ್ಯೆಯ ಸ್ನೇಹಿತರ ಬಳಗವು ಇರುವುದಿಲ್ಲ. ಹತ್ತಿರಕ್ಕೆ ಬರಲು ಅವರು ಯಾರನ್ನೂ ಬಿಡುವುದಿಲ್ಲ. ಇವರು ಅಷ್ಟು ಸುಲಭವಾಗಿ ಸ್ನೇಹಿತರನ್ನು ಮಾಡಿಕೊಳ್ಳುವುದಿಲ್ಲ. ಆದರೆ ಒಂದು ಸಲ ಇವರು ಸ್ನೇಹಿತರನ್ನು ಮಾಡಿಕೊಂಡರೆ ಇವರು ದೀರ್ಘಕಾಲದ ತನಕ ತಮ್ಮ ಸ್ನೇಹಕ್ಕೆ ಬದ್ಧರಾಗಿರುವರು. ನೀವು ಇವರ ನಿಕಟ ಸ್ನೇಹಿತರಾಗಲು ಯಶಸ್ವಿಯಾದರೆ ಆಗ ನೀವು ಜೀವನಪೂರ್ತಿ ಅವರ ಸ್ನೇಹಿತರಾಗಿರುವಿರಿ.
ತಮ್ಮದೇ ನಿಯಮವನ್ನು ಪಾಲಿಸುವರು
ಜನವರಿ ತಿಂಗಳಲ್ಲಿ ಹುಟ್ಟಿರುವಂತಹ ವ್ಯಕ್ತಿಗಳು ಎಲ್ಲಾ ಸಮಯದಲ್ಲೂ ತಮ್ಮದೇ ಆಗಿರುವಂತಹ ನಿಯಮವನ್ನು ಪಾಲಿಸುವವರು. ಇದೇ ವೇಳೆ ಇವರು ತುಂಬಾ ಸಾಂಪ್ರದಾಯಿಕ ಹಾಗೂ ಪದೇ ಪದೇ ಬದಲಾವಣೆಯನ್ನು ಬಯಸದೆ ಇರುವಂತಹ ವ್ಯಕ್ತಿಗಳು. ಇವರು ತಮ್ಮ ಹಿಂದನ ನೆನಪಿನಲ್ಲಿ ಯಾವಾಗಲೂ ಮುಳುಗಿ ಹೋಗಿರುವರು. ಇದರಲ್ಲಿ ಯಾವುದೇ ತಪ್ಪು ಇದೆ ಎಂದು ಅವರಿಗೆ ಅನಿಸುವುದಿಲ್ಲ.



Click it and Unblock the Notifications