Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ವಿದೇಶಗಳಲ್ಲಿದೆ ಈ ವಿಚಿತ್ರ ಕಾನೂನುಗಳು, ಇದನ್ನು ಕೇಳಿದಾಗ ಹೀಗೂ ಉಂಟಾ ಎಂದನಿಸದಿರಲ್ಲ!
ಪ್ರತಿಯೊಂದು ದೇಶಕ್ಕೆ ಹೋದಾಗ ಆ ದೇಶದ ಕಾನೂನುಗಳನ್ನು ಪಾಲಿಸಬೇಕು, ಆದರೆ ಕೆಲವೊಂದು ದೇಶದ ಕಾನೂನುಗಳು ತುಂಬಾ ವಿಚಿತ್ರ ಅನಿಸುವುದು ಅಂಥ ವಿಚಿತ್ರ ಕಾನೂನುಗಳ ಬಗ್ಗೆ ತಿಳಿದರೆ ನಿಮಗೆ ತುಂಬಾನೇ ನಗು ಬರಿಸುವುದು, ಅದರಲ್ಲೂ ಇಂಟರ್‌ನ್ಯಾಷನಲ್ ಟೂರ್ ಮಾಡುವವರಂತೂ ಈ ಕಾನೂನು ಬಗ್ಗೆ ತಿಳಿದಿರಲೇಬೇಕು ನೋಡಿ:

ಸಿಂಗಾಪುರ
ಸಿಂಗಾಪುರಕ್ಕೆ ಹೋದಾಗ ನೀವು ಅಪ್ಪಿ ತಪ್ಪಿಯೂ ಚ್ಯುಯಿಂಗ್ ಗಮ್ ತಿನ್ನಬೇಡಿ. ಇಲ್ಲಿ ಚ್ಯುಯಿಂಗ್ ಗಮ್‌ತಿನ್ನುವುದು ಅವರಿಗೆ ಸಮಸ್ಯೆಯಲ್ಲ, ಆದರೆ ಅದನ್ನು ಬಿಸಾಡುವ ರೀತಿ ಇದೆಯೆಲ್ಲಾ ಅದು ಅವರಿಗೆ ಸಮಸ್ಯೆ.
ಸಿಂಗಾಪುರ್ ಕ್ಲೀನ್ ಸಿಟಿ ಎಂಬ ಹೆಗ್ಗಳಿಕೆಯನ್ನು ಪಡೆದ ದೇಶ. ಚ್ಯುಯಿಂಗ್ ಗಮ್ ತಿಂದು ಕಂಡ ಕಂಡಲ್ಲಿ ಉಗಿದರೆ ಅದರಿಂದ ಓಡಾಡುವವರಿಗೆ ತುಂಬಾ ಕಷ್ಟ. ಬಸ್‌ನಲ್ಲಿ ತಿಂದು ಸೀಟ್‌ಗೆ ಅಂಟಿಸಿ ಹೋಗುತ್ತಾರೆ. ಇಂಥದ್ದೆಲ್ಲಾ ನೋಡುವಾಗ ಈ ಕಾನೂನು ನಮ್ಮಲ್ಲಿಯೂ ಇದ್ದರೆ ಚೆನ್ನಾಗಿತ್ತು ಎಂದನಿಸುವುದು ಅಲ್ವಾ?
ಒಕ್ಲಹೋಮ, ಯುಎಸ್‌ಎ
ಇಲ್ಲಿ ನೀವು ನಾಯಿಯನ್ನು ನೋಡಿ ಕೆಟ್ಟದಾಗಿ ಮುಖ ಸಿಂಡಿರಿಸುವಂತಿಲ್ಲ ಒಂದು ವೇಳೆ ಹಾಗೆ ಮಾಡಿದರೆ ಶಿಕ್ಷೆಯನ್ನು ಅನುಭವಿಸಬೇಕು.
ಜರ್ಮನಿ
ಜರ್ಮನಿಯಲ್ಲಿ ನೀವು ಗ್ಯಾಸ್ ಖಾಲಿಯಾಗಿ ಗಾಡಿಯನ್ನು ನಿಲ್ಲಿಸಿದರೆ ಅದಕ್ಕೆ ದಂಡ ಕಟ್ಟಬೇಕಾಗುತ್ತದೆ.
ಫಿಜಿ
ಫಿಜಿಯಲ್ಲಿ ಬಟ್ಟೆ ಬಿಚ್ಚಿ ಸನ್‌ಬತ್ ಮಾಡುವಂತಿಲ್ಲ, ನಿಮ್ಮ ಭುಜವನ್ನು ಮುಚ್ಚಿಕೊಳ್ಳಬೇಕು.
ಫ್ಲೋರಿಡಾದ ಮಿಯಾಮಿ
ನೀವು ಇಲ್ಲಿಗೆ ಹೋದರೆ ಪ್ರಾಣಿಗಳನ್ನು ನೋಡಿ ಮಿಮಿಕ್ರಿ ಮಾಡವಂತಿಲ್ಲ, ಒಂದು ವೇಳೆ ಮಾಡಿದರೆ ಶಿಕ್ಷೆಯಾಗುವುದು.
ಜಪಾನ್
ಪಾದಚಾರಿಗಳ ಮೇಲೆ ನೀರು ಹಾರಿಸಿ ಹೋದರೆ ಅದಕ್ಕೆ ಶಿಕ್ಷೆ ನೀಡಲಾಗುವುದು, ಇಂಥ ಕಾನೂನು ನಮ್ಮಲ್ಲಿಯೂ ಇದ್ದರೆ ಒಳ್ಳೆಯದಿತ್ತು, ಮಳೆಗಾಲದಲ್ಲಿ ಗಾಡಿಯವರು ಪಾದಚಾರಿಗಳು ಹೋಗುತ್ತಿದ್ದಾರೆ ಎಂದು ನೋಡದೆ ನೀರು ಹಾರಿಸಿ ಹೋಗುತ್ತಾರೆ.
ಇಂಗ್ಲೆಂಡ್
ಇಂಗ್ಲೆಂಡ್‌ನಲ್ಲಿ 10 ವರ್ಷದವರೆಗೆ ಹುಡುಗರು ಬೆತ್ತಲೆ ಗೊಂಬೆಗಳನ್ನೂ ನೋಡುವಂತಿಲ್ಲ.
ರಷ್ಯಾ
ರಷ್ಯಾದಲ್ಲಿ ನೀವು ದೂಳು ತುಂಬಿದ ಕಾರು ಓಡಿಸಿದರೆ ಫೈನ್ ಕಟ್ಟಬೇಕು. ನಮ್ಮಲ್ಲಿ ಆ ದೂಳು ಮೇಲೆ ಚಿತ್ರ ಬಿಡಿಸುವುದು, ಅಕ್ಷರಗಳನ್ನು ಬರೆಯುವುದು ಮಾಡುತ್ತೇವೆ.
ಸ್ವಿಟ್ಜರ್ಲೆಂಡ್
ಭಾನುವಾರ ನೀವು ಕಾರುಗಳನ್ನು ತೊಳೆಯುವಂತಿಲ್ಲ, ಶಬ್ದ ಮಾಲಿನ್ಯ ತಡೆಗಟ್ಟಲು ಈ ಕಾನೂನು ಅಂತೆ, ಹೇಗೆ ಎಂಬುವುದು ಗೊತ್ತಿಲ್ಲ.
ಥಾಯ್ಲೆಂಡ್
ಥಾಯ್ಲೆಂಡ್‌ನಲ್ಲಿ ಅಂಡರ್‌ವೇರ್ ಧರಿಸದೆ ಮನೆಯಿಂದ ಹೊರಗಡೆ ಹೋಗುವಂತಿಲ್ಲ. ಇಲ್ಲಿ ಅಂಥ ಕಾನೂನು ಇಲ್ಲ, ಆದರೆ ಅಂಡರ್‌ವೇರ್ ಧರಿಸದೆ ಹೊರಗಡೆ ಹೋಗುವ ಧೈರ್ಯ ಮಾಡುವವರು ತುಂಬಾ ಕಡಿಮೆ.
ಇಟಲಿ
ಒಬೆಸಿಟಿ ಮೈ ಇರುವವರು ಪಾಲಿಸ್ಟರ್ ಬಟ್ಟೆ ಧರಿಸುವಂತಿಲ್ಲ, ಪಾಲಿಸ್ಟರ್ ಬಟ್ಟೆಗೂ ಮೈ ತೂಕಕ್ಕೂ ಏನು ಸಂಬಂಧ ಅಲ್ವಾ? ಆದರೂ ಇಂಥದ್ದೊಂದು ಕಾನೂನು ಇದೆ.
ಬಲ್ಗೇರಿಯಾ
ಇಲ್ಲಿ ಫೈರ್ ಎಕ್ಸಿಟಿಂಗೈಸರ್ ಇಲ್ಲಿದೆ( ಕಾರಿಗೆ ಬೆಂಕಿ ಹೊತ್ತಿಕೊಂಡರೆ ಆರಿಸಲು) ಇಲ್ಲದೆ ಚಲಾಯಿಸುವಂತಿಲ್ಲ, ಅಲ್ಲಿ ಕಾನೂನು ಇದೆ, ನಮ್ಮಲ್ಲಿ ಈ ರೀತಿ ಕಾನೂನು ಇಲ್ಲದಿದ್ದರೂ ಕಾರಿನಲ್ಲಿದ್ದರೆ ಸುರಕ್ಷತೆ.
ಇಟಲಿಯ ವೆನಿಸ್
ಇಟಲಿಯಲ್ಲಿ ನೀವು ಪಾರಿವಾಳಕ್ಕೆ ಆಹಾರ ಹಾಕುವಂತಿಲ್ಲ ಒಂದು ವೇಳೆ ಹಾಕಿದರೆ ಅವರು ನಿಮಗೆ ಎಚ್ಚರಿಕೆ ನೀಡುತ್ತಾರೆ, ಆದರೂ ಕೇಳದಿದ್ದರೆ ದಂಡ ವಿಧಿಸಲಾಗುವುದು. ನಮ್ಮ ಬೆಂಗಳೂರಿನ ಬಹುತೇಕ ಕಡೆ ಪಾರಿವಾಳಗಳ ರಾಶಿಯೇ ಇದೆ, ಜನರು ಕೂಡ ಅದಕ್ಕೆ ಆಹಾರ ಹಾಕುತ್ತರೆ, ನೀರು ಇಡುತ್ತಾರೆ, ಇದೇ ಅಭ್ಯಾಸ ಇಟಲಿಗೆ ಹೋದರೆ ಮಾಡಬೇಡಿ.
ನ್ಯೂಜೆಲೆಂಟ್
ನ್ಯೂಜಿಲೆಂಡ್ ಹೂಂಜ ಕೋಲೀ ಜೊತೆ ಹಾಟ್ ಏರ್ ಬಲೂನ್‌ನಲ್ಲಿ ಹಾರುವಂತಿಲ್ಲ. ಹೀಗೆ ತುಂಬಾನೇ ಚಿತ್ರ ವಿಚಿತ್ರ ಕಾನೂನುಗಳು ಇತರ ದೇಶಗಳಲ್ಲಿ ಇದೆ..



Click it and Unblock the Notifications
