Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
'ಟಾಟಾ ಸುಮೋ' ಎಂಬ ವಾಹನ ಹುಟ್ಟಿದ್ದೇಗೆ..? ಈ ಕಥೆ ನೀವು ಕೇಳಿರಲು ಸಾಧ್ಯವೇ ಇಲ್ಲ..!
ಭಾರತದಲ್ಲಿ ವಾಹನ ಮಾರಾಟ ಕ್ಷೇತ್ರ ಕ್ಷಿಪ್ರ ಗತಿಯಲ್ಲಿ ಬೆಳವಣಿಗೆಯಾಗುತ್ತಿದೆ. ಕೇವಲ 10 ವರ್ಷದಲ್ಲಿ ಈ ಪ್ರಗತಿ ದುಪ್ಪಟ್ಟಾಗಿದೆ. ಈಗ ಮಾರುಕಟ್ಟೆಯಲ್ಲಿ ಹತ್ತಾರು ಕಂಪನಿಯ ವಾಹನಗಳಿಗೆ ಹತ್ತಾರು ಕಂಪನಿ ಈಗ ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ಕೆಲವು ದೇಶೀಯ ಕಂಪನಿಯಾಗಿದ್ದರೆ ಮತ್ತೆ ಕೆಲವು ವಿದೇಶ ಕಂಪನಿಗಳಾಗಿವೆ.
ನೀವು ಈ ದೇಶೀಯ ಕಂಪನಿಯಲ್ಲಿ ಟಾಟಾ ಹೆಸರು ಕೇಳೇ ಕೇಳಿರುತ್ತೀರಿ. ಹಿಂದಿನ ಕಾಲದಿಂದ ಇಂದಿಗೂ ವಾಹನ ಕ್ಷೇತ್ರದಲ್ಲಿ ಟಾಟಾ ಅವರ ವಾಹನಗಳೇ ಮೇಳುಗೈ ಸಾಧಿಸಿವೆ. ರತನ್ ಟಾಟಾ ಅವರ ಟಾಟಾ ಮೋಟಾರ್ಸ್ 1990 ರ ದಶಕದಲ್ಲಿ ಭಾರತದಲ್ಲಿ ಯಶಸ್ವಿ ಉದ್ಯಮವಾಗಿ ಬದಲಾಗಿತ್ತು.

ಟಾಟಾ ಸಂಸ್ಥೆಯ ಎಸ್ಟೀಮ್ ಕಾರು ಅಂದು ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿತ್ತು. ಟಾಟಾ ಸಹ ಬಡವರ ಬದುಕಿನಲ್ಲೂ ಕಾರುಗಳು ಬರಬೇಕು ಎಂದು ಟಾಟಾ ನ್ಯಾನೋ ಎಂಬ ಕಡಿಮೆ ಬೆಲೆಯ ಕಾರನ್ನೂ ಸಹ ಮಾರುಕಟ್ಟೆಗೆ ಪರಿಚಯಿಸಿದ್ದು ನಿಮಗೆ ಗೊತ್ತಿದೆ.
ಆದ್ರೆ ಟಾಟಾ ಕಂಪನಿಯ ಕಾರುಗಳಲ್ಲಿ ಅತ್ಯಂತ ಯಶಸ್ವಿಯಾಗಿದ್ದು ಅಂದ್ರೆ ಅದು ಟಾಟಾ ಸುಮೋ ಕಾರು. ಟಾಟಾ ಸುಮೋಗಳು ಭಾರತದ ಬೀದಿ ಬೀದಿಯಲ್ಲಿ ಸುತ್ತಾಡಿವೆ. ಇದು ಅತ್ಯಂತ ಜನಪ್ರಿಯ ವಾಹನಗಳಲ್ಲಿ ಒಂದಾಯಿತು. ಕೇವಲ ಮೂರು ವರ್ಷಗಳಲ್ಲಿ, ತಯಾರಕರು 1 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕೀರ್ತಿ ಪಡೆದರು.
ಆದರೆ ನಿಮಗೆ ಆ ಕಾರಿಗೆ ಟಾಟಾ ಸೊಮೋ ಎಂದು ಹೆಸರು ಬರಲು ಕಾರಣವೇನು ಎಂಬುದು ಗೊತ್ತಾ? ಈ ಕಾರು ಹುಟ್ಟಿದ್ದು ಹೇಗೆ ಇದರ ಹಿಂದಿರುವ ಅಚ್ಚರಿಯ ಕಥೆ ಏನು ಗೊತ್ತಾ?
ಟಾಟಾ ಸಂಸ್ಥೆಯ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದವರು ಎಲ್ಲರು ಒಟ್ಟಿಗೆ ಕುಳಿತು ಮಧ್ಯಾಹ್ನದ ಊಟ ಸವಿಯುತ್ತಿದ್ದರಂತೆ ಆದರೆ ಮೂಲ್ಗಾವ್ಕರ್ ಎಂಬ ಉದ್ಯೋಗಿಯೊಬ್ಬ ಮಾತ್ರ ಊಟಕ್ಕೆ ಹೊರಗೆ ಹೋಗುತ್ತಿದ್ದರೆ. ಕೆಲವು ಗಂಟೆಗಳ ಬಳಿಕ ಅವರು ಊಟ ಮುಗಿಸಿ ಕೆಲಸಕ್ಕೆ ವಾಪಾಸು ಬರುತ್ತಿದ್ದರಂತೆ. ಇದು ದಿನಾಲು ನಡೆಯುತ್ತಲೇ ಇತ್ತಂತೆ.
ಆದ್ರೆ ಕಂಪನಿಯಲ್ಲಿ ಆತನ ವಿರುದ್ಧ ವದಂತಿಯೊಂದು ಹರಡಿತ್ತಂತೆ. ಮೂಲ್ಗಾವ್ಕರ್‌ಗೆ ಟಾಟಾ ವಿತರಕರು ಪಂಚತಾರಾ ಹೋಟೆಲ್‌ನಲ್ಲಿ ನಿತ್ಯವು ಊಟ ಕೊಡಿಸುತ್ತಾರೆ. ಹೀಗಾಗಿ ಅವರು ಕಂಪನಿಯ ಒಳಗೆ ಊಟ ಮಾಡುವುದಿಲ್ಲ ಎಂಬ ಗುಸು ಗುಸು ಹಬ್ಬಿತ್ತಂತೆ.
ಆದ್ರೆ ಒಂದು ದಿನ ಊಟದ ಸಮಯಕ್ಕೆ ಕಂಪನಿಯ ಉದ್ಯೋಗಿಗಳು ಆತನನ್ನು ಹಿಂಬಾಲಿಸಲು ನಿರ್ಧರಿಸಿದರಂತೆ. ಅದೇ ಊಟದ ಸಮಯಕ್ಕೆ ಮೂಲ್ಗಾವ್ಕರ್ ಹೊರ ಹೋದಾಗ ಅವರನ್ನು ಹಿಂಬಾಲಿಸಿದರು. ಆ ವೇಳೆ ಮೂಲ್ಗಾವ್ಕರ್ ಡಾಬಾ ಒಂದರ ಬಳಿ ಬಂದು ಅಲ್ಲಿದ್ದ ಡ್ರೈವರ್‌ಗಳ ಜೊತೆ ಅವರು ಊಟ ಮಾಡುತ್ತಿದ್ದರಂತೆ. ಅವರು ರಿಸರ್ಚ್ ಟೀಮ್‌ನಲ್ಲಿದ್ದ ಕಾರಣ ಟಾಟಾ ಸಂಸ್ಥೆಯ ಟ್ರಕ್ ಬಳಸುತ್ತಿದ್ದ ಡ್ರೈವರ್‌ಗಳು ಯಾವ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಮಾಹಿತಿ ಕಲೆ ಹಾಕಲು ಅವರು ಈ ರೀತಿ ಮಾಡುತ್ತಿದ್ದರಂತೆ.
ಈ ವಿಚಾರ ಇಡೀ ಸಂಸ್ಥೆಗೆ ತಿಳಿದು ಅವರು ಸಂಸ್ಥೆಯಲ್ಲಿ ಸ್ಪೂರ್ತಿದಾಯಕ ಉದ್ಯೋಗಿ ಎನಿಸಿಕೊಂಡರಂತೆ. ಈ ಡಾಬಾ ಬಳಿ ಡ್ರೈವರ್‌ಗಳು ಹೇಳಿದ ವರದಿಯಂತೆ ಅವರು ಸಂಶೋದನ ತಂಡದ ಜೊತೆ ಚರ್ಚಿಸಿ ಟ್ರಕ್‌ಗಳಲ್ಲಿ ಇದ್ದ ನ್ಯೂನತೆ ಪರಿಹರಿಸುತ್ತಿದ್ದರಂತೆ. ಬಳಿಕ ಅವರ ಹೆಸರಲ್ಲೇ ಟಾಟಾ ಒಂದು ವಾಹನ ಹೊರತರುವ ಯೋಚನೆ ಮಾಡಿತ್ತು, ಅದೇ ಟಾಟಾ ಸುಮೋ ಎಂದು ಹೆಸರಾಯಿತು. ಏಕೆಂದರೆ ಆ ಉದ್ಯೋಗಿಯ ಪೂರ್ಣ ಹೆಸರು ಸುಮಂತ್ ಮೂಲಗಾಂವ್ಕರ್ ಎಂದಾಗಿತ್ತು. ಹೀಗಾಗಿ ಟಾಟಾದ ವಾಹನಕ್ಕೆ ಟಾಟಾ ಸುಮೊ ಎಂದು ಹೆಸರಿಡಲಾಗಿತ್ತು.
ಟಾಟಾ ಸುಮೊ ಮಾರುಕಟ್ಟೆಗೆ ಬಂದು ಪ್ರಸಿದ್ಧಿ ಪಡೆದಿದ್ದು, ನಮಗೆಲ್ಲಾ ತಿಳಿದಿರುವ ವಿಚಾರ. ತೀರ ಇತ್ತೀಚಿಗೆ ಮತ್ತೊಮ್ಮೆ ಟಾಟಾ ಇದೇ ವಾಹನವನ್ನು ಬೇರೆ ಡಿಸೈನ್‌ನೊಂದಿಗೆ ಹೊರತಂದಿತ್ತು.



Click it and Unblock the Notifications

