Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಟ್ರೋಲ್, ಮೀಮ್ ಆಗಿದ್ದ ಈ ಓಂ ಪ್ರಕಾಶ್ ಅಲಿಯಾಸ್ ಗ್ಸೇವಿಯರ್ ಪಪಿಟೋ ಯಾರು ಗೊತ್ತಾ?
ಇಂಟರ್‌ನೆಟ್ ದುನಿಯಾದಲ್ಲಿ ನೀವಿಂದು ಹತ್ತಾರು ಟ್ರೋಲ್‌ಗಳು, ಫೋಟೋಗಳು, ವಿಡಿಯೋಗಳು, ಅಚ್ಚರಿಯ ವಿಚಾರಗಳು ನಡೆಯೋದನ್ನು ನೋಡಿರುತ್ತೀರಿ. ಒಂದೊಂದು ದಿನ ಒಂದೊಂದು ಟ್ರೋಲ್‌ಗಳು ನಿಮ್ಮ ಕಣ್ಣಿಗೆ ಬೀಳುತ್ತವೆ. ಸಾಮಾಜಿಕ ಜಾಲತಾಣಗಳು ಇಂದು ಇಂತಹ ಲಕ್ಷ ಲಕ್ಷ ಪೇಜ್‌ಗಳಿಂದ ತುಂಬಿವೆ. ಹಾಗೆ ಕೆಲವು ವರ್ಷದಿಂದ ಈ ಪ್ರಮಾಣ ಏರಿಕೆಯಾಗಿರುವುದನ್ನು ಕೂಡ ನೀವು ನೋಡಿರಬಹುದು.
ಹಾಗೆ ನೀವು ಕೆಲವು ವರ್ಷದಿಂದ ವ್ಯಕ್ತಿಯೊಬ್ಬರ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವುದನ್ನು ನೋಡಿರುತ್ತಿರಿ. ದಪ್ಪ ಮೀಸೆಯ ವ್ಯಕ್ತಿಯ ಮುಖ ಮಾತ್ರ ಕಾಣುವಂತಹ ಒಂದು ಫೋಟೋ ಅದಾಗಿದೆ. ಎಲ್ಲಾ ಟ್ರೋಲ್ ಪೇಜ್‌ಗಳು, ಫೇಸ್‌ಬುಕ್, ಇನ್ಸ್‌ಸ್ಟಾ ಗ್ರಾಮ್‌ನಲ್ಲಿ ಸಾವಿರಾರು ಖಾತೆಗಳು ಈ ಒಂದು ಫೋಟೋಗಳಿಂದ ತುಂಬಿರುವುದು ನಾವು ನೋಡಬಹುದು.

ಭಾರತದಲ್ಲಿ ಗ್ಸೇವಿಯರ್ ಎಂಬ ಹೆಸರಿನಲ್ಲಿ ಹತ್ತಾರು ಖಾತೆಗಳಿ ಈ ವ್ಯಕ್ತಿಯ ಫೋಟೋ ಬಳಸಿ ರಚಿಸಲಾಗಿದೆ. ಈ ಫೋಟೋ ಇರುವ ಖಾತೆಯಿಂದ ಬಂದಿರುವ ಕೆಲವು ಕಮೆಂಟ್‌ಗಳು ಟ್ರೋಲ್ ಆಗುತ್ತವೆ, ವೈರಲ್ ಆಗುವುದು ನೋಡಬಹುದು. ಆದ್ರೆ ಈ ಮೇಲಿನ ಫೋಟೋದಲ್ಲಿರುವ ವ್ಯಕ್ತಿ ಯಾರು? ತನ್ನ ಕಮೆಂಟ್‌ಗಳಿಂದ ಇಡೀ ವಿಶ್ವವನ್ನೇ ಬೆರಗಾಗಿಸಿದ ಈತ ಯಾರು?
ಆತನ ಫೋಟೋ ಬಳಸಿದ್ದು ಯಾರು? ಆತ ವೈರಲ್ ಆಗಲು ಕಾರಣವಾಗಿದ್ದಾದರು ಏನು? ಹೀಗೆ ನಿಮ್ಮಲ್ಲಿರುವ ಹಲವು ಪ್ರಶ್ನೆಗಳಿಗೆ ನಾವಿಂದು ಉತ್ತರ ಹುಡುಕುವ ಪ್ರಯತ್ನ ಮಾಡಿದ್ದೇವೆ. ಗ್ಸೇವಿಯರ್ ಎಂಬ ಹೆಸರಿನಲ್ಲಿರುವ ಖಾತೆಯಲ್ಲಿ ಈ ವ್ಯಕ್ತಿಯ ಫೋಟೋ ನೀವು ಕೂಡ ನೋಡಿರಬಹುದು. ಆದ್ರೆ ಈ ಮೊದಲು ಆತನ ಹೆಸರನ್ನು ಪಾಕಲು ಪಪಿಟೋ (Pakalu Papito) ಎಂಬ ಹೆಸರಿನಿಂದ ಕರೆಯಲಾಗಿತ್ತು ಇದೂ ಕೂಡ ಆತನ ನಿಜವಾದ ಹೆಸರು ಆಗಿರಲಿಲ್ಲ.
ಮೊದಲು ಆಗಿನ ಟ್ವಿಟರ್ (ಈಗಿನ ಎಕ್ಸ್) ನಲ್ಲಿ ಮೊದಲ ಬಾರಿಗೆ ಆತನ ಫೋಟೋ ಬಳಸಿ ಪಾಕಲು ಪಪಿಟೋ ಎಂಬ ಹೆಸರಿನ ಖಾತೆ ತೆರೆಯಲಾಗಿತ್ತು, ಚಿತ್ರ ವಿಚಿತ್ರ ಟ್ವೀಟ್‌ಗಳು, ಟ್ರೋಲಿಂಗ್‌ನಿಂದ ಈ ಹೆಸರು ಬಹುಬೇಗ ಎಲ್ಲರ ಗಮನಕ್ಕೂ ಬಂತು. ಹಾಗೆ ನೋಡುತ್ತಲೇ ಮಿಲಿಯನ್‌ಗೂ ಅಧಿಕ ಚಂದಾದಾರರು ಖಾತೆಯ ಫಾಲೋ ಮಾಡಿದರು, ಆದ್ರೆ ಯಾರಿಗೂ ಈತ ಯಾರು? ಈ ಖಾತೆ ಬಳಸುತ್ತಿರುವವರು ಯಾರು ಎಂಬುದು ತಿಳಿದಿರಲಿಲ್ಲ.
ಆದ್ರೆ ಒಂದು ದಿನ ಟ್ವಿಟರ್ ಈ ಖಾತೆಯನ್ನು ಶಾಶ್ವತವಾಗಿ ನಿರ್ಬಂಧಿಸಿತು, ಇದರಿಂದ ಆತ ಯಾರು ಎಂಬುದು ಯಾರಿಗೂ ತಿಳಿಯಲಿಲ್ಲ. ಆದ್ರೆ ಕೆಲ ದಿನದಲ್ಲಿ ಇನ್ಸ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಲ್ಲಿ ಈ ಫೋಟೋ ಬಳಸಿ ಹಲವು ಖಾತೆಗಳು ಹುಟ್ಟಿಕೊಂಡಿದ್ದವು. ಅದರಲ್ಲಿ ಗ್ಸೇವಿಯರ್ ಎಂಬ ಖಾತೆ ಮತ್ತೆ ವೈರಲ್ ಆಗಿತ್ತು. ಹಾಗೆ ಗ್ಸೇವಿಯರ್ ಹೆಸರು ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು.
ಹಾಗಾದ್ರೆ ಈ ಫೋಟೋದಲ್ಲಿರುವ ವ್ಯಕ್ತಿ ಯಾರು?
ಈ ಫೋಟೊದಲ್ಲಿದ್ದ ವ್ಯಕ್ತಿ ಭಾರತೀಯನೇ ಆದರು ಆತನ ಫೋಟೋ ಬಳಸಿ ತೆರೆಯಲಾಗಿದ್ದ ಖಾತೆಗಳನ್ನು ಯಾರು ಬಳಸುತ್ತಿದ್ದರು ಎಂಬುದು ಇಂದಿಗೂ ನಿಗೂಢ. ಆದರೆ ಈ ಫೋಟೋದಲ್ಲಿರುವ ವ್ಯಕ್ತಿಯು ಐಐಟಿ ಕಾನ್ಪುರ್‌ನಲ್ಲಿ ಪ್ರಾಧ್ಯಾಪಕರು ಆವರ ನಿಜ ಹೆಸರು ಓಂ ಪ್ರಕಾಶ್ ಎಂದು ಬಹಿರಂಗ ಪಡಿಸಿದ್ದ ಮತ್ತೊಂದು ಪೋಸ್ಟ್ ಗಳು ಕೂಡ ಹರಿದಾಡಿದವು. ಟ್ರೋಲ್‌ಗಳಲ್ಲಿ ಆತನ ಫೋಟೋ ಕಾಣಿಸಿಕೊಂಡಾಗಿನಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು ಎಂಬುದಾಗಿಯು ವಾದ ಮಾಡಲಾಗಿತ್ತು.
ಆದ್ರೆ ಓಂ ಪ್ರಕಾಶ್ ಈ ಕುರಿತು ಎಲ್ಲಿಯೂ ತನ್ನ ಕುರಿತು ಹೇಳಿಕೊಂಡಿಲ್ಲ, ಹಾಗೆ ತನ್ನ ಫೋಟೋ ಇಷ್ಟೊಂದು ವೈರಲ್ ಆಗಿರುವ ಕುರಿತಂತೆ ಆತ ಎಲ್ಲಿಯೂ ಹೇಳಿಕೆ ನೀಡಿಲ್ಲ. ಆದ್ರೆ ಆತನ ಫೋಟೋ ಇಂದಿಗೂ ಹರಿದಾಡುತ್ತಲೇ ಇದೆ.



Click it and Unblock the Notifications
