Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
16 ವರ್ಷದ ಹಿಂದೆ ಕಳೆದಿದ್ದ ಉಂಗುರ ಕ್ಯಾರೆಟ್‌ನಲ್ಲಿ ಸಿಕ್ತು! ಇದೆಂಥ ರೋಚಕ ಕಥೆ ಗೊತ್ತಾ?
ಕಷ್ಟ ಪಟ್ಟು ಬೆವರು ಸುರಿಸಿ ದುಡಿದ ಹಣದಿಂದ ನೀವು ಯಾವುದೇ ವಸ್ತು ಖರೀದಿಸಿದರು ಅದರು ಕೊನೆಯವರೆಗೂ ನಿಮ್ಮ ಬಳಿಯೇ ಇರಲಿದೆ ಎಂಬ ಮಾತನ್ನು ಹಿರಿಯರು ಹೇಳುವುದು ಕೇಳಿರಬಹುದು. ಹಾಗೆ ಒಂದು ವೇಳೆ ನೀವು ಅಂತಹ ವಸ್ತುವನ್ನು ಕಳೆದುಕೊಂಡಿದ್ದರೆ ಅದು ಕೂಡ ನಿಮಗೆ ಮರಳಿ ಸಿಗಲಿದೆ ಎಂಬುದನ್ನು ಕೂಡ ಹಿರಿಯರು ಹೇಳಿರುತ್ತಾರೆ. ಆದ್ರೆ ಇಂತಹ ಮಾತುಗಳು ನಿಜವಾಗುವಂತಹ ಘಟನೆಯೊಂದು ನಡೆದು ಎಲ್ಲರನ್ನು ಅಚ್ಚರಿ ತಳ್ಳಿದ್ದ ಕಥೆ ನಿಮಗೆ ಗೊತ್ತಾ?
ಹೌದು ಮಹಿಳೆಯೊಬ್ಬರು ಕಳೆದುಕೊಂಡಿದ್ದ ಉಂಗುರ ಬರೋಬ್ಬರಿ ದಶಕದ ಬಳಿಕ ಅವರಿಗೆ ಮರಳಿ ಸಿಕ್ಕಿರುವ ಅಪರೂಪದಲ್ಲಿ ಅಪರೂಪದ ಘಟನೆ ಇದು. ತನ್ನ ಮನೆಯಲ್ಲಿ ಗಂಡ ತೊಡಿಸಿದ್ದ ಉಂಗುರವೊಂದು 16 ವರ್ಷದ ಬಳಿಕ ಮತ್ತೆ ಆಕೆಗೆ ಸಿಕ್ಕಿರುವ ಅಪರೂಪದ ಘಟನೆ ಇದು. ಹಾಗಾದ್ರೆ ಏನಿದು ವಿಚಿತ್ರ ಘಟನೆ ಆಗಿದ್ದಲ್ಲಿ ಎಂಬುದನ್ನು ನೀವು ಸಹ ತಿಳಿದುಕೊಳ್ಳಿ.

ಈ ಘಟನೆ ನಡೆದಿರುವುದು ಕೆನಡಾದ ಆಲ್ಬರ್ಟಾದಲ್ಲಿ 2011ರಲ್ಲಿ ನಡೆದಿದ್ದ ಈ ಘಟನೆ ಎಲ್ಲರಲ್ಲೂ ಅಚ್ಚರಿ ತರಿಸುವಂತದ್ದು, 84 ವರ್ಷದ ಮೇರಿ ಗ್ರಾಂಸ್ ಎಂಬಾಕೆ ತನ್ನ ಉಂಗುರ ಕಳೆದುಕೊಂಡು 16 ವರ್ಷದ ಬಳಿಕ ಮರಳಿ ಪಡೆದ ಕಥೆ ಇದು. ಆಕೆ ತನ್ನ ಮದುವೆಯಲ್ಲಿ ಗಂಡನಿಂದ ಪಡೆದಿದ್ದ ವಜ್ರದ ಉಂಗುರವನ್ನು ಧರಿಸಿ ಮನೆ ಎದುರಿನ ಸಣ್ಣ ಕೈ ತೋಟದಲ್ಲಿ ಕೆಲಸ ಮಾಡುತ್ತಿದ್ದಳು. ಕೆಲಸ ಮುಗಿಸಿ ಮನೆಗೆ ಬಂದಾಗ ಆಕೆಯ ಕೈಯಲ್ಲಿದ್ದ ಉಂಗುರ ನಾಪತ್ತೆಯಾಗಿತ್ತು.
ಅದು ಕೆಲಸ ಮಾಡುತ್ತಿದ್ದ ಕಡೆ ಕಳೆದುಹೋಗಿತ್ತು, ಆಕೆ ಎಷ್ಟು ಹುಡುಕಾಡಿದ್ದರೂ ಮರಳಿ ಪಡೆಯಲು ಸಾಧ್ಯವಾಗಿರಲಿಲ್ಲ. ಈ ವಿಚಾರವನ್ನು ಆಕೆ ತನ್ನ ಗಂಡನ ಬಳಿ ಹೇಳಲೂ ಇಲ್ಲ. ಆದ್ರೆ ಆಕೆ ಅದೇ ರೀತಿಯ ಕಡಿಮೆ ಬೆಲೆಯ ಉಂಗುರವನ್ನು ಖರೀದಿಸಿ ಕೈ ಬೆರಳಿಗೆ ಹಾಕಿಕೊಂಡಿದ್ದಳು, ಇದರಿಂದ ಮನೆಯಲ್ಲಿ ಯಾರಿಗೂ ಈ ವಿಚಾರ ತಿಳಿಯಲೇ ಇಲ್ಲ.
ಕ್ಯಾರೆಟ್ ಜೊತೆ ಹೊರಬಂತು ವಜ್ರದ ಉಂಗುರ
ಆದ್ರೆ ಈ ಉಂಗುರ ಕಳೆದುಹೋಗಿ ಬರೋಬ್ಬರಿ 16 ವರ್ಷವೇ ಕಳೆದಿತ್ತು. ಆ ತೋಟದಲ್ಲಿ ಹಲವು ವರ್ಷಗಳ ಕಾಲ ತರಕಾರಿಗಳ ಬೆಳೆದರು ಉಂಗುರದ ಸುಳಿವು ಇರಲಿಲ್ಲ. ಈ ನಡುವೆ ಆಕೆಯ ಪುತ್ರನಿಗೂ ಮದುವೆಯಾಗಿ ಸೊಸೆ ಮನೆಗೆ ಬಂದಿದ್ದಳು, ಮೇರಿ ಗ್ರಾಂಸ್ ಈಗ ತೋಟದಲ್ಲಿ ಕೆಲಸ ಮಾಡುವ ಬದಲಾಗಿ ಹೆಚ್ಚು ಸಮಯ ವಿಶ್ರಾಂತಿ ಪಡೆಯುತ್ತಿದ್ದಳು. ಆದ್ರೆ ತೋಟದ ಕೆಲಸವನ್ನು ಸೊಸೆ ನೋಡಿಕೊಳ್ಳುತ್ತಿದ್ದಳು.
ಆದರೆ ಒಂದು ಕ್ಯಾರೆಟ್ ಹೊರ ತೆಗೆಯುವಾಗ ಉಂಗುರವೊಂದು ಕ್ಯಾರೆಟ್ ನಡುವೆ ಸಿಲುಕಿರುವುದು ಸೊಸೆ ಗಮನಿಸಿದ್ದಾಳೆ. ತಕ್ಷಣ ಆ ಕ್ಯಾರೆಟ್ ಅನ್ನು ತಂದು ಅತ್ತೆಯ ಮುಂದಿಟ್ಟು ಈ ಉಂಗುರ ನಿಮ್ಮ ಕೈಯಲ್ಲಿರುವ ಉಂಗುರದಂತಿದೆ ಎಂದು ತೋರಿಸಿದಾಗ ಮೇರಿ ಅಕ್ಷರಶಃ ಅಚ್ಚರಿಗೆ ಒಳಗಾಗಿದ್ದಾಳೆ. ದಶಕದ ಕಾಲ ನೆಲದಲ್ಲಿ ಹುದುಗಿ ಹೋಗಿದ್ದ ಉಂಗುರ ಕ್ಯಾರೆಟ್ ಮೂಲಕ ಹೊರಬಂದಿರುವುದು ನೋಡಿ ಆಕೆ ಶಾಕ್ ಆಗಿದ್ದಾಳೆ.
ಇದಾದ ಬಳಿಕ ಆಕೆ ತನ್ನ ಉಂಗುರು ಕಳೆದುಕೊಂಡ ವಿಚಾರವಾಗಿ ಹೇಳಿಕೊಂಡಿದ್ದಾಳೆ. ಮನೆಯವರು ಕೊನೆಗೂ ಉಂಗುರವನ್ನು ಕ್ಯಾರೆಟ್‌ನಿಂದ ಬೇರ್ಪಡಿಸಿದ್ದಾರೆ. ಆದ್ರೆ 16 ವರ್ಷದ ಬಳಿಕ ಮತ್ತೆ ಅದೇ ಉಂಗುರ ಮರಳಿ ಪಡೆದಿರುವುದು ಅಚ್ಚರಿ ಮೂಡಿಸುತ್ತೆ. ಹೀಗಾಗಿ ಇದೊಂದು ಅಪರೂಪದ ಘಟನೆ ಎನ್ನಬಹುದು. ನೀವು ಬೆವರು ಸುರಿಸಿ ದುಡಿದ ಹಣದಲ್ಲಿ ಪಡೆದ ವಸ್ತುಗಳು ನಿಮ್ಮಿಂದ ಯಾರು ಕೂಡ ದೂರ ಮಾಡಲು ಸಾಧ್ಯವಿಲ್ಲ ಅನ್ನೋದಕ್ಕೆ ಇದೊಂದು ಸಣ್ಣ ಉದಾಹರಣೆಯಾಗಿದೆ.



Click it and Unblock the Notifications
