Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಬ್ಯಾಟ್‌ಮ್ಯಾನ್ ಸಿನಿಮಾ ನೈಜ ಹೀರೋ ಕಥೆ ಅನ್ನೋದು ನಿಮಗೆ ಗೊತ್ತಾ? ನಿಜ ಜೀವನದ ಹೀರೋ ಯಾರು?
ನೀವೆಲ್ಲಾ ಹಾಲಿವುಡ್ ಸಿನಿಮಾಗಳಲ್ಲಿ ಸೂಪರ್ ಹೀರೋ ನೋಡಿರುತ್ತೀರಿ. ಸೂಪರ್ ಮ್ಯಾನ್, ಬ್ಯಾಟ್ ಮ್ಯಾನ್, ಸ್ಪೈಡರ್ ಮ್ಯಾನ್, ಐರನ್ ಮ್ಯಾನ್ ಹೀಗೆ ಹತ್ತಾರು ಪಾತ್ರಗಳು ಇಂದಿಗೂ ಜೀವಂತಾಗಿವೆ. ಅದರಲ್ಲೂ ಈ ಸೂಪರ್ ಹೀರೋ ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಗಳಿಸುವ ಸಿನಿಮಾಗಳಾಗಿವೆ. ಹಾಗೆ ನೀವು ಬ್ಯಾಟ್ ಮ್ಯಾನ್ ಕುರಿತು ಸಹ ನೋಡಿರಬಹುದು.
ಬ್ಯಾಟ್ ಮ್ಯಾನ್ ಆಧಾರಿತ ಟ್ರೈಲಜಿ ಸಿನಿಮಾ ನೋಡಿರಬಹುದು. ಬ್ಯಾಟ್ ಮ್ಯಾನ್ ಆರಂಭದಲ್ಲಿ ಒಂದು ಕಾಮಿಕ್ ಪುಸ್ತಕದಲ್ಲಿ ಬರುತ್ತಿದ್ದ ಸಾಮಾನ್ಯ ಕಾರ್ಟೂನ್ ಆಗಿತ್ತು. ಆದ್ರೆ 2005ರಲ್ಲಿ ಬ್ಯಾಟ್‌ಮ್ಯಾನ್ ಬಿಗಿನ್ಸ್ ಎಂಬ ಸಿನಿಮಾ ಹೊರಬಂದು ಈ ಬ್ಯಾಟ್‌ಮ್ಯಾನ್ ಇಡೀ ವಿಶ್ವದಲ್ಲೇ ಫೇಮಸ್ ಆಗಿತ್ತು. ಎಲ್ಲರೂ ಬ್ಯಾಟ್‌ಮ್ಯಾನ್ ಸಿನಿಮಾ ಅಥವಾ ಆ ಪಾತ್ರವನ್ನು ಎಲ್ಲಾದರೊಂದು ಕಡೆ ನೋಡಿಯೇ ನೋಡಿರುತ್ತೀರಿ.

ಬ್ಯಾಟ್‌ಮ್ಯಾನ್ ಬಿಗಿನ್ಸ್ ಬಳಿಕ 2008ರಲ್ಲಿ ದಿ ಡಾರ್ಕ್ ನೈಟ್ ಹಾಗೆ 2012ರಲ್ಲಿ ದಿ ಡಾರ್ಕ್ ನೈಟ್ ರೈಸಸ್ ಎಂಬ ಹೆಸರಿನಲ್ಲಿ ಮೂರು ಸಿನಿಮಾ ಬಂದಿವೆ. ಈ ಎಲ್ಲಾ ಸಿನಿಮಾಗಳು ಒಂದಕ್ಕೊಂದು ಸಂಬಂಧ ಹೊಂದಿವೆ. ಹೀಗಾಗಿ ಇದನ್ನು ಟ್ರೈಲಜಿ ಎಂದು ಕರೆಯಲಾಗಿದೆ. ಆದ್ರೆ ಈ ಬ್ಯಾಟ್‌ಮ್ಯಾನ್ ಪಾತ್ರ ನೈಜ ಕಥೆ ಆಧಾರಿತ ಸಿನಿಮಾ ಎಂಬುದು ನಿಮಗೆ ಗೊತ್ತಾ?
ಬ್ಯಾಟ್‌ಮ್ಯಾನ್ ಸಮಾಜದಲ್ಲಿನ ದುಷ್ಟರ ವಿರುದ್ಧ ಹೋರಾಡುವ ಹಾಗೂ ಅವರಿಗೆ ನ್ಯಾಯ ನೀಡುವ ಒಂದು ಪಾತ್ರವಾಗಿದೆ. ಆದ್ರೆ ಇದು ನಿಜಜೀವನದಲ್ಲಿ ನಡೆದಿರುವ ಒಂದು ಕತೆಯ ಎಳೆಯನ್ನು ಸಿನಿಮಾ ಮಾಡಿರುವ ಅಚ್ಚರಿಯ ಸತ್ಯ ನಿಮಗೆ ಗೊತ್ತಾ? ಹಾಗಾದ್ರೆ ಈ ನಿಜ ಜೀವನದ ಬ್ಯಾಟ್‌ಮ್ಯಾನ್ ಯಾರು? ಆತನ ಜೀವನದಲ್ಲಿ ನಡೆದಿರೋದೇನು ಎಂಬುದನ್ನು ನಾವಿಂದು ಹೇಳುತ್ತೇವೆ.
ಸಿನಿಮಾದಲ್ಲಿ ಕಾಣಿಸೋ ಈ ಬ್ಯಾಟ್‌ಮ್ಯಾನ್ ಇಬ್ಬರು ನಿಜ ಸೂಪರ್ ಹೀರೋಗಳ ಜೀವನಾಧಾರಿತ ಕಥೆಯಂತೆ. ಇಬ್ಬರ ವ್ಯಕ್ತಿತ್ವದಿಂದ ಸ್ಪೂರ್ತಿ ಪಡೆದು ಹುಟ್ಟಿಕೊಂಡ ಒಂದು ದೃಶ್ಯಕಾವ್ಯ. ಮೊದಲು ಈ ಬ್ಯಾಟ್‌ಮ್ಯಾನ್ ಎಂಬ ಪಾತ್ರವನ್ನು ಬಿಲ್ ಫಿಂಗರ್ ಪರಿಯಿಸಿದರು. ಮೊದಲು ಬ್ಯಾಟ್ ಮ್ಯಾನ್ ಪಾತ್ರ ಹುಟ್ಟು ಕಾರಣವಾಗಿದ್ದು ಸ್ಕಾಟಿಷ್‌ನ ರಾಬರ್ಟ್ ದಿ ಬ್ರೂಸ್ ಎಂಬ ವ್ಯಕ್ತಿಯಂತೆ. ಆತ ಪಾಪ್ ಕಲ್ಚರ್‌ನ ಅತ್ಯಂತ ಹೆಸರಾಂತ ವ್ಯಕ್ತಿಯಾಗಿದ್ದ. ಸ್ಕಾಟ್‌ಲೆಂಡ್‌ನಲ್ಲಿ 20ಕ್ಕೂ ಹೆಚ್ಚು ವರ್ಷ ಆಳ್ವಿಕೆ ನಡಸಿದ್ದ ರಾಜನ ಹೆಸರು ಕೂಡ ಬ್ರೂಸ್ ಎಂಬುದಾಗಿತ್ತು. ಹೀಗಾಗಿ ಬ್ಯಾಟ್‌ಮ್ಯಾನ್ ಪಾತ್ರವನ್ನು ಆತನ ಜೀವನದ ಆಧಾರದ ಮೇಲೆ ಹಣೆಯಲಾಗಿತ್ತು ಎನ್ನಲಾಗಿದೆ.
ಆದ್ರೆ ಇದಕ್ಕಿಂತ ಹತ್ತಿರದ ಮತ್ತೊಂದು ವಿಚಾರ ನಿಮಗೆ ಅಚ್ಚರಿ ಹುಟ್ಟಿಸುತ್ತೆ. ಬ್ಯಾಟ್‌ಮ್ಯಾನ್ ಹುಟ್ಟಿದ್ದು 'ಮ್ಯಾಡ್ ಆಂಥೋನಿ ವೇಯ್ನ್'ನಿಂದ. ಈತ ಅಮೆರಿಕನ್ ಕ್ರಾಂತಿಕಾರಿ ಹೋರಾಟಗಾರ. ಬ್ರಿಟೀಷರ ವಿರುದ್ಧ ಹೋರಾಟಕ್ಕಿಳಿದಿದ್ದ ಕ್ರಾಂತಿಕಾರಿಗಳಲ್ಲಿ ಆಂಥೋನಿ ವೇಯ್ನ್ ಹೆಸರು ಮುಂದಿದೆ. ಆದ್ರೆ ಆತನ ಹೆಸರ ಮುಂದೆ ಮ್ಯಾಡ್ (ಹುಚ್ಚ) ಎಂದು ಸೇರಿಸಲಾಗದೆ. ಯಾಕಂದ್ರೆ ಆತ ಅಮೆರಿಕನ್ ಸೇನೆಯಲ್ಲಿದ್ದುಕೊಂಡೇ ಬಿಟ್ರಿಷರ ವಿರುದ್ಧ ತಿರುಗಿಬಿದ್ದಿದ್ದ.
ಹೀಗಾಗಿ ಮ್ಯಾಡ್ ಆಂಥೋನಿ ಅಮೆರಿಕನ್ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದಾನೆ. ಹೀಗಾಗಿ ಬ್ಯಾಟ್‌ಮ್ಯಾನ್ ಪಾತ್ರ ಬರೆಯುವಾಗ ಈ ಮ್ಯಾಡ್ ಆಂಥೋನಿಯ ಜೀವನದ ಸಾರಾಂಶವನ್ನು ತೆಗೆದುಕೊಳ್ಳಲಾಯಿತಂತೆ. ಸಿನಿಮಾದಲ್ಲಿಯೂ ಕೂಡ ಬ್ಯಾಟ್‌ಮ್ಯಾನ್ ಕ್ರಾಂತಿಕಾರಿ ಎಂಬುದನ್ನು ನಾವು ಗುರುತಿಸಬಹುದು.



Click it and Unblock the Notifications
