Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ವಿಶ್ವದ ಅತ್ಯಂತ ಅಪಾಯಕಾರಿ ಆನೆ ಪಾದ..! ನಿಮಿಷದಲ್ಲಿ ನಿಮ್ಮ ಉಸಿರು ನಿಲ್ಲಿಸುತ್ತೆ..!
ವಿಶ್ವದ ಅತ್ಯಂತ ಅಪಾಯಕಾರಿ ವಸ್ತು ಯಾವುದಿರಬಹುದು ಎಂದು ಕೇಳಿದರೆ ನಿಮ್ಮಲ್ಲಿ ಹಲವು ಉತ್ತರ ಬರಬಹುದು. ಆದ್ರೆ ನಿಮಗೆ ಗೊತ್ತಾ ವಿಶ್ವದ ಅತ್ಯಂತ ಅಪಾಯಕಾರಿ ವಸ್ತು ಆನೆಯ ಕಾಲು ಇದು ಕೆಲವೇ ಸೆಕೆಂಡ್‌ನಲ್ಲಿ ನಿಮಗೆ ಸಾವು ತರಬಹುದು.
ಆದ್ರೆ ನೀವಂದುಕೊಂಡಂತೆ ಇದು ಆನೆ ಎಂದರೆ ಜೀವವಿರುವ ಆನೆಯ ಕಾಲು ಅಲ್ಲವೇ ಅಲ್ಲ. ಈ ಆನೆ ಕಾಲಿನ ಬಗ್ಗೆ ನೀವು ಕೇಳಿದರೆ ಶಾಕ್ ಆಗುತ್ತೀರ ಜೊತೆಗೆ ಅಚ್ಚರಿಗೂ ಒಳಗಾಗುತ್ತೀರಿ. ಏಕೆಂದರೆ ಇದು ರಾಸಾಯನಿಕಗಳೇ ತುಂಬಿರುವ ಅತ್ಯಂತ ವಿಷಕಾರಿ ಆನೆ ಕಾಲು.

ನಿಮಗೆ ಚೆರ್ನೋಬಿಲ್ ಅಣುಸ್ಥಾವರದ ದುರಂತ ತಿಳಿದಿರಬಹುದು. ಯುಕ್ರೇನ್‌ನ ಪ್ರಿಪ್ಯಟ್ ನಗರದ ಸಮೀಪದ ಚೆರ್ನೊಬಿಲ್ ಅಣು ಸ್ಥಾವರದಲ್ಲಿ ಏಪ್ರಿಲ್ 16, 1986ರಂದು ಉಂಟಾದ ಸ್ಪೋಟ ಮತ್ತದರ ಪರಿಣಾಮವಾಗಿ ಹರಡಿದ ವಿಕಿರಣದಿಂದ ಸಾವಿರಾರು ಮಂದಿ ಸಾವನಪ್ಪಿದ್ದರು. ಜೊತೆಗೆ ಅದೆಷ್ಟು ಮಂದಿ ಆಸ್ಪತ್ರೆ ಸೇರಿದ್ದರು ಎಂಬುದನ್ನು ಈ ಕಾಲಕ್ಕೆ ನಾವು ಊಹಿಸಲು ಅಸಾಧ್ಯ.
ಚೆರ್ನೋಬಿಲ್ ಹೊರಗಿಡುವ ವಲಯದ ಹೃದಯಭಾಗದಲ್ಲಿ ಮಾರಣಾಂತಿಕ ವಿಕಿರಣಶೀಲ ವಸ್ತುವಿದ್ದು, ಇದನ್ನು ಭೂಮಿಯ ಮೇಲಿನ ಅತ್ಯಂತ ಅಪಾಯಕಾರಿ ವಸ್ತು ಎಂದು ಕರೆಯಲಾಗುತ್ತದೆ ಏಕೆಂದರೆ ಅದು ನಿಮಿಷಗಳಲ್ಲಿ ನಿಮ್ಮನ್ನು ಕೊಲ್ಲುತ್ತದೆ. ಅದರ ವಿಲಕ್ಷಣ ಆಕಾರದಿಂದಾಗಿ ಅದನ್ನು ಆನೆಯ ಪಾದ ಎಂದು ಕರೆಯಲಾಯಿತು, 1986 ರ ಪರಮಾಣು ದುರಂತದ ನಂತರ ವಿಷಕಾರಿ ವಸ್ತುಗಳ ಅತ್ಯಂತ ಅಪಾಯಕಾರಿ ದ್ರವ್ಯರಾಶಿಯು ರೂಪುಗೊಂಡಿದೆ.
ಈ ದುರಂತದ ಕಾರಣ ಆನೆಯ ಪಾದದಂತೆ ಒಂದು ರಾಸಾಯನಿಕ ಆಕೃತಿ ಸೃಷ್ಟಿಯಾಗಿತ್ತು. ಇದನ್ನು ಆನೆಯ ಪಾದ ಎಂದು ಕರೆಯಲಾಗಿತ್ತು. ಈ ವಸ್ತು ಈಗ ವಿಶ್ವದ ಅತ್ಯಂತ ಅಪಾಯಕಾರಿ ವಸ್ತು ಎಂದು ಕರೆಯಲಾಗಿದೆ. ಇದು ಮೊದಲು ಕಪ್ಪು ಬಣ್ಣದ ಲಾವಾದಂತೆ, ಬಿಸಿಯಾದ ಹಾಗೂ ಸುಡುವ ವಸ್ತು ಹರಿದುಕೊಂಡು ಘನೀಕರಣಗೊಂಡಿತ್ತು. ಇದೇ ವಸ್ತು ಬಳಿಕ ಆನೆಯ ಪಾದದಂತೆ ದೊಡ್ಡ ಆಕೃತಿ ಪಡೆದುಕೊಂಡಿತು. ನೋಡಲು ಆನೆಯ ಪಾದದಂತೆ ಹರಡಿಕೊಂಡಿತು. ಹೀಗಾಗಿ ಇದನ್ನು ಆನೆ ಪಾದ ಎಂದು ಕರೆದರು.
ಈ ಆನೆಪಾದದ ಬಳಿ ನೀವು ಕೇವಲ 5 ನಿಮಿಷ ಕಳೆದರು ನಿಮಗೆ ಎರಡು ದಿನದಲ್ಲಿ ಸಾವು ಬರುತ್ತದೆ. ಅಷ್ಟು ತೀವ್ರ ಪ್ರಮಾಣದ ವಿಕಿರಣ ಈಗಲೂ ವರದಿಯಾಗಿದೆ.
ಈ ಮೊದಲು ಆನೆ ಪಾದದ ಬಳಿ ವಿಕಿರಣಶೀಲತೆಯು ಸರಿಸುಮಾರು 10,000 ರೋಂಟ್ಜೆನ್ ಆಗಿತ್ತು. ಮನುಷ್ಯರಲ್ಲಿ ವಿಕಿರಣದಿಂದ ಕಾಯಿಲೆ ಉಂಟುಮಾಡಲು ಕೇವಲ 50-100 ರೋಂಟ್ಜೆನ್ ಇದ್ದರೆ ಸಾಕು. ಆದ್ರೆ ಇಲ್ಲಿ 10 ಸಾವಿರ ರೋಂಟ್ಜೆನ್ ಇದೆ ಎಂದರೆ ನೀವೆ ಅರ್ಥೈಸಿಕೊಳ್ಳಿ. ಇದರ ಬಳಿ ನೀವು 30 ಸೆಕೆಂಡುಗಳ ಕಾಲ ಕಳೆದರೆ ತಲೆತಿರುಗುವಿಕೆ ಮತ್ತು ಆಯಾಸವನ್ನು ಉಂಟುಮಾಡುತ್ತದೆ, ಆದರೆ ಎರಡು ನಿಮಿಷಗಳ ಒಡ್ಡುವಿಕೆಯು ನಿಮ್ಮ ದೇಹದಲ್ಲಿನ ಜೀವಕೋಶಗಳು ರಕ್ತಸ್ರಾವಕ್ಕೆ ಕಾರಣವಾಗುತ್ತದೆ.
ಪರಮಾಣು ದುರಂತದಿಂದ ಸುಮಾರು 40 ವರ್ಷಗಳು ಕಳೆದರೂ, ಸಮೂಹ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಇನ್ನೂ ಅಸುರಕ್ಷಿತವಾಗಿವೆ ಮತ್ತು ಅಪಾಯಕಾರಿ ಮಟ್ಟದ ವಿಕಿರಣಶೀಲತೆಯಿಂದ ಕಲುಷಿತವಾಗಿವೆ. ಎಲಿಫೆಂಟ್ ಫೂಟ್ ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ತ್ಯಾಜ್ಯವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಚೆರ್ನೋಬಿಲ್ ದುರಂತಕ್ಕೆ ಅಧಿಕೃತವಾಗಿ ಎರಡು ಕಾರಣಗಳು ಎಂದು ತಿಳಿಸಲಾಗಿತ್ತು. ಆಗಸ್ಟ್ 1986ರಲ್ಲಿ ಪ್ರಕಟಿತ ಮೊದಲ ವರದಿಯ ಪ್ರಕಾರ ಸ್ಥಾವರದ ಮೇಲ್ವಿಚಾರಕರ ತಪ್ಪುಗಳು ಇದಕ್ಕೆ ಕಾರಣವೆಂದು ಹೇಳಲಾಯಿತು. ಭೌತವಿಜ್ಞಾನಿ ವಲೇರಿ ಲೆಗಸೊವ್ನ ಮಂದಾಡಳಿತದಲ್ಲಿನ ಆಯೋಗವು 1991ರಲ್ಲಿ ಪ್ರಕಟಿಸಿದ ವರದಿಯ ಪ್ರಕಾರ ಚೆರ್ನೊಬಿಲ್‍ನಲ್ಲಿ ಅಳವಡಿತ ಆರ್ ಬಿ ಎಮ್ ಕೆ ಮಾದರಿಯ ಸ್ಥಾವರಗಳಲ್ಲಿನ ವಿನ್ಯಾಸದ ದೋಷಗಳೇ ಕಾರಣವೆಂದು ಹೇಳಲಾಯಿತು.
ಈ ದುರಂತ ನಡೆದು ವರ್ಷಗಳು ಕಳೆದರು ಇಂದಿಗೂ ಸಾವಿರಾರು ಕಿ.ಮೀ ವ್ಯಾಪ್ತಿಯಲ್ಲಿ ಯಾವ ಜೀವ ಸಂಕುಲವು ಇಲ್ಲದಂತಾಗಿದೆ. ಜೊತೆಗೆ ಈಗ ರಷ್ಯಾ ಸೇನೆ ಈ ಸ್ಥಾವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದೆ.



Click it and Unblock the Notifications