Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ತಲೆ ಕತ್ತರಿಸಿದರೂ 18 ತಿಂಗಳು ಬದುಕಿತ್ತು ಈ ಕೋಳಿ, ಈ ಇಂಟೆರೆಸ್ಟಿಂಗ್ ಕತೆ ಗೊತ್ತಾ?
ತಲೆ ಕತ್ತರಿಸಿದರೂ ಬರೋಬರಿ 18 ತಿಂಗಳು ಬದುಕಿದ್ದ ಕೋಳಿಯ ಬಗ್ಗೆ ಕೇಳಿದ್ದೀರಾ? ಇದು ಇತ್ತೀಚೆಗೆ ನಡೆದ ಘಟನೆಯಲ್ಲಿ 1945ರಲ್ಲಿ ನಡೆದ ಘಟನೆ, ತಲೆ ಕಡಿದರೂ ಒಂದು ಕೋಳಿ 18 ತಿಂಗಳು ಬದುಕಿತ್ತು ಎಂದು ಕೇಳುವಾಗ ಅಚ್ಚರಿಯಾಗುತ್ತೆ ಅಲ್ವಾ? ತಲೆ ಕಡಿದ ಮೇಲೆ ಆ ಕೋಳಿಯ ಮಾಲಿಕನಿಗೆ ಆ ಕೋಳಿ ಚಿನ್ನದ ಮೊಟ್ಟೆ ಇಡುವ ಕೋಳಿಯಂತಿತ್ತು, ಅಂದರೆ ಅವನು ತಲೆಯಿಲ್ಲದ ಕೋಳಿಯನ್ನು ಎಲ್ಲಾ ಕಡೆ ಪ್ರದರ್ಶನ ಮಾಡಿ ಹಣ ಗಳಿಸುತ್ತಿದ್ದ.
ಇಂಥ ವಿಚಿತ್ರ ಘಟನೆ ನಡೆದಿದ್ದು ಕೊಲೊರಾಡೋದ ಫ್ರೂಯಿಟಾದಲ್ಲಿ. ಅಂದು ಸೆಪ್ಟೆಂಬರ್ 10, 1945 ಲೋಯಡ್ ಒಲ್ಸೀನ್ ಎಂಬಾತ ತಾನು ಬೆಳೆದಿದ್ದ ಕೋಳಿಗಳಲ್ಲಿಒಂದನ್ನು ಹಿಡಿದು ರುಚಿಯಾದ ಕೋಳಿಸಾರು ಮಾಡಲು ಕೋಳಿಯ ತಲೆ ಕತ್ತರಿಸುತ್ತಾನೆ, ತಲೆ ಕತ್ತರಿಸಿದರೂ ಆ ಕೋಳಿ ಓಡಲಾರಂಭಿಸುತ್ತದೆ.

ಸಾಮಾನ್ಯವಾಗಿ ಕೋಳಿಯ ತಲೆ ಕತ್ತರಿಸಿದಾಗ ಸ್ವಲ್ಪ ದೂರ ಓಡುವುದು, ಮೇಲಕ್ಕೆ ಹಾರಿ-ಹಾರಿ ಬೀಳುತ್ತೆ, ಅದರಂತೆ ಇದು ಕೂಡ ಓಡುತ್ತಿದೆ ಎಂದು ನೋಡುತ್ತಾನೆ ಆ ಕೋಳಿ ಸಾಯುತ್ತಿರುವ ಕೋಳಿಯಂತೆ ಅಲ್ಲ, ಬದುಕಿದ್ದಾಗ ಕೋಳಿಗಳು ಓಡುತ್ತದೆಯಲ್ಲಾ ಅದೇ ರೀತಿ ಓಡುತ್ತಿದೆ.
ಆತ ಅದನ್ನಿಡಿದು ಒಂದು ಬಾಕ್ಸ್‌ನಲ್ಲಿ ಮುಷ್ಷಿ ಹಾಕುತ್ತಾನೆ, ಬೆಳಗ್ಗೆ ಆ ಕೋಳಿ ಸತ್ತಿರಬಹುದು ಎಂದು ನೋಡಿದರೆ ಜೀವಂತವಾಗಿದೆ. ಆತ ಆ ಕೋಳಿಗೆ ಮೈಕ್ ಎಂದು ಹೆಸರಿಡುತ್ತಾನೆ.
ಕೋಳಿಯ ಮೆದುಳು ತಲೆಯ ಹಿಂಭಾಗದಲ್ಲಿರುತ್ತದೆ ಅಂದರೆ ಅದರ ಕಣ್ಣಿನ ಹಿಂದುಗಡೆ ಇರುತ್ತದೆ, ಈತ ಅದರ ಕುತ್ತಿಗೆ ಕತ್ತರಿಸಿದಾಗ ತಲೆ ಕತ್ತರಿಸುತ್ತಾನೆ, ಆದರೆ ಮೆದುಳಿನ ಭಾಗ ಕತ್ತರಿಸಿರುವುದಿಲ್ಲ, ಹೀಗಾಗಿ ಅದು ಜೀವಂತವಾಗಿರುತ್ತದೆ. ಕೋಳಿಯ ಮೆದುಳೇ ಉಸಿರಾಟ, ಜೀರ್ಣಕ್ರಿಯೆ ಮತ್ತಿತರ ದೇಹದ ಕಾರ್ಯವನ್ನು ನಿರ್ವಹಿಸುವುದರಿಂದ ಮೆದುಳು ಉಳಿದಿರುವ ಈ ಕೋಳಿ ಬಾಕಿಯುಳಿಯುತ್ತದೆ. ಆತ ಅದರ ಅನ್ನನಾಳದ ಮುಖಾಂತರ ದ್ರವಾಹಾರವನ್ನು ನೀಡುತ್ತಿದ್ದ.
ಈ ಕೋಳಿ ಜನರನ್ನು ಸೆಳೆಯುತ್ತದೆ ಎಂಬ ಕಾರಣಕ್ಕೆ ಜಾತ್ರೆಯಲ್ಲಿ ಕೊಂಡೊಯ್ಯುತ್ತಿದ್ದ, ಹೀಗೆ ಆ ಸಮಯದಲ್ಲಿ ಮೈಕ್ ತುಂಬಾನೇ ಪ್ರಸಿದ್ಧಿಯನ್ನ ಪಡೆಯುತ್ತದೆ, ಆತನಿಗೂ ಒಳ್ಳೆಯ ಹಣ ಸಿಗುತ್ತಿತ್ತು. ಈ ಕೋಳಿಯನ್ನು ಫೀನಿಕ್ಸ್, ಅರಿಜೋನಾ ಈ ಕಡೆಗೆಲ್ಲಾ ಕೊಂಡೊಯ್ಯಲಾಗಿದೆ.
ಮೈಕ್ 1947 ಮಾರ್ಚ್ ತಿಂಗಳಿನಲ್ಲಿ ಸಾವನ್ನಪ್ಪುತ್ತೆ, ಒಂದು ಕಡೆ ಕಾರ್ಯಕ್ರಮಕ್ಕೆ ಕೊಂಡೊಯ್ಯುವಾಗ ಈ ಕೋಳಿ ಸಾವನ್ನಪ್ಪುತ್ತೆ. ಮೈಕ್ ಮಾಲಿಕ ಒಂದು ಶೋಗೆ ಕರೆದುಕೊಂಡು ಹೋಗಿ ಹೋಟೆಲ್‌ನಲ್ಲಿ ತಂಗಿದ್ದರು, ಆವಾಗ ಕೋಳಿ ಉಸಿರು ಕಟ್ಟಿದಂತೆ ಸೌಂಡ್ ಮಾಡುತ್ತಿತ್ತು, ಈ ರೀತಿಯಾದಾಗ ಅವರು ಸಿರೆಂಜ್ ಹಾಕಿ ಅದರ ಉಸಿರಾಟಕ್ಕೆ ಸಹಾಯ ಮಾಡುತ್ತಿದ್ದರು. ಆದರೆ ಈ ಬಾರಿ ಶೋ ಜಾಗದಲ್ಲಿಯೇ ಸಿರೆಂಜ್ ಬಿಟ್ಟು ಬಂದಿದ್ದರು. ಇದರಿಂದಾಗಿ ಮೈಕ್ ಉಸಿರು ಕಟ್ಟಿ ಸಾವನ್ನಪ್ಪಿತು.
ಈ ಕತೆಯನ್ನು ಜನ ಇಂದಿಗೂ ನೆನೆಯುತ್ತಾರೆ, ನಮ್ಮ ಮಕ್ಕಳಿಗೂ ಈ ಕತೆಯನ್ನು ಹೇಳಿದರೆ ಅವರಿಗೆ ಇದನ್ನು ಖಂಡಿತ ಆಸಕ್ತಿಯಿಂದ ಕೇಳುತ್ತೀವಿ.



Click it and Unblock the Notifications
