Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮರು ಮತಎಣಿಕೆಗೆ ಎಷ್ಟು ಖರ್ಚಾಗುತ್ತೆ ಗೊತ್ತಾ? ಯಾರು ಅರ್ಹರಾಗಿರುತ್ತಾರೆ? ಇಲ್ಲಿದೆ ಮಾಹಿತಿ
ವಿಶ್ವದ ಅತೀ ದೊಡ್ಡ ಚುನಾವಣೆ ಭಾರತದ ಲೋಕಸಭೆ ಚುನಾವಣೆ ನಿನ್ನೆಗೆ ತೆರೆ ಬಿದ್ದಿದೆ. ನಿನ್ನೆ ಫಲಿತಾಂಶ ಸಹ ಘೋಷಣೆಯಾಗಿ ಈಗ ಸರ್ಕಾರ ರಚನೆಯ ಕಸರತ್ತು ನಡೆದಿದೆ. ಇನ್ನು ಕೆಲವು ಕಡೆಗಳಲ್ಲಿ ಉಪ ಚುನಾವಣೆ ಸಹ ನಡೆಯಬೇಕಿದೆ. ಆದರೆ ಈ ಚುನಾವಣೆಯಲ್ಲಿ ಗೆದ್ದಿರುವ ವ್ಯಕ್ತಿ ಸಿಹಿ ಹಂಚಿ ಸಂಭ್ರಮಿಸಿದರೆ ಪರಾಜಿತ ಅಭ್ಯರ್ಥಿ ಸೋಲಿಗೆ ಕಾರಣ ಹುಡುಕಬೇಗಾಗಿದೆ.
ಇದರ ಜೊತೆ ಸೋತಿರುವ ವ್ಯಕ್ತಿ ಮರು ಮತ ಎಣಿಕೆ ಅಥವಾ ಇವಿಎಂ ಅನ್ನು ಪರಿಶೀಲನೆ ಮಾಡಬಹುದು. ಚುನಾವಣಾ ಆಯೋಗವು ಸೋತ ಅಭ್ಯರ್ಥಿಗಳಿಗೆ EVM ಮೈಕ್ರೋಕಂಟ್ರೋಲರ್‌ಗಳಲ್ಲಿ ಸುಟ್ಟ ಮೆಮೊರಿಯ ಪರಿಶೀಲನೆ/ಆಡಿಟ್ ಪಡೆಯಲು ಅವಕಾಶ ನೀಡಲು ಪ್ರೋಟೋಕಾಲ್ ಅನ್ನು ಬಿಡುಗಡೆ ಮಾಡಿದೆ.

ಚುನಾವಣಾ ಆಯೋಗದ ಪ್ರಕಾರ, ಒಂದು ಕ್ಷೇತ್ರದಲ್ಲಿ ಇಬ್ಬರು ರನ್ನರ್-ಅಪ್‌ಗಳು ಆಪಾದಿತ ಟ್ಯಾಂಪರಿಂಗ್ ಅಥವಾ ಮಾರ್ಪಾಡಿಗಾಗಿ EVM ಮೈಕ್ರೋಕಂಟ್ರೋಲರ್‌ಗಳ ಪರಿಶೀಲನೆಯನ್ನು ಪಡೆಯಲು ಸಾಧ್ಯವಿದೆ. ಆದರೆ ಇದಕ್ಕೆ ಒಂದಿಷ್ಟು ಶುಲ್ಕ ನಿಗದಿ ಮಾಡಲಾಗುತ್ತದೆ.
ಇವಿಎಂಗಳ ಮರುಪರಿಶೀಲನೆಯನ್ನು ಬಯಸುವ ಅಭ್ಯರ್ಥಿಗಳು ಫಲಿತಾಂಶಗಳನ್ನು ಪ್ರಕಟಿಸಿದ ಏಳು ದಿನಗಳ ಒಳಗೆ ಅರ್ಜಿ ಸಲ್ಲಿಸಬೇಕು. 2024-25 ರ ಚುನಾವಣಾ ನೀತಿಯ ಪ್ರಕಾರ ಪ್ರತಿ EVM ಘಟಕದ (ನಿಯಂತ್ರಣ ಘಟಕ, ಬ್ಯಾಲೆಟ್ ಯೂನಿಟ್ ಮತ್ತು VVPAT ಒಳಗೊಂಡಿರುವ) ಪರಿಶೀಲನೆಗಾಗಿ ಆ ಅಭ್ಯರ್ಥಿಯು ₹40,000 ಮತ್ತು 18% GST ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಒಂದು ವೇಳೆ ಇವಿಎಂ ಮತ ಎಣಿಕೆಯಲ್ಲಿ ವ್ಯತ್ಯಾಸ ಕಂಡು ಬಂದರೆ ಅವರು ಪಾವತಿಸಿರುವ ಹಣ ಮರಳಿ ನೀಡಲಾಗುತ್ತದೆ.
ಮರು ಪರಿಶೀಲನೆ ಚಟುವಟಿಕೆಯನ್ನು ಗರಿಷ್ಠ 20 ಬಿಯುಗಳು, 10 ಸಿಯುಗಳು ಮತ್ತು 10 ವಿವಿಪ್ಯಾಟ್‌ಗಳಿಗೆ ನಿರ್ಬಂಧಿಸಲಾಗುವುದು ಎಂದು ಇಸಿ ಸ್ಪಷ್ಟಪಡಿಸಿದೆ. ಅಂದರೆ ಒಬ್ಬ ಅಭ್ಯರ್ಥಿ ತನ್ನ ಇಡೀ ಕ್ಷೇತ್ರದ ಇವಿಎಂಗಳ ಪರಿಶೀಲಿಸಲು ಸಾಧ್ಯವಿಲ್ಲ ಕೇವಲ 20 ಬ್ಯಾಲೆಟ್ ಯೂನಿಟ್, 10 ಕಂಟ್ರೋಲ್ ಯುನಿಟ್ ಹಾಗೂ 10 ವಿವಿ ಪ್ಯಾಟ್‌ಗಳನ್ನು ಪರಿಶೀಲನೆಗೆ ಆಯ್ಕೆ ಮಾಡಿಕೊಳ್ಳಬಹುದು. ಅದು ಯಾವ ಸ್ಥಳ ಎಂಬುದು ಆತನೆ ಸೂಚಿಸಬೇಕಾಗುತ್ತದೆ.
ಒಂದು ವೇಳೆ ಇಬ್ಬರೂ ಅಭ್ಯರ್ಥಿಗಳು ಅಂದರೆ 2 ಹಾಗೂ 3ನೇ ಸ್ಥಾನ ಗಳಿಸಿದ ಅಭ್ಯರ್ಥಿಗಳು ಪರಿಶೀಲನೆಗೆ ಮುಂದಾದರೆ, ಪ್ರತಿಯೊಬ್ಬರಿಗೂ 2.5% ಕಂಟ್ರೋಲ್ ಯುನಿಟ್‌ಗಳು, ಬ್ಯಾಲೆಟ್ ಯೂನಿಟ್‌ಗಳು ಮತ್ತು AC/AS ಗೆ ಸಂಬಂಧಿಸಿದ VVPAT ಗಳನ್ನು ಈ ತಪಾಸಣೆ ಮತ್ತು ಪರಿಶೀಲನೆಗಾಗಿ ಆಯ್ಕೆ ಮಾಡಲು ಅನುಮತಿಸಬಹುದು, ಅಂದರೆ, ಪ್ರತಿ ಅರ್ಹತೆ ಅಭ್ಯರ್ಥಿಯು ಗರಿಷ್ಠ 10 ಬಿಯುಗಳು, 5 ಸಿಯುಗಳು ಮತ್ತು 5 ವಿವಿಪ್ಯಾಟ್‌ಗಳನ್ನು ಆಯ್ಕೆ ಮಾಡಲು ಅನುಮತಿಸಲಾಗುವುದು ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ.
ಯಾರು ಮರು ಪರಿಶೀಲನೆಯನ್ನು ಪಡೆಯಬಹುದು
ಮೊದಲ ಮತ್ತು ಎರಡನೇ ರನ್ನರ್-ಅಪ್‌ಗಳಿಗೆ ಮತದಾನ ಕೇಂದ್ರದ ಸಂಖ್ಯೆಗಳು ಅಥವಾ BU, CU ಮತ್ತು VVPAT ನ ವಿಶಿಷ್ಟ ಸರಣಿ ಸಂಖ್ಯೆಗಳ ಪ್ರಕಾರ ಘಟಕಗಳ ಗುಂಪನ್ನು ಆಯ್ಕೆ ಮಾಡಲು ಅನುಮತಿಸಲಾಗುತ್ತದೆ. ಎಸ್‌ಒಪಿಯು ಇವಿಎಂಗಳನ್ನು ಮರು ಪರಿಶೀಲಿಸುವ ಸಂಪೂರ್ಣ ಪ್ರಕ್ರಿಯೆಗೆ ಜಿಲ್ಲಾ ಚುನಾವಣಾಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಲಾಗಿರುತ್ತದೆ.
ಯಾವ ಅಭ್ಯರ್ಥಿ ಗೆಲುವು ಪಡೆದ ಅಭ್ಯರ್ಥಿಗಿಂತಲೂ ಒಂದು ಸಾವಿರ ಎರಡು ಸಾವಿರ ಮತದ ಅಂತರದಿಂದ ಸೋಲು ಅನುಭವಿಸುತ್ತಾರೋ ಅಂತಹ ಅಭ್ಯರ್ಥಿ ಹೆಚ್ಚಾಗಿ ಮರುಪರಿಶೀಲನೆಗೆ ಮುಂದಾಗುತ್ತಾರೆ. ಆದರೆ ಮರ ಮತ ಎಣಿಕೆಯ ಬಳಿಕ ಜಯ ಫಲಿತಾಂಶ ಬದಲಾಗಿ ಗೆಲುವು ಸಾಧಿಸಿರುವ ಉದಾಹರಣೆಯ ಪ್ರಮಾಣ ಬಹಳ ಕಡಿಮೆಯಾಗಿದೆ.



Click it and Unblock the Notifications
