Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಅಂಬಾನಿ ಕಾರು ಚಾಲಕನ ಸಂಬಳ ಎಷ್ಟು ಗೊತ್ತಾ? ಇಷ್ಟೊಂದು ವೇತನ!!
ಮುಖೇಶ್ ಅಂಬಾನಿ ಆಸ್ತಿ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. 8 ಲಕ್ಷ ಕೋಟಿಗೂ ಅಧಿಕ ಆಸ್ತಿ ಹೊಂದಿರುವ ಅಂಬಾನಿ ಐಷಾರಾಮಿ ಜೀವನದಿಂದಲೇ ಗಮನ ಸೆಳೆಯುತ್ತಾರೆ. ಇತ್ತೀಚಿಗೆ ನಡೆದ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ವಿವಾಹ ಮಹೋತ್ಸವ ಇಡೀ ವಿಶ್ವದ ಗಮನ ಸೆಳೆದಿದೆ. ಜೊತೆಗೆ ಅವರ ಬಳಿ ಇರುವ ಐಷಾರಾಮಿ ವಸ್ತುಗಳ ಮಾಹಿತಿ ತಿಳಿದು ಜನರು ಶಾಕ್ ಆಗುತ್ತಾರೆ.
ಅವರು ಧರಿಸುವ ಚಪ್ಪಲಿಯಿಂದ ಹಿಡಿದು ವಾಚ್, ಮೊಬೈಲ್, ಕಾರುಗಳು ಸುದ್ದಿಯಾಗುತ್ತವೆ. ಅವರ ಬಳಿ ವಿಶ್ವದ ದುಬಾರಿ ಕಾರುಗಳಿಂದ ಹಿಡಿದು ಭದ್ರತಾ ದೃಷ್ಟಿಯಿಂದ ಈ ಕಾರುಗಳು ಹೈ ಕ್ಲಾಸ್ ಆಗಿವೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ, ಅವರು ಕಂಪನಿಯನ್ನು ಜಾಗತಿಕ ಶಕ್ತಿ ಕೇಂದ್ರವಾಗಿ ಪರಿವರ್ತಿಸಿದ್ದಾರೆ.

ಸದ್ಯ ಮುಖೇಶ್ ಅಂಬಾನಿ ವಿಶ್ವದ 11ನೇ ಶ್ರೀಮಂತ ವ್ಯಕ್ತಿಯಾಗಿದ್ದು, ಏಷ್ಯಾದ ಶ್ರೀಮಂತ ಉದ್ಯಮಿ ಎಂಬ ಕೀರ್ತಿ ಪಡೆದಿದ್ದಾರೆ.
ಮುಖೇಶ್ ಅಂಬಾನಿಯವರ ದಿವಂಗತ ತಂದೆ ಧೀರೂಭಾಯಿ ಅಂಬಾನಿ 1966 ರಲ್ಲಿ ಸ್ಥಾಪಿಸಿದ ರಿಲಯನ್ಸ್ ಸಣ್ಣ ಜವಳಿ ತಯಾರಕರಾಗಿ ಪ್ರಾರಂಭವಾಯಿತು.
ಆದರೆ ನಿಮಗೆ ಅಂಬಾನಿ ಕಾರುಗಳ ಬಗ್ಗೆ ಗೊತ್ತಿರಬಹುದು ಆದರೆ ಆ ಕಾರಿನ ಚಾಲಕರ ವೇತನ ಎಷ್ಟಿರಬಹುದು ಎಂಬುದು ನಿಮಗೆ ಗೊತ್ತಾ? ಹೌದು ಮುಖೇಶ್ ಅಂಬಾನಿ ಕಾರಿನ ಚಾಲಕ ಎಂದರೆ ಸಾಮಾನ್ಯ ಕೆಲಸವಲ್ಲ. ಅತ್ಯಂತ ಜವಾಬ್ದಾರಿಯುತ ಕೆಲಸವದು. ಐಷಾರಾಮಿ ಕಾರನ್ನು ಅತ್ಯಂತ ಸುರಕ್ಷಿತವಾಗಿ ಚಲಾಯಿಸುವ ಜವಾಬ್ದಾರಿ ಇರುತ್ತದೆ. ಅಚ್ಚರಿ ಎಂದರೆ ಈ ಚಾಲಕ ಖಾಸಗಿ ಸಂಸ್ಥೆಯ ಅಧೀನದಲ್ಲಿ ಕೆಲಸ ಮಾಡುತ್ತಾರೆ. ಈ ಸಂಸ್ಥೆ ಅಂಬಾನಿ ಅವರ ಚಾಲಕನನ್ನ ನೇಮಿಸಲಿದೆ.
ಅಂಬಾನಿ ಚಾಲಕನ ವೇತನ ಎಷ್ಟು?
ಇನ್ನು ಖಾಸಗಿ ಸಂಸ್ಥೆ ನೇಮಿಸಿರುವ ಅಂಬಾನಿ ಕಾರು ಚಾಲಕನ ಆಸ್ತಿ ವರ್ಷಕ್ಕೆ 24 ಲಕ್ಷವಂತೆ. ಅಂದರೆ ತಿಂಗಳಿಗೆ ಬರೋಬ್ಬರಿ 2 ಲಕ್ಷ ರೂಪಾಯಿ ಆಗಿದೆ. ಆಧರೆ ಈ ವೇತನ 2017ರಲ್ಲಿ ಬಹಿರಂಗವಾದ ಅಂಕಿ ಅಂಶವಾಗಿದೆ. ಈಗ ಈ ವೇತನ ಮತ್ತಷ್ಟು ಹೆಚ್ಚಾಗಿರುವ ಸಂಭವವೂ ಇದೆ. ಅಂಬಾನಿ ಕುಟುಂಬಕ್ಕೆ ಚಾಲಕನಾಗುವುದು ಸುಲಭದ ಕೆಲಸವಲ್ಲ. ಈ ಚಾಲಕರನ್ನು ಖಾಸಗಿ ಗುತ್ತಿಗೆ ಸಂಸ್ಥೆಗಳ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ ಮತ್ತು ಕಠಿಣ ತರಬೇತಿ ನೀಡಲಾಗುತ್ತದೆ. ಅವರು ವಾಣಿಜ್ಯ ಮತ್ತು ಐಷಾರಾಮಿ ವಾಹನಗಳನ್ನು ನಿರ್ವಹಿಸುವಲ್ಲಿ ಪರಿಣತರಾಗಿದ್ದಾರೆ ಮತ್ತು ಸವಾಲಿನ ರಸ್ತೆಗಳು ಮತ್ತು ಅನಿರೀಕ್ಷಿತ ಸಂದರ್ಭಗಳಲ್ಲಿ ನ್ಯಾವಿಗೇಟ್ ಮಾಡಲು ಅವರಿಗೆ ತರಬೇತಿ ನೀಡಲಾಗಿರುತ್ತದೆ.
ವೇತನ ಪಡೆಯದ ಮುಖೇಶ್ ಅಂಬಾನಿ
ಮುಖೇಶ್ ಅಂಬಾನಿ ಎಷ್ಟೊಂದು ಆಸ್ತಿ ಸಂಪಾದನೆ ಮಾಡುತ್ತಿದ್ದರೂ ಕಳೆದ ಕೋವಿಡ್‌ನಲ್ಲಿ ತಮ್ಮ ವೇತನವನ್ನು ಪಡೆಯದಿರಲು ನಿರ್ಧರಿಸಿದ್ದರು. ವ್ಯಾಪಾರ ಮತ್ತು ಆರ್ಥಿಕತೆಯನ್ನು ಬೆಂಬಲಿಸುವ ಅವರ ಬದ್ಧತೆಯನ್ನು ತೋರಿಸಿದರು. ಇದಕ್ಕೂ ಮುನ್ನ ಮುಕೇಶ್ ಅಂಬಾನಿ ಸತತ 11 ವರ್ಷಗಳ ಕಾಲ 15 ಕೋಟಿ ರೂ. ವೇತನ ಪಡೆಯುತ್ತಿದ್ದರು ಎಂದು ವರದಿಯಾಗಿದೆ. ಸುಮಾರು 11 ವರ್ಷಗಳ ಕಾಲ ಅವರು ಯಾವುದೇ ವೇತನ, ಭತ್ಯೆ ಪಡೆದಿರಲಿಲ್ಲವಂತೆ.
ಇತ್ತೀಚೆಗೆ ಕಿರಿಯ ಪುತ್ರ ಅನಂತ್ ಅಂಬಾನಿಯ ವಿವಾಹ ಸಂಪೂರ್ಣಗೊಂಡಿದ್ದು ಸುಮಾರು 5 ಸಾವಿರ ಕೋಟಿ ರೂಪಾಯಿ ಈ ವಿವಾಹಕ್ಕೆ ಖರ್ಚು ಮಾಡಲಾಗಿತ್ತಂತೆ. ಐಷಾರಾಮಿ ಮದುವೆಯಲ್ಲಿ ಇಡೀ ವಿಶ್ವದ ದಿಗ್ಗಜರು, ಬಾಲಿವುಡ್, ಹಾಲಿವುಡ್ ನಟರು ಭಾಗಿಯಾಗಿದ್ದರು. ಜೊತೆಗೆ ಅನಂತ್ ಅಂಬಾನಿ ಪತ್ನಿ ರಾಧಿಕಾ ಮರ್ಚೆಂಟ್ ಸಹ ಉದ್ಯಮಿಯ ಮಗಳಾಗಿದ್ದು, ಗುಜರಾತ್‌ನಲ್ಲಿ ತಮ್ಮ ಉದ್ಯಮ ಹೊಂದಿದ್ದಾರೆ. ಅಲ್ಲದೆ ರಾಧಿಕಾ ಮರ್ಚೆಂಟ್ ಹಾಗೂ ಅನಂತ್ ಅಂಬಾನಿ ಬಹುಕಾಲದ ಗೆಳೆಯರಾಗಿದ್ದರು.



Click it and Unblock the Notifications
