Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಟಾಯ್ಲೆಟ್ ಫ್ಲಶ್ ಮಾಡಿದಾಗ ಕೀಟಾಣು ಹೇಗೆ ಹರಡುತ್ತೆ ಗೊತ್ತಾ? ಇಲ್ಲಿದೆ ವಿಡಿಯೋ ಸಾಕ್ಷಿ
ನಾವು ಬಾತ್ ರೂಮ್‌ನಲ್ಲಿ ಅತ್ಯಧಿಕ ಕೀಟಾಣುಗಳ ಬೆಳೆಸುತ್ತೇವೆ. ನಿಮಗಿದು ಅಚ್ಚರಿ ಎನಿಸಬಹುದು, ಏಕೆಂದರೆ ಶೌಚಾಲಯದಲ್ಲಿ ನಾವು ಕಾಯಿಲೆ ಬೀಳುವಷ್ಟು ಕೀಟಾಣುಗಳು ಹುಟ್ಟುತ್ತವೆ. ಅವು ಹೇಗೆಲ್ಲಾ ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ ಎಂಬುದು ನಿಮಗೆ ಗೊತ್ತಿದೆ.
ಬಾತ್‌ರೂಮ್‌ನಲ್ಲಿ ನಾವು ಫ್ಲಶ್ ಮಾಡಿದಾಗ ಕೀಟಾಣುಗಳು ಬಾತ್‌ರೂಮ್‌ನಲ್ಲಿರುವ ಸೋಪ್, ಶಾಂಪೂ, ಟಿಷ್ಯು, ಬ್ರಷ್ ಸೇರಿ ಎಲ್ಲಾ ವಸ್ತುಗಳ ಮೇಲೆಯೂ ಸವಾರಿ ಮಾಡುತ್ತವೆ, ಜೊತೆಗೆ ನಾವು ಬಾತ್ ರೂಮ್ ಹೋದಾಗ ಕೈಯಲ್ಲಿ ಮೊಬೈಲ್ ತೆಗೆದುಕೊಂಡು ಹೋದರೆ ಈ ಮೊಬೈಲ್ ಮೂಲಕ ನಿಮ್ಮ ದೇಹ ಸೇರುವ ಸಾಧ್ಯತೆ ಇದೆ.

ಬಾತ್‌ರೂಮ್‌ನ ಬೇರೆಲ್ಲಾ ವಸ್ತುಗಳಿಗೂ ನಾವು ನೀರು ಹಾಕಿ ತೊಳೆದು ಬಳಸುತ್ತೇವೆ. ಆದರೆ ಮೊಬೈಲ್‌ಗೆ ನಾವೆಂದು ನೀರು ಮುಟ್ಟಿಸುದಿಲ್ಲ. ಮೊಬೈಲ್ ಜೊತೆಗೆ ಸೇರಿದ ಕೀಟಾಣುಗಳು ನಮಗೆ ಅನಾರೋಗ್ಯ ತರಲು ಸಾಕು. ಆದರೆ ನೀವಂದುಕೊಂಡಿರಬಹುದು ಬಾತ್‌ರೂಮ್‌ನಲ್ಲಿ ಫ್ಲಶ್ ಮಾಡಿದಾಗ ಅಲ್ಲಿಂದ ನೀರಿನ ಕಣಗಳು ಬಹಳ ದೂರದವರೆಗೂ ಪ್ರಯಾಣಿಸುತ್ತದೆ.
ಈ ನೀರಿನಲ್ಲಿಯೇ ಕೀಟಾಣುಗಳು ಸಹ ಪ್ರಯಾಣಿಸಲಿವೆ. ಈ ರೀತಿ ಜನರಿಗೆ ಬಹಳ ಸುಲಭವಾಗಿ ಅರ್ಥೈಸಲು ನೆರವಾಗುವಂತಹ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜನರಿಗೆ ಬಾತ್‌ರೂಮ್‌ನಲ್ಲಿ ಕೀಟಾಣು ಹೇಗೆ ಹರಡುತ್ತವೆ ಎಂಬುದನ್ನು ಸ್ಪಷ್ಟವಾಗಿ ವಿವರಿಸುತ್ತಿದೆ.
ಸಾರ್ವಜನಿಕ ರೆಸ್ಟ್‌ರೂಮ್ ಟಾಯ್ಲೆಟ್ ಅನ್ನು ಫ್ಲಶ್ ಮಾಡುವುದರಿಂದ ಆ ನೀರು ಎಷ್ಟು ದೂರ ಪ್ರಯಾಣಿಸಲಿದೆ, ಇದರಲ್ಲಿ ಹಾನಿಕಾರಕ ಸೂಕ್ಷ್ಮಜೀವಿಗಳನ್ನು ಗಾಳಿಯಲ್ಲಿ ಸಾಗಿಸುತ್ತದೆ ಎಂಬುದನ್ನು ವಿಡಿಯೋ ಬಹಿರಂಗಪಡಿಸುತ್ತದೆ.
ಟಾಯ್ಲೆಟ್ ಸಿಂಕ್‌ನಿಂದ ಮಲ, ಮೂತ್ರದ ಕೀಟಾಣುಗಳು ಹೇಗೆ ನಿಮ್ಮ ಕಣ್ಣಿಗೆ ಕಾಣದ ರೀತಿಯಲ್ಲಿ ಪ್ರಯಾಣಿಸುತ್ತವೆ ಎಂಬುದನ್ನು ನಾವು ನೋಡಬಹುದು. ಆತ ಹಸಿರು ಲೇಸರ್ ಲೈಟ್‌ಗಳು, ಯುವಿ ಲೈಟ್‌ನ ಅಡಿಯಲ್ಲಿ ನೀರು ಎಷ್ಟು ದೂರ ಪ್ರಯಾಣಿಸುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ.
ಆತ ಸಿಂಕ್‌ನಲ್ಲಿ ನೀರನ್ನು ಫ್ಲಶ್ ಮಾಡಿದಾಗ ಅದರ ಕಣಗಳು ಹೇಗೆ ಇತರೆ ಕಡೆ ಸಾಗುತ್ತದೆ ಎಷ್ಟು ದೂರ ಹೋಗಬಹುದು ಎಂಬುದನ್ನು ನಾವು ಸಾಕ್ಷಿ ಸಮೇತ ನೋಡಬಹುದು. ಇದರಿಂದ ಅಲ್ಲಿನ ಸೂಕ್ಷ್ಮಾಣುಗಳು ಎಷ್ಟು ದೂರ ಹಾಗೂ ಯಾವ ಯಾವ ವಸ್ತುಗಳ ಮೇಲೆ ಬೀಳಬಹುದು ಎಂಬುದನ್ನು ಸಹ ವಿವರಿಸಲಾಗಿದೆ.
ಬಾತ್‌ರೂಮ್‌ನಲ್ಲಿರುವ ಬ್ರಷ್ ಮೇಲೆಯೂ ಈ ನೀರು ಸಾಗಿರುವುದು ನೋಡಬಹುದು. ಇದರಿಂದ ನಾವು ಸರಿಯಾಗಿ ಸ್ವಚ್ಛ ಮಾಡದೆ ಬ್ರಷ್ ಮಾಡಿದರೆ ಖಂಡಿತ ಅನಾರೋಗ್ಯಕ್ಕೆ ಒಳಗಾಗುತ್ತೇವೆ. ಅಷ್ಟೇ ಏಕೆ ಬಾತ್‌ರೂಮ್‌ನಲ್ಲಿ ನಾವು ಬಟ್ಟೆ ಒಣಗಿಸುವುದು, ತೆರೆದ ಡಬ್ಬಿಯಲ್ಲಿ ಸೋಪುಗಳ ಇಡುವುದು ಸಹ ಸೂಕ್ಷ್ಮಾಣು ಜೀವಿಗಳು ನಮ್ಮ ದೇಹ ಸೇರಲು ದಾರಿ ಮಾಡಿಕೊಟ್ಟಂತಾಗುತ್ತದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ವಿಡಿಯೋ ನೋಡಿ ಆಘಾತಕ್ಕೆ ಒಳಗಾಗಿದ್ದಾರೆ. ಏಕೆಂದರೆ ಅವರಿಗೆ ಈ ರೀತಿ ಸೂಕ್ಷ್ಮಾಣುಗಳ ಕುರಿತಂತೆ ಯಾವ ಭಯವೂ ಇಲ್ಲದೆ ಬೇಕಾಬಿಟ್ಟಿಯಾಗಿ ಬಾತ್‌ರೂಮ್ ಬಳಸುತ್ತಿದ್ದರೆ ಈ ವಿಡಿಯೋ ಅವರಲ್ಲಿ ಭೀತಿ ಹುಟ್ಟಿಸುವಂತಿದೆ.
5 ನೇ ತರಗತಿಯಲ್ಲಿ ನನ್ನ ವಿಜ್ಞಾನ ಶಿಕ್ಷಕಿ ನನಗೆ ಅದೇ ವಿಷಯವನ್ನು ಹೇಳಿದರು. ಅವರು ಫ್ಲಶ್ ಮಾಡುವ ಮೊದಲು ಮುಚ್ಚಳವನ್ನು ಮುಚ್ಚಬೇಕು ಎಂದು ನನಗೆ ಹೇಳಿದ್ದರು ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಇದು ನನ್ನ ಗಮನಕ್ಕೆ ತಂದ ನಿಮಗೆ ಧನ್ಯವಾದಗಳು ನಾವು ಇನ್ನು ಮುಂದೆ ಬಾತ್‌ರೂಮ್ ಸಿಂಕ್ ಮುಚ್ಚಳ ಮುಚ್ಚಿಯೇ ಫ್ಲಶ್ ಮಾಡುತ್ತೇವೆ. ಇದು ರೋಗ ರುಜಿನಗಳ ತವರು ಮನೆಯಾಗಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ.



Click it and Unblock the Notifications