Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ದೇಶಾದ್ಯಂತ ಸುದ್ದಿಯಾದ ಗಾಲ್ಗೋಟಿಯಾ ವಿವಿ ಬಗ್ಗೆ ಗೊತ್ತಾ? ಪುಸ್ತಕದ ಅಂಗಡಿಯಿಂದ 3 ಸಾವಿರ ಕೋಟಿ ಸಾಮ್ರಾಜ್ಯ!
ದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಸಮ್ಮಿಟ್ ( ಕೃತಕ ಬುದ್ದಿಮತ್ತೆಯ ಇಂಪ್ಯಾಕ್ಟ್ ಶೃಂಗ ಸಭೆ) ತಂತ್ರಜ್ಞಾನದ ಕಾರಣದಿಂದ ಸುದ್ದಿಯಾಗುವ ಬದಲಾಗಿ ಬೇರೆ ಬೇರೆ ವಿಚಾರವಾಗಿ ಸುದ್ದಿಯಾಗುತ್ತಿದೆ. ಇಲ್ಲಿನ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವು ತನ್ನ ಎಐ ಸಂಶೋಧನೆಯ ಸಾಧನಗಳು ಎಂದು ವಿವರಿಸಿದ್ದ ಚೀನಾ ರೋಬೋ ಡಾಗ್ ವಿಚಾರದಲ್ಲಿ ಈಗ ಸುದ್ದಿಯಾಗುತ್ತಿದೆ.
ಸಮ್ಮೇಳನದಲ್ಲಿ ಮಾಧ್ಯಮ ಸಂವಾದದ ಸಮಯದಲ್ಲಿ ಮಹಿಳೆಯೊಬ್ಬರು, ಗಾಲ್ಗೋಟಿಯಾಸ್‌ನ ಸೆಂಟರ್ ಆಫ್ ಎಕ್ಸಲೆನ್ಸ್ "ಓರಿಯನ್" ಎಂಬ ರೋಬೋಟಿಕ್ ನಾಯಿಯನ್ನು ಅಭಿವೃದ್ಧಿಪಡಿಸಿದೆ ಎಂದು ಹೇಳಿಕೊಂಡ ಕ್ಲಿಪ್ ಕಾಣಿಸಿಕೊಂಡ ನಂತರ ಕೋಲಾಹಲ ಪ್ರಾರಂಭವಾಯಿತು. ಆದ್ರೆ ಇದು ಚೀನಾದಿಂದ ಖರೀದಿಸಲಾದ ರೋಬೋಟಿಕ್ ಡಾಗ್ ಎಂದು ತಿಳಿದುಬಂದಿತ್ತು. ಸುಮಾರು 3 ಲಕ್ಷ ರೂಪಾಯಿಗೆ ಈ ರೋಬೋಟಿಕ್ ಡಾಗ್ ಖರೀದಿಸಲಾಗುತ್ತದೆ ಎಂದು ವರದಿಗಳು ಹೇಳಿದ್ದವು.

ಇದಾದ ಬಳಿಕ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲದ ಸ್ಟಾಲ್ ಅನ್ನು ಎಐ ಸಮ್ಮಿಟ್ ಇಂದ ತೆರೆವುಗೊಳಿಸಲಾಗಿತ್ತು. ಇದಾದ ಬಳಿಕ ಈ ಖಾಸಗಿ ವಿಶ್ವವಿದ್ಯಾಲಯದ ಕುರಿತಾಗಿ ಕುತೂಹಲ ಮೂಡಿಸುತ್ತಿದೆ. ಹಾಗಾದ್ರೆ ಈ ವಿಶ್ವವಿದ್ಯಾಲಯ ಎಲ್ಲಿದೆ? ಈ ಖಾಸಗಿ ಸಂಸ್ಥೆಯನ್ನು ಕಟ್ಟಿಸಿದ್ದು ಯಾರು? ಆತನ ಆಸ್ತಿ ಎಷ್ಟಾಗಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಖಾಸಗಿ ಶಿಕ್ಷಣ ಸಂಸ್ಥೆ ಹುಟ್ಟುಹಾಕಿದ್ದ ಸುನೀಲ್ ಗಾಲ್ಗೋಟಿಯಾ
ಉತ್ತರ ಪ್ರದೇಶದಲ್ಲಿರುವ ಈ ಖಾಸಗಿ ಸಂಸ್ಥೆಯನ್ನು ಸುನೀಲ್ ಗಾಲ್ಗೋಟಿಯಾ ಹುಟ್ಟುಹಾಕಿದ್ದರು. ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್‌ಪ್ರೆಸ್‌ವೇ ಬಳಿ 2011 ರಲ್ಲಿ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಇದು ಅನೇಕ ಪದವಿಪೂರ್ವ, ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳ ನೀಡುವ ಖಾಸಗಿ ವಿಶ್ವವಿದ್ಯಾಲಯ ಇದಾಗಿದೆ.
ವಿಶ್ವವಿದ್ಯಾನಿಲಯವನ್ನು ಸಿಇಒ ಆಗಿ ಸೇವೆ ಸಲ್ಲಿಸುತ್ತಿರುವ ಸುನೀಲ್ ಗಾಲ್ಗೋಟಿಯಾ ಅವರ ಪುತ್ರ ಧ್ರುವ್ ಗಾಲ್ಗೋಟಿಯಾ ವಹಿಸಿಕೊಂಡಿದ್ದಾರೆ. ಅಚ್ಚರಿ ಏನೆಂದರೆ ಈ ಸುನೀಲ್ ಗಾಲ್ಗೋಟಿಯಾ ಕುಟುಂಬವು ದೇಹಲಿಯ ಕನ್ನಾಟ್ ಪ್ರದೇಶದಲ್ಲಿ ಪುಸ್ತಕದ ಅಂಗಡಿಯನ್ನು ಹೊಂದಿದ್ದರು. 1933ರಲ್ಲಿ ಅವರ ಕುಟುಂಬವು ಪುಸ್ತಕದ ಅಂಗಡಿಯನ್ನು ಆರಂಭಿಸಿತ್ತು. ಈ ಪುಸ್ತಕದ ಅಂಗಡಿ ಸುಮಾರು 80 ವರ್ಷಗಳ ಕಾಲ ಕಾರ್ಯನಿರ್ವಹಿಸಿತ್ತು. ಭಾರತದಲ್ಲಿ ಸ್ವಾತಂತ್ರ್ಯ ನಂತರವು ಓದುಗರ ಸಂಖ್ಯೆ ಕಡಿಮೆ ಇದ್ದ ಕಾಲ. ಆ ಸಮಯದಲ್ಲೂ ಈ ಅಂಗಡಿ ಪುಸ್ತಕ ಮಾರಾಟ ಮಾಡಿಯೇ ಕುಟುಂಬ ನಿರ್ವಹಣೆಗೆ ಮುಂದಾಗಿತ್ತು.
ಸುನೀಲ್ ಗಾಲ್ಗೋಟಿಯಾ ಕೂಡ ಇದೇ ಪುಸ್ತಕದ ಅಂಗಡಿ ನೋಡಿಯೇ ಬೆಳೆದಿದ್ದರು. ಅನಂತರ ಕುಟುಂಬ ವ್ಯವಹಾರವನ್ನು ನೋಡಿಕೊಳ್ಳಲು ಮುಂದಾದ ಸುನೀಲ್ ಗಾಲ್ಗೋಟಿಯಾ ಈ ಅಂಗಡಿಯನ್ನು ವಿಸ್ತರಿಸಲು ಮುಂದಾದರು. ಹೀಗಾಗಿ ಅವರು 1980ರಲ್ಲಿ ಗಲ್ಗೋಟಿಯಾ ಪಬ್ಲಿಕೇಶನ್ಸ್ ಅನ್ನು ಪ್ರಾರಂಭಿಸಿದರು. ಕಾಲಾನಂತರದಲ್ಲಿ, ಅವರು ಶಿಕ್ಷಣ ಕ್ಷೇತ್ರಕ್ಕೆ ಮತ್ತಷ್ಟು ತಮ್ಮ ವ್ಯವಹಾರ ವಿಸ್ತರಿಸಿದರು.
40 ವಿದ್ಯಾರ್ಥಿಗಳಿಂದ ಆರಂಭಗೊಂಡಿತ್ತು ವಿಶ್ವವಿದ್ಯಾಲಯ
2000ನೇ ಇಸವಿಯಲ್ಲಿ ಅವರು ಕೇವಲ 40 ವಿದ್ಯಾರ್ಥಿಗಳೊಂದಿಗೆ ಅವರು ಗಲ್ಗೋಟಿಯಾಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಟೆಕ್ನಾಲಜಿ (GIMT) ಅನ್ನು ಪ್ರಾರಂಭಿಸಿದರು. ನಂತರ ಅವರು ಗಾಲ್ಗೋಟಿಯಾಸ್ ಕಾಲೇಜ್ ಆಫ್ ಎಂಜಿನಿಯರಿಂಗ್ ಹಾಗೆ 2011 ರಲ್ಲಿ ಗ್ರೇಟರ್ ನೋಯ್ಡಾದಲ್ಲಿ ಗಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಸದ್ಯ ಈಗ ಅವರು ಶಿಕ್ಷಣ ಸಂಸ್ಥೆಯ ದೊಡ್ಡ ವ್ಯವಹಾರ ನಡೆಸುತ್ತಿದ್ದಾರೆ. ಹಾಗೆ ಇಂದು 40,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಲ್ಗೋಟಿಯಾಸ್ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಅವರ ಆಸ್ತಿಯೇ 3 ಸಾವಿರ ಕೋಟಿ
ಸಣ್ಣ ಪುಸ್ತಕದ ಅಂಗಡಿಯಿಂದ ಆರಂಭಗೊಂಡಿದ್ದ ಅವರ ವ್ಯವಹಾರವು ಇಂದು 3 ಸಾವಿರ ಕೋಟಿ ವ್ಯವಹಾರವಾಗಿ ಬದಲಾಗಿದೆ. 2015ರ ಸುಮಾರಿಗೆ ಅವರ ಎಲ್ಲಾ ಪುಸ್ತಕ ಮಳಿಗೆಗಳು ಮುಚ್ಚಲ್ಪಟ್ಟಿವೆ. ಆದ್ರೆ ಶಿಕ್ಷಣ ಸಂಸ್ಥೆಗಳು ಬೆಳೆಯುತ್ತಲೇ ಇದೆ. ಕೆಲ ವರ್ಷದ ಹಿಂದೆ ಅವರಿಗೆ ಕೇಂದ್ರ ಸರ್ಕಾರವು ಅತ್ಯುತ್ತಮ ಖಾಸಗಿ ವಿಶ್ವವಿದ್ಯಾಲಯ ಎಂಬ ಪ್ರಶಸ್ತಿ ಸಹ ನೀಡಿತ್ತು.



Click it and Unblock the Notifications
