Latest Updates
-
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ!
ಮನೆಯಲ್ಲಿ ದೆವ್ವ ಭೂತ ಚೇಷ್ಠೆ ಇದ್ರೆ ಒಂದು ಗ್ಲಾಸ್ ನೀರಿಂದ ಪತ್ತೆ: ವಿಡಿಯೋದಲ್ಲಿ ಹೇಳೋದೇನು?
ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ದೆವ್ವ ಭೂತಗಳು ಅಂದ್ರೆ ಎಲ್ಲರು ಭಯ ಪಡುತ್ತಾರೆ. ಕೆಲವರು ದೆವ್ವ ಭೂತದ ಅನುಭವ ಆಗಿರುವಂತೆ ಹೇಳಿಕೊಳ್ಳುವುದು ಹಾಗೆ ಹಲವು ವಿಡಿಯೋಗಳಲ್ಲಿ ಸೆರೆಯಾಗಿರುವುದಾಗಿಯೂ ಹೇಳಿಕೊಳ್ಳಲಾಗುತ್ತದೆ. ಹಾಗೆ ಈ ದೆವ್ವ ಭೂತದ ಕಥೆಗಳಂತು ಎಲ್ಲೆಲ್ಲೂ ಬಹಳ ಫೇಮಸ್. ಹಾಗೆ ಒಂದಿಷ್ಟು ಸಿನಿಮಾಗಳು ಕೂಡ ನಾವು ನೋಡಿರುತ್ತೇವೆ.
ಆದ್ರೆ ನಿಮ್ಮ ಮನೆಯಲ್ಲಿಯೇ ನೆಗೆಟಿವ್ ಎನರ್ಜಿ ಸೇರಿದ್ದರೆ ಏನು ಮಾಡುತ್ತೀರಿ. ಕೆಲವರು ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆ ಎಂದು ಭಾವಿಸುವುದು ನೋಡಬಹುದು. ಹಾಗೆ ಸಣ್ಣ ಸಣ್ಣ ವಿಚಾರಗಳಿಗೂ ಭಯ ಬೀಳುವುದು, ಯಾವುದಾದರು ಶಬ್ದ ಕೇಳಿಬಂದರೆ ಭಯಗೊಳ್ಳುವುದು ಮನೆಯಲ್ಲ ಒಬ್ಬರೆ ಇರಲು ಭಯಗೊಳ್ಳುವುದು ನೋಡಬಹುದು.
ಕೆಲವರು ತಮ್ಮ ಮನೆಗೆ ದೆವ್ವ ಭೂತದ ಕಾಟವಿದೆ ಎಂದು ಹೇಳುವುದು ಸಹ ನಾವು ಕೇಳಿರಬಹುದು. ಅವರಲ್ಲಿ ಬಹುತೇಕರು ಮನೆಯಲ್ಲಿ ಯಾವುದೋ ಸಮಸ್ಯೆ ಇದೆ ಎಂದು ನಂಬಿರುತ್ತಾರೆ. ಹಾಗೆ ಬಹುತೇಕರಲ್ಲಿ ಮನೆಯಲ್ಲಿ ಸಣ್ಣ ಪುಟ್ಟ ಶಬ್ದಗಳು ಕೇಳಿಬಂದ್ರೂ ಕೂಡ ಭಯದಲ್ಲಿ ನಡುಗುವುದು ನೋಡಬಹುದು.

ಆದ್ರೆ ಈ ಅತೀಂದ್ರಿಯ ಶಕ್ತಿಗಳು ನಿಮ್ಮ ಮನೆಯಲ್ಲಿ ನೆಲೆಸಿವೆಯೇ ಎಂಬುದನ್ನು ಪತ್ತೆ ಮಾಡಲು ಹಲವು ರೀತಿಯ ಪ್ರಕ್ರಿಯೆಗಳು, ನಿಯಮಗಳಿರುವುದು ನೋಡಬಹುದು. ಮಂತ್ರವಾದಿಗಳ ಬಳಿ ತೆರಳುವುದು ಒಂದು ವಿಧಾನವಾಗಿದ್ದರೂ ನಾವಿಂದು ಸುಲಭವಾಗಿ ಮನೆಯಲ್ಲೇ ಹೇಗೆ ದೆವ್ವ ಭೂತ ಇರುವಿಕೆಯ ಕುರಿತು ತಿಳಿದುಕೊಳ್ಳೋದು ಹೇಗೆ ಅನ್ನೋದನ್ನು ಇಲ್ಲಿ ನೋಡೋಣ.
ಆದ್ರೆ ಮನೆಯಲ್ಲಿ ನೆಗೆಟಿವ್ ಎನರ್ಜಿಯನ್ನು ನಾವು ಗುರುತಿಸಲು ಅಥವಾ ಪತ್ತೆ ಮಾಡಲು ಸಾಧ್ಯವಿಲ್ಲ. ಆದ್ರೆ ಈ ರೀತಿ ಒಂದು ಗ್ಲಾಸ್ ನೀರಿನಿಂದ ನಾವು ಸುಲಭವಾಗಿ ನೆಗೆಟಿವ್ ಎನರ್ಜಿಯನ್ನು ಪತ್ತೆ ಮಾಡಬಹುದು. ಹಾಗಾದ್ರೆ ಮನೆಯಲ್ಲಿ ಸುಲಭವಾಗಿ ಹೇಗೆ ನೆಗಟಿವ್ ಎನರ್ಜಿಯನ್ನು ಪತ್ತೆ ಮಾಡಬಹುದು ಎಂಬುದನ್ನು ನಾವಿಂದು ವಿಡಿಯೋದಲ್ಲಿ ತಿಳಿದುಕೊಳ್ಳೋಣ.
ಈ ರೀತಿ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆಯೇ ಎಂಬುದನ್ನು ಪತ್ತೆ ಮಾಡುವುದು ಹೇಗೆ ಎಂಬ ವಿಡಿಯೋ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಸಂಚಲನಕ್ಕೆ ಸಾಕ್ಷಿಯಾಗಿದೆ. ಸರಳ ಉಪಾಯದ ಮೂಲಕ ಮನೆಯಲ್ಲಿನ ನೆಗೆಟಿವ್ ಎನರ್ಜಿಯನ್ನು ಪತ್ತೆ ಮಾಡುವುದು ಹೇಗೆ ಅನ್ನೋದನ್ನು ವಿಡಿಯೋದಲ್ಲಿ ಹೇಳಲಾಗಿದೆ.
ವಿಡಿಯೋದಲ್ಲಿ ಹೇಳಿರುವುದೇನು?
ಮನೆಯಲ್ಲಿ ನೆಗೆಟಿವ್ ಎನರ್ಜಿ ಪತ್ತೆ ಮಾಡಲು ಮೊದಲು ಒಂದು ಗ್ಲಾಸ್ ತೆಗೆದುಕೊಂಡು ಅದಕ್ಕೆ ಮುಕ್ಕಾಲು ಭಾಗದಷ್ಟು ನೀರು ಹಾಕಬೇಕು. ಹಾಗೆ ನಂತರ ಅದೇ ಗ್ಲಾಸ್‌ಗೆ 1 ಸ್ಪೂನ್ ಉಪ್ಪು ಹಾಕಿ ಬಳಿಕ ಮನೆಯ ಯಾವುದಾದರು ಮೂಲೆಯಲ್ಲಿ ಇಡಬೇಕು. ಈ ಗ್ಲಾಸ ಅನ್ನ ಯಾರು ಕೂಡ ಮುಟ್ಟಬಾರದು, ಹಾಗೆ ಅದರ ಜಾಗ ಬದಲಾಯಿಸಲು ಮುಂದಾಗಬಾರದು.
ಸುಮಾರು 7 ದಿನಗಳ ಕಾಲ ಆ ನೀರು ಅಲ್ಲಿಯೇ ಇರಬೇಕು. ಒಂದು ವಾರದ ಬಳಿಕ ನೀರನ್ನು ಪರೀಕ್ಷಿಸಲು ಮುಂದಾಗಿ. ನಿಮ್ಮ ಮನೆ ಶಾಂತಿಯುತವಾಗಿದ್ದರೆ ಮತ್ತು ಯಾವುದೇ ನಕಾರಾತ್ಮಕ ಶಕ್ತಿ ಇಲ್ಲದಿದ್ದರೆ, ನೀರು ಯಾವುದೇ ಬದಲಾವಣೆಗಳಿಲ್ಲದೆ ಶುದ್ಧವಾಗಿರಲಿದೆ. ಆದರೆ ಮನೆಯಲ್ಲಿ ಯಾವುದಾದರು ನಕಾರಾತ್ಮಕ ಶಕ್ತಿ ಉಳಿದಿದ್ದರೆ ನೀರು ತನ್ನ ಮೂಲ ರೂಪದಲ್ಲಿ ಬದಲಾಗುತ್ತದೆ. ನೀರಿನ ಮೇಲ್ಭಾಗದಲ್ಲಿ ಗುಳ್ಳೆಗಳು ಮೂಡುವುದು, ನೀರಿನ ತಳದಲ್ಲಿ ಕಪ್ಪಾಗುವುದು, ಅಥವಾ ಗಡಸಾಗಿ ನೀರು ಬದಲಾದಂತೆ ಅನಿಸುವುದು.
ನೀರನ್ನು ಬಳಸಿ ಈ ರೀತಿ ನೆಗೆಟಿವ್ ಎನರ್ಜಿ ಪತ್ತೆ ಮಾಡುವ ವಿಧಾನವು ಬಹಳ ಹಿಂದಿನ ಕಾಲದಿಂದಲೂ ಬಳಕೆಯಲ್ಲಿದೆ. ಇದು ಪ್ರಬಲ ವಿಧಾನ ಎಂದು ಕೂಡ ಕರೆಯಲಾಗಿದೆ. ಆದ್ರೆ ಇದು ವೈಜ್ಞಾನಿಕ ರೀತಿಯಲ್ಲಿ ದೃಢವಾಗಿಲ್ಲ. ಹಾಗೆ ಅದರ ಫಲಿತಾಂಶವು ನಿರೂಪಿಸುವ ಯಾವುದೇ ಅಧ್ಯಯನವೂ ನಡೆದಿಲ್ಲ.



Click it and Unblock the Notifications