Latest Updates
-
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ
ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
ವೈಭವ ಲಕ್ಷ್ಮಿ ವ್ರತ ಇದನ್ನು ಸುಮಂಗಲಿಯರ ವ್ರತವೆಂದು ಕರೆಯಬಹುದು. ಏಕೆಂದರೆ ಈ ವ್ರತವನ್ನು ಮುತ್ತೈದೆಯರು ಮಾತ್ರ ಮಾಡುತ್ತಾರೆ. ಪ್ರತೀ ಶುಕ್ರವಾರ ಈ ವ್ರತ ಮಾಡುವುದರಿಂದ ಮನದ ಬಯಕೆಗಳು ಈಡೇರುವುದು. ಆದ್ದರಿಂದ ಮದುವೆಯಾದವರು ಈ ವ್ರತವನ್ನು ಆಚರಿಸುತ್ತಾರೆ.
ಈ ವ್ರತವನ್ನು ಶುಕ್ರವಾರ ಪ್ರಾರಂಭಿಸಬೇಕು. ಈ ವ್ರತವನ್ನು ಒಟ್ಟು 11 ಅಥವಾ 21 ಶುಕ್ರವಾರ ಆಚರಿಸಲಾಗುವುದು. ವೈಭವ ಲಕ್ಷ್ಮಿ ವ್ರತ ಆಚರಿಸಿದರೆ ಜೀವನದಲ್ಲಿರುವ ಕಷ್ಟಗಳು ದೂರವಾಗುವುದು, ಸಂತೋಷ ಹೆಚ್ಚುವುದು.

ವಿವಾಹಿತ ಮಹಿಳೆಯರ ಜೀವನದಲ್ಲಿ ಹಲವಾರು ಸವಾಲುಗಳು, ಕಷ್ಟಗಳು ಎದುರಾದರೆ ಭಕ್ತಿಯಿಂದ ವೈಭವ ಲಕ್ಷ್ಮಿ ವ್ರತ ಮಾಡಿದರೆ ಸಾಕು ಅವರ ಕಷ್ಟಗಳು ದೂರವಾಗುವುದು ಅಲ್ಲದೆ ಮನದ ಬಯಕೆಗಳು ಈಡೇರುವುದು.
ವೈಭವ ಲಕ್ಷ್ಮಿ ವ್ರತದ ಪ್ರಯೋಜನಗಳು
ವೈಭವ ಲಕ್ಷ್ಮಿ ವ್ರತ ಶುಕ್ರವಾರದೆಂದು ಆಚರಿಸಬೇಕು. ಶುಕ್ರವಾರ ಲಕ್ಷ್ಮಿಯ ದಿನ, ಈ ದಿನ ಆಕೆಯನ್ನು ಆರಾಧಿಸಿದರೆ ಸಂಪತ್ತು ವೃದ್ಧಿಯಾಗುವುದು. ಈ ವ್ರತವನ್ನು ಮಾಡುವವರು ಮೊದಲು ಅದರ ಬಗ್ಗೆ ನಂಬಿಕೆ ಇರಬೇಕು, ಅಲ್ಲದೆ ಶ್ರದ್ಧೆಯಿಂದ ಈ ವ್ರತವನ್ನು ಆಚರಿಸಬೇಕು. ಆಗ ನಾವು ಮನಸ್ಸಿನಲ್ಲಿ ಏನು ಬಯಸಿದೆವೋ ಅದು ಈಡೇರುವುದು.
ವೈಭವ ಲಕ್ಷ್ಮಿ ವ್ರತ ಆಚರಿಸುವುದು ಹೇಗೆ?
ಮದುವೆಯಾದ ಮಹಿಳೆಯರು ಈ ವ್ರತವನ್ನು ಮಾಡಬೇಕು. ಮನಸ್ಸಿನಲ್ಲಿ ಏನಾದರೂ ಬಯಕೆ ಇದ್ದರೆ ಅದನ್ನು ಈಡೇರಲು ಸಂಕಲ್ಪ ತೆಗೆದುಕೊಂಡು ವ್ರತವನ್ನು ಆಚರಿಸಿ. ಪುರುಷರೂ ಈ ವ್ರತವನ್ನು ಮಾಡಬಹುದು. ಯಾರೇ ಈ ವ್ರತವನ್ನು ಮಾಡುವುದಾದರೂ ಅವರಿಗೆ ಈ ವ್ರತದಲ್ಲಿ ತುಂಬಾ ನಂಬಿಕೆ ಇರಬೇಕು. ತುಂಬಾ ಶ್ರದ್ಧೆಯಿಂದ ಈ ವ್ರತವನ್ನು ಆಚರಿಸಬೇಕು. ಈ ವ್ರತವನ್ನು 11 ಅಥವಾ 21 ಶುಕ್ರವಾರಗಳವರೆಗೆ ಆಚರಿಸಬೇಕು. ಈ ವ್ರತವನ್ನು ಶಾಸ್ತ್ರದ ಪ್ರಕಾರ ಮಾಡಬೇಕು, ಅದು ತಪ್ಪಿದರೆ ಇದರ ಫಲ ಸಿಗಲ್ಲ. ಈ ವ್ರತವನ್ನು ಮಾಡುವವರು ಆಗಾಗ 'ಜೈ ಮಾ ಲಕ್ಷ್ಮಿ' ಎಂದು ಆಗಾಗ ಪಠಿಸುತ್ತಲೇ ಇರಿ. ಪೂಜೆಯನ್ನು ಶ್ರೀ ಯಂತ್ರದ ಮುಂದೆ ಮಾಡಿ. 11 ಶುಕ್ರವಾರ ಆಚರಿಸುವುದು ಎಂದು ನಿರ್ಧರಿಸಿದರೆ 11 ವಾರ ತಪ್ಪದೆ ಮಾಡಬೇಕು, ಒಂದು ವೇಳೆ ಒಂದು ವಾರ ತಪ್ಪಿದರೆ ಮುಂದಿನ ವಾರ ಅದನ್ನು ಮಾಡಬೇಕು. 11 ಅಥವಾ 21 ಶುಕ್ರವಾರ ಮಾಡಬೇಕು, ತಪ್ಪಿಸಬಾರದು. ಪೂಜೆಯ ಬಳಿಕ ಮಹಾಲಕ್ಷ್ಮಿ ಸ್ತುತಿ ಪಠಿಸಿ. ಈ ದಿನ ಲಕ್ಷ್ಮಿಯ ಪುಸ್ತಕಗಳನ್ನು ಹಂಚಿ. ಇನ್ನು ವ್ರತ ಮಾಡುವವರು ಈ ದಿನ ಹಾಲು, ಹಣ್ಣುಗಳನ್ನು ಸೇವಿಸಬಹುದು ಅಲ್ಲದೆ ಪೂಜೆಯಾದ ಬಳಿಕ ಒಂದು ಹೊತ್ತಿನ ಆಹಾರ ಸೇವಿಸಬಹುದು.
ಶುಕ್ರವಾರ ಈ ಲಕ್ಷ್ಮಿ ಕುಬೇರ ಮಂತ್ರ ಪಠಿಸಿ
ಲಕ್ಷ್ಮಿ ಕುಬೇರ ಮಂತ್ರ: .
"ಓಂ ಹ್ರೀಂ ಶ್ರೀಂ ಕ್ರೀಂ ಶ್ರೀಂ ಕುಬೇರಾಯ, ಅಷ್ಟ ಲಕ್ಷ್ಮಿ ಮಮ ಗೃಹೆ ಧನಂ ಪುರಾಯ ಪುರಾಯ ನಮಃ"
ಮಹಾಲಕ್ಷ್ಮಿ ಮಂತ್ರ:
"ಓಂ ಶ್ರೀಂ ಹ್ರೀಂ ಶ್ರೀಂ ಕಮಲೆ ಕಮಲಲಾಯೆ ಪ್ರಸೀದ, ಪ್ರಸೀದ ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮಯೆ ನಮಃ"
ಕುಬೇರ ಮಂತ್ರ:
ಓಂ ಶ್ರೀಂ ಒಂ ಹ್ರೀಂ ಶ್ರೀಂ ಓಂ ಹ್ರೀಂ ಶ್ರೀಂ ಕ್ಲೀಮ್ ವಿತ್ತೆಶ್ವರಾಯ ನಮಃ
ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ ಧನಧಾನ್ಯಾಧಿಪತಯೇ ಧನಧಾನ್ಯಸಮೃದ್ಧಿಂ ಮೇ ದೇಹಿ ದಾಪಯ ಸ್ವಾಹಾ
ಲಕ್ಷ್ಮಿಯ ಅವತಾರ ಶ್ರೀಯಂತ್ರ
ವೈಭವ ಲಕ್ಷ್ಮಿ ಪೂಜೆಯಲ್ಲಿ ಶ್ರೀ ಯಂತ್ರವನ್ನು ಬಳಸಿ. ಇದು ಲಕ್ಷ್ಮಿಯ ಅನೇಕ ಅವತಾರಗಳಲ್ಲಿ ಒಂದಾಗಿದೆ. ಈ ಅವತಾರಕ್ಕೆ ಗೌರವನ್ನು ಸಲ್ಲಿಸಿದ ಬಳಿಕ ವ್ರತವು ನೆರವೇರುವುದು.
ವೈಭವ ಲಕ್ಷ್ಮಿ ಪೂಜೆಯ ಮುನ್ನ ಗಣೇಶನ ಆರಾಧಿಸಿ



Click it and Unblock the Notifications