Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಈ ರಾಶಿಯವರು ಶಿಕ್ಷಕರಾದರೆ ಮಕ್ಕಳ ಭವಿಷ್ಯ ಬೆಳಗುತ್ತಂತೆ!
ಸಾಮಾನ್ಯವಾಗಿ ನಾವೆಲ್ಲ ಚಿಕ್ಕದಿರುವಾಗ ಶಿಕ್ಷಕರೆಂದರೆ ನಮಗೆ ಸಿಕ್ಕಾಪಟ್ಟೆ ಭಯ. ಅವರು ಒಂದು ಸಾರಿ ಶಿಕ್ಷಕರು ಕಣ್ಣರಳಿಸಿ ನೋಡಿದ್ರೆ ಸಾಕು ತರಗತಿಯ ಮಕ್ಕಳೆಲ್ಲಾ ಗಪ್ ಚುಪ್. ಹೋಮ್ ವರ್ಕ್ ಮಾಡದಿದ್ದಾಗ, ತರಗತಿಯಲ್ಲಿ ಜಗಳ ಮಾಡಿದಾಗ, ಪ್ರಶ್ನೆಗೆ ಉತ್ತರಿಸದಿದ್ದಾಗ ಅವರು ಕೊಡುತ್ತಿದ್ದ ಏಟುಗಳನ್ನು ನೆನೆದ್ರೆ ಈಗಲೂ ಮೈ ಜುಮ್ ಅನ್ನುತ್ತೆ. ಆದ್ರೆ ಅದೇ ರೀತಿ ಒಬ್ಬರು ಸೌಮ್ಯ ಸ್ವಭಾವದ ನಮ್ಮೆಲ್ಲರ ಅಚ್ಚು- ಮೆಚ್ಚಿನ ಶಿಕ್ಷಕರು ಕೂಡ ನಮ್ಮ ಶಾಲೆಯಲ್ಲಿ ಇರುತ್ತಿದ್ದರು.
ಈ ಸೌಮ್ಯ ಸ್ವಭಾವದ ಶಿಕ್ಷಕ/ಶಿಕ್ಷಕಿಯನ್ನು ಕಂಡರೆ ನಮಗೆ ಎಲ್ಲಿಲ್ಲದ ಪ್ರೀತಿ. ಅವರು ತರಗತಿಗೆ ಬರ್ತಾರೆ ಅಂದ್ರೆ ಸಾಕು ನಮ್ಮ ಸಂತೋಷಕ್ಕೆ ಪಾರವೇ ಇರ್ತಿರಲಿಲ್ಲ. ಅವರ ಪ್ರೀತಿಗೆ ಮನಸೋಲದೇ ಇರುವವರು ಯಾರು ಇಲ್ಲ ಅನ್ನಿಸುತ್ತೆ. ಹೊಡೆಯದೇ, ಬಡಿಯದೇನೋ ಮಕ್ಕಳನ್ನು ಸರಿ ದಾರಿಗೆ ತರಬಹುದು ಅನ್ನೋದನ್ನು ತೋರಿಸಿ ಕೊಟ್ಟವರು ಅವರು. ಕೆಲ ರಾಶಿಯವರು ಇದೇ ರೀತಿಯ ಸ್ವಭಾವವನ್ನು ಹೊಂದಿರುತ್ತಾರಂತೆ. ಹಾಗಾದ್ರೆ ಯಾವ ರಾಶಿಯವರು ಸೌಮ್ಯ ಸ್ವಭಾವದ ಶಿಕ್ಷಕರಾಗುತ್ತಾರೆ ಅನ್ನೋದನ್ನು ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರು ತಮ್ಮ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಡೋದಕ್ಕಾಗಿ ಶ್ರಮಿಸುತ್ತಾರೆ. ವಿದ್ಯಾರ್ಥಿಗಳೇ ಇವರ ಮೊದಲ ಆದ್ಯತೆಯಾಗಿರುತ್ತದೆ. ದಯೆ ಮತ್ತು ಪ್ರಾಮಾಣಿಕ ಪ್ರೀತಿ ಮೇಷ ರಾಶಿಯವರಿಗೆ ವಿದ್ಯಾರ್ಥಿಗಳೊಂದಿಗೆ ಆರೋಗ್ಯಕರ ಸಂಬಂಧವನ್ನು ಬೆಳೆಸಲು ಸಹಾಯ ಮಾಡುತ್ತದೆ.ಮೇಷ ರಾಶಿಯವರು ಮಕ್ಕಳಿಗೆ ವಿಧೇಯತೆ ಹಾಗೂ ಶಿಸ್ತನ್ನು ಕಲಿಸಿ ಕೊಡುತ್ತಾರೆ. ಇನ್ನೂ ಬೇಜಾರಾದಾಗ ವಿದ್ಯಾರ್ಥಿಗಳಿಗೆ ಇವರು ಸಾಂತ್ವಾನ ನೀಡುತ್ತಾರೆ.
ಮೀನ ರಾಶಿ
ಮೀನ ರಾಶಿಯ ಬೋಧಕರಿಗೆ ತಾಳ್ಮೆ ಹೆಚ್ಚಾಗಿರುತ್ತದೆ. ಇವರು ವಿದ್ಯಾರ್ಥಿಗಳನ್ನು ತುಂಬಾನೇ ಇಷ್ಟ ಪಡುತ್ತಾರೆ. ಮೀನ ರಾಶಿಯ ಶಿಕ್ಷಕರ ಸ್ವಭಾವ ಮೀನಿನಷ್ಟೇ ಶಾಂತವಾಗಿರುತ್ತದೆ. ಇವರ ಈ ಸ್ವಭಾವದಿಂದಾಗಿ ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನು ವ್ಯಕ್ತ ಪಡಿಸೋದಕ್ಕೆ ಹೆದರೋದಿಲ್ಲ. ಇಂತಹ ಶಿಕ್ಷಕರ ಮಾರ್ಗ ದರ್ಶನ ವಿದ್ಯಾರ್ಥಿಗಳಿಗೆ ತುಂಬಾನೇ ಇಷ್ಟ ಆಗುತ್ತದೆ. ಶಾಲಾ ದಿನದ ಶೈಕ್ಷಣಿಕ ಒತ್ತಡಗಳಿಂದ ವಿದ್ಯಾರ್ಥಿಗಳು ವಿಚಲಿತರಾಗೋದು ಹೆಚ್ಚು. ಆದರೆ ಮೀನ ರಾಶಿಯ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ಅಧ್ಯಯನ ಮಾಡುತ್ತಾರೆ.
ತುಲಾ ರಾಶಿ
ತುಲಾ ರಾಶಿಯ ಮಾರ್ಗದರ್ಶಕರು ತಮ್ಮ ವಿದ್ಯಾರ್ಥಿಗಳಿಗೆ ಯಾವುದೇ ವಿಚಾರವನ್ನಾದರೂ ನಿಖರವಾಗಿ ಕಲಿಯಲು ಸಹಾಯ ಮಾಡುತ್ತಾರೆ. ತುಲಾ ರಾಶಿಯವರು ತಮ್ಮ ಸೌಮ್ಯವಾದ ಮಾತಿನಿಂದಲೇ ವಿದ್ಯಾರ್ಥಿಗಳನ್ನು ಸರಿದಾರಿಗೆ ತರುತ್ತಾರೆ. ತುಲಾ ರಾಶಿಯ ಶಿಕ್ಷಕರ ಪಾಠ ಕೇಳೋದಕ್ಕೂ ಕೂಡ ಮಕ್ಕಳು ಉತ್ಸುಕರಾಗಿರುತ್ತಾರಂತೆ. ತುಲಾ ರಾಶಿಯವರ ಈ ಸೌಮ್ಯ ಸ್ವಭಾವವು ತಮ್ಮ ವಿದ್ಯಾರ್ಥಿಗಳನ್ನು ಅಹಂಕಾರಿಗಳಾಗಿ ಪರಿವರ್ತಿಸುವುದಿಲ್ಲ. ಮಕ್ಕಳ ಒಳ್ಳೆಯ ಗುಣಗಳನ್ನು ಮೂಡಿಸುವಂತೆ ಮಾಡಲು ಸಹಾಯ ಮಾಡುತ್ತದೆ.
ಸಿಂಹ ರಾಶಿ
ಸಿಂಹ ರಾಶಿಯ ಶಿಕ್ಷಕರು ಮಕ್ಕಳಿಗೆ ವಿಭಿನ್ನ ಕಲಿಕೆಯ ವಾತಾವರಣವನ್ನು ಸೃಷ್ಟಿಸುತ್ತಾರೆ. ಪ್ರತಿ ವಿದ್ಯಾರ್ಥಿಗೆ ತಮ್ಮ ಸ್ವಂತ ಕೌಶಲ್ಯಗಳಲ್ಲಿ ನಂಬಿಕೆಯನ್ನು ಹೊಂದಲು ಪ್ರೋತ್ಸಾಹಿಸುತ್ತಾರೆ. ಕೆಲವೊಂದು ಸಾರಿ ಸಿಂಹ ರಾಶಿಯ ಶಿಕ್ಷಕರು ಕಟ್ಟುನಿಟ್ಟಾಗಿರಲು ತುಂಬಾ ಶಾಂತವಾಗಿರುತ್ತಾರೆ. ಮತ್ತು ಮೃದುವಾದ ಗುಣ ಹೊಂದಿರುತ್ತಾರೆ. ಅವರು ಪ್ರತಿ ಮಗು ಮತ್ತು ಅವರ ವಿಶಿಷ್ಟ ಸಾಧನೆಗಳ ಬಗ್ಗೆ ಹೆಚ್ಚು ಗಮನ ಹರಿಸುವ ಮೂಲಕ ಮಕ್ಕಳೊಂದಿಗೆ ಸ್ನೇಹಪರ ಬಂಧವನ್ನು ಬೆಳೆಸುತ್ತಾರೆ.



Click it and Unblock the Notifications
