Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಈ 5 ರಾಶಿಯವರು ನಾಟಕೀಯ ಸ್ವಭಾವ ಹೊಂದಿರುತ್ತಾರೆ!
ಈ ಜಗತ್ತಿನಲ್ಲಿರುವ ಪ್ರತಿಯೊಬ್ಬರ ಗುಣವು ಮತ್ತೊಬ್ಬರಿಗಿಂತ ವಿಭಿನ್ನವಾಗಿರುತ್ತದೆ. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ಕೂಡ ಒಂದೇ ರೀತಿಯ ಗುಣ ಹೊಂದಿರೋದಿಲ್ಲ. ಅವರ ಮಾತು, ನಡವಳಿಕೆ ಎಲ್ಲವೂ ವಿಭಿನ್ನವಾಗಿರುತ್ತದೆ. ಅದ್ರಲ್ಲಿ ಕೆಲವರು ನಾಟಕೀಯ ಸ್ವಭಾವವನ್ನು ಹೊಂದಿರುತ್ತಾರೆ. ಇಂತಹ ಗುಣವುಳ್ಳವರು ಹೇಗಾದರೂ ಮಾಡಿ ಇತರರನ್ನು ಹಾಗೂ ಅವರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳೋದಕ್ಕೆ ನಿರ್ಧರಿಸುತ್ತಾರೆ. ಅಷ್ಟಕ್ಕು ನಾಟಕೀಯ ಸ್ವಭಾವ ಹೊಂದಿರುವ ಆ 5 ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ಸಿಂಹ ರಾಶಿ
ಸಿಂಹ ರಾಶಿಯವರು ಎಲ್ಲೇ ಹೋದರೂ ಕೂಡ ನಾನೇ ಅಲ್ಲಿನ ಕೇಂದ್ರ ಬಿಂದುವಾಗಿ ಇರಬೇಕು ಅಂತ ಇಚ್ಛಿಸುತ್ತಾರೆ. ಹೀಗಾಗಿ ಹೋದಲೆಲ್ಲಾ ಏನಾದರೂ ನಾಟಕ ಮಾಡಿ ಬೇರೆಯವರ ಗಮನವನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಹಾಗೂ ಇವರು ಮಾತಿನಲ್ಲಿ ಹಿಡಿತ ಇರೋದ್ರಿಂದ ಎಂತವರಿಗೂ ಒಂದು ಸಾರಿ ಇವರನ್ನು ಮಾತನ್ನು ಕೇಳೋಣ ಎಂದೆನಿಸುತ್ತದೆ. ಇವರ ನಾಟಕೀಯ ಪ್ರವೃತ್ತಿ ಕೆಲವೊಮ್ಮೆ ಹೆಚ್ಚು ಅಂತ ಅನ್ನಿಸದೇ ಇರೋದಿಲ್ಲ. ಬೇರೆಯವರು ತಮ್ಮನ್ನು ಪ್ರಶಂಸಿಸಬೇಕು ಎಂದು ಇವರು ಈ ರೀತಿ ಆಡುತ್ತಾರೆ.
ತುಲಾ ರಾಶಿ
ತುಲಾ ರಾಶಿಯವರು ಸಮತೋಲನ ಮತ್ತು ಸಾಮರಸ್ಯದ ಬಯಕೆಗೆ ಹೆಸರುವಾಸಿಯಾಗಿದ್ದಾರೆ. ಕೆಲವೊಮ್ಮೆ ಇವರು ಬಹಳ ನಾಟಕೀಯವಾಗಿ ವರ್ತಿಸುತ್ತಾರೆ. ಇವರು ತಮ್ಮ ಸೌಂದರ್ಯದ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಬೇರೆಯವರು ತಮ್ಮ ಸೌಂದರ್ಯಕ್ಕೆ ಆಕರ್ಷಿತವಾಗಲಿ ಎಂದು ನಾನಾ ವಿಧದ ತಂತ್ರಗಳನ್ನು ರೂಪಿಸುತ್ತಾರೆ. ಇವರು ತಮ್ಮ ಸಂಬಂಧಗಳಲ್ಲಿ ಸಮತೋಲನವನ್ನು ಕಂಡುಕೊಳ್ಳಲು ಹೆಣಗಾಡುತ್ತಾರೆ. ಈ ರಾಶಿಯವರು ಕೂಡ ಬೇರೆಯವರ ಗಮನವನ್ನು ಸೆಳೆದುಕೊಳ್ಳೋದಕ್ಕೆ ಎಂತಹ ನಾಟಕವಾಡಲು ಬೇಕಾದರೂ ಸಿದ್ಧವಾಗಿರುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಕೂಡ ನಾಟಕೀಯ ಸ್ವಭಾವ ಹೊಂದಿರುತ್ತಾರೆ. ಈ ರಾಶಿಯವರು ಭಾವನೆಗಳಿಗೆ ಬೆಲೆ ಕೊಡುತ್ತಾರೆ. ಮತ್ತು ಇವರು ಕಾಂತೀಯ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಮತ್ತು ಇತರರನ್ನು ಆಕರ್ಷಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಈ ರಾಶಿಯವರಿಗೆ ಅಸೂಯೆ ಹೆಚ್ಚಾಗಿರುತ್ತಂತೆ. ಕೆಲವೊಂದು ಸಲ ಇವರ ವರ್ತನೆ ಹತ್ತಿರ ಇರುವವರ ಕೋಪಕ್ಕೆ ಗುರಿಯಾಗಬಹುದು. ಹಾಗಂತ ಇವರು ತಮ್ಮ ಗುಣ ಬದಲಾಯಿಸೋದಿಲ್ಲ. ಅದೇ ನಾಟಕವನ್ನು ಮುಂದುವರಿಸುತ್ತಾರೆ.
ಮೀನ ರಾಶಿ
ಮೀನ ರಾಶಿಯವರು ಸಹಾನುಭೂತಿ ಹಾಗೂ ಸೂಕ್ಷ್ಮ ಸ್ವಭಾವವನ್ನು ಹೊಂದಿರುತ್ತಾರೆ. ಜೊತೆಗೆ ಇವರು ಭಾವನಾತ್ಮಕ ಜೀವಿಗಳು ಕೊಂಚ ನೋವಾದರೂ ಇವರಿಂದ ಸಹಿಸೋದಕ್ಕೆ ಸಾಧ್ಯವಾಗೋದಿಲ್ಲ. ಹಾಗೂ ಇವರು ಕಲ್ಪನಾ ಜೀವಿಗಳು. ಕಲ್ಪನೆಯಲ್ಲಿಯೇ ಮನೆ ಕಟ್ಟಿಕೊಳ್ಳುತ್ತಾರೆ. ಮೀನ ರಾಶಿಯವರು ಸ್ವಾಭಾವಿಕವಾಗಿ ಸೃಜನಶೀಲತೆ ಮತ್ತು ಕಲಾತ್ಮಕ ಅಭಿವ್ಯಕ್ತಿಯ ಕಡೆಗೆ ಒಲವು ತೋರುತ್ತಾರೆ. ಹೀಗಾಗಿ ಇವರು ನಾಟಕೀಯವಾಗಿ ಇಲ್ಲದಿದ್ದರೂ ಕೂಡ ಇವರ ನಡವಳಿಕೆ ಜನರಿಗೆ ಅದೇ ರೀತಿ ಭಾಸವಾಗುತ್ತದೆ.
ಮಿಥುನ ರಾಶಿಯವರು ಬುದ್ಧಿವಂತರು ಹಾಗೂ ಎಂತವರಿಗಾದರೂ ಹೊಂದಿಕೊಳ್ಳುವ ಸ್ವಭಾವ ಹೊಂದಿರುತ್ತಾರೆ. ಅಷ್ಟೇ ಅಲ್ಲ, ಇವರ ಅತ್ಯತ್ತಮ ಸಂವಹನಕಾರರಾಗಿರುತ್ತಾರೆ. ಎಂತವರಿಗಾದರೂ ಇವರ ಮಾತು ಒಂದು ಸಾರಿ ಕೇಳೋಣ ಎಂದೆನಿಸುತ್ತದೆ. ಇವರ ಮಾತು ಕೆಲವರಿಗೆ ನಾಟಕೀಯ ಅನ್ನಿಸುತ್ತದೆ. ಚಿಕ್ಕ ವಿಷಯವನ್ನು ಇವರು ದೊಡ್ಡದಾಗಿ ಬಿಂಬಿಸುತ್ತಾರೆ. ಹೆಚ್ಚಿನವರಿಗೆ ಇವರ ಈ ನಡವಳಿಕೆ ಇಷ್ಟ ಆಗೋದಿಲ್ಲ.



Click it and Unblock the Notifications