ಸೆಪ್ಟೆಂಬರ್ 5 ದಿನ ಭವಿಷ್ಯ: ಮಂಗಳವಾರ ನಿಮ್ಮ ರಾಶಿಫಲ ಹೇಗಿದೆ?

ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 5ರ ರಾಶಿಫಲ ನೀಡಿದ್ದು ಈ ದಿನ 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ತಿಥಿ:ಷಷ್ಠಿ
ನಕ್ಷತ್ರ: ಬೆಳಗ್ಗೆ 9 ಗಂಟೆಯವರೆಗೆ ಭರಣಿ ನಂತರ ಕೃತ್ತಿಕಾ ನಕ್ಷತ್ರ
ಪಕ್ಷ: ಕೃಷ್ಣ ಪಕ್ಷ
ರಾಹುಕಾಲ: ಮಧ್ಯಾಹ್ನ 03:26ರಿಂದ ಸಂಜೆ 04:59ರವರೆಗೆ

Dina Bhavishya

ಮೇಷ ರಾಶಿ
ಈ ದಿನ ನಿಮಗೆ ಸರಾಸರಿಯಾಗಿರಲಿದೆ. ಈ ದಿನ ನೀವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಸಂಗಾತಿಯ ಜೊತೆಗೆ ಹೊಂದಾಣಿಕೆ ಮುಖ್ಯ, ಕೋಪದಿಂದ ಮಾಡುವ ವರ್ತನೆ ಸಂಬಂಧದ ನಡುವೆ ಅಂತರವನ್ನು ಹೆಚ್ಚಿಸಬಹುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ನೀವು ಹೆಚ್ಚು ಉಳಿತಾಯ ಮಾಡಲು ಸಾಧ್ಯವಾಗುವುದು.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 7
ಅದೃಷ್ಟದ ಸಮಯ: ಬೆಳಗ್ಗೆ 7 ರಿಂದ 10 ರವರೆಗೆ

ವೃಷಭ ರಾಶಿ
ಇಂದು ಆರೋಗ್ಯ ದುರ್ಬಲವಾಗಲಿದೆ. ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸದಿರುವುದು ಉತ್ತಮ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಾಮರಸ್ಯ ಇರಲಿದೆ. ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆ ಇರಬಹುದು ಆದರೆ ನೀವು ಆತುರದಿಂದ ನಿರ್ಧಾರ ತೆಗೆದುಕೊಳ್ಳಬಾರದು.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 8
ಅದೃಷ್ಟದ ಸಮಯ: ಮಧ್ಯಾಹ್ನ 2:30 ರಿಂದ ಸಂಜೆ 6:40 ರವರೆಗೆ

ಮಿಥುನ ರಾಶಿ
ವೈಯಕ್ತಿಕ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಕಂಡು ಬರುವುದು. ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚಾಗಲಿದೆ. ಉದ್ಯೋಗ ಅಥವಾ ವ್ಯವಹಾರವಾಗಿರಲಿ, ಇಂದು ನೀವು ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಇಂದು ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 34
ಅದೃಷ್ಟದ ಸಮಯ: ಬೆಳಿಗ್ಗೆ 11:10 ರಿಂದ ಮಧ್ಯಾಹ್ನ 2:25 ರವರೆಗೆ

ಕರ್ಕ ರಾಶಿ
ನೀವು ಯಾರಿಗಾದರೂ ಸಾಲವನ್ನು ನೀಡಿದ್ದರೆ ಈ ದಿನ ಆ ಹಣ ಮರಳಿ ಪಡೆಯಬಹುದು. ಸಂಗಾತಿಯ ಅಸಡ್ಡೆ ವರ್ತನೆ ನಿಮ್ಮಿಬ್ಬರ ನಡುವೆ ಸಮಸ್ಯೆಗಳನ್ನು ಹೆಚ್ಚಿಸಬಹುದು. ಕಚೇರಿಯಲ್ಲಿ ನಿಮ್ಮಿಂದ ತೊಂದರೆಯಾಗದಂತೆ ಜಾಗ್ರತೆವಹಿಸಿ, ಈ ದಿನ ಆರೋಗ್ಯ ಸುಧಾರಿಸಲಿದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಸಮಯ: ಮಧ್ಯಾಹ್ನ 2:20 ರಿಂದ 4:30 ರವರೆಗೆ

ಸಿಂಹ ರಾಶಿ
ಮನೆಯಲ್ಲಿ ವಾತಾವರಣ ತುಂಬಾ ಚೆನ್ನಾಗಿರಲಿದೆ. ಈ ದಿನ ದೊಡ್ಡ ಹಣಕಾಸಿನ ವಹಿವಾಟುಗಳನ್ನು ಮಾಡದಂತೆ ಉದ್ಯಮಿಗಳಿಗೆ ಸಲಹೆ ನೀಡಲಾಗಿದೆ ಇಲ್ಲದಿದ್ದರೆ ನೀವು ನಷ್ಟವನ್ನು ಅನುಭವಿಸಬಹುದು.
ಅದೃಷ್ಟದ ಬಣ್ಣ: ಬೂದು
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಬೆಳಗ್ಗೆ 8 ರಿಂದ 10:15 ರವರೆಗೆ

ಕನ್ಯಾ ರಾಶಿ
ನೀವು ಇದ್ದಕ್ಕಿದ್ದಂತೆ ಪ್ರಯಾಣಿಸಬೇಕಾಗಬಹುದು. ನಿಮ್ಮ ಈ ಪ್ರಯಾಣವು ತುಂಬಾ ಆಯಾಸದಾಯಕವಾಗಿರುತ್ತದೆ. ಇಂದು ನಿಮ್ಮ ಮೇಲಧಿಕಾರಿಗಳು ಕಛೇರಿಯಲ್ಲಿ ತುಂಬಾ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳಿಂದಾಗಿ ನಿಮ್ಮ ಮೇಲೆ ಕೋಪಗೊಳ್ಳಬಹುದು ಆದ್ದರಿಂದ ಕೆಲಸದ ಕಡೆಗೆ ಹೆಚ್ಚಿನ ಗಮನ ನೀಡುವುದು ನಿಮಗೆ ತುಂಬಾ ಒಳ್ಳೆಯದು. ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಈ ದಿನ ಮಿಶ್ರಫಲ.
ಅದೃಷ್ಟದ ಬಣ್ಣ: ತಿಳಿ ಕೆಂಪು
ಅದೃಷ್ಟದ ಸಂಖ್ಯೆ: 15
ಅದೃಷ್ಟದ ಸಮಯ: ಬೆಳಿಗ್ಗೆ 7:20 ರಿಂದ ಮಧ್ಯಾಹ್ನ 3 ರವರೆಗೆ

ತುಲಾ ರಾಶಿ
ಈ ದಿನ ನಿಮಗೆ ಏರಳಿತಗಳಿಂದ ಕೂಡಿರಲಿದೆ. ನಿಮ್ಮ ಕೆಲವು ಪ್ರಮುಖ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗಬಹುದು. ಹಣದ ಸ್ಥಿತಿ ಚೆನ್ನಾಗಿರಲಿದೆ, ಆದರೆ ಖರ್ಚು ಕೂಡ ಅಧಿಕ ಇರಲಿದೆ. ಉದ್ಯೋಗಸ್ಥರು ತಮ್ಮ ಚಿಕ್ಕ ಕೆಲಸಗಳನ್ನು ಜವಾಬ್ದಾರಿಯಿಂದ ಮಾಡಬೇಕಾಗುತ್ತದೆ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 16
ಅದೃಷ್ಟದ ಸಮಯ: ಬೆಳಗ್ಗೆ11ರೀಮದ ಮಧ್ಯಾಹ್ನ 12:25ರವರೆಗೆ

ವೃಶ್ಚಿಕ ರಾಶಿ
ಈ ದಿನ ಆರೋಗ್ಯದ ಬಗ್ಗೆ ಚಿಂತೆ ಕಾಡಲಿದೆ, ನೀವು ಸಮಯಕ್ಕೆ ಸರಿಯಾಗಿ ಜಾಗ್ರತೆವಹಿಸಿದರೆ ಒಳ್ಳೆಯದು. ಸಂಗಾತಿಗೆ ಭಾವನಾತ್ಮಕ ಬೆಂಬಲ ದೊರೆಯುತ್ತದೆ. ಪ್ರತಿಕೂಲ ಸಂದರ್ಭಗಳಲ್ಲಿ, ಅವರು ನಿಮ್ಮ ಧೈರ್ಯವನ್ನು ಹೆಚ್ಚಿಸುತ್ತಾರೆ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಸಂಜೆ 6:30 ರಿಂದ ರಾತ್ರಿ 8 ರವರೆಗೆ

ಧನು ರಾಶಿ
ಕೆಲಸದ ವಿಷಯದಲ್ಲಿ ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ನೀವು ಉದ್ಯಮಿಯಾಗಿದ್ದರೆ ಹೊಸ ಆರ್ಡರ್‌ಗಳು ಸಿಗಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಬುದ್ಧಿವಂತಿಕೆಯಿಂದ ಖರ್ಚು ಮಾಡಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಸಮಸ್ಯೆ ಹೆಚ್ಚಾಗುವುದು ಜಾಗ್ರತೆ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 2
ಅದೃಷ್ಟದ ಸಮಯ: ಬೆಳಗ್ಗೆ 11:30 ರಿಂದ ಮಧ್ಯಾಹ್ನ 3 ರವರೆಗೆ

ಮಕರ ರಾಶಿ
ಸಂಬಂಧದ ವಿಷಯದಲ್ಲಿ ಹೇಳುವುದಾದರೆ ಈ ದಿನ ತುಂಬಾ ಚೆನ್ನಾಗಿರಲಿದೆ. ಹಣದ ವಿಷಯದಲ್ಲಿ ದಿನವು ಸರಾಸರಿಯಾಗಿರುತ್ತದೆ. ಇತರರನ್ನು ಮೆಚ್ಚಿಸಲು ಹೆಚ್ಚು ಖರ್ಚು ಮಾಡಬೇಡಿ. ಕೆಲಸದ ವಿಷಯದಲ್ಲಿ ದಿನವು ಕಾರ್ಯನಿರತವಾಗಿರುತ್ತದೆ. ತರಾತುರಿಯಲ್ಲಿ ಯಾವುದೇ ಕೆಲಸ ಮಾಡಬೇಡಿ.
ಅದೃಷ್ಟದ ಬಣ್ಣ: ಗಾಢ ನೀಲಿ
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ 5:20 ರವರೆಗೆ

ಕುಂಭ ರಾಶಿ
ಈ ದಿನ ನಿಮಗೆ ಅತ್ಯಂತ ಮಂಗಳಕರವಾಗಿದೆ. ಕಡಿಮೆ ಪ್ರಯತ್ನದಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ನೀವು ವಿದ್ಯಾರ್ಥಿಯಾಗಿದ್ದರೆ ಹಾಗೂ ನಿಮ್ಮ ಶಿಕ್ಷಣದಲ್ಲಿ ಅಡೆತಡೆಗಳನ್ನು ಎದುರಿಸುತ್ತಿದ್ದರೆ ನಿಮ್ಮ ಶಿಕ್ಷಕರಿಂದ ನೀವು ಸೂಕ್ತ ಮಾರ್ಗದರ್ಶನ ಪಡೆಯಬಹುದು. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ನೀವು ಆರ್ಥಿಕವಾಗಿ ಅಗತ್ಯವಿರುವವರಿಗೆ ಸಹಾಯ ಮಾಡುತ್ತೀರಿ. ಆರೋಗ್ಯದ ಬಗ್ಗೆ ಗಮನ ಹರಿಸಿ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಸಮಯ: ಬೆಳಗ್ಗೆ 6:25 ರಿಂದ ಮಧ್ಯಾಹ್ನ 12:20 ರವರೆಗೆ

ಮೀನ ರಾಶಿ
ಕುಟುಂಬ ಸದಸ್ಯರೊಂದಿಗೆ ಬೆರೆಯಲು ಉತ್ತಮ ಅವಕಾಶ ಸಿಗಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹಾಗಂತ ತುಂಬಾ ಖರ್ಚು ಮಾಡಬೇಡಿ. ಕಛೇರಿಯಲ್ಲಿ ಎಲ್ಲಾ ಕೆಲಸಗಳು ಸುಸೂತ್ರವಾಗಿ ಪೂರ್ಣಗೊಳ್ಳುತ್ತವೆ. ದಣಿವಾದರೆ ವಿಶ್ರಾಂತಿಯತ್ತ ಗಮನಹರಿಸಿ.
ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ಸಂಖ್ಯೆ: 28
ಅದೃಷ್ಟದ ಸಮಯ: ಮಧ್ಯಾಹ್ನ 12 ರಿಂದ ಸಂಜೆ 4:30 ರವರೆಗೆ

English summary

Dina Bhavishya: September 5 Daily Horoscope Prediction Of 12 Zodiac Signs 2023 in Kannada

Explore Dina Rashi Bhavishya (ದಿನ ಭವಿಷ್ಯ) Today's Astrology Prediction For Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, And Pisces In Kannada
Story first published: Monday, September 4, 2023, 23:15 [IST]
X
Desktop Bottom Promotion