Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ದಿನ ಭವಿಷ್ಯ ನವೆಂಬರ್ 29: ಬುಧವಾರ ದ್ವಾದಶ ರಾಶಿಗಳಿಗೆ ಹೇಗಿದೆ?
ವೈದಿಕಶಾಸ್ತ್ರದ ಪ್ರಕಾರ ನವೆಂಬರ್ 29 ದ್ವಾದಶ ರಾಶಿಗಳಿಗೆ ಹೇಗಿರಲಿದೆ ನೋಡೋಣ ಬನ್ನಿ:
ಮೇಷ ರಾಶಿ: ನಿಮಗೆ ವಿಶೇಷವಾದ ದಿನ ಎಂದೇ ಹೇಳಬಹುದು. ನೀವು ಬಹಳ ಆರಾಮದಾಯಕ ಸಮಯ ಕಳೆಯುತ್ತೀರಿ. ಕಚೇರಿಯಲ್ಲಿ ನಿಮ್ಮ ಸಕಾರಾತ್ಮಕತೆಗೆ ನಿಮ್ಮ ಬಾಸ್ ಕೂಡ ಮೆಚ್ಚುಗೆ ಸೂಚಿಸುತ್ತಾರೆ. ಹಣದ ವಿಷಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೂ ಅತಿಯಾದ ಖರ್ಚು ಮಾಡುವುದು ಒಳ್ಳೆಯದಲ್ಲ. ಇಂದು ಸಂಗಾತಿಯಿಂದ ವಿಶೇಷ ಪ್ರೀತಿ ಹಾಗೂ ಬೆಂಬಲ ಸಿಗುತ್ತದೆ. ನಿಮ್ಮ ಪ್ರೀತಿ ಪಾತ್ರರು ಇನ್ನಷ್ಟು ಹೆಚ್ಚು ಸಮಯ ಅವರೊಂದಿಗೆ ಕಳೆಯಲು ನಿಮ್ಮನ್ನು ಕೇಳಿಕೊಳ್ಳುತ್ತಾರೆ ದಿನದ ದ್ವಿತೀಯಾರ್ಧ ಸ್ನೇಹಿತರ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾ ಸಂತೋಷದಿಂದ ಇರುತ್ತೀರಿ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 20
ಶುಭ ಸಮಯ: ಮಧ್ಯಾಹ್ನ 12 ಗಂಟೆಯಿಂದ 3: 20ರ ವರೆಗೆ

ವೃಷಭ ರಾಶಿ: ಉದ್ಯಮಿಗಳಿಗೆ ಈ ದಿನ ಅಷ್ಟು ಉತ್ತಮವಾಗಿರುವುದಿಲ್ಲ. ಬಹಳ ಜಾಗರೂಕತೆಯಿಂದ ಕೆಲಸ ನಿರ್ವಹಿಸಬೇಕು. ಹಣದ ವಿಷಯದಲ್ಲಿ ಹೆಚ್ಚು ಮುತುವರ್ಜಿ ವಹಿಸಿ. ದೊಡ್ಡ ಮೊತ್ತದ ಹಣಕಾಸಿನ ವ್ಯವಹಾರ ಮಾಡುವವರು ಜಾಗೃತವಾಗಿರಬೇಕು. ಉದ್ಯೋಗಿಗಳಿಗೆ ಹೆಚ್ಚುವರಿ ಕೆಲಸವನ್ನ ಕಚೇರಿಯಲ್ಲಿ ಕೊಡಬಹುದು. ಇದರಿಂದ ಈ ದಿನ ನೀವು ಸ್ವಲ್ಪ ಸುಸ್ತಾದ ಅನುಭವ ಪಡೆಯುತ್ತೀರಿ. ಆದರೆ ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ ಹೆತ್ತವರ ಆಶೀರ್ವಾದ ನಿಮ್ಮ ಮೇಲಿರುತ್ತದೆ. ಆದಾಗಿಯೂ ಸಂಗತಿಯ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ನಿಮ್ಮವರ ಜೊತೆಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ. ಇಂದು ಯಾವುದೇ ರೀತಿಯ ಭಾರವಾದ ವಸ್ತುಗಳನ್ನು ಎತ್ತುವ ಕೆಲಸಕ್ಕೆ ಕೈ ಹಾಕಬೇಡಿ.
ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ಸಂಖ್ಯೆ: 9
ಶುಭ ಸಮಯ ಸಂಜೆ: 6:30 ರಿಂದ ರಾತ್ರಿ 9: 05 ರವರೆಗೆ
ಮಿಥುನ ರಾಶಿ: ಈ ದಿನ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಹಾಗಾಗಿ ಕೂಡಲೇ ವೈದ್ಯರನ್ನ ಸಂಪರ್ಕಿಸಿ. ಕೆಲಸದ ಸ್ಥಳದಲ್ಲಿ ಎಂದಿನಂತೆ ಕೆಲಸ ಮಾಡುತ್ತೀರಿ. ಉದ್ಯೋಗ ಅಥವಾ ವ್ಯಾಪಾರ ಯಾವುದೇ ಕೆಲಸವಾಗಿದ್ದರು ಬಹಳ ಶ್ರಮವಹಿಸಿ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು. ನಿರುದ್ಯೋಗಿಗಳಿಗೆ ಹಿಂದಿನ ಸಂಪರ್ಕದಲ್ಲಿರುವ ಯಾರಿಂದಲೂ ಶುಭ ಸುದ್ದಿ ಕೇಳುವ ಸಾಧ್ಯತೆ ಇದೆ. ಹಣಕಾಸಿಗೆ ಸಂಬಂಧಪಟ್ಟಂತೆ ಆದಾಯ ಹೆಚ್ಚಿಸಲು ಇದು ಸರಿಯಾದ ಸಮಯ. ಹೂಡಿಕೆ ಹಾಗೂ ಮತ್ತು ವಿಷಯದಲ್ಲಿ ಮುತುವರ್ಜಿ ವಹಿಸಿ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಆದರೆ ನಿಮ್ಮ ಮಾತಿನ ಮೇಲೆ ಹಿಡಿತ ಸಾಧಿಸಿದರೆ ಸಂಬಂಧದಲ್ಲಿ ಬಿರುಕು ಮೂಡದಂತೆ ನೋಡಿಕೊಳ್ಳಬಹುದು.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟ ಸಂಖ್ಯೆ; 15
ಶುಭ ಸಮಯ: ಬೆಳಿಗ್ಗೆ 5:00ಯಿಂದ 10:00ಯವರೆಗೆ
ಕರ್ಕಾಟಕ ರಾಶಿ: ಇಂದು ನೀವು ನಿಮ್ಮ ಪ್ರೀತಿ ಪಾತ್ರರೊಂದಿಗೆ ಬಹಳ ಉತ್ತಮವಾದ ಸಮಯವನ್ನು ಕಳೆಯುತ್ತೀರಿ. ಪ್ರೀತಿಸಿ ಮದುವೆ ಆಗಬೇಕು ಎಂದುಕೊಂಡಿರುವವರಿಗೆ ದಾರಿಯಲ್ಲಿ ಇರುವ ಅಡೆತಡೆಗಳು ನಿವಾರಣೆಯಾಗಿ ಸಮಸ್ಯೆಗೆ ಒಂದು ಸೂಕ್ತ ಪರಿಹಾರ ಸಿಗುತ್ತದೆ. ಮದುವೆಯಾದ ದಂಪತಿಗಳು ಬಹಳ ಖುಷಿಯಿಂದ ಸಮಯ ಕಳೆಯುತ್ತಾರೆ. ನೀವು ನಿಮ್ಮ ಸಂಗತಿಯೊಂದಿಗೆ ನಿಮ್ಮ ಇಷ್ಟದ ಸ್ಥಳಕ್ಕೂ ಕೂಡ ಭೇಟಿ ನೀಡಬಹುದು. ಅವರಿಗೆ ಉಡುಗೊರೆ ಕೊಡಲು ಮನಸ್ಸು ಮಾಡಿದರೆ ಇಂದು ಸೂಕ್ತ ಸಮಯ. ಕಚೇರಿಯಲ್ಲಿ ಕೆಲಸ ಮಾಡುವವರು ಇಂದು ಮೇಲಾಧಿಕಾರಿಗಳ ಗಮನ ಸೆಳೆಯುತ್ತಾರೆ. ಇದೇ ಕಾರಣಕ್ಕೆ ಹೆಚ್ಚುವರಿ ಕೆಲಸ ನಿಮಗೆ ಸಿಕ್ಕರೆ ಅದನ್ನ ನಿರ್ಲಕ್ಷ ಮಾಡದೆ ಮಾಡಿ ಮುಗಿಸಿ. ವ್ಯಾಪಾರಸ್ಥರಿಗೆ ಸ್ವಲ್ಪ ಒತ್ತಡದ ದಿನ ಇಂದು ಕೆಲಸಕ್ಕಾಗಿ ಬೇರೆ ಸ್ಥಳಕ್ಕೆ ಪ್ರಯಾಣಿಸುವ ಸಾಧ್ಯತೆ ಇದೆ ಆರೋಗ್ಯದ ವಿಷಯದಲ್ಲಿ ಎಚ್ಚರಿಕೆಯಿಂದ ಇರಿ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ:6
ಶುಭ ಸಮಯ: ಸಂಜೆ 5:15 ರಿಂದ 8:15ರವರೆಗೆ
ಸಿಂಹ ರಾಶಿ: ಇಂದು ನಿಮ್ಮ ವಯಕ್ತಿಕ ಜೀವನದಲ್ಲಿ ಇರುವ ಯಾವ ಸಮಸ್ಯೆಯನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಇದರಿಂದ ನಿಮ್ಮ ಸಮಸ್ಯೆ ಇನ್ನಷ್ಟು ಜಾಸ್ತಿ ಆಗಬಹುದು. ಮನೆಯವರೊಂದಿಗೆ ವಾಗ್ವಾದ ನಡೆಸುವ ಸಾಧ್ಯತೆ ಇರುತ್ತದೆ ಆದ್ದರಿಂದ ಕೋಪ ನಿಯಂತ್ರಿಸಿಕೊಂಡು ನಿಮ್ಮ ಮಾತುಗಳ ಬಗ್ಗೆ ಎಚ್ಚರಿಕೆ ವಹಿಸಿದರೆ ಒಳ್ಳೆಯದು. ಅಚಾನಕ್ ಆಗಿ ಹಣ ನಿಮ್ಮ ಕೈ ಸೇರಬಹುದು. ಕಚೇರಿಯಲ್ಲಿ ಮೇಲಾಧಿಕಾರಿಗಳ ಪ್ರಶಂಸೆ ಸಿಗಲಿದೆ. ಸಣ್ಣ ಉದ್ಯಮಿಗಳು ಸರ್ಕಾರದ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಆರೋಗ್ಯದ ದೃಷ್ಟಿಯಿಂದ ಮಿಶ್ರ ದಿನ. ಆಹಾರದ ಬಗ್ಗೆ ಹೆಚ್ಚು ಕಾಳಜಿ ಮಾಡಿದರೆ ರೋಗನಿರೋಧಕ ಶಕ್ತಿಯು ಹೆಚ್ಚಾಗುತ್ತದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 29
ಶುಭ ಸಮಯ: ಮಧ್ಯಾಹ್ನ 12 20 ರಿಂದ 3 ಗಂಟೆ
ಕನ್ಯಾ ರಾಶಿ: ನಿಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಇಂದು ಪರಿಹಾರ ಸಿಗಲಿದೆ. ಹಿರಿಯರ ಸಹಾಯದಿಂದ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತವೆ ಹಾಗೂ ವಾತಾವರಣ ತಿಳಿಯಾಗುತ್ತದೆ ಸಂಬಂಧಗಳು ಸುಧಾರಿಸುತ್ತದೆ. ಸಂಗಾತಿಯ ಮಾತನ್ನು ನಿರ್ಲಕ್ಷಿಸಬೇಡಿ. ಒಬ್ಬರನ್ನ ಒಬ್ಬರು ಪ್ರೀತಿಯಿಂದ ನಂಬಿಕೆಯಿಂದ ಸಂಭಾಳಿಸಿಕೊಂಡು ಹೋಗುವುದು ಉತ್ತಮ. ಹೊಸ ಆದಾಯದ ಮೂಲ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ, ಹಳೆಯ ಆಸ್ತಿ ಮಾರಾಟವಾಗಿ ಕೈತುಂಬ ಹಣ ಗಳಿಸುವ ಸಾಧ್ಯತೆ ಇದೆ. ಕಚೇರಿಯಲ್ಲಿ ವಾತಾವರಣ ನಿಮ್ಮ ಪರವಾಗಿಯೇ ಇರುತ್ತದೆ ಸಹೋದ್ಯೋಗಿಗಳ ಬೆಂಬಲ ಸಿಗುತ್ತದೆ. ಪಾರ್ಟ್ನರ್ ಶಿಪ್ ವ್ಯವಹಾರ ಮಾಡುವವರಿಗೂ ಈ ದಿನ ಲಾಭದಾಯಕವಾಗಿದೆ. ಆರೋಗ್ಯದಲ್ಲಿ ಯಾವುದೇ ಸಮಸ್ಯೆಯು ಇಲ್ಲ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 5
ಶುಭ ಸಮಯ: ಬೆಳಗ್ಗೆ 7:10ರಿಂದ ಮಧ್ಯಾಹ್ನ 12ರ ವರೆಗೆ
ತುಲಾ ರಾಶಿ: ನೀವು ಪಾರಂಪರಿಕ ಉದ್ಯೋಗವನ್ನು ಮಾಡುತ್ತಿದ್ದು ಹೊಸ ಕೆಲಸ ಆರಂಭಿಸಲು ಬಯಸಿದರೆ ತಂದೆಯ ಸಹಾಯ ಪಡೆದುಕೊಳ್ಳಿ. ಅವರ ಸಲಹೆ ಇಲ್ಲದೆ ತರಾತುರಿ ನಿರ್ಧಾರ ಕೈಗೊಂಡರೆ ನಷ್ಟ ಉಂಟಾಗಬಹುದು. ಉದ್ಯೋಗಸ್ಥರಿಗೆ ಇಂದು ಶುಭದಿನ ನಿಮ್ಮ ಕೆಲಸವನ್ನು ಉನ್ನತ ಅಧಿಕಾರಿಗಳು ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಜೊತೆಗೆ ಹೊಸ ಜವಾಬ್ದಾರಿಯನ್ನು ವಹಿಸಬಹುದು. ನೀವು ಹೆಚ್ಚು ಶ್ರಮ ವಹಿಸಿದರೆ ಶೀಘ್ರದಲ್ಲಿಯೇ ಬಡ್ತಿ ಕೂಡ ಸಿಗಲಿದೆ. ಹಣಕಾಸು ವಿಚಾರದಲ್ಲಿ ಮಿಶ್ರ ದಿನ. ಇಂದು ಉಳಿತಾಯದ ಬಗ್ಗೆ ಹೆಚ್ಚು ಗಮನ ಕೊಡಿ ಭಾವನಾತ್ಮಕವಾಗಿ ಸ್ವಲ್ಪ ದುರ್ಬಲರಾಗುತ್ತೀರಿ ಹಾಗಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 11
ಶುಭ ಸಮಯ: ಸಂಜೆ ಆರರಿಂದ 8:05ವರೆಗೆ
ವೃಶ್ಚಿಕ ರಾಶಿ: ಇಂದು ನಿಮ್ಮ ಮಾತಿನಲ್ಲಿ ನಡವಳಿಕೆಯಲ್ಲಿ ಸೌಮ್ಯ ಸ್ವಭಾವವನ್ನು ರೂಢಿಸಿಕೊಳ್ಳಬೇಕು. ಅನಗತ್ಯ ವಾದ ಮಾಡುವುದನ್ನು ತಪ್ಪಿಸಿ ಪಾರ್ಟ್ನರ್ಶಿಪ್ ವ್ಯವಹಾರ ಮಾಡುವವರು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ದೀರ್ಘಕಾಲದಿಂದ ಯಾವುದಾದರು ಕೆಲಸ ಬಾಕಿ ಉಳಿಸಿದ್ದರೆ ಅದನ್ನ ತಕ್ಷಣವೇ ಪೂರ್ಣಗೊಳಿಸಿ ಇಲ್ಲದೆ ಇದ್ದರೆ ನಿಮ್ಮ ಬಾಸ್ ನಿಂದ ಬೈಗುಳ ಕೇಳಿಸಿಕೊಳ್ಳಬೇಕಾಗಬಹುದು. ಜೀವನದಲ್ಲಿ ಇರುವ ಕೆಲವು ಸಮಸ್ಯೆಗಳಿಗೆ ಇಂದು ಪರಿಹಾರ ಸಿಗಲಿದೆ. ಆರ್ಥಿಕವಾಗಿ ಉತ್ತಮ ದಿನ ಇಂದು. ನಿಮ್ಮ ಸಂಗಾತಿ ನಿಮಗೆ ಸರ್ಪ್ರೈಸ್ ಕೊಡಬಹುದು ಸಂಗಾತಿಯೊಂದಿಗೆ ಪ್ರೀತಿಯಿಂದ ಇರಲು ಇದು ಸರಿಯಾದ ಸಮಯ. ಹದಗೆಟ್ಟ ಆರೋಗ್ಯ ಇಂದು ಸುಧಾರಿಸುತ್ತದೆ
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 21
ಶುಭ ಸಮಯ: ಮಧ್ಯಾಹ್ನ12ರಿಂದ 2:45 ರವರೆಗೆ
ಧನು ರಾಶಿ: ನೀವು ಕಚೇರಿಯಲ್ಲಿ ಕೆಲಸದಲ್ಲಿ ಮಾಡುವ ತಪ್ಪುಗಳು ನಿಮ್ಮ ಉನ್ನತ ಅಧಿಕಾರಿಗಳ ಗಮನಕ್ಕೆ ಬರಬಹುದು. ನಿಮ್ಮ ತಪ್ಪನ್ನು ಮನಸಾರೆ ಒಪ್ಪಿಕೊಂಡರೆ ಮಾತ್ರ ಮುಂದಿನ ದಿನ ಸುಲಭವಾಗಿ ಕೆಲಸ ಮಾಡಲು ಸಹಾಯಕವಾಗುತ್ತದೆ. ಇಲ್ಲವಾದಲ್ಲಿ ಕಚೇರಿಯಲ್ಲಿ ನೀವು ಹೆಸರು ಕೆಡಿಸಿಕೊಳ್ಳಬೇಕಾಗಬಹುದು. ವ್ಯಾಪಾರಿಗಳಿಗೆ ಉತ್ತಮ ದಿನ ಇಂದು. ಷೇರು ಮಾರುಕಟ್ಟೆ, ಸಂಬಂಧಿಸಿದ ವ್ಯವಹಾರ ಮಾಡುವವರಿಗೆ ಉತ್ತಮ ಫಲಿತಾಂಶ ಸಿಗಲಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ ಶುಭ ಸುದ್ದಿಯನ್ನು ಕೇಳುವ ಸಾಧ್ಯತೆ ಇದೆ ಆರೋಗ್ಯದಲ್ಲಿ ಏರಿಳಿತ ಇರುವುದರಿಂದ ಸರಿಯಾದ ಸಮಯಕ್ಕೆ ಆಹಾರ ಸೇವಿಸಿ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 8
ಶುಭ ಸಮಯ: ಸಂಜೆ 4:50 ರಿಂದ 7 ಗಂಟೆಯವರೆಗೆ
ಮಕರ ರಾಶಿ: ಇಂದು ನೀವು ಒಬ್ಬರೇ ಕೆಲಸ ಮಾಡುವುದಕ್ಕಿಂತ ಟೀಮ್ ವರ್ಕ್ ಮೂಲಕ ಕೆಲಸ ಮಾಡಿದರೆ ಹೆಚ್ಚು ಪ್ರಯೋಜನಕಾರಿ ಆಗಲಿದೆ ನಿಮ್ಮ ಬಾಸ್ ಸಲಹೆಯನ್ನ ಪಡೆದುಕೊಳ್ಳಿ. ವ್ಯಾಪಾರದಲ್ಲಿ ಇರುವವರಿಗೆ ಮಿಶ್ರ ಲಾಭ. ಹೊಸ ಕೆಲಸ ಆರಂಭಿಸಲು ಈ ದಿನ ಸೂಕ್ತವಾಗಿಲ್ಲ. ಹಣಕಾಸಿನ ವಿಚಾರದಲ್ಲಿ ಉತ್ತಮ ದಿನ. ಆದರೂ ಅನಗತ್ಯ ಖರ್ಚುಗಳಿಗೆ ಬ್ರೇಕ್ ಹಾಕಿ. ನಿಮ್ಮ ಭಾವನೆಗಳಿಗೆ ನಿಮ್ಮ ಸಂಗಾತಿ ಸ್ಪಂದಿಸುತ್ತಾರೆ. ಮಗುವಿನ ಶಿಕ್ಷಣದ ವಿಚಾರದಲ್ಲಿಯೂ ತುಸು ನೆಮ್ಮದಿ ಸಿಗುತ್ತದೆ. ಥೈರಾಯ್ಡ್ ಸಮಸ್ಯೆ ಇರುವವರು ಔಷಧಿ ತೆಗೆದುಕೊಳ್ಳುವುದನ್ನು ತಪ್ಪಿಸಬೇಡಿ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 12
ಶುಭ ಸಮಯ: ಮಧ್ಯಾಹ್ನ ಒಂದು ಗಂಟೆಯಿಂದ 3 ಗಂಟೆವರೆಗೆ
ಕುಂಭ ರಾಶಿ: ಉದ್ಯೋಗಸ್ಥರಿಗೆ ಶುಭ ಸಮಾಚಾರ ಕೇಳುವ ದಿನ ಇಂದು. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೆ ಸಿಗುತ್ತದೆ. ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗುತ್ತದೆ ಆರ್ಥಿಕವಾಗಿ ಸಾಕಷ್ಟು ಲಾಭಗಳಿಸುತ್ತೀರಿ. ವ್ಯಾಪಾರ ಮಾಡುವವರು ಬಹಳ ಮುತುವರ್ಜಿಯಿಂದ ನಿರ್ಧಾರ ತೆಗೆದುಕೊಳ್ಳಬೇಕು ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಒಡಹುಟ್ಟಿದವರ ಜೊತೆಗಿನ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ. ನಿಮ್ಮ ಸಹೋದರ ಅಥವಾ ಸಹೋದರಿಗೆ ಮದುವೆಯ ಪ್ರಸ್ತಾಪ ಬರಬಹುದು. ಈ ದಿನ ದ್ವಿತೀಯ ಅರ್ಥದಲ್ಲಿ ಬೇರೆ ಸ್ಥಳಕ್ಕೆ ಪ್ರಯಾಣಿಸುವ ಸಾಧ್ಯತೆ ಇದೆ. ಸಾಧ್ಯವಾದರೆ ಈ ದಿನದ ಪ್ರಯಾಣವನ್ನು ಮುಂದೂಡಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 35
ಶುಭ ಸಮಯ: ಬೆಳಿಗ್ಗೆ 7.30 ರಿಂದ 11:20 ರವರೆಗೆ
ಮೀನ ರಾಶಿ: ವ್ಯಾಪಾರಸ್ಥರು ಈ ದಿನ ಹೆಚ್ಚು ಜಾಗರೂಕತೆಯಿಂದ ಇರಬೇಕು. ನಿಮ್ಮನ್ನು ತಪ್ಪು ದಾರಿಗೆ ಎಳೆಯುವ ಹಿತ ಶತ್ರುಗಳು ನಿಮ್ಮ ಜೊತೆಗೆ ಇರುತ್ತಾರೆ ಎಂಬುದನ್ನು ಮರೆಯಬೇಡಿ. ಸಹೋದ್ಯೋಗಿಗಳನ್ನ ಹೆಚ್ಚು ನಂಬಬೇಡಿ. ಕೆಲಸದ ಬಗ್ಗೆ ಮಾತ್ರ ಗಮನವಹಿಸಿ ಇದರಿಂದ ನಿಮಗೆ ಹೆಚ್ಚಿನ ಲಾಭವಿದೆ. ಇಂದು ಉತ್ತಮ ದಿನ ಆದರೆ ಈ ದಿನ ಯಾರಿಗೂ ಸಾಲ ಕೊಡುವುದು ಒಳ್ಳೆಯದಲ್ಲ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಇರಬಹುದು. ಆದರೂ ಅವರನ್ನು ಪ್ರೀತಿಯಿಂದ ನೋಡಿಕೊಂಡಾಗ ಯಾವುದೇ ಸಮಸ್ಯೆ ಇರುವುದಿಲ್ಲ ಬುದ್ಧಿವಂತಿಕೆಯಿಂದ ಸಮಸ್ಯೆ ಪರಿಹರಿಸುವುದು ಒಳ್ಳೆಯದು. ಆರೋಗ್ಯದ ಬಗ್ಗೆ ಅಸಡ್ಡೆ ಮಾಡಬೇಡಿ ಇಲ್ಲವಾದರೆ ಅನಾರೋಗ್ಯದ ಸಮಸ್ಯೆ ಹೆಚ್ಚಾಗಬಹುದು.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟ ಸಂಖ್ಯೆ: 4
ಶುಭ ಸಮಯ: ಸಂಜೆ 5: 05 ರಿಂದ ರಾತ್ರಿ 9:15 ರವರೆಗೆ



Click it and Unblock the Notifications










